Author: kannadanewsnow05

ಬೆಂಗಳೂರು : ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಮುಂಬಡ್ತಿ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಸ್ನೇಹಮಯಿ ದೂರಿಗೆ ಪತ್ರದ ಮೂಲಕ ಶಾಲಿನಿ ರಜನಿಶ್ ಸ್ಪಷ್ಟೀಕರಣ ನೀಡಿದ್ದಾರೆ. ತಾವು ಸಲ್ಲಿಸಿರುವ ದೂರಿನಲ್ಲಿ ಮಾಡಿರುವ ಆರೋಪಗಳು ನಿರಾಧಾರ ಆಗಿವೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಸ್ಪಷ್ಟನೆ ನೀಡಿದ್ದಾರೆ. ಮುಡಾ ಮಾಜಿ ಅಧ್ಯಕ್ಷ ನಟೇಶ್ ಅವರಿಗೆ ಭರ್ತಿ ನೀಡುವ ವಿಚಾರವಾಗಿ ಕೋಟ್ಯಾಂತರ ಹಣ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣಗೆ ತಿರುಗೇಟು ನೀಡಿದ್ದಾರೆ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿಲ್ಲ. ಸರ್ಕಾರಕ್ಕೆ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ ಆರೋಪ ಸಂಬಂಧ ಸೂಕ್ತ ದಾಖಲೆಗಳನ್ನು ಒದಗಿಸಿದರೆ ನಿಯಮಾನುಸಾರ ಸಾಕ್ಷಿ ಆಧಾರಗಳನ್ನು ಖಂಡಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರದ ಮೂಲಕ ಸಿ ಎಸ್ ಶಾಲಿನಿ ರಜನೀಶ್ ಸ್ಪಷ್ಟನೆ ನೀಡಿದ್ದಾರೆ.

Read More

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ,6 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್​ಗಳಲ್ಲಿ 23.88 ಕೋಟಿ ರೂ. ಮೌಲ್ಯದ 4.776 ಕೆ.ಜಿ ಕೊಕೇನ್ ಪತ್ತೆಯಾಗಿದೆ. ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಪ್ರಯಾಣಿಕ ಬ್ರೆಜಿಲ್ ಮೂಲದವ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಎನ್​ಸಿಬಿ ಅಧಿಕಾರಿಗಳು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್​ಡಿಪಿಎಸ್)​​ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಫೆಬ್ರುವರಿ 17ರಂದು ಕತಾರ್​​ನ ದೋಹಾದಿಂದ ಬಂದ ಪ್ರಯಾಣಿಕನ ಬಳಿ ಇದ್ದ ಬ್ಯಾಗ್​ಗಳನ್ನು ತಪಾಸಣೆ ನಡೆಸಿದಾಗ ಭಾರಿ ಪ್ರಮಾಣದ ಕೊಕೇನ್ ಪತ್ತೆಯಾಗಿದೆ. ಮಹಿಳೆಯರು ಬಳಸುವ ಬ್ಯಾಗ್​ನಲ್ಲಿ ಮರೆಮಾಚಿ ಕೊಕೇನ್ ಸಾಗಿಸಲಾಗುತ್ತಿತ್ತು. ಬ್ಯಾಗ್​ನ ಕೆಳಭಾಗದಲ್ಲಿ ಕೆಮಿಕಲ್​ನಿಂದ ಮಾಡಲಾಗದ ಪದರಗಳ ಒಳಗೆ ಕೊಕೇನ್ ಇಡಲಾಗಿತ್ತು. ಪ್ರಯಾಣಿಕರ ಚೆಕ್ ಇನ್ ವೇಳೆ ಮಾದಕವಸ್ತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. https://twitter.com/narcoticsbureau/status/2024143495041339553?t=_gCYCIkYGMBCzJbbyWYDgw&s=19

Read More

ಬೆಂಗಳೂರು, ಫೆ.19 : ಬಿಜೆಪಿ ನಾಯಕರುಗಳು ಕಸ ವಿಲೇವಾರಿಗೆ ಬಿಡುವುದು ಬೇಡ‌. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ, ತೆಗೆಸುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಕಾಲನ್ನು ಕಟ್ಟಿಕೊಳ್ಳಲು ಆಗುತ್ತದೆಯೇ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರದಂದು ಪ್ರತಿಕ್ರಿಯೆ ನೀಡಿದರು. ಏನಾದರೂ ಕಸ ವಿಲೇವಾರಿಗೆ ಬಿಡುವುದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಕಸ ಯಾರದ್ದು ಅದು ಜನರ ಕಸ. ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ” ಎಂದರು. “ನಾವು ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಸಾವಿರಾರು ಕೋಟಿಯನ್ನು ಎಷ್ಟು ಎಂದು ಕೊಡಲು ಆಗುತ್ತದೆ. 20, 30 ಕೋಟಿ ಸೇರಿದಂತೆ 50- 100 ಕೋಟಿ ಹಣವನ್ನು ಅಭಿವೃದ್ಧಿಗೆ…

Read More

ಬೆಂಗಳೂರು, ಫೆ.19: ಸಾರಿಗೆ ನೌಕರರ ಬೇಡಿಕೆಗಿಂತ ಕಡಿಮೆ ಹಿಂಬಾಕಿ ನೀಡಿರುವ ಬಗ್ಗೆ ಸದ್ಯ ಅಷ್ಟು ಕೊಟ್ಟಿರುವುದಕ್ಕೆ ಸಂತೋಷ ಪಡಬೇಕು. ಸರ್ಕಾರದ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಸಾರಿಗೆ ನೌಕರರು ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಪ್ರಿಯಾಂಕಾ ಗಾಂಧಿ ಅವರ ಜೊತೆ ಅಸ್ಸಾಂ ಭೇಟಿ ಪ್ರಿಯಾಂಕಾ ಗಾಂಧಿ ಅವರು, ನಾನು, ಭೂಪೇಶ್ ಬಘೇಲ ಅವರು ಹಾಗೂ ತಂಡ ಅಸ್ಸಾಂಗೆ ತೆರಳುತ್ತಿದ್ದೇವೆ. ಹಲವು ವಿಚಾರಗಳ ಕುರಿತು ಸರಣಿ ಸಭೆಗಳನ್ನು ನಡೆಸುತ್ತೇವೆ. ಅಸ್ಸಾಂ ಚುನಾವಣೆ ವಿಚಾರವಾಗಿ ದೆಹಲಿಯಲ್ಲಿ 3-4 ಸಭೆಗಳನ್ನು ನಡೆಸಿದ್ದೇವೆ. ಬೇಕಾದ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ತಂತ್ರಗಾರಿಕೆ ಸೇರಿದಂತೆ ಇನ್ನಿತರೇ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಭರವಸೆಯಿದೆ. ಕಾಮಾಕ್ಯ ದೇವಿ ದೇವಾಲಯಕ್ಕೂ ಭೇಟಿ ನೀಡುತ್ತೇನೆ. ಎರಡು ದಿನಗಳ ಪ್ರವಾಸ ಇದಾಗಿದೆ” ಎಂದು ಹೇಳಿದರು.

Read More

ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ರಸ್ತೆ ಬದಿಯ ಮನೆಗೆ ನುಗ್ಗಿದ ಘಟನೆ ಹಾಸನ ತಾಲೂಕಿನ ಯಲಗುಂದ ಗ್ರಾಮದಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಪರಿಣಾಮ ಕಾರಲ್ಲಿದ್ದ ಐದು ಜನ ಯುವಕರು ಗಾಯಗೊಂಡಿದ್ದಾರೆ. ಅತೀ ವೇಗದಲ್ಲಿ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಕಾಂಪೌಂಡ್ ಹಾರಿ ಮನೆಗೆ ಕಾರು ಗುದ್ದಿದೆ. ಪರಿಣಾಮ ಮನೆಯ ಚಾವಣಿ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಘಟನೆ ಬಳಿಕ ಸ್ಥಳೀಯರು ಆಗಮಿಸಿ, ಗಾಯಾಳುಗಳನ್ನು ರಕ್ಷಿಸಿದ್ದಾರೆ.

Read More

ಬೆಂಗಳೂರು : ನಿರ್ಮಾಪಕ ಸಾರಾ ಗೋವಿಂದು ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಫೋನ್ ನಂಬರ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಗಳು ಸಾರಾ ಗೋವಿಂದು ಅವರ ಕಾಂಟಾಕ್ಟ್ ನಲ್ಲಿ ಇದ್ದವರಿಗೆ 45 ಸಾವಿರ ಕಳುಹಿಸಲು ಮೆಸೇಜ್ ಮಾಡಿದ್ದಾರೆ. ಹೌದು ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ಮಾಪಕ ಸಾರಾ ಗೋವಿಂದ ಅವರ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ.ಅಲ್ಲದೆ ಅವರ ಮೊಬೈಲ್ ನಲ್ಲಿ ಇರುವ ಎಲ್ಲಾ ಕಾಂಟಾಕ್ಟ್ ಗಳ ನಂಬರ್ ಗಳಿಗೆ ಮೆಸೇಜ್ ಮಾಡಿ 45,000 ಹಣ ಹಾಕುವಂತೆ ಮೆಸೇಜ್ ಮಾಡಿದ್ದಾರೆ. ಈ ಕುರಿತು ನಿರ್ಮಾಪಕ ಸಾರಾಗುವ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹ್ಯಾಕರ್ಸ್ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ

Read More

ಮೈಸೂರು : ಇಂದಿನಿಂದ ನಾಗರಹೊಳೆ ಮತ್ತು ಬಂಡಿಪುರದಲ್ಲಿ ಸಫಾರಿಗೆ ಅವಕಾಶ ಮಾಡಿಕೊಡಲಾಗಿದ್ದು ಸಫಾರಿ ಆರಂಭ ವಿರೋಧಿಸಿ ರೈತರು ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಕಚೇರಿ ಮುತ್ತಿಗೆಗೆ ರೈತರು ಯತ್ನಿಸಿದ್ದಾರೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ, ಈ ವೇಳೆ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದ್ದಾರೆ. ಆಗ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ಆಗಿದ್ದು, ಸಿಎಂ ಸಿದ್ದರಾಮಯ್ಯ ಮುಂದೆ ಸಚಿವ ಮಲ್ಲಿಕಾರ್ಜುನ್ ರಾಜಿನಾಮೆ ಪ್ರಸ್ತಾಪ ಇಟ್ಟಿದ್ದಾರೆ. ಸಚಿವ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಹೌದು ವ್ಯವಹಾರಿಕವಾದ ಮತ್ತು ಕ್ಷೇತ್ರದ ಕೆಲಸ ಹಿನ್ನೆಲೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪ ಮಾಡಿದ್ದಾರೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ಎದುರು ಸಚಿವ ಮಲ್ಲಿಕಾರ್ಜುನ ಕುರಿತು ಪ್ರಸ್ತಾಪ ಮಾಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಎಸ್ ಎಸ್ ಮಲ್ಲಿಕಾರ್ಜುನ್ ಈ ನಡೆ ಬಹಳ ಮಹತ್ವ ಪಡೆದಿದೆ. ಅಲ್ಲದೇ ತಮ್ಮ ಪುತ್ರನಿಗೆ ಮಲ್ಲಿಕಾರ್ಜುನ್ ಟಿಕೆಟ್ ಕೇಳುತ್ತಿದ್ದಾರೆ. ರಾಜಕೀಯ ಭಾಗವಾಗಿ ಎಸ್. ಎಸ್ ಮಲ್ಲಿಕಾರ್ಜುನ್ ಈ ಒಂದು ದಾಳ ಉರುಳಿಸಿದರಾ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಏಕೆಂದರೆ ಇತ್ತೀಚಿಗೆ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಹೊಂದಿದ ನಂತರ ದಾವಣಗೆರೆ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಗೆ ತಮ್ಮ ಪುತ್ರನಿಗೆ ಎಸ್ಸೆಸ್ ಮಲ್ಲಿಕಾರ್ಜುನ್…

Read More

ಕಲಬುರ್ಗಿ : ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿಯ ವೇಳೆ ಇಬ್ಬರು ಕಾನ್ಸ್ಟೇಬಲ್ ಗಳು ಸೇರಿದಂತೆ 9 ಜನರು ಪರಾರಿಯಾಗಿದ್ದಾರೆ. ಕಲ್ಬುರ್ಗಿಯ ಎಂ ಬಿ ನಗರ ಠಾಣೆ ಕಾನ್ಸ್ಟೇಬಲ್ ಗುರುನಾಥ್ ನಗರ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ ಮಡಿವಾಳಪ್ಪ ಪರಾರಿಯಾಗಿದ್ದಾರೆ. ದಿಗ್ಗಾವ್ ಹೊರವಲಯದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗವ್ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರು ಕಾನ್ಸ್ಟೇಬಲ್ ಗಳು ಸೇರಿ 12 ಜನ ಇಸ್ಪೀಟ್ ಆಡುತ್ತಿದ್ದರು. ಚಿತಾಪುರ ಪೊಲೀಸರ ದಾಳಿಯ ವೇಳೆ 9 ಜೂಜು ಕೊರರು ಪರಾರಿಯಾಗಿದ್ದಾರೆ. ಮೂವರು ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಕಾನ್ಸ್ಟೇಬಲ್ ಗಳು ಜೂಜಾಟದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಮಡಿವಾಳಪ್ಪ ಕಲ್ಬುರ್ಗಿಯಿಂದ ಕಾರಲ್ಲಿ ದಿಗ್ಗಾಂವ್ ಗೆ ಬಂದು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರ ದಾಳಿ ವೇಳೆ ಮಡಿವಾಳಪ್ಪ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಚಿತಾಪುರ ಪೊಲೀಸ್ ಠಾಣೆಯಲ್ಲಿ…

Read More

ಬೆಂಗಳೂರು : ಬಿಜೆಪಿ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಅಂದರೆ? ಜೆಡಿಎಸ್ ಬಂದ್ರೆ ಒಕ್ಕಲಿಗರು ಮುಖ್ಯಮಂತ್ರಿ ಅಂದರೆ? ಬೇರೆ ಸಮುದಾಯಕ್ಕೆ ನ್ಯಾಯ ಎಲ್ಲಿ ಕೊಟ್ಟಂಗೆ ಆಗುತ್ತದೆ? ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಅಲ್ಪಸಂಖ್ಯಾತರು ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ದಲಿತ ಸಿಎಂ ಕುರಿತು ಮತ್ತೆ ಮಾಜಿ ಸಚಿವ ಕೆ ಎನ್ ರಾಜಣ್ಣ ಪುನರುಚ್ಚಿಸಿದ್ದಾರೆ. ಈ ವಿಚಾರವಾಗಿ ವಾಸ್ತವಂಶ ಹೇಳಿದರೆ ಬಹಳ ಜನಕ್ಕೆ ಹಿಡಿಸುವುದಿಲ್ಲ. ದಲಿತರು ಅಲ್ಪಸಂಖ್ಯಾತರು ಯಾಕೆ ಸಿಎಂ ಆಗಬಾರದು? ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯದವರಿಗು ನ್ಯಾಯ ಕೊಡುವಂತಹ ಪಕ್ಷ. ನಾನು ಬೇರೆ ಬೇರೆ ವಿಚಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೈಯುತ್ತೇನೆ ಅದು ಬೇರೆ ವಿಚಾರ. ದೇವರಾಜ್ ಅರಸು ಅವರು 1982 ರಲ್ಲಿ ಎಂಎಲ್ಎ ಇರಲಿಲ್ಲ ಅವರನ್ನ ಮುಖ್ಯಮಂತ್ರಿ ಮಾಡುತ್ತಾರೆ. ದೇವರಾಜು ಅರಸು ಅವರಿಗೆ ಇನ್ನೊಬ್ಬ ಅರಸು ಜಾತಿಯ ಎಂಎಲ್ಎ ಇಲ್ಲ. ಅದೇ ರೀತಿ ವಿರಪ್ಪ ಮೊಯ್ಲಿಯವರಿಗೆ ಕೂಡ ಇನ್ನೊಬ್ಬ ಸಮುದಾಯದವನು ಇಲ್ಲ. ಅದೇ ರೀತಿ ಧರ್ಮಸಿಂಗ್ ಅವರಿಗೂ ಇನ್ನೊಬ್ಬ ಜಾತಿಯವರಿರಲಿಲ್ಲ. ಹಾಗಾಗಿ ಕಾಂಗ್ರೆಸ್…

Read More