Subscribe to Updates
Get the latest creative news from FooBar about art, design and business.
Author: kannadanewsnow05
ಮಂಗಳೂರು : ರಾಜ್ಯದಲ್ಲಿ ಪಿಎಫ್ಐಯನ್ನು ನಿಷೇಧ ಗೊಳಿಸಲಾಗಿದ್ದು, ಇದೀಗ ನಿಷೇಧಿತ ಪಿ ಎಫ್ ಐ ಸಂಘಟನೆಯನ್ನು ಆಕ್ಟಿವ್ ಮಾಡಿದ ಧರ್ಮ ಗುರುವನ್ನು ಅರೆಸ್ಟ್ ಮಾಡಲಾಗಿದೆ. ಸೈಯದ್ ಇಬ್ರಾಹಿಂ ಅನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿಷೇಧಿತ ಪಿ ಎಫ್ ಐ ಪರವಾಗಿ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದ್ದು, ಪಿ ಎಫ್ ಐ ಸಂಘಟನೆ ಸದಸ್ಯರನ್ನು ಇಬ್ರಾಹಿಂ ಸಂಪರ್ಕ ಮಾಡಿದ್ದ. ದಕ್ಷಿಣ ಕನ್ನಡದಲ್ಲಿ ಇಬ್ರಾಹಿಂ ಸಲ್ಮಾನ್ ಸಲ್ಮ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಪಿಎಫ್ಐ ಪ್ರಚಾರ ಮಾಡುತ್ತಿದ್ದ. ಮತ್ತೆ ಚಟುವಟಿಕೆ ಆರಂಭಿಸಲು ಸಯ್ಯದ್ ಇಬ್ರಾಹಿಂ ಪ್ರಚೋದನೆ ನೀಡುತ್ತಿದ್ದ. ನಗರದ ಉರ್ವ ಸ್ಟೋರ್ ಬಳಿ ಸೈಯದ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಡಿ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಪಿ ಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಕ್ಟೋಬರ್ 24ರ ವರೆಗೆ ನ್ಯಾಯಾಂಗ ಬಂಧನಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತು.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೀಗ ನಟ ದರ್ಶನ್ ಜೈಲಿನಲ್ಲಿ ಸಾಮಾನ್ಯ ಕೈದಿಗಳಂತೆ ಜೀವನ ನಡೆಸುತ್ತಿದ್ದಾರೆ. ಎಲ್ಲ ಖೈದಿಗಳಂತೆ ದರ್ಶನ್ ಗೂ ಸಾಮಾನ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯ್ ಲಕ್ಷ್ಮಿಗೆ ಎರಡುವರೆ ಗಂಟೆ ಕಾದು ದರ್ಶನ್ ಭೇಟಿ ಮಾಡಿದ್ದಾರೆ. ಮೊದಲು ಸಿಬ್ಬಂದಿಗಳು ಜೈಲರ್ ಚೇಂಬರ್ ನಲ್ಲಿ ಕೂರಿಸಿ ನೇರವಾಗಿ ಭೇಟಿ ಮಾಡಿಸುತ್ತಿದ್ದರು. ಆದರೆ ಇದೀಗ ಟೋಕನ್ ತೆಗೆದುಕೊಂಡು ವಿಜಯಲಕ್ಷ್ಮಿ ಕ್ಯೂ ನಲ್ಲಿ ನಿಂತಿದ್ದಾರೆ. ನಂತರ ದರ್ಶನವರನ್ನು ವಿಜಯಲಕ್ಷ್ಮಿ ಗ್ಯಾಲರಿಯಲ್ಲಿ ಭೇಟಿ ಮಾಡಿದ್ದಾರೆ ಸಾಮಾನ್ಯ ಕೈದಿಗಳನ್ನ ಯಾವ ರೀತಿ ಭೇಟಿ ಮಾಡುತ್ತಾರೆ ಅದೇ ರೀತಿ ವಿಜಯಲಕ್ಷ್ಮಿ ದರ್ಶನ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಒಂದು ನಡೆದಿದ್ದು, ಸಜ್ಜಾ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮೂಲದ ಇಬ್ಬರು ಕೂಲಿಕಾರ್ಮಿಕರು ಸಾವನಪ್ಪಿದ್ದಾರೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಈ ಒಂದು ಘಟನೆ ನಡೆದಿದ್ದು ಅಮೀರ್ ಹುಸೇನ್ (33) ಹಾಗೂ ಮಮ್ತಾಜ್ ಅಲಿ (28)ಸಾವನಪ್ಪಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸದ ವೇಳೆ ಏಕಾಏಕಿಯಾಗಿ ಸಜ್ಜ ಕುಸಿದು ಬಿದ್ದಿದೆ. 13ನೇ ಫ್ಲೋರ್ ನಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ , ಇಂಪಿರಿಯಲ್ ಬಿಲ್ಡ್ ಟೆಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಈ ಕುರಿತು ಕೇಸ್ ಸಹ ದಾಖಲಾಗಿದ್ದು, ಪೊಲೀಸರು ಪ್ರಕರಣ ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ಕೂಡ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಪ್ರಿಯತಮೆಗಾಗಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿ ಶ್ರೇಯಸ್ ನನ್ನು ಅರೆಸ್ಟ್ ಮಾಡಿದ್ದಾರೆ. ಈತ ತನ್ನ ಪ್ರೇಯಸಿ ಚಿನ್ನದ ಓಲೆ ಮಾಡಿಸಿ ಕೊಡುವಂತೆ ಕೇಳಿದ್ದರಿಂದ ಕಳ್ಳತನ ಮಾಡಿದ್ದಾನೆ. ಹರೀಶ್ ಎಂಬುವವರ ಮನೆಯಲ್ಲಿ ಶ್ರೇಯಸ್ ಚಿನ್ನಾಭರಣ ಕಳ್ಳತನ ಮಾಡಿದ್ದು, ಸದ್ಯ 415ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ ನನಗೆ ನನ್ನ ಗುರಿ ಗೊತ್ತಿದೆ ನನಗೆ ಯಾವ ಆತುರವೂ ಇಲ್ಲ. ಈ ರೀತಿ ಹೇಳುವ ಅವಶ್ಯಕತೆಯೂ ಇಲ್ಲ ಜನರು ಭೇಟಿಗೆ ಬಂದಾಗ ಕೆಲವರು ಸಿಎಂ ಆಗಬೇಕು ಅಂತಾರೆ ನಾನು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಆತುರದಲ್ಲೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ಸೇವೆ ಮಾಡಲು ಹಗಲು-ರಾತ್ರಿ ತಿರುಗುತ್ತಿದ್ದೇನೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನ ಕೊಡಲಿ. ರಾಜ್ಯದ ಜನರ ಸೇವೆಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಹೋಂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಚೈನೈ : ಗುಜರಾತ್ನ ಅಹಮದಾಬಾದ್ ವಿಮಾನ ದುರಂತ ಘಟನೆ ಎಲ್ಲಿ 270ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಅದಾದ ಬಳಿಕ, ಇದೀಗ ಇಂಡಿಗೋ ವಿಮಾನದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ. ಮಧುರೈನಿಂದ ಚೈನ್ನೈ ತೆರುಳುತ್ತಿದ್ದ ವಿಮಾನದ ವಿಂಡ್ ಶೀಲ್ಡ್ ನಲ್ಲಿ ಕಾಣಿಸಿಕೊಂಡಿದೆ. ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ಇದಿಗ ತಪ್ಪಿದೆ. ವಿಮಾನದ ವಿಂಡ್ ಶೀಲ್ಡ್ ನಲ್ಲಿ ಬಿರುಕು ಕಂಡ ಕೂಡಲೇ ಪೈಲೆಟ್ ಮಾಹಿತಿ ನೀಡಿದ್ದಾರೆ ಚೈನ್ನೈ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿ ಇದೀಗ ವಿಮಾನ ಲ್ಯಾಂಡ್ ಆಗಿದೆ. ಸುಮಾರು 76 ಪ್ರಯಾಣಿಕರನ್ನು ಇಂಡಿಗೋ ವಿಮಾನ ಕರೆ ತಂದಿತ್ತು.
ಬೆಳಗಾವಿ : ಬೆಳಗಾವಿಯಲ್ಲಿ ವಿಚಿತ್ರವಾದ ಘಟನೆ ಒಂದು ನಡೆದಿದ್ದು, ಪ್ರಿಯಕರ ಜೊತೆ ಪ್ರೇಯಸಿ ಪರಾರಿ ಆಗಿದ್ದಾಳೆ. ಹಾಗಾಗಿ ತಂದೆ ಮಗಳ ತಿಥಿ ಮಾಡಿದ್ದು, ಮಗಳು ತಮ್ಮ ಪಾಲಿಗೆ ಸತ್ತಾಳೆ ಎಂದು ತಂದೆ ತಿಥಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗದ ನಾಗರಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಊರಿನ ತುಂಬಾ ಮಗಳು ಸತ್ತಳೆಂದು ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿ ತಂದೆ ತಿಥಿ ಊಟ ಮಾಡಿಸಿದ್ದಾರೆ. ಪ್ರೀತಿಸಿದ ಹುಡುಗನೊಂದಿಗೆ ಸುಶ್ಮಿತಾ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಈ ಒಂದು ಕಾರಣಕ್ಕೆ ತಂದೆ ಈ ರೀತಿ ಬ್ಯಾನರ್ ಹಾಕಿ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ. ಗ್ರಾಮದ ವಿಠ್ಠಲ್ ಬಸ್ತಾವಾಡ ಯುವಕನೊಂದಿಗೆ ಸುಶ್ಮಿತಾ ಪ್ರೀತಿಯಲ್ಲಿ ಬಿದ್ದಿದ್ದಳು.ಮಗಳು ಓಡಿ ಹೋಗಿದ್ದರಿಂದ ಮನನೊಂದು ತಂದೆ ಈ ಒಂದು ತಿಥಿ ಊಟ ಮಾಡಿಸಿ ಊರಿಗೆ ಊಟ ಹಾಕಿಸಿದ್ದಾರೆ.
ಸಿಜೆಐ ಬಿ.ಆರ್ ಗವಾಯಿ ಕುರಿತು ಅವಹೇಳನಕಾರಿ, ಬೆದರಿಕೆ ಕಾಮೆಂಟ್: ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ‘FIR’ ದಾಖಲು
ಬೆಂಗಳೂರು : ಇತ್ತೀಚಿಗೆ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಹಿರಿಯವಕೀಲ ರಾಕೇಶ್ ಕಿಶೋರ್ ಶೂ ಎಸೆದಿದ್ದ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ ಐದು ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಮಂಜುನಾಥ್ ಎಂ.ಸಿ ಮಂಜು ಹೆಸರಿನ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67, 66 ಹಾಗೂ 66(C), ಭಾರತೀಯ ನ್ಯಾಯ ಸಂಹಿತೆ 352ರಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತೀಚಿನ ಪ್ರಕರಣವೊಂದರ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಕೆಟ್ಟದಾಗಿ ಹಾಗೂ ಬೆದರಿಕೆಯೊಡ್ಡುವಂಥಹ ಕಾಮೆಂಟ್ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಸೈಬರ್ ಕ್ರೈಮ್‌ನ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮೈಸೂರು : ಮೈಸೂರಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕವಾದ ಅಂಶ ಬಯಲಾಗಿದ್ದು, ಆರೋಪಿ ಕಾರ್ತಿಕ್ ಬಾಲಕಿಗೆ 19 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೌದು ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಆರೋಪಿ ಕಾರ್ತಿಕ್ 19 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮದ್ಯದ ನಶೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಆರೋಪಿ ಮದ್ಯ ಕುಡಿದಿದ್ದು ಸಹ ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ. ಪ್ರಕರಣ ಹಿನ್ನೆಲೆ? ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಶವ ನಗರದ ಕುಸ್ತಿ ಅಖಾಡದ ಮುಂಭಾಗದ ಮೈದಾನದಲ್ಲಿ ದೊರೆತಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಜರ್ಬಾದ್ ಪೊಲೀಸ್…
ದಾವಣಗೆರೆ : ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಹಣ ಕಳ್ಳತನ ಮಾಡಿದ್ದ ವಂಚಕನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್ ಗಳಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿ ಕಳ್ಳತನ ಮಾಡಿರುವ ವಂಚಕನನ್ನು ಇದೀಗ ಸೈಬರ್ ಠಾಣೆ ಪೋಲಿಸರು ದಾವಣಗೆರೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಹೌದು ದೇಶದ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ಬರೋಬ್ಬರಿ 150 ಕೋಟಿ ರೂ.ವಂಚಿಸಿರುವ ಆರೋಪಿ ಸೈಯದ್ ಅರ್ಫಾತ್ ನನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕೆಲಸ ಮಾಡುತ್ತಿದ್ದ ಆರೋಪಿ ಸೈಯದ್ ಅರ್ಫಾತ್, ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಶಾಂತಿನಗರದ ನಿವಾಸಿ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಆರೋಪಿ ಖಾತೆಯಲ್ಲಿ 150 ಕೋಟಿ ರೂ. ಡೆಪಾಸಿಟ್ ಮಾಡಲಾಗಿದೆ. ಆರೋಪಿಗಳು 132 ಕೋಟಿ ಹಣ ವಿತ್ ಡ್ರಾ ಮಾಡಿದ್ದು, 18 ಕೋಟಿ ರೂ.ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ದಾವಣಗೆರೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













