Author: kannadanewsnow05

ಮಂಗಳೂರು : ಮಂಗಳೂರಲ್ಲಿ ಘೋರ ಘಟನೆಯೊಂದು ನಡೆದಿದ್ದು, MRPL ನಲ್ಲಿ ವಿಷ ಅನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಸೂರತ್ಕಲ್ ನ ಎಂ ಆರ್ ಪಿ ಎಲ್ ಘಟಕದಲ್ಲಿ ಈ ಒಂದು ಘಟನೆ ನಡೆದಿದೆ. ದೀಪಚಂದ್ರ ಭಾರ್ತೀಯಾ, ಬಿಜಿಲ್ ಪ್ರಸಾದ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ತೈಲ ಶುಧೀಕರಣ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಒಂದು ಘಟನೆ ನಡೆದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. MRPL ನ ಒಎಂಎಸ್ (ಆಯಿಲ್ ಮೂಮೆಂಟ್ ಸರ್ವಿಸ್) ನಲ್ಲಿ ಈ ಘಟನೆ ನಡೆದಿದೆ. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದ್ದಾಗ ಇಬ್ಬರು ಸಿಬ್ಬಂದಿಗಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅಸ್ವಸ್ಥರ ರಕ್ಷಣೆಗೆ ಮುಂದಾಗಿದ್ದ ವಿನಾಯಕ ಮೈಗೇರಿ ಎನ್ನುವವರ ಸ್ಥಿತಿ ಕೂಡ ಗಂಭೀರವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ವಿನಾಯಕ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಎಂಆರ್‌ಪಿಎಲ್…

Read More

ಬೆಂಗಳೂರು : ಒಂದು ಕಡೆ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ದಾಳ ಉರುಳಿಸಿದ್ದಾರೆ. ಇನ್ನು ಇತ್ತ ಹಲವು ಸಚಿವರು, ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಆಗಲೇಬೇಕು ಎಂದು ಕೆಲವು ಸಚಿವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿ ಹಕ್ಕೋತ್ತಾಯ ಮಂಡನೆ ಮಾಡಿದ್ದಾರೆ. ಹೌದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಗೆ ಸಚಿವರು ಪಟ್ಟು ಹಿಡಿದಿದ್ದು, ಮಲ್ಲಿಕಾರ್ಜುನ ಖರ್ಗೆ ಮುಂದೆ ಸಚಿವರು ತಮ್ಮ ಹಕ್ಕೋತ್ತಾಯ ಮಂಡಿಸಿದ್ದಾರೆ. ಕಾಂಗ್ರೆಸ್ಸಿನ ಪ್ರಮುಖ ಸಚಿವರು ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಹಕ್ಕೋತ್ತಾಯ ಮಂಡಿಸಿದ್ದಾರೆ. ಬದಲಾವಣೆ ಮಾಡುವಂತೆ ಸಚಿವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಒಬ್ಬರಿಗೆ ಒಂದೇ ಹುದ್ದೆ ನಿಯಮ ಅನುಷ್ಠಾನಕ್ಕೆ ಕೆಲವು ಪ್ರಮುಖ ಸಚಿವರು ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ನಿಯಮವನ್ನು ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಆಗ್ರಹಿಸಿದ್ದಾರೆ. ಇದೀಗ ಸಚಿವರ ಒತ್ತಾಯಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ. ಲೋಕಸಭಾ…

Read More

ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದ ಕೊಲೆ ನಡೆದಿದ್ದು, ಅಳಿಯನೇ ತನ್ನ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಪಂ ವ್ಯಾಪ್ತಿಯ ಒಕ್ಕಲಕೊಪ್ಪದಲ್ಲಿ ನಡೆದಿದೆ. ಆರೋಪಿಯನ್ನು ಕೊಲೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಕ್ಕಲಕೊಪ್ಪದ ಬಸವರಾಜ ಮುಟ್ಟಪ್ಪ ನಾಯ್ಕ (42) ಕೊಲೆ ಮಾಡಿದ ಆರೋಪಿ. ಆರೋಪಿಯ ಪತ್ನಿಯ ತಾಯಿ ಕಮಲಾ ನಾರಾಯಣ ನಾಯ್ಕ (70) ಕೊಲೆಯಾದವಳು. ಸಣ್ಣ ಪುಟ್ಟ ಜಗಳದ ಹಿನ್ನೆಲೆಯಲ್ಲಿ, ಅತ್ತೆಯನ್ನೇ ಮುಟ್ಟಪ್ಪ ಹತ್ಯೆ ಮಾಡಿದ್ದಾನೆ. ಗುರುವಾರ ರಾತ್ರಿ ಘಟನೆ ಜರುಗಿದ್ದು, ನಿನ್ನೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನನ್ನ ಪತಿ ಬಸವರಾಜ್ ದಿನಾಲು ನನ್ನ ಜೊತೆ ಗಲಾಟೆ ಮಾಡುತ್ತಿದ್ದ ನಿನ್ನೆ ಕೂಡ ಗಲಾಟೆ ನಡೆದಿದ್ದು, ಈ ವೇಳೆ ನನ್ನ ಪತಿ ಬಸವರಾಜ್ ನನ್ನ ತಾಯಿಯ ಮೇಲೆ ಬೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಹಾಗಾಗಿ ಆತನನ್ನು ಅರೆಸ್ಟ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು…

Read More

ತುಮಕೂರು : ರಾಜ್ಯ ಸರ್ಕಾರ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಈ ಒಂದು ಗ್ಯಾರೆಂಟಿ ಯೋಜನೆಗಳ ಕುರಿತು ತುಮಕೂರು ರಿಜಿಸ್ಟರ್ ಒಬ್ಬರು ಟೀಕೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ದರು. ಇದೀಗ ಸಬ್ ರಿಜಿಸ್ಟ್ರರ್ ರಾಧಮ್ಮ ಎನ್ನುವವರನ್ನ ದಿಢೀರ್ ವರ್ಗಾವಣೆ ಮಾಡಲಾಗಿದೆ. ಹೌದು ಸಿಎಂ ಸಿದ್ದರಾಮಯ್ಯ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ತುಮಕೂರು ಜಿಲ್ಲೆಯ ಪಾವಗಡ ಸಬ್ ರಿಜಿಸ್ಟ್ರರ್ ರಾಧಮ್ಮ ಟೀಕೆ ಮಾಡಿದರು ಇದೀಗ ಅವರನ್ನು ತುಮಕೂರು ಜಿಲ್ಲಾ ನೊಂದಣಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಆದೇಶ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಧಮ್ಮ ಟೀಕಿಸಿರುವ ವಿಡಿಯೋ ವೈರಲ್ ಆಗಿತ್ತು. ರೈತ ಸಂಘಟನೆಗಳು ಕೂಡ ಧರಣಿ ನಡೆಸಿದ್ದವು. ರಾಧಮ್ಮ ಲಂಚ ತೆಗೆದುಕೊಳ್ಳದೆ ಕೆಲಸ ಮಾಡಲ್ಲ ಎಂದು ರೈತರು ಆರೋಪಿಸಿದ್ದರು. ರೈತರ ವಿರೋಧಿಯಾಗಿರುವ ಸಬ್ ರಿಜಿಸ್ಟ್ರರ್ ಅಮಾನತಿಗೆ ಆಗ್ರಹಿಸಿದ್ದರು. ಇದೀಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.

Read More

ವಿಜಯಪುರ : ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್‌ಮನ್‌, ಇಲೆಕ್ಟ್ರೀಷಿಯನ್‌ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹೌದು ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಮೇ ತಿಂಗಳಲ್ಲಿ ನಡೆದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕ್‌ನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಮತ್ತು ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ಎಲೆ‌ಕ್ಟ್ರಿಷಿಯನ್ ಸೇರಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನಗೂಳಿ ಕೆನರಾ ಬ್ಯಾಂಕ್‌ನ ಹಿಂದಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ (41), ಖಾಸಗಿ ಸಂಸ್ಥೆಯ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ (38),…

Read More

ಬೆಂಗಳೂರು : ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇತ್ತೀಚಿಗೆ ಜಾರಿ ನಿರ್ದೇಶನಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಕುರಿತು ಸುಬ್ಬಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು ನನ್ನ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ಮಾಡಲಾಗಿದೆ ಬೆಂಗಳೂರು ಬಿಟ್ಟರೆ ವಿದೇಶಗಳಲ್ಲಿ ನಯಾಪೈಸೆ ಹಣವಿಲ್ಲ ಎಂದು ಪ್ರತಿಕ್ರಿಯಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ನಾನು ಒಂದಿಂಚು ಆಸ್ತಿಯನ್ನು ಮಾಡಿಲ್ಲ. ನನ್ನ ಹೆಸರಿನಲ್ಲಿ ನಕಲಿ ಬ್ಯಾಂಕ್ ದಾಖಲೆಗಳನ್ನು ಸೃಷ್ಟಿಸಲಾಗಿದೆ. ನಕಲಿ ಹಣ ವರ್ಗಾವಣೆ ಸೃಷ್ಟಿಸಲಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ಆರೋಪಿಸಿದ್ದಾರೆ. ವಿದೇಶಗಳಲ್ಲಿ ನಾನು ಹಣ ಹೂಡಿಕೆ ಮಾಡಿದ್ದೇನೆ ಎಂದು ಅಧಿಕಾರಿಗಳು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ವಿದೇಶಗಳಲ್ಲಿ ಒಂದು ಡಾಲರ್ ನಷ್ಟು ಪ್ರಾಪರ್ಟಿ ಇದ್ದರೆ ನಾನು ಇಷ್ಟು ದಿನ ಸಂಪಾದನೆ ಮಾಡಿರುವ ಆಸ್ತಿಯನ್ನು ಸರ್ಕಾರ ಮುಟ್ಟುಕೊಳ್ಳಲು ಹಾಕಿಕೊಳ್ಳಲಿ ಎಂದು ಆಫೀಡಿವೇಟ್ ಬರೆದುಕೊಡ್ತೀನಿ ಎಂದು ಸವಾಲು ಹಾಕಿದರು. ನಾನು ಖಂಡಿತವಾಗಿಯೂ ವಿದೇಶದಲ್ಲಿ ಯಾವುದೇ ನಾನು ಇನ್ವೆಸ್ಟ್ ಮಾಡಿಲ್ಲ. ನನ್ನದೇನಿದ್ದರೂ ಬೆಂಗಳೂರು ಬಾಗೇಪಲ್ಲಿ ಅಷ್ಟೇ ನಾವು ಬಿಸಿನೆಸ್ ಮಾಡುವಂತಹ ಜನ…

Read More

ಬೆಂಗಳೂರು : ಬೆಂಗಳೂರಲ್ಲಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ನಿನ್ನೆ ಸಂಜೆ 6:10ರ ಸುಮಾರಿಗೆ ಮಳೆ ಸಂದರ್ಭದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ 3 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಆದ್ರೆ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನ ಈವರೆಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ ನಗರದ ಹಲವೆಡೆ ತಡರಾತ್ರಿ ಭಾರೀ ಮಳೆ ಸುರಿದು, ಪ್ರಮುಖ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿವಿಧ ಪ್ರದೇಶಗಳಲ್ಲಿ 3.2 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ತಿಳಿದುಬಂದಿದೆ. ಮಳೆಯೊಂದಿಗೆ ಭಾರೀ ಗಾಳಿಗೆ ಅಲ್ಲಲ್ಲಿ ಅವಾಂತರಗಳೂ ಸಂಭವಿಸಿವೆ. ಬೃಹತ್‌ ಮರಗಳು, ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಈ ನಡುವೆ ನಿನ್ನೆ ರಾತ್ರಿ ಬಿದ್ದ ಮರಗಳನ್ನ ಈವರೆಗೂ ತೆರವು ಮಾಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ವಿಕೃತಕಾಮಿ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ತಾಯಿ ಮಗಳು ಸ್ನಾನ ಮಾಡುವ ವಿಡಿಯೋ ಮಾಡುತ್ತಿದ್ದ ಆರೋಪಿ ಮೊಯೀನುದ್ದಿನ್ ಎಂಬ ಆರೋಪಿಯನ್ನು ಇದೀಗ ಪೊಲೀಸ್ ಮಾಡಿದ್ದಾರೆ. ಹೌದು ತಾಯಿ ಮಗಳು ಸ್ನಾನ ಮಾಡುವಾಗ ಕದ್ದು ಮುಚ್ಚಿ ಕಾಮುಕನೊಬ್ಬ ವಿಡಿಯೋ ಮಾಡುತ್ತಿದ್ದ. ಕಾಡುಗೊಡಿಯ ಚನ್ನಸಂದ್ರ ದಲ್ಲಿ ಒಂದು ಘಟನೆ ನಡೆದಿದ್ದು, ಕಾಡುಗೋಡಿ ಪೊಲೀಸರು ಇದೀಗ ಮೊಯೀನುದ್ದಿನ್ ನನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಮಂಗಳವಾರ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಮೊಬೈಲ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿ ಕಾಮುಕನನ್ನು ಜೈಲಿಗೆ ಅಟ್ಟಿದ್ದಾರೆ.

Read More

ಬೆಂಗಳೂರು : ಕಳೆದ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾ.ಮೈಕಲ್ ಡಿ.ಕುನ್ಹಾ ಅವರ ವರದಿಯಲ್ಲಿ ಹಲವು ಅಂಶಗಳು ಉಲ್ಲೇಖವಾಗಿವೆ. ಕುನ್ಹಾ ವರದಿಯಲ್ಲಿ ಕಲ್ತುಳಿತ ಪ್ರಕರಣಕ್ಕೆ KSCA, RCB, DNA ಮತ್ತು ಪೊಲೀಸರೇ ನೇರ ಹೊಣೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಸಿರುವ ಮೈಕಲ್ ಡಿ ಕುನ್ಹ ವರದಿಯಲ್ಲಿ ಇವೆಲ್ಲಾ ಅಂಶಗಳು ಉಲ್ಲೇಖವಾಗಿವೆ. ವಿಜಯೋತ್ಸವ ಕಾರ್ಯಕ್ರಮ ನಡೆಸುವುದು ಅಸಾಧ್ಯ ಎಂದು ಗೊತ್ತಿದ್ದರೂ ಕೂಡ ಎಲ್ಲರೂ ಶಾಮಿಲಾಗಿ ಕಾರ್ಯಕ್ರಮ ನಡೆಸಿದ್ದರು. ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಕರ್ತವ್ಯ ಲೋಪವಾಗಿದೆ. ಇದರಲ್ಲಿ ಎಲ್ಲರ ನಿರ್ಲಕ್ಷತನದ ಪರಮಾವಧಿ ಎದ್ದು ಕಾಣುತ್ತಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಇದ್ದಿದ್ದು 79 ಪೋಲೀಸರು ಮಾತ್ರ. ಹೊರಗೆ ಪೊಲೀಸರು…

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಯುವತಿಯ ಸಾಲದ ವಿಚಾರಕ್ಕೆ ಗಲಾಟೆ ಆಗಿ ಇಬ್ಬರಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದ್ದು, ಜಗಳ ಬಿಡಿಸಲು ಬಂದ ಮತ್ತು ಸಾಲ ನೀಡಿದವನಿಗೆ ಇಬ್ಬರಿಗೂ ಚಾಕು ಇರಿದಿದ್ದಾರೆ. ಹೌದು ನಾಲ್ಕರಿಂದ ಐದು ಯುವಕರ ಗ್ಯಾಂಗ್ ನಿಂದ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದೆ. ಜಗಳ ಬಿಡಿಸಲು ಬಂದ ಚೇತನ್ ಮತ್ತು ಸಾಲ ನೀಡಿದ ಸುದೀಪ್ ಇಬ್ಬರಿಗೂ ಚಾಕು ಇರಿದಿದ್ದಾರೆ. ಸದ್ಯ ಜಗಳ ಬಿಡಿಸಲು ಬಂದ ಚೇತನಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸಾಲ ತೆಗೆದುಕೊಂಡ ಸುದೀಪ್ ನೆಲಮಂಗಲದ ಜ್ಯೂಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷದ ಹಿಂದೆ ಸುದೀಪ್ ಗೆ ಯುವತಿಯೊಬ್ಬಳು ಪರಿಚಯವಾಗಿ ಪ್ರೀತಿಸಿದ್ದರು. ಈ ನಡುವೆ ಯುವತಿಗೆ 2000 ಹಣ ಸುದೀಪ್ ಸಾಲ ನೀಡಿದ್ದ. ಕೆಲ ತಿಂಗಳ ಹಿಂದೆ ಯುವತಿ ಮತ್ತು ಸುದೀಪ್ ನಡುವೆ ಬ್ರೇಕ್ ಅಪ್ ಆಗಿತ್ತು, ಯುವತಿಗೆ ಹಣ ವಾಪಸ್ ನೀಡುವಂತೆ ಸುದೀಪ್…

Read More