Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಜುವೆಲ್ಲರೀ ಶಾಪಿಗೆ ನುಗ್ಗಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಜೂನ್ 25 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಚೋಹಳ್ಳಿಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ಇದೀಗ ಮಾದನಾಯಕನಹಳ್ಳಿ ಪೊಲೀಸ್ರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮೊಹಮ್ಮದ್ ರಫೀಕ್, ನೌಶಾದ್ ಹಾಗೂ ಮೊಹಮ್ಮದ್ ಇಬ್ತೆಹಾರ್ ಆರೋಪಿಗಳು ಎಂದು ತಿಳಿದು ಬಂದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದರೋಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಮಾಚೋಹಳ್ಳಿಯಲ್ಲಿ ಜುವೆಲರಿ ಶಾಪ್ ಗೆ ನುಗ್ಗಿ ದರೋಡೆ ಮಾಡಿದ್ದರು ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೇ ಈ ಒಂದು ದರೋಡೆ ಪ್ರಕರಣ ಬೆಚ್ಚಿ ಬೀಳಿಸಿತ್ತು. ಪ್ಲಾಸ್ಟಿಕ್ ಗನ್ ಹಿಡಿದು ಈ ಗ್ಯಾಂಗ್ ಗೋಲ್ಡ್ ಶಾಪ್ ರಾಬರಿ ಮಾಡಿತ್ತು. 90 ಗ್ರಾಮ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬಂದಿದ್ದರಿಂದ 30 ಲಕ್ಷ ಮೌಲ್ಯದ 90 ಗ್ರಾಮ್ ಚಿನ್ನಾಭರಣ ಎರಡು…
ಕಲಬುರ್ಗಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. ಕರ್ತವ ನಿರತ ಹೆಡ್ ಕಾನ್ಸ್ಟೇಬಲ್ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೆಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಳಖೆಡ ಠಾಣೆಯ ಹೆಡ್ ಕಾನ್ಸ್ಟೇಬಲ್ ಮನೋಹರ್ ಪವಾರ್ (46) ಸಾವನ್ನಪ್ಪಿದ್ದಾರೆ. ನಿನ್ನೆ ಕರ್ತವ್ಯದ ಮೇಲೆ ಸೇಡಂ ಪಟ್ಟಣಕ್ಕೆ ಮನೋಹರ ಆಗಮಿಸಿದ್ದರು ಈ ವೇಳೆ ಹೃದಯಘಾತದಿಂದ ಹೆಡ್ ಕಾನ್ಸ್ಟೇಬಲ್ ಮನೋಹರ್ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಹಿಟ್ & ರನ್ ಪ್ರಕರಣದಲ್ಲಿ ಇಬ್ಬರು ಬೈಕ್ ಸಮಾರರು ದುರ್ಮರಣ ಹೊಂದಿದ್ದಾರೆ. ಈ ಒಂದು ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರುಗೋಡ ಗ್ರಾಮದ ಹೊರ ವಲಯದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ಇದ್ದಂತಹ ವಿಶಾಲ ಲಮಾಣಿ (20) ಅಪ್ಪು ಲಮಾಣಿ (23) ಸಾವನ್ನಪ್ಪಿದ್ದಾರೆ ಮೃತರು ಸವದತ್ತಿ ತಾಲೂಕಿನ ಹುಲಿಕೇರಿ ತಾಂಡಾದ ನಿವಾಸಿಗಳು ಎಂದು ತಿಳಿದುಬಂದಿದೆ. ಬೈಕ್ ಡಿಕ್ಕಿ ಹೊಡೆದು ಅಪರಿಚಿತ ವಾಹನ ಸಮೇತ ಚಾಲಕ ಪರಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲಗಿ-ಮುರಗೋಡ ರಸ್ತೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ : ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡೂ ಅಪರಿಚಿತ ಮೃತದೇಹಗಳು ಪತ್ತೆಯಾಗಿರುವ ಘಟನೆ ಮಾಚಹಳ್ಳಿ ಗೇಟ್ ಬಳಿ ಇರುವ ಹೇಮಾವತಿ ಕಾಲುವೆಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 50 ರಿಂದ 55 ವರ್ಷದ ಇಬ್ಬರು ಪುರುಷರ ಮೃತ ದೇಹಗಳು ಪತ್ತೆಯಾಗಿವೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಮಾಚಹಳ್ಳಿ ಗೇಟ್ ಬಳಿ ಇರುವ ಹೇಮಾವತಿ ಕಾಲುವೆಯಲ್ಲಿ ಪತ್ತೆಯಾಗಿವೆ. ಕಾಲುವೆಯಲ್ಲಿದ್ದ ಮೃತ ದೇಹಗಳನ್ನ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿಗಳು. ಸುಮಾರು 50 -55 ವಯಸ್ಸಿನ ಪುರುಷರ ಎರಡಯ ಅಪರಿಚಿತ ಪುರುಷರ ಮೃತ ದೇಹಗಳು ಎನ್ನಲಾಗಿದೆ.ಮರಣೋತ್ತರ ಪರೀಕ್ಷೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮೃತದೇಹಗಳು ರವಾನಿಸಲಾಗಿದೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಮುಂಬರುವ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲುಗಳ ವಿವರ ಹೀಗಿದೆ: 1. ರೈಲು ಸಂಖ್ಯೆ 06271/06272 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ–ಮೈಸೂರು ಎಕ್ಸ್ ಪ್ರೆಸ್ ವಿಶೇಷ ರೈಲು (1 ಟ್ರಿಪ್): * ರೈಲು ಸಂಖ್ಯೆ 06271 ಸೆಪ್ಟೆಂಬರ್ 30, 2025 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ. * ರೈಲು ಸಂಖ್ಯೆ 06272 ಅಕ್ಟೋಬರ್ 1, 2025 ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ. ಈ ರೈಲು ಮಾರ್ಗದಲ್ಲಿ…
ಬೆಂಗಳೂರು : ಬೆಂಗಳೂರಲ್ಲಿ ಬಿಎಂಟಿಸಿ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಹಲ್ಲೆ ಪ್ರಕರ ಣ ನಡೆದಿದ್ದು, ಬಿಎಂಟಿಸಿ ಸಿಬ್ಬಂದಿ ಮೇಲೆ ಬೈಕ್ ಸವಾರರಿಂದ ಹಲ್ಲೆ ನಡೆದಿರುವ ಘಟನೆ ಬನಶಂಕರಿಯ ಕದಿರಿನ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ ಬಸ್ ಚಾಲಕ ಉಚಿರಪ್ಪ ಹಾಗೂ ಕಂಡಕ್ಟರ್ ಪ್ರಕಾಶ್ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ್ದಾರೆ. ರಾಂಗ್ ಸೈಡ್ ನಲ್ಲಿ ಬಂದಿದ್ದನ್ನು ಪ್ರವೇಶಿಸಿದ್ದಕ್ಕೆ, ಎರಡು ಬೈಕ್ಗಳಲ್ಲಿ ಬಂದು ನಾಲ್ವರು ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಬೈಕ್ ಸವಾರರು ಹಲ್ಲೆ ನಡೆಸಿದ್ದಾರೆ. ತಕ್ಷಣ ಚಾಲಕ 112 ಗೆ ಕರೆ ಮಾಡಲಾಗಿದ್ದು, ಬನಶಂಕರಿ ಪೊಲೀಸರು ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಮಂಡ್ಯ : ಈಗಾಗಲೇ ಧರ್ಮಸ್ಥಳದ ಕುರಿತು ಎಸ್ಐಟಿ ಅಧಿಕಾರಿಗಳು ಚೆನ್ನಯ್ಯ ಸೇರಿದಂತೆ ಹಲವರನ್ನು ಅತಿವರ ವಿಚಾರಣೆಗೆ ಒಳಪಡಿಸಿದ್ದು ಇದರ ಮಧ್ಯೆ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ರಸ್ಟ್ ಸಿಕ್ಕಿದೆ. ಯೂಟ್ಯೂಬರ್ ಸಮೀರ್ ವಿಚಾರಣೆ ಬಳಿಕ ಇದೀಗ ಮಂಡ್ಯದ ಮತ್ತೊಬ್ಬ ಯುಟುಬರ್, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ನನಗೂ ಸಹ ಹಣದ ಆಮಿಷ ಒಡ್ಡಿದ್ದರು ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾನೆ. ಹೌದು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಕೂಡ ಹಣದ ಆಮಿಷ ಒಡ್ಡಿದ್ದರೂ ಎಂದು ಮಂಡ್ಯದ ಯೂಟ್ಯೂಬರ್ ಗಂಭೀರವಾದ ಆರೋಪ ಮಾಡಿದ್ದು, ಗೋಲ್ಡನ್ ಕನ್ನಡಿಗ ಯೂಟ್ಯೂಬರ್ ಸುಮಂತ್ ಈ ಒಂದು ಹೇಳಿಕೆ ನೀಡಿದ್ದಾನೆ. ನನಗೆ ಅಭಿ ಅನ್ನೋ ಯುಟ್ಯೂಬರ್ ಹಣದ ಆಫರ್ ಕೊಟ್ಟಿದ್ದ. 5 ತಿಂಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ನನಗೆ ಅಭಿ ಸಿಕ್ಕಿದ್ದ. ಸಮೀರ್ ವಿಡಿಯೋ ಹೇಗೆ ವೈರಲ್ ಆಯ್ತು ಅಂತ ಆತನಿಗೆ ಕೇಳಿದ್ದೆ. ನಾವು ಕೊಡೋ ಕಂಟೆಂಟ್ನ ಯೂಟ್ಯೂಬ್ ನಲ್ಲಿ ಹಾಕಬೇಕು ಜೊತೆಗೆ ವಾಸ್ತವ್ಯಕ್ಕೂ ಸಹ ಜಾಗ…
ಚಿಕ್ಕಬಳ್ಳಾಪುರ : ಸಮಾಜದಲ್ಲಿ ಎಂತೆಂತಹ ಮಕ್ಕಳು ಇರ್ತಾರೆ ನೋಡಿ, ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳಾದ ರಾಮಾಂಜಿ (39) ಮತ್ತು ಗಂಗಾಧರಪ್ಪ (39) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೌರಿಬಿದನೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ನರಸಿಂಹಮೂರ್ತಿ ಮತ್ತು ಆರೋಪಿಗಳಾದ ರಾಮಾಂಜಿ ಹಾಗೂ ಗಂಗಾಧರಪ್ಪ ಒಡಹುಟ್ಟಿದ ಸಹೋದರರು. ಇವರ ತಂದೆ ಹನುಮಂತರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ದರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ ಬಳಿ ಪಿಂಚಣಿ ಹಣ ಹಂಚಿಕೊಳ್ಳುವ ವಿಚಾರಕ್ಕೆ ನಡೆದ ಜಗಳವು ಕೊಲೆಗೆ ಕಾರಣವಾಗಿದೆ.
ಬೆಂಗಳೂರು: ಲೇಡೀಸ್ ಪೇಯಿಂಗ್ ಗೆಸ್ಟ್ಗೆ (ಪಿ.ಜಿ) ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಗಿಗ್ ಕಾರ್ಮಿಕನನ್ನು ನಗರದ ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ನರೇಶ್ (30) ಬಂಧಿತ ಆರೋಪಿ. ಈತ ಆಂಧ್ರಪ್ರದೇಶದ ಮದನಪಲ್ಲಿ ಮೂಲದವನಾಗಿದ್ದು, ಕಳೆದ ಎರಡು ವರ್ಷಗಳಿಂದ ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದ. ಆಗಸ್ಟ್ 29ರ ನಸುಕಿವ ಜಾವ 4.30ರ ಸುಮಾರಿಗೆ ಸುದ್ದುಗುಂಟೆಪಾಳ್ಯ ಬಳಿಯ ಗಂಗೋತ್ರಿ ಸರ್ಕಲ್ ಬಳಿಯಿರುವ ಪಿಜಿಯೊಂದಕ್ಕೆ ನುಗ್ಗಿದ ಆರೋಪಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬೈಕ್ನಲ್ಲಿ ಹೋಗುವಾಗ ಪಿಜಿಯ ಬಾಗಿಲು ತೆಗೆದಿರುವುದನ್ನು ಕಂಡು ಒಳಗೆ ನುಗ್ಗಿದ್ದ. ಈ ವೇಳೆ, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಬಳಿಯಿದ್ದ 2,500 ಸಾವಿರ ರೂಪಾಯಿ ಕಸಿದು ಪರಾರಿಯಾಗಿದ್ದ. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಆರೋಪಿಯನ್ನು…
ಕೊಪ್ಪಳ : ಜಾತಿ ನಿಂದನೆ ಮಹಿಳೆಯ ಫೋಟೋ ಸ್ಟೇಟಸ್ ಗೆ ಹಾಕುವ ಬೆದರಿಕೆ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಬುರ್ಗಾ ತಾಲೂಕಿನ ಹಿರಿಯಕಲ್ ಗ್ರಾಮದಲ್ಲಿ ನಡೆದಿದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್ ಗ್ರಾಮದಲ್ಲಿ ನಡೆದಿದೆ. ಹಿರೇವಡ್ರಕಲ್ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಪಾರ್ವತಿ ಎನ್ನುವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಮನೂರಪ್ಪ, ಮಧುರಾಜ್ ನಿರುಪಾದಿ ವಿರುದ್ಧ ಮಹಿಳೆ ಡೆತ್ ನೋಟ್ನಲ್ಲಿ ಹೆಸರು ಉಲ್ಲೇಖಿಸಿ ಇವರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯ ಆರೋಪಿಸಿದ್ದಾರೆ. ಡೆತ್ ನೋಟಲ್ಲಿ ಮೂವರ ಹೆಸರು ಉಲ್ಲೇಖಿಸಿ ಪಾರ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಗಸ್ಟ್ 31ರಂದು ಪಾನ್ ಶಾಪ್ ನಲ್ಲಿ ಯಮನೂರಪ್ಪ ಸಿಹಿ ತಿಂಡಿ ತಿಂದಿದ್ದ. ಇ ವೇಳೆ ತಿಂಡಿಗೆ ಹಣ ಕೇಳಿದ್ದಕ್ಕೆ ಯಮನೂರಪ್ಪ ಪಾರ್ವತಿಗೆ ಜಾತಿ ನಿಂದನೆ ಮಾಡಿದ್ದಾನೆ. ಬಳಿಕ ಪಾರ್ವತಿಯ ವಿಡಿಯೋ ಸ್ಟೇಟಸ್ ನಲ್ಲಿ ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದು ಡೆತ್ ನೋಟ್ ಬರೆದು ಪಾರ್ವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಘಟನೆ ಕುರಿತು ಬೇವೂರು ಪೊಲೀಸ್…














