Author: kannadanewsnow05

ಶಿವಮೊಗ್ಗ : ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ರಾಷ್ಟ್ರೀಯ ಅಪಘಾತದಲ್ಲಿ ಹಸೆಮಣೆ ಎರಬೇಕಿದ್ದ ಜೋಡಿ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಈ ಒಂದು ಘಟನೆ ಸಂಭವಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಓಮಿನಿ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಬೈಕ್ ನಲ್ಲಿ ಇದ್ದಂತಹ ಹಸೆಮಣೆ ಎರಬೇಕಿದ್ದ ಜೋಡಿಗಳು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಮಟ್ಟಿಕೊಪ್ಪ ಗ್ರಾಮದ ರೇಖಾ (20) ಹಾಗೂ ಗಂಗೊಳ್ಳಿ ಗ್ರಾಮದ ಬಸವನಗೌಡ ದ್ಯಾಮನಗೌಡ (25) ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರೇಖಾ ಹಾಗೂ ಬಸವನಗೌಡ ಅವರಿಗೆ ಕಳೆದ ಶ್ರಾವಣ ಮಾಸದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ, ನಿನ್ನೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೇಖಾ ಶಿಕಾರಿಪುರ ತಾಲೂಕು ಮತ್ತಿಕೋಟೆ ಗ್ರಾಮದ ನಿವಾಸಿ. ಬಸವನಗೌಡ( 24) ಸೊರಬ ತಾಲೂಕು ಗಂಗೊಳ್ಳಿ ಗ್ರಾಮದ ನಿವಾಸಿ. ಮಂಗಳವಾರ ಮಾವನ ಮನೆಗೆ ಬಂದಿದ್ದ ಬಸವನಗೌಡ…

Read More

ತುಮಕೂರು : ನೀರಿನ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡುಗೆನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಮದುವೆ ತಾಲೂಕಿನ ಪೊಲೆನಹಳ್ಳಿ ಗೂಡ್ಸ್ ವಾಹನ ಹರಿಸಿ ಆನಂದ್ ಎನ್ನುವ ವ್ಯಕ್ತಿಯನ್ನು ನಾಗೇಶ್ ಭೀಕರವಾಗಿ ಕೊಲೆ ಮಾಡಿದ್ದಾನೆ. ವಾಹನದಿಂದ ಡಿಕ್ಕಿ ಹೊಡೆದು ಆನಂದನನ್ನು ನಾಗೇಶ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಆರೋಪಿ ನಾಗೇಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಕೊಡಿಕೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಆನಂದ ಮನೆಯ ಟ್ಯಾಂಕ್ ತುಂಬಿ ನೀರು ಪೋಲಾಗುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಂದ ನಾಗೇಶ್ ತಂದೆ ರಾಮಕೃಷ್ಣ ಬಿಲ್ ಕಲೆಕ್ಟರ್ ಆಗಿದ್ದರು. ಈ ವೇಳೆ ಅವರ ವಿರುದ್ಧ ನಿಂದನೆ ಆರೋಪ ಕೇಳಿ ಬಂದಿದೆ. ನೀರು ಪೋಲಾಗುತ್ತಿದ್ದಕ್ಕೆ ನಿಂದಿಸಿದ್ದಾರೆ ಎಂದು ಗಲಾಟೆ ಮಾಡಿದ್ದಾರೆ. ಆನಂದ ಕುಟುಂಬ ಮತ್ತು ನಾಗೇಶ ಕುಟುಂಬದ…

Read More

ಬೆಂಗಳೂರು : ಬೆಂಗಳೂರು ಶಾಸಕರ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆಯ ವಿಚಾರವಾಗಿ, ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಇದೀಗ ಬಂಪರ್ ಗಿಫ್ಟ್ ನೀಡಿದ್ದು, ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ವಿಶೇಷ ಅನುದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರಸ್ತೆಗಳತ್ತ ಗಮನ ಹರಿಸಲು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಸೂಚನೆ ನೀಡಿದರು. ಸಭೆಯಲ್ಲಿ ಬೆಂಗಳೂರು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಸ್ತೆ ದುರಸ್ತಿ, ನೂತನ ರಸ್ತೆ ನಿರ್ಮಾಣಕ್ಕೆ ಅನುದಾನ ಬಳಸುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರಿನ ನಗರಕ್ಕೆ ಒಟ್ಟು 1 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೂಲಭೂತ ಸೌಕರ್ಯ ಯೋಜನೆಗೆ ಒತ್ತು ನೀಡಲು ಶಾಸಕರಿಗೆ ಸೂಚನೆ ನೀಡಿದ್ದಾರೆ.

Read More

ಮಂಡ್ಯ : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಘಟನೆಗೆ ಸಂಬಂಧಿಸಿದಂತೆ ಮೂರು ದಿನದ ಬಳಿಕ ಮದ್ದೂರು ಪಟ್ಟಣ ಸಹಜ ಸ್ಥಿತಿಯತ್ತ ಮರಳಿದೆ. ಇಂದು ಎಂದಿನಂತೆ ವ್ಯಾಪರ ವಹಿವಾಟು ಆರಂಭವಾಗಿದೆ. ಅಂಗಡಿ ಮುಂಗಟ್ಟು ತೆರೆದಿರಿವ ವರ್ತಕರು. ಮೂರು ದಿನ ಬಂದ್ ಸಂಪೂರ್ಣ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು. ಇಂದು ಮತ್ತೆ ಓಪನ್ ಆಗಿವೆ. ವ್ಯಾಪಾರಸ್ಥರು ವ್ಯಾಪರ ವಹಿವಾಟು ನಿಲ್ಲಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದರು. ಇಂದು‌ ಬೆಳಿಗ್ಗೆಯಿಂದಲೇ ಅಂಗಡಿ ತೆರೆದು ವ್ಯಾಪಾರ ಶುರುವಾಗಿದೆ. ಭಾನುವಾರ ರಾತ್ರಿ ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆತವಾಗಿತ್ತು. ರಾಮ್ ರಹೀಮ್ ನಗರದ ಮಸೀದಿ ಮುಂಭಾಗ ದುಷ್ಕೃತ್ಯ ನಡೆದಿತ್ತು. ಘಟನೆ ಖಂಡಿಸಿ ಸೋಮವಾರ‌ ಹಿಂದುಗಳಿಂದ ಬೃಹತ್ ಪ್ರತಿಭಟನೆ. ನಡೆಸಲಾಯಿತು. ಮಂಗಳವಾರ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿತ್ತು. ಬುಧವಾರ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಿತು. ಈ ವೇಳೆ ವರ್ತಕರು ಮೂರು ದಿನವೂ‌ ವ್ಯಾಪಾರ ವಹಿವಾಟು ನಿಲ್ಲಿಸಿದ್ದರು. ಮದ್ದೂರು ಪಟ್ಟಣ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸಹ ಪೊಲೀಸ್…

Read More

ಬೆಂಗಳೂರು ಸೆ 11: ಮಾನವರ ಅಳಿವು ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅರಣ್ಯ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ನುಡಿದರು.ಅರಣ್ಯ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025″ನ್ನು ಉದ್ಘಾಟಿಸಿ ಮಾತನಾಡಿದರು. ಹಸಿರಿನ ಹೊದಿಕೆ ಹೆಚ್ಚಾದರೆ ಅರಣ್ಯವೂ ಹೆಚ್ಚುತ್ತದೆ. ಅರಣ್ಯ ಸಂಪತ್ತೂ ಹೆಚ್ಚುತ್ತದೆ. ಕಾಡು ಪ್ರಾಣಿ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ, ನೀರು ಕಾಡಿನಲ್ಲೇ ಸಾಕಷ್ಟು ಸಿಗುವಂತೆ ಮಾಡಿದರೆ ಅರಣ್ಯ ಮಾನವ ಸಂಘರ್ಷವನ್ನು ತಡೆಗಟ್ಟಬಹುದು ಎಂದರು. ಕಾಡು ಪ್ರಾಣಿಗಳ ಮತ್ತು ಮಾನವರ ಸಂಘರ್ಷ ತಪ್ಪಿಸಲು ರೈಲ್ವೇ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಮತ್ತು ಇವುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಅರಣ್ಯ ಇಲಾಖೆ ಬಳಿಯೂ ಸಾಕಷ್ಟು ಹಣ ಇದೆ. ಅಗತ್ಯಬಿದ್ದರೆ ಸರ್ಕಾರ ಕೂಡ ಹಣ ಕೊಡಲು ಸಿದ್ದವಿದೆ. ಆದ್ದರಿಂದ ಸಮರ್ಪಕವಾಗಿ ಬ್ಯಾರಿಕೇಡ್ ನಿರ್ಮಿಸಿ ಆನೆ-ಮಾನವ ಸಂಘರ್ಷ ತಪ್ಪಿಸಬೇಕು ಎಂದರು. ಹಿರಿಯ ಅಧಿಕಾರಿಗಳು ಆಗಿಂದ್ದಾಗೇ ಕಾಡಿಗೆ ಭೇಟಿ…

Read More

ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ತೇಜೋವಧೆ ಮಾಡಿದ್ದು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಠಾಣೆ ಡಿವೈಎಸ್ಪಿ ಅವರಿಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ. ರವಿರಾಜ್ ವಿ. ಹಿಂದೂ ಮತ್ತು ದರ್ಶನ್ ಪವರ್ ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ರಾಜ್ಯದ ತೋಟಗಾರಿಕ ಸಚಿವ ಎಸ್. ಎಸ್. ಮಲ್ಲಿಕಾರ್ಜನ್ ಅವರು ಈ ಹಿಂದೆ ಹಿಂದು ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ಮಾತನಾಡಿರುವ ವಿಡಿಯೋವನ್ನು ತಿರುಚಿರುವುದು ಕಂಡು ಬಂದಿದೆ. ರವಿರಾಜ್ ವಿ. ಹಿಂದೂ ಎಂಬವರು ಫೇಸ್ ಬುಕ್ ನಲ್ಲಿ. ತಮ್ಮ ಫೇಸ್ ಬುಕ್ ಖಾತೆಯಲಿ, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾತನಾಡಿರುವ ಭಾಷಣವನ್ನು ಎಡಿಟ್ ಮಾಡಿ, ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಅವರ ತಂದೆಯ ಬಗ್ಗೆ, ಅವಹೇಳನಕಾರಿಯಾಗಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಫೇಸ್ ಬುಕ್ ನಲ್ಲೇ…

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಚಲಿಸುತ್ತಿದ್ದ ಬಸ್ನಲ್ಲಿ ಅಪ್ರಾಪ್ತ ಯುವತಿಗೆ ಚಾಲಕನೊಬ್ಬ ಕಿರುಕುಳ ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ವಿಚಾರ ತಿಳಿದು ಚಾಲಕನಿಗೆ ಯುವತಿಯ ಪೋಷಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಅಪ್ರಾಪ್ತೆ ಗೆ ಚಾಲಕ ಕಿರುಕುಳ ನೀಡಿದ್ದಾನೆ ಬಸ್ ಡ್ರೈವರ್ ಬಳಿ ಯುವತಿ ಮೊಬೈಲ್ ಚಾರ್ಜ್ ಗೆ ಹಾಕಿದ್ದಳು ಕಿಸ್ ಕೊಟ್ಟರೆ ಮೊಬೈಲ್ ಕೊಡುತ್ತೇನೆ ಅಂತ ಬಸ್ ಚಾಲಕ ಆರಿಫ್ ಹೇಳಿದ್ದಾನೆ. ಸ್ಪೇರ್ ಡ್ರೈವರ್ ಆರಿಫ್ ನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದೆ. ಈ ವಿಚಾರವಾಗಿ ಯುವತಿ ತನ್ನ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.

Read More

ಚಿಕ್ಕಮಗಳೂರು : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದರಿಂದ ನಿನ್ನೆ ಸಿಟಿ ರವಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ 14ನೇ ವಯಸ್ಸಿನಲ್ಲಿ ಮೊದಲ ಬಾರಿ ಆಗಿತ್ತು. ನಮ್ಮ ಸಹನೆಗೂ ಒಂದು ಮಿತಿ ಇದೆ. ನೀವು ನನ್ನ ಮೇಲೆ 100 ‘FIR’ ದಾಖಲಿಸಿದರು ಎದುರಿಸುತ್ತೇನೆ, ಯಾವುದಕ್ಕೂ ಹೆದರಲ್ಲ ಎಂದು ಕಿಡಿ ಕಾರಿದ್ದಾರೆ. ಚಿಕ್ಕಮಗಳೂರಲ್ಲಿ ಮಾತನಾಡಿದ ಅವರು, ಗಣಪತಿ ಮೆರವಣಿಗೆ ಮೇಲೆ ಕಲ್ಲು ಹೊಡೆದರೆ ಸುಮ್ಮನಿರಬೇಕಾ? ಪೆಟ್ರೋಲ್ ಬಾಂಬ್ ಹಾಕಿದ್ರೆ ನಾವು ಸುಮ್ಮನಿರಬೇಕಾ? ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸಹಿಸಿಕೊರುವ ಕಾಲ ಅಲ್ಲ. ತಾಳ್ಮೆ ಕಟ್ಟೆ ಹೊಡೆದಿರುವುದು ತೋರಿಸಲೆಂದೇ ಜನಾಕ್ರೋಶ. ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ನಮ್ಮ ಸಂಘಟನೆ ಬಲವಾಗಿಲ್ಲ. ಆದರೂ ಹಿಂದು ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ನೀವು ಏನು ಮಾಡಿದರೂ ಸಹಿಸಿಕೊಳ್ಳುತ್ತೇವೆ ಎಂಬ ಕಾಲ ಮುಗಿದಿದೆ. ನೀವು 100 ಹಾಕಿದರೂ ನಾನು ಎದುರಿಸುತ್ತೇನೆ. ನನಗೆ ಯಾವುದೇ ಹೆದರಿಕೆ…

Read More

ಮೈಸೂರು : ಚಾಮುಂಡಿ ಬೆಟ್ಟದ ದೇವಿಕೆರೆ ಕಟ್ಟೆ ಹಾಗೂ ತಾವರೆಕಟ್ಟೆಯ ಜನವಸತಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿದ್ದು, ನಿವಾಸಿಗಳು ಹಾಗೂ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಚಾಮುಂಡಿ ಬೆಟ್ಟ ಗ್ರಾಮ ಹಾಗೂ ಇಲ್ಲಿನ ನಾಗರಿಕ ಬಂಧುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ, ಇತ್ತೀಚೆಗೆ ಚಾಮುಂಡಿ ಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಚಲನವಲನಗಳು ಕಂಡುಬಂದಿರುವುದಾಗಿ ವರದಿಯಾಗಿದೆ. ಈ ವಿಷಯದ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಸಾಯಂಕಾಲ ಮತ್ತು ಬೆಳಗಿನ ಸಮಯದಲ್ಲಿ, ವಿಶೇಷವಾಗಿ ಕತ್ತಲಾದ ಮೇಲೆ ಒಂಟಿಯಾಗಿ ಹೊರಗೆ ಹೋಗಬೇಡಿ. ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದ ಸುತ್ತಳತೆ 17ಕಿ.ಮೀ ಇದ್ದು ಅದಕ್ಕೆ ನಾಲ್ಕು ಗೇಟ್‌ಗಳಿವೆ. ಹೊಸಹುಂಡಿಯಿಂದ ಚಾಮುಂಡಿಬೆಟ್ಟ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆಯ ಸಂಚಾರವನ್ನು ಸಂಜೆ 6 ಗಂಟೆಯಿಂದ ಬೆಳ್ಳಗೆ 6 ರ ವರೆಗೆ ನಿಷೇಧಿಸಲಾಗಿದೆ. ಚಾಮುಂಡಿ ಬೆಟ್ಟದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚಿರತೆಯ ಸಂಚಾರವನ್ನು ಪತ್ತೆ…

Read More

ಬಳ್ಳಾರಿ : ಬಳ್ಳಾರಿಯಲ್ಲಿ ಜೆಸ್ಕಾಂ ನಿರ್ಲಕ್ಷಕ್ಕೆ ಬಾಲಕನೊಬ್ಬ ಕೈ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. 11 ಕೆ.ವಿ ವಿದ್ಯುತ್ ವೈರ್ ತಗುಲಿ ಕೈ ಕಟ್ಟಾಗಿದೆ. ಮನೆ ಮೇಲೆ ಆಟವಾಡುವಾಗ ಕೈಯಲ್ಲಿದ್ದ ವೈರಿಗೆ ಟಚ್ ಆಗಿದೆ, ಬಳ್ಳಾರಿಯ ವಿರಾಟ್ ನಗರದಲ್ಲಿ ಒಂದು ಘಟನೆ ಸಂಭವಿಸಿದೆ. ಬಾಲಕನ ಕೈಯಲ್ಲಿದ್ದ ವೈರ್ ಗೆ ತಗುಲಿದ ವಿದ್ಯುತ್ ತಂತಿ ಶಾಕ್ ಹೊಡೆದ ತೀವ್ರತೆಗೆ ಬಾಲಕನ ಕೈ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ 11 ಕೆ.ವಿ ವೈರ್ ಗೆ ಪ್ಲಾಸ್ಟಿಕ್ ಹಾಕದೆ ನಿರ್ಲಕ್ಷ ತೊರಿದ್ದು ಅಪಾರ್ಟ್ಮೆಂಟ್ ಮಾಲಿಕ ಮತ್ತು ಜೆಸ್ಕಾಂ ಇಂಜಿನಿಯರ್ ಮೇಲೆ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.aa

Read More