Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BREAKING NEWS

ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಡಬಲ್ ಡೆಕ್ಕರ್ ಬಸ್, 18 ಪ್ರಯಾಣಿಕರಿಗೆ ಗಂಭೀರ ಗಾಯ

05/05/2026 7:23 PM

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

05/05/2026 7:23 PM

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

05/05/2026 7:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ
KARNATAKA

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

By kannadanewsnow0905/05/2026 7:23 PM

ಶಿವಮೊಗ್ಗ: ಬೇಸೂರು ಭಾಗದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರದ ವಿರುದ್ಧ ಈಗಲೇ ಸಂಘಟಿತ ಹೋರಾಟ ನಡೆಸದಿದ್ದರೆ ಮಲೆನಾಡಿಗೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜನಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಚ್.ಬಿ. ರಾಘವೇಂದ್ರ ಎಚ್ಚರಿಕೆ ನೀಡಿದ್ದಾರೆ.

ಇತಿಹಾಸದ ಪಾಠ ಮತ್ತು ಸಂಘಟನೆಯ ಅಗತ್ಯ

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಷ್ಯಾದ ಚರ್ನೋಬಿಲ್ ಅಣು ಸ್ಥಾವರ ದುರಂತದ ಕಹಿ ನೆನಪುಗಳು ನಮ್ಮ ಕಣ್ಣಮುಂದಿವೆ. ಹಿಂದೆ ಕೈಗಾ ಅಣು ಸ್ಥಾವರದ ವಿರುದ್ಧ ಕುಸುಮಾ ಸೊರಬ ಹಾಗೂ ಶಿವರಾಂ ಕಾರಂತ ಅವರು ನಡೆಸಿದ ಹೋರಾಟಕ್ಕೆ ಸಮೂಹದ ಬೆಂಬಲ ಸಿಗದ ಕಾರಣ ಅದು ವಿಫಲವಾಯಿತು. ಅದೇ ತಪ್ಪು ಬೇಸೂರು ವಿಚಾರದಲ್ಲಿ ಮರುಕಳಿಸಬಾರದು. ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಸಂಸದರ ಗಮನಕ್ಕೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಜನಪ್ರತಿನಿಧಿಗಳ ನಿಲುವಿಗೆ ಒತ್ತಾಯ

ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಪ್ರತಿಭಟನೆಗೆ ಕೇವಲ ಬೆಂಬಲ ನೀಡಿದರೆ ಸಾಲದು. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಮತ್ತು ಅವರದ್ದೇ ಸಂಸದರು ಇರುವುದರಿಂದ, ಅವರ ಮೇಲೆ ಒತ್ತಡ ತಂದು ಈ ಯೋಜನೆಯನ್ನು ಹಿಂಪಡೆಯುವಂತೆ ಮಾಡಬೇಕು ಎಂದು ರಾಘವೇಂದ್ರ ಒತ್ತಾಯಿಸಿದರು. ಇದೇ ವೇಳೆ ಶಾಸಕರ ನಿಲುವಿನ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಾಸಕರು ‘ಪಂಪ್ಡ್ ಸ್ಟೋರೇಜ್’ ಬೇಕು ಎನ್ನುವ ಪರಿಸರ ವಿರೋಧಿ ಆಲೋಚನೆ ಬಿಟ್ಟು, ಈ ಪ್ರಕರಣದಲ್ಲಿ ದ್ವಂದ್ವ ನಿಲುವು ತಳೆಯಬಾರದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ವಸಂತ ಕುಮಾರ್, ಪ್ರಮುಖರಾದಂತ ಸುಂದರ ಸಿಂಗ್, ರಮೇಶ್ ಐಗಿನಬೈಲು ಮತ್ತು ಚಿಪ್ಳಿ ಕೃಷ್ಣಪ್ಪ ಅವರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

BREAKING: ‘ಜನರು ಮೊದಲು, ನಂತರ ರಾಜಕೀಯ’: TVK ಪಕ್ಷ ಭರ್ಜರಿ ಗೆಲುವಿನ ನಂತರ ‘ದಳಪತಿ ವಿಜಯ್’ ಫಸ್ಟ್ ರಿಯಾಕ್ಷನ್

Share. Facebook Twitter LinkedIn WhatsApp Email

Related Posts

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

05/05/2026 7:10 PM2 Mins Read

BREAKING: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ: ನಿಂತಲ್ಲೇ ನಿಂತ ರೈಲು, ಪ್ರಯಾಣಿಕರು ಪರದಾಟ

05/05/2026 6:57 PM1 Min Read

ಮೇ.7ರಂದು ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರದಲ್ಲಿ ಬೃಹತ್ ಪ್ರತಿಭಟನೆ: ಬಿ.ಎ.ಇಂದೂಧರ

05/05/2026 6:29 PM2 Mins Read
Recent News
BREAKING NEWS

ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಡಬಲ್ ಡೆಕ್ಕರ್ ಬಸ್, 18 ಪ್ರಯಾಣಿಕರಿಗೆ ಗಂಭೀರ ಗಾಯ

05/05/2026 7:23 PM

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

05/05/2026 7:23 PM

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

05/05/2026 7:10 PM

ಯುಎಇ ಮೇಲೆ ಇರಾನ್ ಡ್ರೋನ್ ದಾಳಿ: ಮೂವರು ಭಾರತೀಯರಿಗೆ ಗಾಯ, “ಇದು ಒಪ್ಪಲು ಅಸಾಧ್ಯ” ಎಂದು ಗುಡುಗಿದ ಪ್ರಧಾನಿ ಮೋದಿ!

05/05/2026 7:10 PM
State News
KARNATAKA

ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ

By kannadanewsnow0905/05/2026 7:23 PM KARNATAKA 1 Min Read

ಶಿವಮೊಗ್ಗ: ಬೇಸೂರು ಭಾಗದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರದ ವಿರುದ್ಧ ಈಗಲೇ ಸಂಘಟಿತ ಹೋರಾಟ ನಡೆಸದಿದ್ದರೆ ಮಲೆನಾಡಿಗೆ ಭವಿಷ್ಯದಲ್ಲಿ ದೊಡ್ಡ…

ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ

05/05/2026 7:10 PM

BREAKING: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ: ನಿಂತಲ್ಲೇ ನಿಂತ ರೈಲು, ಪ್ರಯಾಣಿಕರು ಪರದಾಟ

05/05/2026 6:57 PM

ಮೇ.7ರಂದು ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರದಲ್ಲಿ ಬೃಹತ್ ಪ್ರತಿಭಟನೆ: ಬಿ.ಎ.ಇಂದೂಧರ

05/05/2026 6:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.