Author: kannadanewsnow05

ಬೆಳಗಾವಿ : ಕಿತ್ತೂರು ರಾಣಿ‌ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ. ಬೆಳಗಾವಿ ವಿಮಾನ‌ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆದು ಒಂದು‌ ವರ್ಷವಾದರೂ ಕೇಂದ್ರ‌ ಸರ್ಕಾರ ಇದುವರೆಗೆ ಯಾವುದೇ ಕ್ರಮವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.‌ ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ನಮ್ಮವರೇ ನೀಡಿದ‌ ಮಾಹಿತಿಯು ಬ್ರಿಟಿಷರಿಗೆ ಅನುಕೂಲವಾಗಿತ್ತು. ಚನ್ನಮ್ಮನ ಹೋರಾಟದ ಬಗ್ಗೆ ನಾಡಿಗೆ ತಿಳಿಸುವುದಕ್ಕಾಗಿ 2017ರಲ್ಲಿ ನಮ್ಮ ಸರ್ಕಾರವೇ ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿತು ಎಂಬುದು‌ ನಮಗೆ ಹೆಮ್ಮೆಯ ವಿಷಯ. ಚನ್ನಮ್ಮನ ಸಾಹಸಗಾಥೆ ತಿಳಿಸಲು ಜಯಂತಿ ಆರಂಭಿಸಲಾಯಿತೇ ಹೊರತು ರಾಜಕೀಯ ಕಾರಣಕ್ಕಲ್ಲ. ಚನ್ನಮ್ಮನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತೆ ಎಂದು ಸಿಎಂ ಹೇಳಿದರು. ಇದೆ ವೇಳೆ ಉತ್ತರಧಿಕಾರಿ ಬಗ್ಗೆಯೂ ಮಾತನಾಡಿದ ಅವ್ರು, ಲೀಡರ್ ಯಾರು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಹಿಂದ ಸಂಘಟನೆ ಮುನ್ನಡೆಸುವ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೇ ಎಂದು ಸಂಘಟನೆ ಮುನ್ನಡೆಸುವ ಬಗ್ಗೆ…

Read More

ಬೆಳಗಾವಿ : ಉತ್ತರಾದಿಯ ಕುರಿತು ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೆ ಇದೀಗ ಉತ್ತರಧಿಕಾರಿಯ ಬಗ್ಗೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿಯಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಸತೀಶ್ ಜಾರಕಿಹೊಳಿ ಮುನ್ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದು ಲೀಡರ್ ಯಾರು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಹಿಂದ ಸಂಘಟನೆ ಮುನ್ನಡೆಸುವ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತೇ ಎಂದು ಸಂಘಟನೆ ಮುನ್ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಸೈದಾಂತಿಕವಾಗಿ ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ ಆಮೇಲೆ ಇದೀಗ ಸತೀಶ್ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ ಅಂತ ಯತೀಂದ್ರ ಹೇಳಿದರೆ ಹೊರತು ಅವರೆ ಲೀಡರ್ ಆಗಬೇಕು ಅಂತ ಹೇಳಿಲ್ಲ. ಯಾರನ್ನ ಲೀಡರ್ ಮಾಡಬೇಕು ಅಂತ ಹೇಳುವುದು ಹೈಕಮಾಂಡ್ ನಾವು ಮಾಡಲ್ಲ ಯತೀಂದ್ರನು ಮಾಡಲ್ಲ ಯಾರು ಮಾಡಲ್ಲ ಎಂದರು.

Read More

ಬೆಂಗಳೂರು : ಆರ್‌ಎಸ್‌ಎಸ್‌ ಮತ್ತು ಸರ್ಕಾರದ ನಡುವೆ ಸಂಘರ್ಷ ಮತ್ತೆ ತಾರಕಕ್ಕೆ ಏರಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಯಾರು ಕಾನೂನಿನಗಿಂತ ದೊಡ್ಡವರ ಅವರು? ಕಲ್ಲಡ್ಕ ಅಲ್ಲ ಅವರಪ್ಪನಾದರೂ ಅಷ್ಟೇ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಂವಿಧಾನಕ್ಕಿಂತ ದೊಡ್ಡವರಾದರೇನ್ರಿ ಕಲ್ಲಡ್ಕ ಪ್ರಭಾಕರ್ ಭಟ್? ಕಾನೂನು ಮೀರಿದರೆ ಸರಕಾರ ಏನು ಸುಮ್ಮನೆ ಕೂತಿರುತ್ತಾ? ಕೋರ್ಟ್ ಪರ್ಮಿಷನ್ ಕೊಟ್ಟರೆ ಮಾಡಲಿ ಬೇಡ ಅಂತ ಅನಲ್ಲ. ಪರ್ಮಿಷನ್ ಇಲ್ಲದೆ ಮಾಡಿದರೆ ಸರ್ಕಾರ ಸುಮ್ಮನೆ ಕೂರುತ್ತ? ಇಂತಹ ಪ್ರಚೊದನಕಾರಿ ಹೇಳಿಕೆಗಳನ್ನು ಕೊಡದು ಬಿಟ್ಟು ಕಾನೂನು ಪಾಲನೆ ಮಾಡಿ. ಕಾನೂನು ಪಾಲನೆ ಮಾಡಿದರೆ ಎಲ್ಲರಿಗೂ ಒಳ್ಳೆಯದು ಅವರಿಗೆ ಮತ್ತು ಅವರ ಸಂಸ್ಥೆಗಳಿಗೆ ಒಳ್ಳೆಯದು. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಅಲ್ಲ ಶಾಖೆಗಳಲ್ಲಿ ಮಾತಾಡಿದಂಗೆ ಪಬ್ಲಿಕ್ ನಲ್ಲಿ ಮಾತನಾಡಿದರೆ ಪಬ್ಲಿಕ್ ನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

Read More

ಮೈಸೂರು : ಮೈಸೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಬಾಲಕನನ್ನು ರಕ್ಷಿಸಲು ಹೋದ ಸಹೋದರರಿಬ್ಬರು ನಿರುಪಾಲಾಗಿರುವ ಘಟನೆ ವರದಿಯಾಗಿದೆ. ಮೈಸೂರಿನ ಬಡಗಲಹುಂಡಿಯಲ್ಲಿ ಈ ಒಂದು ದುರಂತ ಸಂಭವಿಸಿದ್ದು, ವರುಣ ನಾಲೆ ನೀರಿನಲ್ಲಿ ಬಾಲಕನನ್ನು ರಕ್ಷಿಸಲು ಹೋಗಿ ಸಹೋದರರು ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ನಂದನ್ (25) ಮತ್ತು ರಾಕೇಶ್ (20) ಎಂದು ತಿಳಿದುಬಂದಿದೆ. ವರುಣ ನಾಲೆಯಲ್ಲಿ ಬಾಲಕನನ್ನು ಕಾಪಾಡಕ್ಕೆ ಹೋಗಿದ್ದಾರೆ ಆದರೆ ಇಬ್ಬರು ಕೂಡ ಸಾವನಪ್ಪಿದ್ದಾರೆ. ಮರದ ಕೊಂಬನ್ನು ಹಿಡಿದು ಜೀವ ಉಳಿಸಿ ಎಂದು ಬಾಲಕ ಹೊರಡುತ್ತಿದ್ದ. ಬಾಲಕನ ರಕ್ಷಣೆಗೆ ಇಬ್ಬರು ಸಹೋದರರು ನಾಲೆಗೆ ಇಳಿಯುತ್ತಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ. 15 ದಿನಗಳ ಹಿಂದೆ ಅಷ್ಟೇ ನಂದನ್ ಪ್ರೀತಿಸಿದ ಯುವತಿಯ ಜೊತೆಗೆ ಮದುವೆಯಾಗಿದ್ದ. ಇದೀಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read More

ಬೆಂಗಳೂರು : ಬೆಂಗಳೂರಿನ ತಿಲಕ್ ನಗರದಲ್ಲಿ ಸಲ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೋಲೀಸರ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು, ಬಿಗ್ ಟ್ವಿಸ್ಟ್ ಸಿಕ್ಕಿದೆ. ಸುಬ್ರಮಣಿ ಮತ್ತು ಸೆಂತಿಲ್ ಎಂಬುವವರಿಂದ ಸಲ್ಮಾ ಕೊಲೆಯಾಗಿದೆ.  ಸಲ್ಮಾ ಜೊತೆಗೆ ಸುಬ್ರಮಣ್ಯ ಅನೈತಿಕವಾಗಿ ಸಂಬಂಧ ಹೊಂದಿದ್ದ. ಅಲ್ಲದೇ ಸೆಂಥಿಲ್ ಜೊತೆಗೂ ಸಲ್ಮಾ ಸಲಗೆಯಿಂದ ಇದ್ದಳು. ಬಳಿಕ ಸುಬ್ರಮಣಿ ಹಾಗು ಸೆಂಥಿಲ್  ಇಬ್ಬರನ್ನು ಬಿಟ್ಟು ಸಲ್ಮಾ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ. ಇದರಿಂದ ಸುಬ್ರಮಣಿ ಹಾಗು ಸೆಂಥಿಲ್ ಕೋಪಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿ ಹಾಗೂ ಸೆಂತಿಲ್ ಇಬ್ಬರು ಸೇರಿ ಸಲ್ಮಾ ಕೊಲೆ ಮಾಡಿದ್ದಾರೆ. ಸಲ್ಮಾ ಮೃತದೇಹ ಸುಮಾರು 100 ಮೀಟರ್ ದೂರದಲ್ಲಿರುವ ಮನೆ ಮನೆಯಲ್ಲಿ ಕೊಲೆ ಮಾಡಿ ಮಧ್ಯರಾತ್ರಿ ಮೃತ ದೇಹ ಸಾಗಿಸಿದ್ದಾರೆ.ಆರೋಪಿಗಳು ಹೆಗಲ ಮೇಲೆ ಶವ ಹೊತ್ತು ತಂದಿದ್ದಾರೆ. ಮಧ್ಯರಾತ್ರಿ ಒಂದು ಸುಮಾರ್ ಗೆ ಆಟೋದಲ್ಲಿ ಶವ ಇಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಅದೇ ಜಾಗದಲ್ಲಿ ಆಟೋ ಇದೆ. ಇದೀಗ ಸುಬ್ರಮಣ್ಯ ಮತ್ತು ಸೆಂಟ್ರಲ್ ಇಬ್ಬರನ್ನು…

Read More

ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ವ್ಯಕ್ತಿ ಒಬ್ಬ ವಿದ್ಯುತ್ ತಂತಿ ತುಳಿದು ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ ಎಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ವ್ಯಕ್ತಿ ಬಲಿಯಾಗಿದ್ದಾನೆ. ರಸ್ತೆ ಬದಿಯಲ್ಲಿರುವಂತಹ ವಿದ್ಯುತ್ ತಂತಿ ನರಳಿ ಪ್ರಾಣ ಬಿಟ್ಟಿದ್ದಾನೆ. ತಂತಿ ತಗುಲಿ, ರಾಜಸ್ಥಾನದ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾನೆ. ನವನಗರದ 49ನೇ ಸೆಕ್ಟರ್ ನಲ್ಲಿ ಈ ಒಂದು ದುರಂತ ಸಂಭವಿಸಿದೆ. ಪವರ್ ಜಂಕ್ಷನ್ ಬಾಕ್ಸ್ ಪಕ್ಕದಲ್ಲಿ ತಂತಿ ಬಿದ್ದಿತ್ತು. ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ನರಳಿ ಪ್ರಾಣ ಬಿಡುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ಇದೀಗ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ನೆಲಕ್ಕೆ ಬಿದ್ದಿದ್ದ ತಂತಿ ತೆಗೆದುಹಾಕಿ ಎಂದು ಸಿಬ್ಬಂದಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ

Read More

ಬೆಂಗಳೂರು : ಬೆಂಗಳೂರಿನಲ್ಲಿ ಮುನೇಶ್ವರ ದೇವಸ್ಥಾನದ ಅರ್ಚಕರೊಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಅರ್ಚಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯದಿಂದ ಅರ್ಚಕರು ಬಳಲುತ್ತಿದ್ದು ಇದರಿಂದ ಬೇಸತ್ತು ಅಶ್ವಥ್ ನಾರಾಯಣ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆಲಮಂಗಲದ ನಿವಾಸಿ ಎಂದು ಹೇಳಲಾಗುತ್ತಿದ್ದು, ಅಶ್ವಥ್ ನಾರಾಯಣ್ ಫ್ಯಾಕ್ಟರಿ ಕೆಲಸ ಜೊತೆಗೆ ಮುನೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಈ ಕುರಿತು ನೆಲಮಂಗಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅಶ್ವಥ್ ನಾರಾಯಣ ಮೂರ್ತಿ ಹವನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶವ ಶಿಫ್ಟ್ ಮಾಡಲಾಗಿದೆ.

Read More

ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .. ಗೃಹಕಲಹವು ನಿಂತುಹೋಗುತ್ತದೆ .. ದೇವರ ಅನುಗ್ರಹ ಹಾಗೂ ಗುರುಗಳ ಅನುಗ್ರಹ ಎಂದೆಂದೂ ಇದ್ದು, ಶುಭಕಾರ್ಯಗಳು ಯಾವುದೇ ತೊಂದರೆ ಇರದೆ ಸುಸೂತ್ರವಾಗಿ ನಡೆಯುತ್ತದೆ.. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಈ ಎಣ್ಣೆಯ ಬೆಲೆ ಜಾಸ್ತಿ..…

Read More

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದ್ದು, ನವೆಂಬರ್ ಬಂದರೆ ರಾಜ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುತ್ತದೆ. ಇದರ ಬೆನ್ನಲ್ಲೆ, ಸಂಪುಟ ಪುನರ್ ರಚನೆ ಬಗ್ಗೆ ಕೂಡ ಹಲವು ನಾಯಕರಿಂದ ಕೂಗು ಕೇಳಿ ಬರುತ್ತಿದ್ದು, ಇದರ ಮಧ್ಯ ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ರೆಡಿ ಇದ್ದೇನೆ. ಎರಡುವರೆ ವರ್ಷದ ಬಳಿಕ ಸಂಪುಟ ಪುನರ್ ರಚನೆ ಆಗುತ್ತೆ. ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು, ಸಚಿವರಾಗಲು ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು. ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾತ ತೀರ್ಮಾನಿಸುತ್ತದೆ. ಸಂಪುಟ ಪುನರು ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದರು. ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನವನ್ನು ನೀಡಿದೆ. ಅರ್ಹತೆ ಮೀರಿ ನನಗೆ ಪಕ್ಷ ಅವಕಾಶ ಕೊಟ್ಟಿದೆ ಹೈ ಕಮಾಂಡ್ ಹೇಳಿದರೆ ನಾನು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಪ್ರಶ್ನಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದ್ದು, ನಟ ಮತ್ತು ಚಿಂತಕ ಪ್ರಕಾಶ್ ಬಳವಾಡಿ ಅವರು ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್,ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಪರವಾಗಿ ಬಿಜೆಪಿ ಸಂಸದ ಹಾಗೂ ವಕೀಲ ತೇಜಸ್ವಿ ಸೂರ್ಯ ವಾದ ಮಂಡಿಸಿದರು. ತಾಂತ್ರಿಕ ವಿಶ್ಲೇಷಣೆ ಮತ್ತು ಪರಿಸರ ಪರಿಣಾಮ ಅಧ್ಯಯನ ನಡೆಸದೆ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಲಾಲ್ಬಾಗ್ನಲ್ಲಿ 6.5 ಎಕರೆ ಭೂಮಿ ಸ್ವಾಧೀನಕ್ಕೆ ಉದ್ದೇಶಿಸಲಾಗಿದೆ. ನೈಸರ್ಗಿಕವಾಗಿ ರಚನೆ ಆಗಿರುವ ಬಂಡೆಗೆ ಹಾನಿಯಾಗುವ ಸಾಧ್ಯತೆ ಇದೆ. ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಯೋಜನೆ ರೂಪಿಸಲಾಗಿದೆ. ಹೀಗಾಗಿ ಟೆಂಡರ್ ಅಧಿಪೂಚನೆಗೆ ತಡೆ ನೀಡುವಂತೆ ಮನವಿ ಮಾಡಿದರು. ಲಾಲ್ಬಾಗ್ನಲ್ಲಿ ಮರ ಕಡಿಯುವ ಪ್ರಸ್ತಾವನೆ ಇದೆಯಾ ಎಂದು ಹೈಕೋರ್ಟ್ ಪ್ರಶಿಸಿತು. ಈ ವೇಳೆ ಸರ್ಕಾರಿ ವಕೀಲರು ಕಾಲಾವಕಾಶ ಕೋರಿದ್ದಾರೆ.

Read More