Author: kannadanewsnow05

ಬೆಂಗಳೂರು : ರಾಜ್ಯದ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು ಶೀಘ್ರದಲ್ಲಿಯೇ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆಗಳು ಕಂಡುಬರುತ್ತಿವೆ. ಈ ಕುರಿತು ಕೆ ಇ ಆರ್ ಸಿ ಚಿಂತನೆ ನಡೆಸಿದ್ದು, ನಾಳೆ ಈ ಕುರಿತು ಸಭೆ ನಡೆಯಲಿದೆ. ಈ ಕುರಿತು ನಾಳೆ ಕೆಇಆರ್‌ಸಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಪರ್ಯಾಯ ಮಾರ್ಗಕ್ಕಾಗಿ ಕೆಇಆರ್‌ಸಿ, ಮೊರೆ ಹೋಗಿರುವ ಬೆಸ್ಕಾಂ ಸದ್ಯ ಮುಂದಿನ ಎರಡು ಆರ್ಥಿಕ ವರ್ಷಗಳಿಗೂ ವಿದ್ಯುತ್ ದರ ಏರಿಸಿರುವ ಕೆ ಆರ್ ಸಿ, ಇದೀಗ ಮಧ್ಯಂತರ ವಿದ್ಯುತ್ ತರ ಏರಿಗೆ ಮಾಡಲು ಚಿಂತನೆ ನಡೆಸಿದೆ. ದರ ಏರಿಕೆ ಸಂಬಂಧಪಟ್ಟ ಗ್ರಾಹಕರು ಮತ್ತು ಉದ್ಯಮಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ 2024 ಮತ್ತು 25ರಲ್ಲಿ 2800 ಕೋಟಿ ನಷ್ಟ ಅನುಭವಿಸಿರುವ ಬೆಸ್ಕಾಂ, ಇದನ್ನು ಸರಿದೂಗಿಸಲು ಬೆಸ್ಕಾಂ ಕೆಇಆರ್‌ಸಿ ಮೊರೆ ಹೋಗಿದ್ದಾರೆ. ಹಾಗಾಗಿ ನಾಳೆ ಕೆಇಆರ್‌ಸಿಸ್ ಪಂಗಡದಲ್ಲಿ ಅಧಿಕಾರಿಗಳು ಸಭೆ ಕರೆದಿದ್ದು ಈ ಬೆಳೆ ಗ್ರಾಹಕರ ಆವಾಲುಗಳನ್ನು ಸ್ವೀಕರಿಸಲಿದ್ದಾರೆ.

Read More

ಹಾಸನ : ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ನಡೆದಿದೆ. ಆದರೆ ಕುಟುಂಬಸ್ಥರು ಇದು ಅಸಹಜ ಸಾವಲ್ಲ ಇದೊಂದು ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಮೃತ ಯುವಕನನ್ನ ಪುನೀತ್ (27) ಎಂದು ಗುರುತಿಸಲಾಗಿದೆ. ಪುನೀತ್ ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಬುಧವಾರ ಎಂದಿನಂತೆಯೇ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದ. ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದ್ದಾರೆ. ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ಆದರೂ ಮಾಹಿತಿ ನೀಡಿಲ್ಲ ಎಂದು ಕಾರ್ಖಾನೆ ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುನೀತ್ ಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋಗಿದ್ದು, ಮೃತಪಟ್ಟ ಬಳಿಕ ಸಮವಸ್ತ್ರ ಬದಲಿಸಲಾಗಿದೆ. ಪುನೀತ್ ಅವರದ್ದು ಸಹಜ ಸಾವಲ್ಲ, ಕೊಲೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಶೇ.80ಕ್ಕೂ…

Read More

ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಂಜೆ ಸಾರಿಗೆ ನೌಕರರು ಮುಷ್ಕರ ಹಮ್ಮಿಕೊಂಡಿದ್ದು, ಇದರ ಬೆನ್ನಲ್ಲೇ ಮಾರ್ಚ್ ಇದರಂದು ರಾಜ್ಯ ಗುತ್ತಿಗೆದಾರರ ಸಂಘದ ವತಿಯಿಂದ ಸಾಕೇತಿಕ ಮುಷ್ಕರ ಹಮ್ಮಿಕೊಂಡಿದೆ. ಈ ಕುರಿತು ನಮ್ಮ ಬೇಡಿಕೆ ಈಡೇರದಿದ್ದರೆ ಮಾರ್ಚ್ 05 ರಂದು ಒಂದು ದಿನ ಸಾಂಕೇತಿಕವಾಗಿ ಮುಷ್ಕರ ಮಾಡುವ ತೀರ್ಮಾನ ಮಾಡಿದ್ದೇವೆ. ನಂತರವೂ ಬೇಡಿಕೆ ಪೂರೈಸದಿದ್ದರೆ ಎಪ್ರಿಲ್ ನಂತರ ಅನಿರ್ಧಿಷ್ಟಾವಧಿ ಮುಷ್ಕರ ‌ಮಾಡುತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.‌ ಮಂಜುನಾಥ್ ತಿಳಿಸಿದರು. ಎರಡೂವರೆ ವರ್ಷದಿಂದ ಕಾಂಟ್ರಾಕ್ಟರ್​ಗಳ 37,000 ಕೋಟಿ ರೂಪಾಯಿ ಬಿಲ್​ ಬಾಕಿ ಇದೆ. ಅದರಲ್ಲಿ ನಮ್ಮ ಲೋಕೋಪಯೋಗಿ ಇಲಾಖೆಯ 8000 ಕೋಟಿ ಬಿಲ್, ಜಲಸಂಪನ್ಮೂಲ ಇಲಾಖೆಯದ್ದು 13,000 ಕೋಟಿ ಇದೆ. ಆರ್​ಡಿಪಿಆರ್​ 3,800 ಕೋಟಿ ಹಾಗೂ ವಸತಿ ಮತ್ತು ಹೌಸಿಂಗ್ 2,800 ಕೋಟಿ, ಲೆಬರ್ ಇಲಾಖೆ 2000 ಕೋಟಿ, ಬಿಬಿಎಂಪಿ 1600 ಕೋಟಿ ಹಾಗೂ ವಸತಿ ಹಾಗೂ ವಕ್ಫ್​ 2600 ಕೋಟಿ ಪೆಂಡಿಂಗ್ ಬಿಲ್ ಇದೆ ಎಂದಿದ್ದಾರೆ. ಮಾನ್ಯ…

Read More

ಬೆಂಗಳೂರು : ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಯಾರಬ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ ಸಲ್ಮಾನ್ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಮತ್ತು ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಸಲ್ಮಾನ್ ಸೋಫಿಯಾಳನ್ನು ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧದ ವಿಚಾರವಾಗಿ ಕುಟುಂಬದಲ್ಲಿ ಆಗಾಗ ಗಲಾಟೆ ನಡೆಯುತ್ತಿತ್ತು. ಅನುಮಾನದ ಭೂತ ಕೂಡ ಈತನನ್ನು ಹೊಕ್ಕಿತ್ತು. ಹಾಗಾಗಿ ಪತ್ನಿಯ ಶೀಲದ ಕುರಿತು ಶಂಕಿಸಿ ತಾನೇ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Read More

ಹೈದರಾಬಾದ್: ಹೈದರಾಬಾದ್ ನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವಿಚ್ಚೇದಿತ ಮಹಿಳಾ ಟೆಕ್ಕಿ ಸುನಿತಾ (28) ಬರ್ಬರವಾಗಿ ಕೊಲೆಯಾಗಿದ್ದಾರೆ. ಮಾಜಿ ಪತಿ ಮಹೇಶ್ ಎಂಬಾತ ಸುನಿತಾಳನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು, ಹೂವಿನ ಕುಂಡದಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ ಕಾರಣ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಮಹಿಳೆಯ ಎರಡನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 30 ರ ಹರೆಯದ ಕೊಲೆ ಆರೋಪಿ 2022 ರಲ್ಲಿ ಆ ಮಹಿಳೆಯನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆದಿತ್ತು. ಆರೋಪಿ ನಂತರ ಕೆನಡಾಕ್ಕೆ ತೆರಳಿದ್ದ. ಅಲ್ಲಿ ಪತ್ನಿ ಜೊತೆ ವಾಸವಾಗಿದ್ದ. ದಂಪತಿ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಮಹಿಳೆ ಭಾರತಕ್ಕೆ ವಾಪಸ್‌…

Read More

ಕೊಡಗು : ಕೊಡಗಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಪೊಲೀಸರಿಗೆ ಹೆದರಿ ಬೈಕ್ ಸವಾರನೊಬ್ಬ ಜೀವ ಕಳೆದುಕೊಂಡಿದ್ದು, ಪೊಲೀಸರು ಹಿಡಿಯುತ್ತಾರೆ ಎಂದು ಬೈಕ್ ಸವಾರ ಭಯದಿಂದ ಬೈಕ್ ತಿರುಗಿಸಿದ್ದಾನೆ ಈ ವೇಳೆ ಹಿಂದೆಯಿಂದ ಬಂದಂತಹ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸವಾರ ದುರ್ಮರಣ ಹೊಂದಿದ್ದಾನೆ. ಮೃತ ಬೈಕ್ ಸವಾರನನ್ನು ಕೂಡುಮಂಗಳೂರು ಬಳಿ ಮರೂರು ಗ್ರಾಮದ ನಟೇಶ್ (31) ಎಂದು ತಿಳಿದುಬಂದಿದೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ನಿವಾಸಿಯಾಗಿದ್ದು, ರಸ್ತೆ ಬದಿ ಪೊಲೀಸರನ್ನು ಕಂಡು ನಟೇಶ್ ಗಾಬರಿಯಾಗಿ ಬೈಕ್ ತಿರುಗಿಸಿದ್ದಾನೆ. ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ನಟೇಶ್ ಸಾವನ್ನಪ್ಪಿದ್ದಾನೆ. ನಟೇಶ್ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ಪತ್ನಿ ದಿವ್ಯ ಕಾಲುಗಳು ಮುರಿದಿವೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಬಳಿಗೆ ಪತಿಯ ಶವ ತಂದು ಅಂತಿಮ ದರ್ಶನ ನೀಡಲಾಯಿತು. ಬೆಡ್ ಮೇಲೆ ಮಲಗಿಕೊಂಡೆ ಪತ್ನಿ ಪತಿಯ ಅಂತಿಮ ದರ್ಶನ ಪಡೆದರು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ…

Read More

ಬೆಂಗಳೂರು : ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ವೃದ್ಧರೊಬ್ಬರೂ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. ಮೃತ ವೃದ್ಧರನ್ನು ಮೈಲಾರಪ್ಪ (80) ತಿಳಿದು ಬಂದಿದೆ. ಮನೆಯಲ್ಲಿ ಮೊಮ್ಮಗನ ಜೊತೆಗೆ ಮೈಲಾರಪ್ಪ ವಾಸವಿದ್ದರು. ಮೊಮ್ಮಗ ಮನೆಯಿಂದ ಹೊರ ಹೋಗಿದ್ದಾಗ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಮನೆಯಲ್ಲಿ ಬೆಂಕಿ ಹತ್ತಿಕೊಂಡಿದ್ದರಿಂದ ಮೈಲಾರಪ್ಪ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ತಳಕ್ಕೆ ಕೆಂಗೇರಿ ತಾಣೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.

Read More

ಕೋಲಾರ : ಕೋಲಾರದ ಕೆಜಿಎಫ್ ಚಿನ್ನದ ಗಣಿಯಲ್ಲಿ ಮಣ್ಣು ಕರಿಯುತಿದ ಎಂಟು ಜನರನ್ನು ಅರೆಸ್ಟ್ ಮಾಡಲಾಗಿದೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್. ಉರಿಗಂ ಠಾಣೆ ಪೊಲೀಸರು ಎಂಟು ಜನರನ್ನು ಅರೆಸ್ಟ್ ಮಾಡಿದ್ದಾರೆ. ಗಿಫ್ಟಾರ್ಟ್ ಶಾಪ್ಟ್ ನಲ್ಲಿ ಚಿನ್ನ ಮಿಶ್ರಿತ ಮಣ್ಣನ್ನು ಕದಿಯುತ್ತಿದ್ದರು ಎಂಟು ಚೀಲಗಳಲ್ಲಿ ತುಂಬಿದ 40,000 ಮೌಲ್ಯದ ಚಿನ್ನ ಮಿಶ್ರಿತ ಮಣ್ಣು ಜಪ್ತಿ ಮಾಡಿದ್ದಾರೆ. ಕಳುವು ಸಂಬಂಧ ಉರಿಗಾಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಮೈಸೂರು : ಇತ್ತೀಚಿಗೆ ಮೈಸೂರು ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಘಟನೆ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್‌ಗಳು ಅಥವಾ ಇತರ ಯಾವುದೇ ವಸ್ತುಗಳನ್ನು ಬಳಸುವುದು ಹಾಗೂ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಹೀಲಿಯಂ ಅನಿಲವನ್ನು ಬಲೂನ್​​​​ಗೆ ತುಂಬುವ ಸಂದರ್ಭದಲ್ಲಿ ಸಂಭವಿಸಿದ ಘಟನೆಯಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಲಿಯಂ ಅನಿಲವು ಅತ್ಯಧಿಕ ಒತ್ತಡದಲ್ಲಿರುವ ಸಿಲಿಂಡರ್‌ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅವುಗಳನ್ನು ಅಜಾಗರೂಕತೆಯಿಂದ ಅಥವಾ ಅಪ್ರಮಾಣಿತ ವಿಧಾನದಲ್ಲಿ ಬಳಸುವುದರಿಂದ ಸಿಲಿಂಡರ್ ಸ್ಫೋಟ, ಉಸಿರುಗಟ್ಟುವಿಕೆ, ಅಗ್ನಿ ಅಪಾಯ, ಸಾರ್ವಜನಿಕರಲ್ಲಿ ಭಯ ಮತ್ತು ಆಶಾಂತಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಬ್ಬಗಳು, ಜಾತ್ರೆಗಳು, ಪ್ರವಾಸಿ ಕೇಂದ್ರಗಳು, ಸಾರ್ವಜನಿಕ ಸಮಾರಂಭಗಳು ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಕೆಯು ಸಾರ್ವಜನಿಕ ಜೀವನದ ಮೇಲೆ ವಿಪರೀತ ಪರಿಣಾಮವನ್ನು ಬೀರಲಿದೆ. ಗಂಭೀರ…

Read More

ಮುಂಬೈ : ಮುಸ್ಲಿಂರಿಗೆ ಇದೀಗ ಮಹಾರಾಷ್ಟ್ರ ಸರಕಾರ ಬಿಗ್ ಶಾಕ್ ನೀಡಿದೆ. ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ SEBCಯಡಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇಕಡಾ 5 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಬಗ್ಗೆ ವರದಿಯಾಗಿದೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಈ ಹೊಸ ಆದೇಶವನ್ನು ನೀಡಿದೆ. ಈ ಆದೇಶದಿಂದ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ(SEBC) ವರ್ಗದ ಅಡಿಯಲ್ಲಿ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಿಗೆ ಈ ಹಿಂದೆ ದೊರೆಯುತ್ತಿದ್ದ ಮೀಸಲಾತಿ ರದ್ದುಗೊಂಡಿದೆ. 2014ರಲ್ಲಿ ಕಾಂಗ್ರೆಸ್‌-ಎನ್ ಸಿಪಿ ಮೈತ್ರಿ ಸರಕಾರ ಈ ಮೀಸಲಾತಿಯನ್ನು ಘೋಷಿಸಿತ್ತು. ಈ ನಿರ್ಧಾರವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ನಂತರ ಬಾಂಬೆ ಹೈಕೋರ್ಟ್ ಸರಕಾರಿ ಉದ್ಯೋಗಗಳಲ್ಲಿ ಈ ಮೀಸಲಾತಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು. ಶಿಕ್ಷಣ ಸಂಸ್ಥೆ ಹಾಗೂ ಸರಕಾರಿ ಉದ್ಯೋಗ ಪಡೆಯಲು ಮುಸ್ಲಿಂ ಸಮುದಾಯಕ್ಕೆ ಇದು ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಹಿಂದಿನ ಸರಕಾರದ ಆದೇಶವನ್ನು ಬಿಜೆಪಿ ಸರಕಾರ ರದ್ದುಪಡಿಸಿದೆ.

Read More