Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಮನೆಗೆ ನುಗ್ಗಿ ಮಾರಕಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ರಾಮದಾಸ್ ಕಾಂಪೌಂಡ್ ಬಡಾವಣೆಯಲ್ಲಿ ಈ ಒಂದು ಭೀಕರ ಕೋಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಮೋದ್ (46) ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಪ್ರಮೋದನ್ನು ಕೊಲೆ ಮಾಡಿದ್ದು, ಮಹಿಳೆಯ ಜೊತೆ ಆಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಯಶವಂತಪುರ ವ್ಯಾಪ್ತಿಯ ಮತ್ತಿಕೆರೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಸಣ್ಣಪುಟ್ಟ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಗಲಾಟೆಯು ಅಂತಿಮವಾಗಿ ಇಬ್ಬರು ಹಸುಗೂಸುಗಳ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿದೆ. ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿ ಪವಿತ್ರಾ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘೋರ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯ ವಿವರ: ಮತ್ತಿಕೆರೆ ನಿವಾಸಿಗಳಾದ ಪ್ರಶಾಂತ್ ಮತ್ತು ಪವಿತ್ರಾ ದಂಪತಿಗಳ ನಡುವೆ ಕಳೆದ ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ಅಸಮಾಧಾನವಿತ್ತು ಎನ್ನಲಾಗಿದೆ. ಎಂದಿನಂತೆ ಪತಿ-ಪತ್ನಿ ನಡುವೆ ತೀವ್ರ ಗಲಾಟೆ ನಡೆದಿದ್ದು, ಇದರಿಂದ ಮನನೊಂದ ಪವಿತ್ರಾ ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ತನ್ನಿಬ್ಬರು ಮಕ್ಕಳಾದ ನಿವೇದಾ (4 ವರ್ಷ) ಹಾಗೂ ನಿರ್ಮಲ್ (2 ವರ್ಷ) ಗೆ ವಿಷವುಣಿಸಿ, ಬಳಿಕ ತಾನು ಕೂಡ ವಿಷ ಸೇವಿಸಿದ್ದಾರೆ. ಬೆಳಿಗ್ಗೆ ಬೆಳಕಿಗೆ ಬಂದ ದುರಂತ: ಇಂದು ಬೆಳಿಗ್ಗೆ ಪತಿ ಪ್ರಶಾಂತ್ ನಿದ್ರೆಯಿಂದ ಎದ್ದಾಗ ಪತ್ನಿ ಮತ್ತು ಮಕ್ಕಳು ಅಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಗಾಬರಿಗೊಂಡ ಅವರು ಸ್ಥಳೀಯರ ಸಹಾಯದೊಂದಿಗೆ ಮೂವರನ್ನು…

Read More

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇಂದು ಮಧ್ಯಾಹ್ನ ಒಂದು ಘೋರ ದುರಂತ ಸಂಭವಿಸಿದೆ. ನಗರದ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದ ಸಮೀಪವಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಜಲಸಮಾಧಿಯಾದ ಕರುಣಾಜನಕ ಘಟನೆ ನಡೆದಿದೆ. ಮೃತರ ಗುರುತು: ಮೃತಪಟ್ಟ ಬಾಲಕರನ್ನು ಶಿವಾಜಿನಗರದ ಶಿವಂ ಪರಶುರಾಮ್ ಸಂಡೇಕರ್ (7) ಶಹಪುರದಲ್ಲಿಯ ಪರಶುರಾಮ್ ರಾಜು ನಿಲಾಸ್ಕರ್ (11) ಮತ ಬಾಲಕರು ಎಂದು ತಿಳಿದು ಬಂದಿದೆ ಘಟನೆ ಕುರಿತು ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಜೆಯ ಮೋಜಿನಲ್ಲಿದ್ದ ಬಾಲಕರು ಈಜಾಡಲು ಹೊಂಡಕ್ಕೆ ಇಳಿದಿದ್ದರು. ಆದರೆ ನೀರಿನ ಆಳ ಮತ್ತು ಸುಳಿಯ ಅಂದಾಜು ಸಿಗದೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ: ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ SDRF (ರಾಜ್ಯ ವಿಪತ್ತು ಸ್ಪಂದನಾ ಪಡೆ) ತಂಡ ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳಿಗಾಗಿ ತೀವ್ರ…

Read More

ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು ಸತ್ಯಕ್ಕೆ ಜಯ ವೋಟ್ ಚೋರ್ ಕೌನ್ ಹೈ ರಾಹುಲ್ ಗಾಂಧಿ ಹೈ ಎಂದು ಎಕ್ಸ್ ಖಾತೆಯ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನ ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರ. 2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕಸಿದುಕೊಳ್ಳಲಾಗಿತ್ತು. ಅಂದು ಬಿಜೆಪಿ ಅಭ್ಯರ್ಥಿ ಶ್ರೀ ಡಿ.ಎನ್. ಜೀವರಾಜ್ ಅವರ ಮನವಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಲಾಗಿತ್ತು. ಅಧಿಕಾರ ಬಲಕ್ಕೆ ಮಣಿಯದ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.…

Read More

ಬೆಂಗಳೂರು: ರಾಜ್ಯದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. 2026-27ನೇ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವವರಿಗೆ ನೀಡಲಾಗುವ ಶೇ. 5ರಷ್ಟು ರಿಯಾಯಿತಿ ಸೌಲಭ್ಯದ ಅವಧಿಯನ್ನು ಮೇ 31, 2026ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯ ಆದೇಶ: ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಪ್ಪ ಎಸ್. ತುರಕನೂರ ಅವರು ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶದ ಅನ್ವಯ, ರಾಜ್ಯದ ಎಲ್ಲಾ ನಗರಸಭೆಗಳು, ಪುರಸಭೆಗಳು ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ತೆರಿಗೆದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಲಕ್ಷಾಂತರ ಆಸ್ತಿ ಮಾಲೀಕರಿಗೆ ಆರ್ಥಿಕ ಲಾಭವಾಗಲಿದ್ದು, ತೆರಿಗೆ ಪಾವತಿಸಲು ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ. ಕಾನೂನು ಮತ್ತು ನಿಯಮಾವಳಿ: ಕರ್ನಾಟಕ ಮುನಿಸಿಪಾಲಿಟಿಗಳ ಅಧಿನಿಯಮ, 1964ರ ಕಲಂ 105(1)ರ ಅಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಾಮಾನ್ಯವಾಗಿ…

Read More

ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಮರಳು ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಕಾರಿನಲ್ಲಿ ಇದ್ದ ಮೂವರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದಯ್ಯನಹುಂಡಿ ಗ್ರಾಮದ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾಗಿ ಕಾರಿನಲ್ಲಿ ಇದ್ದ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಅಪಘಾತದಲ್ಲಿ ಮೂರುವರೆ ವರ್ಷದ ಮೋಹಿಜ್ ಝಜಾನ್, ಹಾಗೂ ಮುನಿರಾ (45) ಮತ್ತು ಕಾರು ಚಾಲಕ ಮುನೀರ್ (30) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಇನ್ನುಳಿದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮರಳು ತುಂಬಿದ್ದ ಲಾರಿಯು ಅತಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದೇ ಈ ಅವಘಡಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಜ್ಜುಗುಜ್ಜಾಗಿದ್ದ ಕಾರಿನಿಂದ…

Read More

ಬೆಂಗಳೂರು : ಪ್ರೀತಿಸಿ ಮದುವೆಯಾದರು ಕೂಡ ಇನ್ನೊಂದು ವಿವಾಹಕ್ಕೆ ತಯಾರಿ ಮಾಡಿಕೊಂಡಿರುವ ಭೂಪ, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಬ್ಬರ ಜೊತೆಗೆ ವಿವಾಹಕ್ಕೆ ಸಿದ್ಧನಾಗಿದ್ದಾನೆ. ಆದರೆ ಹಸೆಮಣೆ ಇರುವಾಗ ಮೊದಲ ಪತ್ನಿ ಎಂಟ್ರಿ ಕೊಟ್ಟಿದ್ದು ಇದೀಗ ಮದುವೆಗೆ ಬ್ರೇಕ್ ಹಾಕಲಾಗಿದೆ. ದೊಡ್ಡಬಳ್ಳಾಪುರದ ಬಸವ ಭವನದಲ್ಲಿ ಇಂದು ಮದುವೆ ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಈ ಒಂದು ಘಟನೆ ನಡೆದಿದ್ದು, ಪೊಲೀಸರ ನೆರವಿನೊಂದಿಗೆ ಮೊದಲ ಪತ್ನಿ ಮದುವೆ ನಿಲ್ಲಿಸಿದ್ದಾಳೆ. ಮದುವೆಗೆ ಎಲ್ಲಾ ಕೂಡ ಏರ್ಪಾಡು ಆಗಿತ್ತು. ಒಂದು ವರ್ಷದ ಹಿಂದೆ ಅಷ್ಟೇ ಕೇರಳ ಮೂಲದ ಯುವತಿಯನ್ನು ಕುಮಾರ ಎಂಬಾತ ಮದುವೆ ಆಗಿದ್ದ. ಇದೀಗ ಮನೆಯವರ ಒತ್ತಡದ ಮೇರೆಗೆ ಈತ ಮತ್ತೊಂದು ಮದುವೆಗೆ ತಯಾರಿ ಮಾಡಿದ್ದ. ಸದ್ಯ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿ ಆಗಿದ್ದಾಳೆ. ಇಂದು ಕುಮಾರ್ ಮತ್ತೊಂದು ಮದುವೆಗೆ ತಯಾರಿ ಮಾಡಿಕೊಂಡಿದ್ದ. ರಾತ್ರಿ ಅಷ್ಟೇ , ಮೊದಲ ಪತ್ನಿಗೆ ಆತ ತಿಳಿಸಿರುತ್ತಾನೆ. ಬಲವಂತದಿಂದ ಮದುವೆ ಮಾಡಿಸುತ್ತಿದ್ದಾರೆ ಎಂದು ಅಳಲು ಮೊದಲ ಪತ್ನಿಯ…

Read More

ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಒಂದು ರಾತ್ರಿ ಬೆತ್ತಲೆ ಪೂಜೆಗೆ ಕುಳಿತರೆ 30 ಲಕ್ಷ ನೀಡುವುದಾಗಿ ಯುವತಿಗೆ ಪಕ್ಕದ ಮನೆಯ ಕಾಮುಕನೊಬ್ಬ ಆಫರ್ ಕೊಟ್ಟಿದ್ದಾನೆ. ಚೈತ್ರ ಎನ್ನುವ ಯುವತಿಗೆ ಪಕ್ಕದ ಮನೆಯ ಕಾಮುಕ ಕಿರಣ್ ಎಂಬಾತ ಬರೋಬ್ಬರಿ 30 ಲಕ್ಷ ಆಫರ್ ಕೊಟ್ಟಿದ್ದಾನೆ. ಕಿರಣ್ ವಿರುದ್ಧ ಯುವತಿ ಚೈತ್ರ ಗಂಭೀರ ಆರೋಪ ಮಾಡಿದ್ದಾಳೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ದೊಡ್ಡಮಣ್ಣಗುಡ್ಡೆ ದೊಡ್ಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಚೈತ್ರಳನ್ನು ಬಳಸಿಕೊಂಡು ಮಾಟ ಮಂತ್ರ ಮಾಡಿಸುವಂತಹ ಶಂಕೆ ಕೂಡ ವ್ಯಕ್ತವಾಗಿದೆ. ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದು, ಏಪ್ರಿಲ್ 12 ರಂದು ಚೈತ್ರಾಗೆ ಕರೆ ಮಾಡಿ ಈ ರೀತಿಯಾಗಿ ಆಫರ್ ಕೊಟ್ಟಿದ್ದಾನೆ. ಬೆತ್ತಲೆಯಾಗಿ ಒಂದು ರಾತ್ರಿ ಪೂಜೆ ಮಾಡಿದರೆ ನನಗೆ 30 ಲಕ್ಷ ಹಣ ಕೊಡುವುದಾಗಿ ಈತ ಆಫರ್ ಕೊಟ್ಟಿದ್ದಾನೆ. ಬಳಿಕ ಚೈತ್ರ ಕಿರಣ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ವಾಟ್ಸಪ್ ನಲ್ಲಿ ಫೋಟೋ ಕೂಡ ಶೇರ್…

Read More

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ ನಡೆದಿದ್ದು, ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆಯೊಂದು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆ: ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆಗೆ, ಆರೋಪಿ ಮೋಹನ್ ಕುಮಾರ್ ಎಂಬಾತ ತನ್ನ ಸಹೋದರಿಯ ಅಡ್ಮಿಷನ್ ನೆಪದಲ್ಲಿ ಪರಿಚಯವಾಗಿದ್ದನು. ಮಹಿಳೆಯ ಆರ್ಥಿಕ ಅಭಿವೃದ್ಧಿಗಾಗಿ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದ ಈತ, ಆಕೆಯನ್ನು ನಂಬಿಸಿ ವಂಚಿಸಿದ್ದಾನೆ. ಜೂನ್ 30, 2025 ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ನಂತರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ಕರೆದೊಯ್ದು, ವಾಪಸ್ಸಾಗುವಾಗ ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫೆಬ್ರವರಿ 10ರಂದು ದೀಕ್ಷೆ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ಪತಿ ಮತ್ತು ಮಗನನ್ನು ಮನೆಯಿಂದ ಹೊರಗೆ ಕಳುಹಿಸಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದಾನೆ. ವಾಮಾಚಾರದ ಭೀತಿ ಮತ್ತು ಬೆದರಿಕೆ:…

Read More

ಚಿತ್ರದುರ್ಗ: ರಾಜ್ಯಾದ್ಯಂತ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇತ್ತೀಚೆಗಷ್ಟೇ ರಾಯಚೂರಿನಲ್ಲಿ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕರೊಬ್ಬರು ಬಲಿಯಾಗಿದ್ದ ಘಟನೆ ಮಾಸುವ ಮುನ್ನವೇ, ಈಗ ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿಯೊಬ್ಬರು ತೀವ್ರ ಶಾಖಕ್ಕೆ ಸಿಲುಕಿ ಆಂಧ್ರಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ವಿವರ: ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ನಿವಾಸಿಯಾದ ಐ.ಎಂ. ಫಯಾಜ್ (45) ಮೃತಪಟ್ಟ ದುರ್ದೈವಿ. ಫಯಾಜ್ ಅವರು ಆಂಧ್ರಪ್ರದೇಶದ ಆದೋನಿ ಸಮೀಪವಿರುವ ಪ್ರಸಿದ್ಧ ಗುಡಿಕಲ್ ದರ್ಗಾದ ಉರುಸ್ ಕಾರ್ಯಕ್ರಮಕ್ಕೆ ತೆರಳಿದ್ದರು. ಕುಟುಂಬ ಸದಸ್ಯರೊಂದಿಗೆ ದೈವದರ್ಶನಕ್ಕೆಂದು ತೆರಳಿದ್ದ ಅವರು, ಅಲ್ಲಿನ ವಿಪರೀತ ಸೆಕೆಯನ್ನು ತಾಳಲಾರದೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಕುಸಿದು ಬಿದ್ದ ಫಯಾಜ್: ಉರುಸ್ ಪ್ರಯುಕ್ತ ದರ್ಗಾದಲ್ಲಿ ಭಕ್ತರ ಜನಸಾಗರವೇ ನೆರೆದಿತ್ತು. ಈ ವೇಳೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಗಾಳಿಯ ಸಂಚಾರವೂ ಕಡಿಮೆ ಇತ್ತು ಎನ್ನಲಾಗಿದೆ. ಕುಟುಂಬಸ್ಥರ ಜೊತೆ ದರ್ಗಾದ ಆವರಣದಲ್ಲಿದ್ದ ಫಯಾಜ್ ಅವರು ಹಠಾತ್ತನೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ,…

Read More