Author: kannadanewsnow05

ಬೆಂಗಳೂರು : ಲೋಕಸಭಾ ಚುನಾವಣೆಗೆ ರಾಜ್ಯದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ತೀವ್ರ ಜಿದ್ದಾ ಜಿದ್ದಿಗೆ ಕೂಡಿದ್ದು, ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ್ ಅವರು ಯಾರೇ ಕುಕ್ಕರ್ ಹಂಚಲಿ ತವಾ ಹಂಚಲಿ ಆದರೆ ನರೇಂದ್ರ ಮೋದಿ ವಿಸಿಲ್ ಕೂಗುವುದು ಮಾತ್ರ ಎಂದು ತಿಳಿಸಿದರು. https://kannadanewsnow.com/kannada/voters-have-no-right-to-know-all-movable-and-immovable-assets-of-a-candidate-supreme-court/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ನಮ್ಮ ಅಭ್ಯರ್ಥಿ ಆಗ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರ್ಲಿಲ್ಲ. ಅವರು ನಮ್ಮ ಅಭ್ಯರ್ಥಿ ಆಗಿದ್ದು ಪ್ರಕೃತಿ ನಿಯಮ ಅನ್ನಬಹುದು. ಯೋಗ್ಯ, ಜನಪ್ರಿಯ, ಜನರ ಧ್ವನಿಯಾಗಿ ಇರುವ ಮಂಜುನಾಥ್ ಅವರ ಮೇಲೆ ಪ್ರಕೃತಿಯ ಆಶೀರ್ವಾದ ಇದೆ. ಡಾ.ಮಂಜುನಾಥ್ ಅಂಥ ಯೋಗ್ಯ ಅಭ್ಯರ್ಥಿ ಎಂದು ಅಶ್ವಥ್ ನಾರಾಯಣ್ ಹೇಳಿದರು. https://kannadanewsnow.com/kannada/kejriwal-to-move-supreme-court-against-delhi-hc-order-dismissing-his-plea-challenging-arrest/ ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ  ನಿಯೋಜನೆ ಆಗಬೇಕು. ಭಯದ ವಾತಾವರಣ ಇರಬಾರದು, ಭಯ ಇಲ್ಲದೇ ಜನ ಮತ ಹಾಗಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ. ಬೆಂಗಳೂರು…

Read More

ಹೊಸದಿಲ್ಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಒಡೆತನದ ಪ್ರತಿಯೊಂದು ಆಸ್ತಿಯ ವಿವರವನ್ನು ತಿಳಿಯುವ ಸಂಪೂರ್ಣ ಹಕ್ಕು ಮತದಾರರಿಗಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.ಅರುಣಾಚಲಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕಾರಿಖೋಕ ಕ್ರಿ ಅವರ ಶಾಸಕ ಸ್ಥಾನವನ್ನು ಕೋರ್ಟ್ ಎತ್ತಿಹಿಡಿದಿದೆ. ಸರಿಯಾಗಿ ಆಸ್ತಿ ಘೋಷಣೆ ಮಾಡಿಲ್ಲವೆಂದು ಕಾರಿಖೋ ಕ್ರಿ ಅವರ ಶಾಸಕ ಸ್ಥಾನವನ್ನು ಅಸಿಂಧು ಎಂದು ತೀರ್ಮಾನಿಸಿದ್ದ ಗುವಾಹಟಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. https://kannadanewsnow.com/kannada/big-news-congress-moves-ec-after-supreme-court-on-drought-relief-issue/ ಒಬ್ಬ ಅಭ್ಯರ್ಥಿಯ ಖಾಸಗಿ ಬದುಕಿನ ಆಳಕ್ಕೆ ಇಳಿಯುವ ಸಂಪೂರ್ಣ ಹಕ್ಕು ಯಾವುದೇ ಮತದಾರರಿಗಿಲ್ಲ, ಮತದಾನದ ಮೇಲೆ ಪರಿಣಾಮ ಬೀರುವಂತಹ ಮಾಹಿತಿ ಬಹಿರಂಗಗೊಳ್ಳಬೇಕು,” ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾ‌ರ್ ಅವರ ಪೀಠ ಹೇಳಿದೆ.ಸಾರ್ವಜನಿಕ ಹುದ್ದೆಗೆ ಅಭ್ಯರ್ಥಿತನಕ್ಕೆ ಅಪ್ರಸ್ತುತವಾದ ವಿಚಾರಗಳ ಕುರಿತಂತೆ ಅಭ್ಯರ್ಥಿಗಳಿಗೆ ಗೌಪ್ಯತೆಯ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.ಚರಾಸ್ತಿ ಬಹಳ ದೊಡ್ಡ ಮೊತ್ತದ್ದಾಗಿದ್ದರೆ ಮತ್ತು ಐಷಾರಾಮಿ ಜೀವನಶೈಲಿಯನ್ನು ಬಿಂಬಿಸುತ್ತಿದ್ದರೆ ಮಾತ್ರ ಅದನ್ನು ಆಸ್ತಿ ಘೋಷಣೆಯ ಅಫಿಡವಿಟ್​ನಲ್ಲಿ…

Read More

ಬೆಂಗಳೂರು : ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಬರ ಪರಿಹಾರವಾಗಿ ದೂರು ಸಲ್ಲಿಸಿದೆ ಎಂದು ತಿಳಿದು ಬಂದಿದೆ.ಸುಪ್ರೀಂ ಮೆಟ್ಟಿಲೇರಿರುವ ಕಾಂಗ್ರೆಸ್ ಇದೀಗ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್​ ಈಗ ಚುನಾವಣೆ ಆಯೋಗದ ಮೆಟ್ಟಿಲೇರಿದೆ. ಹೌದು ಬರ ಪರಿಹಾರ ಬಿಡುಗಡೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮಾಜಿ ಸಂಸದ ಉಗ್ರಪ್ಪ ನೇತೃತ್ವದ ನಿಯೋಗ ಇಂದು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ನೀಡಿದ್ದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಎಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿದೆ. ಬರ ಪರಿಹಾರ…

Read More

ಉತ್ತರಕನ್ನಡ : ಅವರೆಲ್ಲರೂ ಕಾರ್ಮಿಕರು ಆಗ ತಾನೆ ಕೆಲಸ ಮುಗಿಸಿ ಊಟ ಮಾಡಿ ರಸ್ತೆ ಬದಿಯಲ್ಲಿ ಗಿಡದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ವೇಗವಾಗಿ ಬಂದಂತಹ ಕಾರು ಅವರ ಮೇಲೆ ಹರಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮಗು ಸೇರಿ ಐವರಿಗೆ ಗಂಭೀರವಾದಂತಹ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹೌದು ಊಟ ಮಾಡಿ ವಿಶ್ರಾಂತಿ ಪಡೆಯುವುದು ಕಾರ್ಮಿಕರ ಮೇಲೆ ಕಾರು ಹರಿದಿದೆ. ಅಪಘಾರದಲ್ಲಿ ಮಗು ಸೇರಿ ಐವರಿಗೆ ಗಂಭೀರವಾದಂತ ಗಾಯಗಳಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟ ರಸ್ತೆಯ ಹಿಪ್ಪನಹಳ್ಳಿ ಕ್ರಾಸ್ ಎಂಬಲ್ಲಿ ಈ ಅಪಘಾತ ನಡೆದಿದೆ. ಗಾಯಾಳು ಐವರಿಗೆ ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲರೂ ಹೈದ್ರಾಬಾದ್ ಮೂಲದ ಮೆಹಬೂಬ್ ನಗರದ ನಿವಾಸಿಗಳೆಂದು ಹೆಳಲಾಗುತ್ತಿದೆ. ಘಟನೆ ಕುರಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರ ಪ್ರಚಾರ ರ‍್ಯಾಲಿ ವೇಳೆ ಓರ್ವ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮತ್ತು ಬಸ್​ ಚಾಲಕನ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಸದ್ಯ ಘಟನೆ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/shobha-karandlaje-has-no-humanity-congress/ ನಿನ್ನೆ ಬೆಂಗಳೂರಿನ ಕೆಆರ್ ಪುರಂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರು ಪ್ರಚಾರದ ರ್ರ್ಯಾಲಿ ನಡೆಸುತ್ತಿದ್ದರು ಈ ವೇಳೆ ಅವರ ಕಾರಿಗೆ ಬೈಕ್ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರಕಾಶ್ ಎನ್ನುವವರು ಸಾವನಪ್ಪಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾರು ಮತ್ತು ಬಸ್​ ಚಾಲಕನ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಐಪಿಸಿ ಸೆಕ್ಷನ್ 279, 304(A), 283 ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದ್ದು, ಈ ಸಂಬಂಧ ಪೊಲೀಸರಿಂದ ಇಬ್ಬರೂ ಚಾಲಕರಿಗೆ ನೋಟಿಸ್ ನೀಡಲಾಗಿದೆ.ಮೃತ ವ್ಯಕ್ತಿಯನ್ನು…

Read More

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಅತ್ಯಂತ ಕುತೂಹಲ ಮೂಡಿಸುವಂತಹ ಕ್ಷೇತ್ರವಾಗಿದೆ ಏಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿಎನ್ ಮಂಜುನಾಥ್ ಅವರು ಕಣಕ್ಕಿಳಿದಿದ್ದಾರೆ. ಇದೀಗ ಡಿಕೆ ಬ್ರದರ್ಸ್ ವಿರುದ್ಧ ಆರ್ ಆರ್ ನಗರ ಶಾಸಕ ಮುನಿರತ್ನ ಅವರು ಗಂಭೀರವಾದ ಆರೋಪ ಮಾಡಿದ್ದು ಕ್ಷೇತ್ರದಲ್ಲಿ ಬೆದರಿಸುವ ಕಾರ್ಯ ನಡೀತಾ ಇದೆ ಎಂದು ಆರೋಪಿಸಿದ್ದಾರೆ. https://kannadanewsnow.com/kannada/congress-leader-objects-to-rss-event-in-bengaluru-tension-prevails-at-the-venue/ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ನಿರತ್ನ ಗಂಭೀರವಾದ ಆರೋಪ ಮಾಡಿದ್ದು, ಇಬ್ಬರು ದ್ವಾರಪಾಲಕರಿಂದ ಇದೆಲ್ಲವೂ ನಡಿತಾ ಇದೆ. ಕನಕಪುರದಲ್ಲಿ ಇದು ಹುಟ್ಟಿದ್ದು ಎಲ್ಲಿಗೂ ಬಂದು ಬಿಟ್ಟಿದೆ. ಪರೋಕ್ಷವಾಗಿ ಡಿಕೆ ಬ್ರದರ್ಸ್ ವಿರುದ್ಧ ಶಾಸಕ ಮುನಿರತ್ನ ಕಿಡಿ ಕಾರಿದ್ದಾರೆ. ಇದು ಹುಟ್ಟಿದ್ದು ಮೊದಲು ಕನಪುರಕದಲ್ಲಿ ಅದು ಈಗ ಹುಡುಕಿಕೊಂಡು ಆರ್ ಆರ್ ನಗರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ರಾತ್ರೋರಾತ್ರಿ ಮನೆಗಳಿಗೆ ನುಗ್ಗಿಸುವುದು. ಬೆದರಿಕೆ ಹಾಕುವುದು ಊರು ಬಿಟ್ಟು…

Read More

ದಾವಣಗೆರೆ : ಧಾರವಾಡದಲ್ಲಿ ಲೋಕಸಭಾ ಚುನಾವಣೆಯಲ್ಲಿ ಫಿಕ್ಸಿಂಗ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಹ್ಲಾದ ಜೋಶಿ ಅವರೇ ಆಯ್ಕೆ ಮಾಡಿದ್ದಾರೆ ಎಂದು ಧಾರವಾಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಗಂಭೀರವಾದ ಆರೋಪ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಪಂಚಮಸಾಲಿ ಗುರುಪೀಠದಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ತುಳಿಯುವುದರಲ್ಲಿ ಪ್ರಹ್ಲಾದ ಜೋಶಿ ಪ್ರಮುಖ ಪಾತ್ರವಿದೆ ಎಂದು ಹನಗವಾಡಿಯ ಪಂಚಮಸಾಲಿ ಪೀಠದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಕಾಡಿಯ ಪಂಚಮಸಾಲಿ ಪೀಠದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಕ್ತರು ಸಮಾಜ ಸೇವೆಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ನಾವು ನಿಭಾಯಿಸುತ್ತೇವೆ ನನ್ನ ರಾಜಕೀಯ ಪ್ರವೇಶವನ್ನು ಎಲ್ಲಾ ಸಮಾಜದ ಜನರು ಸ್ವಾಗತ ಮಾಡಿದ್ದಾರೆ. ಬ್ರಾಹ್ಮಣ ಸಮಾಜದವರು ಕೂಡ ಪ್ರಮುಖವಾಗಿ ಸ್ವಾಗತ ಮಾಡಿದ್ದಾರೆ.ನಾನು ಬಿಜೆಪಿ ಬಂಡಾಯ ಅಥವಾ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಲ್ಲ ಎಂದು ಹನಗವಾಡಿಯ ಪಂಚಮಸಾಲಿ ಪೀಠದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದರು. ಧಾರವಾಡ…

Read More

ಬೆಂಗಳೂರು : ಇತ್ತೀಚಿಗೆ ಬಟ್ಟೆ ಕೊಳಕಾಗಿದೆ ಎಂದು ವೃದ್ಧನೊಬ್ಬರನ್ನು ಮೆಟ್ರೋ ನಿಲ್ದಾಣದ ಒಳಗೆ ಬಿಡದೆ ಸಿಬ್ಬಂದಿಗಳು ತಡೆದು ಅಮಾನವೀಯವಾಗಿ ವರ್ತಿಸಿದ್ದರು. ಇದೀಗ ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಂಥದ್ದೇ ಘಟನೆ ನಡೆದಿದ್ದು ಬಟ್ಟೆ ಸರಿ ಇಲ್ಲವೆಂದು ಮೆಟ್ರೋ ಕಾರ್ಮಿಕರನ್ನು ಸಿಬ್ಬಂದಿಗಳು ತಡೆದಿರುವ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ನಮ್ಮ ಮೆಟ್ರೋ ಸಿಬ್ಬಂದಿಯ ಕ್ರಮದ ವಿರುದ್ಧ ಎಕ್ಸ್ ನಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಇತ್ತೀಚೆಗಷ್ಟೇ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿಯಿಂದ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಅನ್ನದಾತನನ್ನು ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನಿಸಿದ್ದಾರೆ. ಯುಗಾದಿ ಹಬ್ಬದ ದಿನವೂ ಇದೇ ರೀತಿಯ ಘಟನೆ ನಡೆದಿದ್ದು, ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣಕ್ಕೆ ಕಾರ್ಮಿಕರೊಬ್ಬರು ಆಗಮಿಸಿದಾಗ ಶರ್ಟ್‌ನಲ್ಲಿ ಬಟನ್ ಇಲ್ಲದ ಕಾರಣ ಕಾರ್ಮಿಕನನ್ನು ತಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶರ್ಟ್ ಬಟನ್…

Read More

ಬೆಂಗಳೂರು : ಬೆಂಗಳೂರಲ್ಲಿ ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಇದರ ಮಧ್ಯ ಬಿಸಿಲಿನ ತಾಪಕ್ಕೆ ಜನ ರೋಸಿ ಹೋಗಿದ್ದಾರೆ. ಅಲ್ಲದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರನ್ನು ಕುಡಿಯಲು ಬಿಟ್ಟು ಅನ್ಯಬಳಕೆ ಮಾಡದಂತೆ ಆದೇಶ ಹೊರಡಿಸಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಯುಗಾದಿ ಹಬ್ಬಕ್ಕೆಂದು ಬೈಕ್ ತೊಳೆದಿದ್ದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ 5,000 ರೂ. ದಂಡ ವಿಧಿಸಿದ್ದಾರೆ. https://kannadanewsnow.com/kannada/kolar-a-youth-who-went-for-a-swim-in-an-agricultural-pond-died-after-he-could-not-come-out/ ಹೌದು ಬೆಂಗಳೂರಿನ ವಿಜ್ಞಾನ ನಗರದಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ದಂಡ ಹಾಕಲಾಗಿದೆ.ಯುಗಾದಿ ಹಬ್ಬದ ದಿನ ಗೃಹಬಳಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಪೂರೈಸಲಾದ ನೀರನ್ನ ಅನ್ಯ ಬಳಕೆಗೆ ಬಳಕೆ ಮಾಡಿದವರಿಗೆ ಜಲಮಂಡಳಿ ಸಿಬ್ಬಂದಿ ದಂಡ ಹಾಕಿದ್ದಾರೆ. ಜಲಮಂಡಳಿಯ ಆದೇಶವನ್ನು ಉಲ್ಲಂಘನೆ ಮಾಡಿದ ಪ್ರತಿಯೊಬ್ಬರಿಗೂ ತಲಾ 5 ಸಾವಿರ ರೂ. ದಂಡ ಹಾಕಲಾಗಿದೆ. ಜಲಕ್ಷಾಮದ ಮಧ್ಯೆ ಎಚ್ಚರಿಕೆ ವಹಿಸಿದೇ ಕುಡಿಯುವ ನೀರಿನಲ್ಲಿ ಬೈಕ್ ತೊಳೆಯುತ್ತಿದ್ದ ವ್ಯಕ್ತಿಗೆ ದಂಡ ಹಾಕಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ. https://kannadanewsnow.com/kannada/whatsapp-users-beware-if-you-click-on-these-3-messages-you-will-run-out-of-money-in-your-account/…

Read More

ಕೋಲಾರ : ಕೃಷಿ ಹೊಂಡದಲ್ಲಿ ಈಜಲು ತೆರಳಿದ 20 ವರ್ಷದ ಯುವಕ ಹೊಂಡದಲ್ಲಿ ಸಿಲುಕಿಕೊಂಡು ಹೊರಬರಲು ಸಾಧ್ಯವಾಗದೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆರಂಡಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. https://kannadanewsnow.com/kannada/whatsapp-users-beware-if-you-click-on-these-3-messages-you-will-run-out-of-money-in-your-account/ 20 ವರ್ಷದ ಲಿಖಿತ್ ಎನ್ನುವ ಯುವಕ ನಿರುಪಾಲಾಗಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆರಂಡಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೃಷಿ ಹೊಂಡದಲ್ಲಿ ಈಜಲು ಹೋದಾಗ ಸಿಲುಕಿ ಲಿಖಿತ್ ಸಾವನ್ನಪ್ಪಿದ್ದಾನೆ ಎಂದ್ ತಿಳಿದುಬಂದಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ. https://kannadanewsnow.com/kannada/linkedin-invites-applications-for-junior-wife-post-post-goes-viral/

Read More