Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯವರೆಗೂ ಹೈಕಮಾಂಡ್ ಹೇಳುತ್ತೋ ಅಲ್ಲಿಯವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮೂರು ಬಾರಿ ಪುನರುಚ್ಚರಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಕುಣಿಗಲ್ ಶಾಸಕ ರಂಗನಾಥ್ ಪ್ರಶ್ನೆ ಕೇಳಿದರು ಆಕ್ರೋಶ ಭರಿತರಾದಂತೆ ಶಾಸಕ ಎಚ್ ಡಿ ರಂಗನಾಥ್ ಪ್ರಶ್ನೆ ಕೇಳಿದರು ನಂತರ ಸ್ವಲ್ಪ ಸಮಯದ ಬಳಿಕ ನನಗೇನು ಸಿಟ್ಟಿಲ್ಲ ನಾನು ಮಾತನಾಡುವುದೇ ಹೀಗೆ ಅಂತ ರಂಗನಾಥ್ ಹೇಳಿದರು ಬಳಿಕ ರಂಗನಾಥ್ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು. ಈ ವೇಳೆ ಬೇಕು ಅಂತಾನೆ ಹಾಗೆ ಕೇಳಿದ್ರಾ ಎಂದು ಆರ್ ಅಶೋಕ್ ಕೆಣಕಿದ್ದಾರೆ. ನೀವು ಉರಿಯುವ ಬೆಂಕಿಗೆ ಉಪ್ಪು ಹಾಕಬೇಡಿ ಅಂತ ಸಿದ್ದರಾಮಯ್ಯ ಹೇಳಿದರು. ಹಾಗಾದರೆ ಉರಿಯುತ್ತಾ ಇದೆ ಅಂತ ಆಯ್ತಲ್ವಾ ಅಂತ ಅಶೋಕ್ ಅಂದಾಗ, ಉರಿಯುತ್ತಾ ಇಲ್ಲ ಅದು ಗಾದೆ ಅಂತ ಸಿದ್ದರಾಮಯ್ಯ ಹೇಳಿದರು. ನಮ್ಮಲ್ಲಿ ಹೈಕಮಾಂಡ್ ಇದೆ ಐದು ವರ್ಷ ಇರಿ ಅಂತ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ ಜನ ಬಿಜೆಪಿಗೆ ಒಮ್ಮೆಯೂ…
ಕೊಡಗು : ಕಳೆದ ಕೆಲವು ದಿನಗಳ ಹಿಂದೆ ಚಾಮರಾಜ ನಗರದಲ್ಲಿ ವಿಷ ಹಾಕಿ ಐದು ಹುಲಿಗಳನ್ನು ಕೊಲೆ ಮಾಡಲಾಗಿತ್ತು. ಇದೀಗ ಕೊಡಗಿನಲ್ಲಿ ಉರುಳಿಗೆ ಸಿಲುಕಿ ಹುಲಿಯೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶ್ರೀಮಂಗಳ ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಚಟ್ಟಳ್ಳಿ ಬಳಿಯ ಶ್ರೀಮಂಗಳ ತೋಟದ ಬೇಲಿಗೆ ಉರುಳು ಹಾಕಿದ್ದ ದುಷ್ಕರ್ಮಿಗಳು. ಈ ವೇಳೆ ಗಂಡು ಹುಲಿ, ಉರುಳಿಗೆ ಸಿಲುಕಿ ಸಾವನ್ನಪ್ಪಿದೆ. ಕೆಚ್ಚಿಟ್ಟಿರ ಅಪ್ಪಯ್ಯ ತೋಟದಲ್ಲಿ ಒಂದು ಘಟನೆ ಸಂಭವಿಸಿದೆ ಉರುಳಿಗೆ ಸಿಲುಕಿ ನರಳಾಡಿ ಗಂಡು ಹುಲಿ ಪ್ರಾಣ ಬಿಟ್ಟಿದೆ.ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕಿ ಸುನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿಗೆ ಇದೀಗ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲು ದೆಹಲಿ ಕೋರ್ಟ್ ಇದೀಗ ನಿರಾಕರಿಸಿದೆ. ಇದೀಗ ಈ ಒಂದು ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದ್ದು ED ಸಲ್ಲಿಸಿದ ಚಾರ್ಜ್ ಶೀಟ್ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಇದೀಗ ತಿಳಿಸಿದೆ. ಅದಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ಒಂದು ಪ್ರಕರಣದಿಂದ ರಿಲೀಸಫ್ ಆಗಿದ್ದಾರೆ.
ವಿಜಯನಗರ : ರಾಜ್ಯದಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, l ಬೆಂಗಳೂರು, ವಿಜಯನಗರ ಶಿವಮೊಗ್ಗ ದಲ್ಲಿ ಅಧಿಕಾರಿಗಳ ಮನೆಯ ಮೇಲೆ ರೇಡ್ ಮಾಡಿದ್ದಾರೆ. ಧಾರವಾಡದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ತಕ್ಷಣ ಬಾತ್ರೂಮ್ ನ ಕಮೋಡ್ ನಲ್ಲಿ 50 ಸಾವಿರ ಹಣ ಹಾಕಿರುವ ಘಟನೆ ಇದೀಗ ವರದಿಯಾಗಿದೆ. ಹೌದು ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗೆ ಬೆಳ್ಳಂಬಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ನೀಡಿದ್ದಾರೆ. ಡಿ ಎಚ್ ಓ ಕಚೇರಿ, ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಅದೇ ರೀತಿಯಾಗಿ ಬೆಂಗಳೂರು ಶಿವಮೊಗ್ಗ ಹಾಗೂ ಧಾರವಾಡದಲ್ಲೂ ಕೂಡ ಭ್ರಷ್ಟಾಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಡಿ ಎಚ್ ಒ ಡಾಕ್ಟರ್ ಶಂಕರ್ ನಾಯಕ್ ನಿವಾಸ ಮತ್ತು ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಕಚೇರಿ ನಿವಾಸ ಮತ್ತು ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ…
ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದೀಗ ಬೆಚ್ಚಿ ಬೀಳಿಸುವ ವರದಿಯೊಂದು ಹೊರಬಂದಿದ್ದು, ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2,320 ಅಪ್ರಾಪ್ತೆಯರು ಗರ್ಭಧಾರಣೆ ಆಗಿರುವುದು ಕಳವಳಕಾರಿ ಸಂಗತಿಯಾಗಿದೆ. ಹೌದು ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಕರಣ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯಲ್ಲಿ 2,320 ಕೇಸ್ಗಳು ದಾಖಲಾಗಿವೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ಗದಗ, ಕೋಲಾರ ಸೇರಿದಂತೆ 729 ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆ ಮಾಹಿತಿ ನೀಡಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಕೆಲ ಅಶ್ಲೀಲ ಸಿನಿಮಾ, ವೆಬ್ ಸೀರಿಸ್ಗಳ ಪ್ರೇರಣೆಯಿಂದಾಗಿ ಓದುವ ವಯಸ್ಸಿನಲ್ಲಿ ಬೇಡದ ಜವಾಬ್ದಾರಿಗಳಿಗೆ ಬಾಲಕಿಯರು ಕಾರಣರಾಗುತ್ತಿದ್ಧಾರೆ. ಲೈಂಗಿಕ ಪ್ರಚೋದನೆಗೆ ನೀಡುವ ಕೆಲ ಸಿನಿಮಾ, ರೀಲ್ಸ್ಗಳನ್ನು ಮೊಬೈಲ್ನಲ್ಲಿ ನೋಡುವ ಬಾಲಕಿಯರು ಪ್ರೇಮದ ಕಡೆ ಆಕರ್ಷಣೆಗೊಳಗಾಗುತ್ತಿದ್ಧಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಯುವಕರು, ಅಪ್ರಾಪ್ತೆಯರ ಗರ್ಭಧಾರಣೆಗೆ ಕಾರಣರಾಗುತ್ತಿದ್ಧಾರೆ.…
ವಿಜಯನಗರ : ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗೆ ಬೆಳ್ಳಂಬಳ್ಳಿಗೆ ಲೋಕಾಯುಕ್ತ ಅಧಿಕಾರಿಗಳು ನೀಡಿದ್ದಾರೆ. ಡಿ ಎಚ್ ಓ ಕಚೇರಿ, ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಡಿ ಎಚ್ ಒ ಡಾಕ್ಟರ್ ಶಂಕರ್ ನಾಯಕ್ ನಿವಾಸ ಮತ್ತು ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಕಚೇರಿ ನಿವಾಸ ಮತ್ತು ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ ವಿಜಯನಗರ, ಕೊಪ್ಪಳ ಹಾಗು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತೆ ಎನ್ನುವ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ಈ ವಿಚಾರವಾಗಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿತ್ತು, ಅಲ್ಲದೆ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ್ಯಂತ ಮೊಟ್ಟೆ ಮಾದರಿ ಸಂಗ್ರಹಿಸಲು ಸೂಚನೆ ನೀಡಿದ್ದರು. ಇದೀಗ ಮೊಟ್ಟೆಯಲ್ಲಿ ನೈಟ್ರೋಫ್ಯೂರಾನ್ ಅಂಶ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಕಿದ್ವಾಯಿ ಅಂಕಾಲಾಜಿಸ್ಟ್ ಅಪರ ನಿರ್ದೇಶಕ ಡಾಕ್ಟರ್ ನವೀನ್ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ಯುರಲ್ ಪುರುಷರಿಗೆ ಹೊಟ್ಟೆ ಕ್ಯಾನ್ಸರ್ ಸಾದ್ಯತೆ ಇದೆ ಮೊಟ್ಟೆಯಿಂದ ನೇರವಾಗಿ ಬರುವುದಿಲ್ಲ. ಕೋಳಿಗಳಿಗೆ ನೈಟ್ರೋಫ್ಯೂರಾನ್ ಮಾಡಲಾಗುತ್ತಿತ್ತು ನೈಟ್ರೋಫ್ಯೂರಾನ್ ಇಂದ ಮೊಟ್ಟೆಗಳಿಗೂ ಬರುವ ಸಾಧ್ಯತೆ ಇದೆ ಹೀಗಾಗಿ ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಡಾಕ್ಟರ್ ನವೀನ್ ತಿಳಿಸಿದರು.
ತುಮಕೂರು : ನಿನ್ನೆ ಗದಗ ಜಿಲ್ಲಾ ಆಡಳಿತ ಭವನ ಮಂಗಳೂರು ಆರ್ ಟಿ ಓ ಕಚೇರಿಗೆ ಬಾಂಬ್ ಇಟ್ಟು ಸ್ಪೋಟಿಸಲಾಗುತ್ತದೆ ಎಂದು ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಇದೀಗ ತುಮಕೂರು ಜಿಲ್ಲಾಧಿಕಾರಿ ಕಚೇರಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಸ್ಪೋಟಗೊಳ್ಳಲಿದೆ ಎಂಬ ಸಂದೇಶ ಬಂದಿದೆ ಕೂಡಲೇ ಜಿಲ್ಲಾಧಿಕಾರಿ ಕಚೇರಿಗೆ ಪೊಲೀಸರು ದೌಡಯಿಸಿದ್ದಾರೆ. ಬಾಂಬ್ ನಿಷ್ಕ್ರಿಯದಳ, ಶ್ವಾನ ದಳ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಕಚೇರಿ ಒಳಗಡೆ ಯಾರನ್ನು ಬಿಡದೆ ತಪಾಸಣೆ ನಡೆಸುತ್ತಿದ್ದಾರೆ.
ಬೆಂಗಳೂರು : PSI ವಿರುದ್ಧ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಪಿಎಸ್ಐ ಹರೀಶ್ ಗೆ ತಲೆದಂಡ ಆಗಿದೆ. ಅಂಗಡಿ ಮಾಲೀಕನಿಂದ ಹಣ ವಸೂಲಿ ಇದೀಗ ಸಾಬೀತು ಆಗಿದೆ. ಕಗ್ಗಲಿಪುರ ಠಾಣೆಯ ಪಿಎಸ್ಐ ಹರೀಶ್ ಇದೀಗ ಅಮಾನತುಗೊಂಡಿದ್ದಾರೆ. ಅಮಾನತು ಮಾಡಿ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ. ಅಂಗಡಿ ಮಾಲೀಕ ರಾಜೇಶ್ ಅವರ ಬಲಿಬಳಿ ಸುಳ್ಳು ಪ್ರಕರಣವನ್ನು ದಾಖಲಿಸುವುದಾಗಿ ಹೇಳಿ 1.60 ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಜ್ಯೂಸ್ ಅಂಗಡಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿರುವ ರಾಜೇಶ್ ನಕಲಿ ಆಧಾರ್ ಕಾರ್ಡ್ ಮಾಡಿ ಕೊಡುತ್ತಿದ್ದೀಯಾ ಎಂದು ಆರೋಪಿಸಿ ಪಿಎಸ್ಐ ಹರೀಶ್ 1.60 ಲಕ್ಷ ಹಣ ವಸೂಲಿ ಮಾಡಿದ್ದಾರೆ ಅಕ್ಟೋಬರ್ 29ರಂದು ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆರೋಪಕ್ಕೆ ಸಂಬಂಧಪಟ್ಟಂತೆ ಸಾಕ್ಷಿಗಳು ಕೂಡ ಲಭ್ಯವಾಗಿದ್ದು ಈ ಹಿನ್ನೆಲೆ ಹರೀಶ್ ನನ್ನು ಸಸ್ಪೆಂಡ್ ಮಾಡಲಾಗಿದೆ.
ಬಾಗಲಕೋಟೆ : ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರಖ್ಯಾತ ಜಾನಪದ ಗಾಯಕರಿದ್ದಾರೆ.ಅದರಲ್ಲೂ ಬಿಗ್ ಬಾಸ್ ಸೀಸನ್ 12 ರಲ್ಲಿ ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಮಾಳು ನಿಪನಾಳ್ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಇದೀಗ ಉತ್ತರ ಕರ್ನಾಟಕದ ಯೂಟ್ಯೂಬರ್ ಸ್ಟಾರ್ ಗಾಯಕ ಒಬ್ಬನ ವಿರುದ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಹೌದು ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಸೇರಿದಂತೆ 7 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು ಎನ್ನಲಾಗಿದೆ. ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಅತ್ಯಾಚಾರ…













