Author: kannadanewsnow05

ಬೆಂಗಳೂರು : ನಗರದಲ್ಲಿ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಅವರ ಬದುಕಿನ ಅತಿ ದೊಡ್ಡ ಶಾಕ್ ನೀಡಿದೆ. ವ್ಯಾಪಾರಿಗಳ ಅಪರಾಧವೆಂದರೆ ಗ್ರಾಹಕರಿಂದ ಆನ್ಲೈನ್ ಮುಖಾಂತರ ಹಣ ಸ್ವೀಕರಿಸಿರುವುದು. ವ್ಯಾಪಾರಿಗಳು ವ್ಯಾಪಾರ ಶುರುಮಾಡಿದಾಗಿನಿಂದ ಇದುವರೆಗೆ ನಡೆಸಿರುವ ವಹಿವಾಟಿನ ಮೇಲೆ ವಾಣಿಜ್ಯ ತೆರಿಗೆ ಕಟ್ಟಬೇಕೆಂದು ಇಲಾಖೆ ನೋಟೀಸ್ ಕಳಿಸಿದೆ. ಆದರೆ ಇದೀಗ ವಾಣಿಜ್ಯ ಇಲಾಖೆ ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ನೋಟಿಸ್​ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇದ್ದರೇ ಅಂತಹ ವರ್ತಕರು ಕೇವಲ ಶೇ 1 ರಷ್ಟು ಮಾತ್ರ ತೆರಿಗೆ ಪಾವತಿಸಬಹುದಾಗಿದೆ ಎಂದು ಹೇಳಿದೆ. ಹೌದು ಜುಲೈ 1, 2017 ರಿಂದ ಸರಕು ಮತ್ತು…

Read More

ದಾವಣಗೆರೆ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸ್ವಲ್ಪದರಲ್ಲೆ ಬಚಾವಾಗಿರುವ ಘಟನೆ ದಾವಣಗೆರೆ ತಾಲೂಕು ಹುಣಸಿಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ಕಾರಲ್ಲಿ ಆಕಸ್ಮಿಕ ಬೆಂಕಿಯಿಂದ ಎರ್ಟಿಗಾ ಕಾರೊಂದು ಧಗಧಕನೇ ಹೊತ್ತಿ ಉರಿದಿದೆ. ಗುವಾದಿಂದ ಆಂಧ್ರಪ್ರದೇಶದ ಕಡೆ ತೆರಳುತ್ತಿದ್ದ ಕಾರಿನಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನದಿಸುವಲ್ಲಿ ಯಶಸ್ವಿಯಾಯಿತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Read More

ಚಾಮರಾಜನಗರ : ರಾಜ್ಯದಲ್ಲಿ ಹೃದಯಘಾತದಿಂದ ಸರಣಿ ಸಾವುಗಳು ಸಂಭವಿಸುತ್ತಲೇ ಇವೆ. ಇದೀಗ ಚಾಮರಾಜನಗರದಲ್ಲಿ ಭಾರಿ ದುರಂತ ಒಂದು ತಪ್ಪಿದ್ದು ಖಾಸಗಿ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಹೃದಯಘಾತವಾಗಿದೆ. ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದು ಆತನನ್ನು ಚಾಮರಾಜನಗರಕ್ಕೆ ಕರೆತರುವಷ್ಟ್ರಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಬಸ್ ಚಲಾಯಿಸುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಖಾಸಗಿ ಬಸ್ ಚಾಲಕ ಇದೀಗ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ಚಾಲಕನನ್ನು ಆರ್ ಪಿಕೆ ಖಾಸಗಿ ಬಸ್ ಚಾಲಕ ಗುರುಸಿದ್ಧ (55) ಎಂದು ತಿಳಿದುಬಂದಿದೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಖಾಸಗಿ ಬಸ್ ತೆರಳುತ್ತಿತ್ತು. ಬಸ್ ಚಾಲನೆ ಮಾಡುತ್ತಿದ್ದಾಗ ಏಕಾಏಕಿ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆತರುತಿದ್ದಾಗ ಮಾರ್ಗ ಮಧ್ಯೆ ಚಾಲಕ ಸಾವನ್ನಪ್ಪಿದ್ದಾನೆ.

Read More

ಬೆಂಗಳೂರು : ಸಮಾಜದಲ್ಲಿ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಯಾರು ಕೈ ಚಾಚಬಾರದು. ಹೀಗಾಗಿ ಎಲ್ಲರಿಗೂ ಅನ್ನ ಕೊಟ್ಟಿದ್ದೇನೆ. ಸುಮ್ಮನೆ ಕೊಟ್ಟಿಲ್ಲ ಎಂದು ಅನ್ನಭಾಗ್ಯ ಯೋಜನೆ ಕುರಿತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹಲ್ಯಾಬಾಯಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನೆಂಟ್ರು ಹಬ್ಬ ಬಂದ್ರೆ ಮಾತ್ರ ನಾವು ಅನ್ನ ಅನ್ನ ಉಣ್ಣುತ್ತಿದ್ದೆವು. ಊರಲ್ಲಿ 20% ಮಾತ್ರ ನೀರಾವರಿ ಜಮೀನಿತ್ತು. ನಮ್ಮ ಮನೆಯಲ್ಲಿ ಕೂಡ ಸ್ವಲ್ಪ ನೀರಾವರಿ ಜಮೀನು ಇತ್ತು. ಮಕ್ಕಳಿಗೆ ಭೇದಿಯಾದರೆ ಹುಷಾರಿಲ್ಲದಿದ್ದರೆ ಅನ್ನ ಕೊಡುತ್ತಿದ್ದರು ಪಕ್ಕದ ಮನೆಯವರು ತುತ್ತು ಅನ್ನಕ್ಕೆ ನಿಂತುಕೊಂಡಿರುವರು. ನಮ್ಮ ಮನೆಯಲ್ಲಿ ಅನ್ನ ಕೇಳುವುದಕ್ಕೆ ಬರ್ತಾ ಇದ್ದರು. ಇದನ್ನ ನಾನು ಕಣ್ಣಾರೆ ನೋಡಿದ್ದೇನೆ. ಯಾರು ಕೂಡ ಅನ್ನ ಸಿಗದೇ ಇರಬಾರದು ಅಂದ ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು. ಅನುಭವದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದೆ. ಅನ್ನ ಮಾಡಿ ಊಟ ಮಾಡಿ ಮಾಡುತ್ತಿದ್ದೆವು. ಸಾಂಬಾರ್ ಹೋಟೆಲ್…

Read More

ಬೆಂಗಳೂರು : ಇತ್ತೀಚೆಗೆ ರಂಭಾಪುರಿ ಶ್ರೀಗಳು ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗಿದ್ದಾರೆ ಎಂದು ಹೇಳಿಕೆ ನೀಡಿದರು. ಇದೀಗ ಈ ಒಂದು ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಗಳಾಗಿದ್ದಾರ? ಬಸ್ನಲ್ಲಿ ಓಡಾಡುವ ಮಹಿಳೆಯರು ಸೋಮಾರಿಗಳಾಗಿದ್ದಾರಾ? ಎಂದು ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹಲ್ಯಾಬಾಯಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅನುಭವದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದೆ. ಅನ್ನ ಮಾಡಿ ಊಟ ಮಾಡಿ ಮಾಡುತ್ತಿದ್ದೆವು. ಸಾಂಬಾರ್ ಹೋಟೆಲ್ ನಿಂದ ತರುತ್ತಿದ್ವಿ. ಹೀಗಾಗಿ ನಾವು ವಿದ್ಯಾಸಿರಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಒಂದು ತಿಂಗಳಿಗೆ 1,500 ಕೊಡುತ್ತಿದ್ದೇವೆ ಆರ್ಥಿಕವಾಗಿ ಸಹಾಯ ಮಾಡಿದರೆ ಸೋಮಾರಿ ಆಗ್ತಾರಾ? ಇದು ಸಾಧ್ಯವಾ? 1.23 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2000 ನೀಡುತ್ತಿದ್ದೇವೆ ಇದು ಸಹಾಯ ಆಗುತ್ತೆ ಅಲ್ವಾ. ಆರ್ಥಿಕವಾಗಿ ಸಹಾಯ ಆಗುತ್ತೆ ತಾನೇ? ಇಲ್ಲ ಅಂದ್ರೆ…

Read More

ಬಾಗಲಕೋಟೆ : ಒಂದು ಕಡೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲು ಕೆಲವು ಪ್ರಮುಖ ಸಚಿವರು ಪಟ್ಟು ಹಿಡಿಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ ವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ. ಇದರನ ಬೆನ್ನಲ್ಲೇ ಶಾಸಕ ವಿಜಯಾನಂದ ಬಿಜೆಪಿಯ ಹೈಕಮಾಂಡ್ ಗೆ ಕಾಂಗ್ರೆಸ್ 55 ಶಾಸಕರ ಲಿಸ್ಟ್ ಇದ್ದು ಅದರಲ್ಲಿ ನನ್ನ ಹೆಸರು ಕೂಡ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಒಂದು ಹೇಳಿಕೆ ನೀಡಿದ್ದು, ಬಿಜೆಪಿ ಹೈ ಕಮಾಂಡ್ಗೆ ಕಾಂಗ್ರೆಸ್ಸಿನ 55 ಶಾಸಕರ ಟಾರ್ಗೆಟ್ ಲಿಸ್ಟ್ ನಲ್ಲಿ ನಾನು ಇದ್ದರೂ ಇರಬಹುದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದಿಂದ ಶಾಸಕರ ಖರೀದಿ ಆಗುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ವಿಜಯಾನಂದ…

Read More

ಬೆಂಗಳೂರು : ಬೆಂಗಳೂರಿನ ಕಳೆದ ಎರಡು ದಿನಗಳ ಹಿಂದೆ ಅಷ್ಟೇ ಇತಿಹಾಸ ಪ್ರಸಿದ್ದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆಯು ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಇಂದು ದೇಗುಲದ ಖಜಾನೆ ಸೀಜ್ ಮಾಡಲಾಗಿದೆ. ಅಲ್ಲದೇ ಲಾಕರ್ ಗೆ ನೋಟಿಸ್ ಅಂಟಿಸಿ ಬಂದ್ ಮಾಡಿ ಅಧಿಕಾರಿಗಳು ತೆರಳಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಖಜಾನೆ, ಲಾಕರ್ ತೆರೆಯುವಂತಿಲ್ಲ. ಈಗಾಗಲೇ ದೇಗುಲದಲ್ಲಿ ಸರ್ಕಾರಿ ಸಿಬ್ಬಂದಿ ಕಾರ್ಯನಿರ್ವಹಣೆ ಕೂಡ ಆರಂಭವಾಗಿದೆ. ವಿರೋಧದ ನಡುವೆಯೂ ಗಾಳಿ ಆಂಜನೇಯ ಸ್ವಾಮಿ ದೇಗುಲ ಈ ಮೂಲಕ ಅಧಿಕೃತವಾಗಿ ಮುಜರಾಯಿ ಇಲಾಖೆಯ ಸುಪರ್ದಿಗೆ ಬಂದಂತಾಗಿದೆ. ದೇಗುಲ ಸುಪರ್ದಿಗೆ ವಿರೋಧಿಸಿ ಸಭೆಗೆ ತೀರ್ಮಾನಿಸಲಾಗಿದ್ದು, ದೇಗುಲದ ಆಡಳಿತ ಮಂಡಳಿಯಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಒಂದು ಕಾನೂನು ಹೋರಾಟಕ್ಕೆ ಸ್ಥಳೀಯ ಭಕ್ತರು ಕೂಡ ಸಾತ್ ನೀಡಿದ್ದಾರೆ. ಸೋಮವಾರ ಸರ್ಕಾರದ ವಿರುದ್ಧ ಬೃಹತ್ ಸಭೆ ನಡೆಸಲು ದೇಗುಲದ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ

Read More

ಬೆಳಗಾವಿ : ಬೆಳಗಾವಿಯಲ್ಲಿ ಹಣಕಾಸು ವ್ಯವಹಾರ ಹಿನ್ನೆಲೆ ವೈದ್ಯನನ್ನು ಕಿಡ್ನ್ಯಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಈ ಒಂದು ಕೃತ್ಯ ನಡೆದಿದೆ. ಕಟ್ಟಿಗೆ, ಪೈಪ್, ಮತ್ತು ಹಗ್ಗದಿಂದ ಮನಬಂದಂತೆ ದುಷ್ಕರ್ಮಿಗಳು ವೈದ್ಯ ಆನಂದ್ ಉಪಾಧ್ಯಾಯ ಹಲ್ಲೆ ಮಾಡಿದ್ದಾರೆ. ಜುಲೈ 10ರಂದು ದುಷ್ಕರ್ಮಿಗಳು ಡಾ. ಆನಂದ್ ರನ್ನು ಅಪಹರಿಸಿದ್ದಾರೆ. ಕಾಡಪ್ಪ ತೇಲಿ, ಸಿದ್ದಪ್ಪ ತೇಲಿ, ಸಿದ್ದರಾಯ ತೇಲಿ ಸೇರಿದನೇ ಒಟ್ಟು 25 ಜನರ ಗ್ಯಾಂಗ್ನಿಂದ ವೈದ್ಯನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ. ಮಹೇಶವಾಡಿ ಗ್ರಾಮದ ಡಾಕ್ಟರ್ ಆನಂದ್ ಉಪಾಧ್ಯಾಯ ಹಲ್ಲೆಗೆ ಒಳಗಾಗಿದ್ದು, ವೈದ್ಯನ ಅಪಹರಣದ ಬಗ್ಗೆ ಸಂಬಂಧಿಕರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಆದರೂ ಕೂಡ ಅಥಣಿ ತಾಣೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಆನಂದ್ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2018 ರಲ್ಲಿ ತೇಲಿ ಕುಟುಂಬದ ಜೊತೆಗೆ ಸೇರಿ ವೈದ್ಯ…

Read More

ಶಿವಮೊಗ್ಗ : ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಹೊಟ್ಟೆಯೊಳಗೆ ಮೊಬೈಲ್ ಪತ್ತೆಯಾಗಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಒಂದು ಘಟನೆ ನಡೆದಿದ್ದು, ಕೈದಿ ದೌಲತ್ ಅಲಿಯಾಸ್ ಗುಂಡನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಹೊಟ್ಟೆ ನೋವು ಎಂದಾಗ ಕೈದಿಯನ್ನು ಮೆಗನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೋಯ್ಯಲಾಯಿತು. ಈ ವೇಳೆ ಒಂದು ಇಂಚು ಅಗಲದ 3 ಇಂಚು ಉದ್ದದ ಮೊಬೈಲ್ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಶಸ್ತ್ರ ಚಿಕಿತ್ಸೆಗು ಮುನ್ನ ಕೈದಿಯನ್ನು ಕೇಳಿದಾಗ ಕಲ್ಲು ನುಂಗಿದ್ದೇನೆ ಎಂದು ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಮೊಬೈಲ್ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಬಳಿಕ ಆಸ್ಪತ್ರೆ ವೈದ್ಯರು ಸರ್ಜರಿ ಮೂಲಕ ಮೊಬೈಲ್ ಅನ್ನು ಹೊರಗಡೆ ತೆಗೆದಿದ್ದಾರೆ.

Read More

ಮೈಸೂರು : ರಾಜ್ಯದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದ್ದರು ಈ ಒಂದು ಹೇಳಿಕೆಗೆ, ಕಾಂಗ್ರೆಸ್ಸಿನ ಮತ್ತೋರ್ವ ಶಾಸಕ ಸ್ಪೋಟಕ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಕ್ರಾಂತಿ ಯಾವಾಗ ಬೇಕಾದರೂ ಆಗಬಹುದು ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿಎಂ ಬದಲಾವಣೆಯ ವಿಚಾರ ಕುರಿತು ಮಾಧ್ಯಮಗಳ ಮುಂದೆ ಮಾತನಾಡಲ್ಲ 5 ವರ್ಷ ಸುಭದ್ರ ಸರ್ಕಾರ ಕೊಡಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ ಪಕ್ಷದಿಂದ ಸರ್ಕಾರ ಬಂದಿದೆ ಸರ್ಕಾರದಿಂದ ಪಕ್ಷ ಬಂದಿಲ್ಲ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ ಎಂದು ತನ್ವಿರ್ ಸೇಠ್ ತಿಳಿಸಿದರು. ನಾನು ನೂರು ವರ್ಷಗಳ ಕಾಲ ಬದುಕಬೇಕು ಅಂದುಕೊಂಡರು ನನ್ನಿಂದ ಅದು ಸಾಧ್ಯಾನಾ ಅಂತ ಯೋಚಿಸಬೇಕು ಮಾರನೆಯ ದಿನ ಬೆಳಗಿನ ಆಗುತ್ತೋ ಇಲ್ವೋ ಗೊತ್ತಿಲ್ಲ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಇರುತ್ತಾರೆ ನಮ್ಮ ಮುಖ್ಯಮಂತ್ರಿಗಳು ಅಧಿಕಾರ ಬದಲಾವಣೆಯ ಸೂತ್ರ ಗೊತ್ತಿಲ್ಲ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿಕೆ…

Read More