Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಚ್ಚಿ ಬೆಳೆಸುವಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಆಗಿವೆ. ಕಚೇರಿಯಲ್ಲಿ ಮಹಿಳೆಯರನ್ನು ಖಾಕಿ ಸಮವಸ್ತ್ರದಲ್ಲಿಯೇ ತಮ್ಮ ಮೇಲೆ ಕೂರಿಸಿಕೊಂಡು ಅಪ್ಪಿ ಮುದ್ದಾಡುತ್ತಿರುವ ವಿಡಿಯೋ ವೈರಲಾಗಿದೆ. ಹೌದು ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವೈರಲ್ ಆಗಿದೆ. ಒಂದು ವರ್ಷಗಳ ಹಿಂದೆಯೇ ಡೀಜಿಪಿ ರಾಸಲೀಲೆ ದೃಶ್ಯ ಸೆರೆಯಾಗಿತ್ತು. ನಟಿ ರನ್ಯಾರಾವ್ ಪ್ರಕರಣಕ್ಕಿಂತ ಮೊದಲು ಈ ಒಂದು ರಾಸಲೀಲೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಡಿಸಿಆರ್ಇ ಡಿಜಿಪಿಯಾಗಿ ರಾಮಚಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಜಿಪಿ ರಾಮಚಂದ್ರ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿಯೇ ಬಿಜೆಪಿ ರಾಮಚಂದ್ರ ರಾಸಲೀಲೇ ನಡೆಸಿದ್ದು ಕಚೇರಿಯಲ್ಲಿಯೇ ಕುಳಿತು ಸ್ತ್ರೀಯರಿಗೆ ಮುತ್ತಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಕಚೇರಿಯಲಿಯೇ ಕುಳಿತು ಮಹಿಳೆಯರಿಗೆ ಮುತ್ತಿಟ್ಟಿರುವ ದೃಶ್ಯ ಸೆರೆಯಾಗಿದೆ. ಚೇರ್ ಮೇಲೆ ಕುಳಿತುಕೊಂಡು ಮಹಿಳೆಯನ್ನು ಅಪ್ಪಿಕೊಂಡಿದ್ದಾರೆ. ಸದ್ಯ ಈ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಚಾರವಾಗಿ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಶಿವಮೊಗ್ಗ : ಕಳೆದ ಜನೆವರಿ 7 ರಂದು ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಎಂದು ದಾಖಲೆ ಬರೆದಿದ್ದಾರೆ. ಅಷ್ಟೆ ಅಲ್ಲದೇ ಮೇ ಮೊದಲ ಅಥವಾ ಎರಡನೇ ವಾರದಲ್ಲಿ 17ನೇ ಬಾರಿ ದಾಖಲೆ ಬಜೆಟ್ ಕೂಡ ಮಂಡನೆ ಮಾಡಲಿದ್ದಾರೆ.ಒಟ್ಟಾರೆಯಾಗಿ ದಾಖಲೆರಾಮಯ್ಯರಾಗಿ ಸಿದ್ದರಾಮಯ್ಯ ಹೊರಹೊಮ್ಮಿದ್ದಾರೆ. ಇದೀಗ ಜನವರಿ 22ರಂದು ಕರೆದಿರುವ ಅಧಿವೇಶನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಅಧಿವೇಶನವಿರಬಹುದು. ಈ ಅಧಿವೇಶನವನ್ನು ವಿದಾಯದ ಭಾಷಣವಾಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪನವರು ಅಧಿವೇಶನ ಕರೆದಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ. 22ನೇ ತಾರೀಕಿನಿಂದ ಅಧಿವೇಶನ ಕರೆಯುತ್ತಿದ್ದಾರೆ. ಅವರು ಮಾಡುತ್ತಿರುವ ತರಾತುರಿ ನೋಡುತ್ತಿದ್ದರೆ ನನಗೆ ಅವರದು (ಸಿಎಂ ಸಿದ್ದರಾಮಯ್ಯ) ಇದು ಕೊನೆ ಅಧಿವೇಶನ ಅನ್ನಿಸಲು ಪ್ರಾರಂಭವಾಗುತ್ತಿದೆ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಅನಿಸುತ್ತದೆ. ಬರಲಿ, ಯಾರು ಬಂದರೂ ಇನ್ನು ಮುಂದೆಯಾದರೂ ಅಭಿವೃದ್ಧಿ ಮಾಡುವುದರ ಬಗ್ಗೆ ಯೋಚನೆ ಮಾಡಬೇಕು.
ಗದಗ : ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ಆಗಿರುವಾಗ ಚಿನ್ನ ಸಿಕ್ಕ ಬೆನ್ನಲ್ಲೆ, ರಾಜ್ಯ ಸರ್ಕಾರ ಇಡೀ ಗ್ರಾಮದಲ್ಲಿ ಉತ್ಖನನ ನಡೆಸಲು ನಿರ್ಧರಿಸಿದ್ದು ಇಂದು ನಾಲ್ಕನೇ ದಿನ ಉತ್ಪನನ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಅಲ್ಲಿಗೆ ಬಂದಂತಹ ಸ್ವಾಮೀಜಿ ಒಬ್ಬರು ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಿನ್ನದ ಚಾಮುಂಡೇಶ್ವರಿ ಮೂರ್ತಿ ಇದೆ ಎಂದು ಹೈಡ್ರಾಮ ಮಾಡಿದ್ದಾರೆ. ಲಕ್ಕುಂಡಿಯಲ್ಲಿ ನಾಲ್ಕನೇ ದಿನ ಉತ್ಖನ ಕಾರ್ಯ ಮುಂದುವರೆದಿದ್ದು, ಇದೆ ಸಂದರ್ಭದಲ್ಲಿ ಸ್ವಾಮೀಜಿ ಒಬ್ಬರು ಹೈಡ್ರಾಮಾ ಮಾಡಿದ್ದಾರೆ. ನಾನು ಪವಾಡ ಪುರುಷ ಅಂತ ಹೇಳಿಕೊಂಡು ಬಂದ ಸ್ವಾಮೀಜಿ ನಾನು ನಿಂತ ಜಾಗದಲ್ಲಿ ಮೈಸೂರು ಚಾಮುಂಡೇಶ್ವರಿ ಮೂರ್ತಿ ಇದೆ. ಸಾವಿರ ಕೆಜಿಯ ಚಾಮುಂಡಿ ಮೂರ್ತಿ ಇದೆ. ಬಂಗಾರ, ವಜ್ರ ಖಚಿತ ಮೂರ್ತಿ ಇದೆ. 10 ಅಡಿ ಆಳ ತೆಗೆದರೆ ಮೂರ್ತಿ ಸಿಗುತ್ತೆ. ನಾನು ರಾಣಿ ಚೆನ್ನಮ್ಮನ ವಂಶಸ್ಥ ಎಸ್.ಸಿ ಹಿರೇಮಠ ಅಂತ ಸ್ವಾಮೀಜಿ ಈ ಒಂದು ಹೇಳಿಕೆ ಕೊಟ್ಟಿದ್ದಾರೆ.
ಬೆಂಗಳೂರು : ಮುಂಬರುವ ಜಿಬಿಎ ಚುನಾವಣೆಗೆ ಈ ಬಾರಿ ಇವಿಎಂ ಮಷಿನ್ ಗೆ ಕೊಕ್ ನೀಡಲಾಗಿದ್ದು ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಈ ಬಾರಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಈವಿಎಂ ಬಳಕೆ ಮಾಡಲಾಗಿತ್ತು. ಹಾಗಾಗಿ ಮೇ 25 ರ ನಂತರ ಜಿಬಿಎ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದರಲ್ಲಿ ಈವಿಎಂ ಬಳಕೆಗೆ ಕೊಕ್ ನೀಡಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ನಮ್ಮದು ಸ್ವತಂತ್ರ ಸಂಸ್ಥೆ. ಇದು ನಮ್ಮದೇ ಸ್ವಂತ ನಿರ್ಧಾರ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವಿಎಂ ಬ್ಯಾಲೆಟ್ ಪೇಪರ್ ಎರಡರಲ್ಲೂ ದೋಷವಿಲ್ಲ ಸುಪ್ರೀಂ ಕೋರ್ಟ್ ಬ್ಯಾಲೆಟ್ ಪೇಪರ್ ಬಳಸಬೇಡಿ ಎಂದಿಲ್ಲ ನಾವ್ಯಾಕೆ ಬ್ಯಾಲೆಟ್ ಪೇಪರ್ ಬಳಸಬಾರದು ಎಂದು ಚುನಾವಣಾ ಆಯೋಗ ಪ್ರಶ್ನಿಸಿದೆ.
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾರ್ ಲೈಸೆನ್ಸ್ ಗಾಗಿ ಬಾರ್ ಮಾಲೀಕರ ಬಳಿ ಅಬಕಾರಿ ಡಿಸಿ ಜಗದೀಶ್ ನಾಯಕ್ 75 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಈ ವೇಳೆ 25 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬಕಾರಿ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಲೋಕಾಯುಕ್ತಕ್ಕೆ ಲಕ್ಷ್ಮೀನಾರಾಯಣ ಎಂಬವರು ದೂರು ನೀಡಿದ್ದಾರೆ. ಬಾರ್ ಪರವಾನಿಗೆ ನೀಡಲು ಲಂಚ ಕೇಳಿದ ಆರೋಪ ಹಿನ್ನೆಲೆಯಲ್ಲಿ ಸಚಿವ ತಿಮ್ಮಾಪುರ ವಿರುದ್ಧ ಲಕ್ಷ್ಮಿನಾರಾಯಣ ದೂರು ನೀಡಿದ್ದಾರೆ.
ದಾವಣಗೆರೆ : ಕಳೆದ ಕೆಲವು ತಿಂಗಳ ಹಿಂದೆ ಬೆಳಗಾವಿಯಲ್ಲಿರುವ ಕಿರು ಮೃಗಾಲಯದಲ್ಲಿ ನಿಗೂಢವಾಗಿ 25ಕ್ಕೂ ಹೆಚ್ಚು ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇದೀಗ ಚುಕ್ಕಿ ಜಿಂಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಡೆದಿದೆ. ಕಳೆದ ಮೂರೇ ದಿನದಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ್ದು, ಮೃಗಾಯಲದಲ್ಲಿ ಹೆಮರಾಜಿಕ್ ಸೆಫ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಹರಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಮೃಗಾಲಯದಲ್ಲಿ ಸದ್ಯ 170 ಚುಕ್ಕೆ ಜಿಂಕೆಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲು ವೈದ್ಯರು ರೋಗನಿರೋಧಕ ಚಿಕಿತ್ಸೆ ಆರಂಭಿಸಿದ್ದಾರೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ಹೇರಿದ್ದಾರೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪಿಯುಸಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಸಾನಾ ಕಾಲೇಜಿನ ಹಾಸ್ಟೆಲ್ ನಲ್ಲಿ ಅಯಾನ್ ಸುಂಕದ ಎನ್ನುವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಹುಬ್ಬಳ್ಳಿಯ ಭೈರಿದೇವರಕೊಪ್ಪ ಬಳಿ ಇರುವ ಕಾಲೇಜಿನಲ್ಲಿ ಮೃತದೇಹ ಪತ್ತೆಯಾಗಿದೆ. ಹಾಸ್ಟೆಲ್ ಮೂರನೇ ಮಹಡಿಯೇ ಕೆಳಗೆ ಅಯಾನ್ ಶವ ಪತ್ತೆಯಾಗಿದೆ. ಸೈನ್ಸ್ ವಿಭಾಗದಲ್ಲಿ ಅಯಾನ್ ಸುಂಕದ ಓದುತ್ತಿದ್ದ. ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಕಮಲೂರು ಮೂಲದ ಆಯಾನ್ ಸುಂಕದೆಂದು ತಿಳಿದು ಬಂದಿದ್ದು, ಆತನ ಮೃತ ದೇಹವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೆಂಗಳೂರು : ಕನ್ನಡದ ಅತ್ಯುನ್ನತ ರಿಯಾಲಿಟಿ ಶೋ ಗಳಲ್ಲಿ ಒಂದಾಗಿದ್ದ ಬಿಗ್ ಬಾಸ್ ಸೀಸನ್ 12 ಕ್ಕೆ ನಿನ್ನೆ ತೆರೆ ಬಿದ್ದಿದೆ. ಇವಂದು ಫಿನಾಲೆಯಲ್ಲಿ ಗಿಲ್ಲಿ ನಟ ವಿಜೇತರಾಗಿ ಹೊರಹೊಮ್ಮಿದ್ದು ಬಿಗ್ ಬಾಸ್ ಕಪ್ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಕೂಡ ಗೆದ್ದಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಗಿಲ್ಲಿ ನಟ, ತುಂಬಾ ಖುಷಿ ಆಯ್ತು ನನಗೆ. ನಂಬೋಕೆ ಆಗ್ತಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ನಿಜನಾ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಆಶಯ ವ್ಯಕ್ತಪಡಿಸಿದರು. ದೊಡ್ಡಮ್ಮ ದೊಡ್ಡಮ್ಮ ದ್ವಾಸೆ ಕೊಡು ಹಾಡನ್ನ ಸ್ಕೂಲ್‌ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು ಎಂದು ಖುಷಿ ವ್ಯಕ್ತಪಡಿಸಿದರು. ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು…
ಮೂಲ ನಕ್ಷತ್ರದವರಿಗೆ ಯೆ,ಯೊ,ಬ,ಬಿ ಇವರಿಗೆ ನೀಮ್ಮಗೆ ಎಷ್ಟೇ ಸಮಸ್ಯೆಗಳು ಇದರು ಬಗ್ಗೆ ಆರಿಯುತ್ತದೆ. ಇದು ಹರಿ ವಾಕ್ ಸತ್ಯ ನೀವು ತಾಮ್ರದ ರ್ಸಪಗಳನು ತೆಗೆದುಕೊಂಡು ಪ್ರತಿ ಮಂಗಳವಾರ ಒಂದು ಶುಕ್ರವಾರ ಒಂದು ಹೀಗೆ 5 ಮಂಗಳವಾರ 5 ಶುಕ್ರವಾರ ಒಂದು ಕೆಂಪು ವಸ್ತ್ರದಲ್ಲಿ ಪೂಜೆ ಮಾಡಿ ಗಂಟು ಕಟ್ಟಿ ಇಡಿ5 ಮಂಗಳವಾರ 5 ಶುಕ್ರವಾರವಾದ ಮೇಲೆ ಯಾವುದಾದರೂ ಪುಣೆಯ ಕ್ಷೇತ್ರ ಶಿವನ ದೇವಾಲಯವೆ ಆಗಬೇಕು ಅಲ್ಲಿ ಹುಂಡಿಗೆ ಹಾಕಿ ಇಲ್ಲವೆಂದರೆ ಎಲ್ಲಾದರೂ ಹೋಮ ಮಾಡುತ್ತಿದರೆ ಹೋಮಕ್ಕೆ ಹಾಕಿ ಮನೆಗೆ ಬಂದು ಬಿಡಿ ನಂತರ ನೋಡಿ ಬದಲಾವಣೆ ನಂತರ ನನಗೆ ತಿಳಿಸಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ…
ಬೆಂಗಳೂರು : ಬೆಂಗಳೂರಲ್ಲಿ ಮದುವೆಯಾಗುವುದಾಗಿ ನಂಬಿಸಿ ಆಸಾಮಿ ಒಬ್ಬ ತನ್ನ ಪತ್ನಿಯನ್ನೇ ಅಕ್ಕ ಎಂದು ಯುವತಿಗೆ ಪರಿಚಯಿಸಿ ಆಕೆಗೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಎಸಗಿದ್ದಾನೆ. ಬೆಂಗಳೂರಿನ ಯುವತಿಗೆ ವಂಚನೆ ಎಸಗಿದ್ದು, ಬೆಂಗಳೂರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯುವತಿ ವಂಚನೆಗೆ ಒಳಗಾಗಿದ್ದಾಳೆ. ಇದೀಗ ಕೆಂಗೇರಿ ಠಾಣೆ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಹಿನ್ನೆಲೆ? ಮ್ಯಾಟರ್ ಮೋನಿಯಲ್ಲಿ ಆರುಪಿ ವಿಜಯ್ ರಾಜೇಗೌಡ ಪರಿಚಯವಾಗಿದ್ದ. 2024 ಮಾರ್ಚ್ ನಲ್ಲಿ ವಿಜಯ್ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ತಾನು ಉದ್ಯಮಿ 715 ಕೋಟಿ ಮಾಡಿದ ಆಸ್ತಿ ಒಡೆಯ ಇದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಕುಟುಂಬದ ಸದಸ್ಯರನ್ನು ಪರಿಚಯಿಸಿದ. ಕೆಂಗೇರಿ ಬಳಿ ಯುವತಿಯ ಕುಟುಂಬ ಸದಸ್ಯರನ್ನು ಪರಿಚಯಿಸಿದ್ದಾನೆ. ಅಲ್ಲದೆ ಇನ್ನೊಂದು ಬೆಚ್ಚಿ ಬೀಳಿಸೋ ವಿಷಯ ಏನೆಂದರೆ ಆರೋಪಿ ವಿಜಯ್ ತನ್ನ ಪತ್ನಿಯನ್ನು ಅಕ್ಕ ಎಂದು ಯುವತಿಗೆ ಪರಿಚಯಿಸಿದ್ದಾನೆ. ನಂತರ ಆಸ್ತಿ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿ ಕೇಸ್ ಆಗಿದೆ ಎಂದು ಯುವತಿಗೆ ಆರೋಪಿ ಹೇಳಿ…














