Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಕೊಲ್ಕತ್ತಾ : ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್ (71) ಹೃದಯಘಾತದಿಂದ ನಿಧನರಾಗಿದ್ದಾರೆ. ಕೊಲ್ಕತ್ತಾದ ಅಪೊಲೊ ಆಸ್ಪತ್ರೆಯಲ್ಲಿ ಮುಕುಲ್ ರಾಯ್ ಇಂದು ನಿಧನರಾದರು ಮದ್ಯರಾತ್ರಿ 1:30ಕ್ಕೆ ಹೃದಯಘಾತದಿಂದ ಮುಕುಲ್ ನಿಧನರಾಗಿದ್ದಾರೆ. ಮಾಜಿ ರೈಲ್ವೆ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ, ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿದ್ದ ಮುಕುಲ್ ರಾಯ್ ಅವರು ಭಾನುವಾರ ಬೆಳಗಿನ ಜಾವ 1:30 ಕ್ಕೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಮಗ ಸುಭ್ರಂಶು ರಾಯ್ ದೃಢಪಡಿಸಿದರು. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ರಾಯ್, ಬಹು ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಕೆಲವು ದಿನಗಳ ಹಿಂದೆ ಕೋಮಾದಲ್ಲಿದ್ದರು.
ನೀವು ಶಿವನ ಚಿತ್ರವನ್ನು ನೋಡಿದಾಗ ಅವನ ತಲೆಯ ಮೇಲೆ ಚಂದ್ರನಿದ್ದಾನೆ ಎಂಬುವುದನ್ನು ಗಮನಿಸಿರುತ್ತೀರಿ. ಚಂದ್ರನು ಶಿವನ ಮುಕುಟ ಏರಿದ್ದು ಹೇಗೆ? ಇಲ್ಲಿದೆ ನೋಡಿ ಅದರ ಕಥೆ. ಚಂದ್ರನ ಪತ್ನಿಯಾದ ರೇವತಿಯು ದಕ್ಷ ಮಹಾರಾಜನ ಮಗಳು. ಚಂದ್ರನು ಆ ಸಮಯ ಪೂರ್ಣ ಚಂದ್ರನಾಗಿಯೇ ಇದ್ದ. ಅವನ ಸಾಮರ್ಥ್ಯದ ಬಗ್ಗೆ ಅವನಿಗೆ ಅಪಾರವಾದ ಅಹಂಕಾರವಿತ್ತು. ಈ ಎಲ್ಲಾ ಕಾರಣದಿಂದ ಅವನು ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ವಿಷಯ ತಿಳಿದ ರೇವತಿಯ ತಂದೆ ದಕ್ಷನು ಚಂದ್ರನ ದೇಹ ಕ್ಷಯಿಸಿ, ಮೃತ್ಯು ಬರುವಂತೆ ಶಾಪ ನೀಡುತ್ತಾನೆ. ಹೀಗೆ ಶಾಪಕ್ಕೆ ತುತ್ತಾದ ಚಂದ್ರನು ಕ್ಷಯಿಸಲಾರಂಭಿಸುತ್ತಾನೆ. ಬ್ರಹ್ಮಾಂಡದ ಸಮತೋಲನ ಅಲ್ಲೋಲ ಕಲ್ಲೋಲವಾಗುತ್ತದೆ. ಪ್ರಳಯ, ಜ್ವಾಲಾಮುಖಿಗಳು ಎದ್ದೇಳುತ್ತವೆ. ಇದರಿಂದ ದೇವ-ದಾನವರು ಭಯಭೀತರಾಗುತ್ತಾರೆ. ತಮ್ಮ ಅಸ್ತಿತ್ವವನ್ನು ಉಳಿಸಲು ಅವರು ನಾರದರ ಮೊರೆ ಹೋಗುತ್ತಾರೆ. ನಾರದ ಮುನಿಗಳು ನೇರವಾಗಿ ಈಶ್ವರನಲ್ಲಿ ತೆರಳಿ ಈ ಸಂಕಷ್ಟದಿಂದ ಬ್ರಹ್ಮಾಂಡವನ್ನು ರಕ್ಷಿಸುವಂತೆ ಕೇಳಿಕೊಳ್ಳುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ…
ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದೀಗ ಜೈಲು ಅಧಿಕಾರಿಗಳು ದಾಸಕ ಭೈರತಿ ಬಸವರಾಜ್ ಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. 1864/2026 ಇದು ಬೈರತಿ ಬಸವರಾಜ್ ಅವರ ಕೈದಿ ನಂಬರ್ ಆಗಿದೆ. ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೈರತಿ ಬಸವರಾಜ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದು ಕ್ವಾರಂಟೈನ್ ಸೆಲ್ ನಲ್ಲಿ ಇದ್ದಾರೆ. ಭೈರತಿ ಬಸವರಾಜ್ ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ.
ಗದಗ : ನಿನ್ನೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ರೂಪಾಯಿ ಕಮಿಷನ್ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಚಂದ್ರು ಲಮಾಣಿ ಹಾಗೂ ಗುತ್ತಿಗೆದಾರನ ನಡುವಿನ ಆಡಿಯೋ ಒಂದು ವೈರಲಾಗಿದೆ. ಹೌದು ಕಮಿಷನ್‌ಗಾಗಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ. ಸೊಂಟ ಮುರಿಸ್ತೀನಿ.. ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದ್ರೆ ಸೊಂಟ ಮುರಿಸ್ತೀನಿ ಅಂತ ಗುತ್ತಿಗೆದಾರನ ವಿರುದ್ಧ ಲಮಾಣಿ ಗರಂ ಆಗಿದ್ದಾರೆ. ಈ ವೇಳೆ, ಇದೊಂದು ಸಾರಿ ತಪ್ಪಾಗಿದೆ ಅಂತ ಗುತ್ತಿಗೆದಾರ ಮಾತನಾಡಿದ್ದಾರೆ. ಆಡಿಯೋದಲ್ಲೇನಿದೆ? ನಾನು ಸರಳ ಅನ್ಕೊಂಡ್ರೆ ನಡಾನೆ ಮುರಿಸ್ತೀನಿ… ಪ್ರೀತಿ ವಿಶ್ವಾಸದಿಂದ ಹೇಳಿದ್ರೆ ನಾಟಕ ಮಾಡ್ತೀಯಾ…. ಸುಳ್ಳು ಹೇಳ್ತೀಯಾ ನೀನು… ಯಲ್ಲಮ್ಮ ಹೋಗಿನಿ ಮಲ್ಲಮ್ಮಗೆ ಹೋಗಿನಿ… ನಿಮ್ಮ ತಾಲ್ಲೂಕಿನಲ್ಲಿ ಮಾಡಿದಂಗೆ ನಮ್ಮ ತಾಲ್ಲೂಕಿನಲ್ಲಿ ಮಾಡಿದ್ರೆ ನಡಾ ಮುರಿಸ್ತೀನಿ.…
ಬೆಳಗಾವಿ : ತಾಲೂಕಿನ ಮಚ್ಚೆ ಗ್ರಾಮದಲ್ಲಿ ಫೆ.19ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಯಾರೋ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿರುವ ಆರೋಪ ಕೇಳಿ ಬಂದಿತ್ತು. ಆದರೆ, ಈ ನೈಜವಾಗಿ ಅಲ್ಲಿ ಯಾರೂ ಮಸಿ ಬಳಿದು ಅವಮಾನ ಮಾಡಿಲ್ಲ. ಬದಲಾಗಿ, ಮರದಿಂದ ಸುರಿದ ದ್ರಾವಣವು ಪ್ರತಿಮೆ ಮೇಲೆ ಬಿದ್ದಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಸ್ಪಷ್ಟನೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ದ್ರವರೂಪದ ವಸ್ತು ಬಿದ್ದಿತ್ತು. ಅದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದು ಯಾವುದೇ ರೀತಿಯ ಮಸಿ ಅಥವಾ ಬಣ್ಣವಲ್ಲ. ಮರದಿಂದ ಸುರಿದ ದ್ರವ ಪದಾರ್ಥ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಗುರುವಾರ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಕೆಲ ಯುವಕರು ಸೂಕ್ಷ್ಮವಾಗಿ ಗಮನಿಸಿದಾಗ ಕಪ್ಪು ಮಸಿ ಅಂತೆ ಕಾಣಿಸಿತ್ತು. ಯಾರೋ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ ಎಂದು ಅಂತಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ, ಘೋಷಣೆ ಕೂಗಲು ಶುರು ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ…
ದಕ್ಷಿಣಕನ್ನಡ : ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ ಪರಿಣಾಮ ಉಸಿರುಗಟ್ಟಿ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಶಂಕು ಆಕಾರದ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕ (8) ಮೃತ ಬಾಲಕಿ. ಮೃತ ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗಕ್ಕೆ ತೆರಳಲು ಹತ್ತಿರವಾಗಲು ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ವರಿ ಅವರ ಎರಡನೇ ಮಗಳು ತನುಷ್ಕ ತನ್ನ ಅಣ್ಣ ಮತ್ತು ತಂಗಿಯ ಜತೆ ಲೂಡೊ ಆಟದಲ್ಲಿ ತೊಡಗಿದ್ದಳಂತೆ. ಈ ವೇಳೆ ಲೂಡೊ ಆಟದ ಪ್ಲಾಸ್ಟಿಕ್ ಕಾಯ್ನ್ ನುಂಗಿ ಏಕಾಏಕಿ ಉಸಿರುಗಟ್ಟಿ ಪರಿಸ್ಥಿತಿ…
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಮಾಕಳಿ ಬಳಿ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿ ಇರುವ ಪರ್ಫ್ಯೂಮ್ ಗೋದಾಮಿನಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಿಗ್ಗೆ 11:30 ಕ್ಕೆ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕೆನ್ನಾಲಿಗೆಗೆ ಇಡೀ ಪರ್ಫ್ಯೂಮ್ ಗೋದಾಮು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ.
ನವದೆಹಲಿ : ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 8 ಉಗ್ರರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ISI ಮತ್ತು ಬಾಂಗ್ಲಾ ಮೂಲದ ಉಗ್ರ ಸಂಘಟನೆಗಳ ನೆರವು ಹಿನ್ನೆಲೆಯಲ್ಲಿ ದೇಶದ ವಿವಿಧಡೆ ಭಾಮ ಸ್ಫೋಟಕ್ಕೆ ಎಂಟು ಉಗ್ರರು ಸಂಜು ರೂಪಿಸಿದ್ದರು ಇದೀಗ ಅವರನ್ನು ಅರೆಸ್ಟ್ ಮಾಡಲಾಗಿದೆ. ತಮಿಳುನಾಡು ಮತ್ತು ಪಶ್ಚಿಮಬಂಗಾಳದಲ್ಲಿ ಜಂಟಿ ಕಾರ್ಯಚರಣೆಯಲ್ಲಿ ಅರೆಸ್ಟ್ ಮಾಡಲಾಗಿದೆ. ತಿರುಪ್ಪುರನ್ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಇದ್ದರು. ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಇಬ್ಬರು ಸಂಚುಕೋರರು ಅರೆಸ್ಟ್ ಆಗಿದ್ದಾರೆ. ದೆಹಲಿ ಕೆಂಪುಕೋಟೆ, ಚಾದನಿ ಚೌಕ್ ದೇಗುಲ ಮೇಲೆ ದಾಳಿಗೆ ಪ್ಲಾನ್ ಮಾಡಿದ್ದರು. ಬಾಂಗ್ಲಾದಲ್ಲಿ ಇದ್ದುಕೊಂಡು ನಿರ್ದೇಶನ ನೀಡುತ್ತಿದ್ದ ಕಾಶ್ಮೀರಿ ಹ್ಯಾಂಡ್ಲರ್. ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ದೆಹಲಿಯ ಮೆಟ್ರೋ ಮತ್ತು ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ಬಂಧಿತ ಉಗ್ರರ ಬಳಿ ಇದ್ದ 8 ಮೊಬೈಲ್ ಗಳು 16 ಸಿಂಬಳನ್ನು ವಶಕ್ಕೆ ಪಡೆದಿದ್ದಾರೆ. ಲಷ್ಕರ್-ಎ-ತೈಬಾ ಸಂಘಟನೆ ಸಂಪರ್ಕ ಹೊಂದಿದ್ದ ಆರೋಪಿಗಳು ದೆಹಲಿ ಪೊಲೀಸರ ವಿಶೇಷ…
ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ. ಇತಿಹಾಸ ಕಾಮಧೇನುವಿನ ವೈಶಿಷ್ಟ್ಯ ನೋಡಿ ಅದನ್ನು ಪಡೆಯುವ ದುರಾಸೆಯಿಂದ ಮಹಿಸ್ಪತಿ ನಗರದ ಅರಸು ಕಾರ್ತವೀರ್ಯಾರ್ಜುನ ರಾಜನು ಶ್ರೀ ಜಮದಗ್ನಿ ಋಷಿಗಳ ಮೇಲೆ ೨೧ ಸಲ ಘೋರವಾದ ಹೊಡೆತದ ಕೊಟ್ಟು ಹತ್ಯೆ ಮಾಡಿ ಕಾಮಧೇನು ಪಡೆಯಲು ಹೋದಾಗ ಅದು ಮಾಯವಾಗಿ ಬಿಡುತ್ತವೆ. ಕಾರ್ತವೀರ್ಯಾರ್ಜುನನು ಬರಿಗೈಯಿಂದ ಹಿಂತಿರುಗುತ್ತಾನೆ. ಶ್ರೀ ಜಮದಗ್ನಿ ಋಷಿಗಳ ಮಗನಾದ ರಾಮಭದ್ರನು ಮಾತೃಹತ್ಯೆ ವಿಮೋಚನೆಯಿಂದ ಮುಕ್ತನಾಗಿ ಶಿವನಿಂದ ಪರಶು ಅಸ್ತ್ರವನ್ನು ಪಡೆದು ಪರಶುರಾಮನೆಂದು ಖ್ಯಾತಿಹೊಂದಿ, ಶ್ರೀ ಪಾರ್ವತಿಯನ್ನು ಒಲಿಸಿಕೊಂಡು ಅಂಬಿಕಾಸ್ತ್ರವನ್ನು ಪಡೆದು ಪರಮ ಪರಾಕ್ರಮಿ ಎಂದೆನಿಸಿಕೊಳ್ಳುತ್ತಾನೆ. ಶ್ರೀ ಜಮದಗ್ನಿ ಋಷಿಯ ಆಶ್ರಮದಲ್ಲೆಲ್ಲಾ ಸ್ಮಶಾನ ಮೌನ ಆವರಿಸಿ ರೇಣುಕಾ ದೇವಿಯು ಜಮದಗ್ನಿ ಋಷಿಯ ಮೇಲೆ…
ಬೆಂಗಳೂರು : ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಇಂದು ನಡೆದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕುಲಪತಿಗಳ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಪ್ರಸ್ತಾಪಕ್ಕೆ ವಿವಿ ಕುಲಪತಿಗಳೂ ಒಪ್ಪಿಗೆ ಸೂಚಿಸಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಗೀಳು ದಿನೇ ದಿನೆ ಹೆಚ್ಚುತ್ತಿದೆ. ಪಾಠ-ಆಟ-ಊಟದ ಕಡೆಗಿನ ಆಸಕ್ತಿ ಕಡಿಮೆಯಾಗಿ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಹಿಂದೆಲ್ಲಾ ಮಕ್ಕಳಿಗೆ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಪಾಠಪ್ರವಚನ, ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈಗ ಮೊಬೈಲ್, ಆನ್‌ಲೈನ್ ಗೇಮಿಂಗ್, ಸೋಷಿಯಲ್ ಮೀಡಿಯಾ ಇವುಗಳೇ ಅವರ ಪ್ರಪಂಚವಾಗಿಬಿಟ್ಟಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಇಂದಿನ ದಿನಗಳಲ್ಲಿ ಯುವಜನರು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಚಿಂತನೆ…














