Author: kannadanewsnow05

ಉತ್ತರಪ್ರದೇಶ : ಉತ್ತರ ಪ್ರದೇಶದ ಮೀರತ್ ನ ಕಿದ್ವಾಯಿನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಹೊತ್ತಿ ಉರಿದು, ಮನೆಯಲ್ಲಿದ್ದ aiವರು ಮಕ್ಕಳು ಸೇರಿದಂತೆ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಇಕ್ಬಾಲ್ ಏನು ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಿಸಾರಿ ಗೇಟ್ ಪ್ರದೇಶದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.ಒಬ್ಬ ಮಹಿಳೆ ಮತ್ತು ಐದು ಮಕ್ಕಳು ಸೇರಿದಂತೆ ಆರು ಜನರನ್ನು ರಕ್ಷಿಸಲಾಗಿದೆ. ಒಬ್ಬ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಉಪಕರಣದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ತಿಳಿಸಲಾಗುತ್ತಿದೆ. ಪ್ರಾಥಮಿಕವಾಗಿ, ವಿದ್ಯುತ್ ಉಪಕರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ಹಾಸನ : ಬಿಜೆಪಿ ಮುಖಂಡ ದೇವರಾಜೆಗೌಡನಿಂದ ಕಿರುಕುಳ ಆರೋಪ ಹಾಸನದಲ್ಲಿ ವಿಷ ಸೇವಿಸಿ ಮಹಿಳೆ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಮಹಿಳೆಯನ್ನ ಹಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದೀಗ ಅಸ್ವಸ್ಥ ಮಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೊಳೆನರಸೀಪುರ ಮೂಲದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಮಧ್ಯಾಹ್ನ 12:30ಕ್ಕೆ ವಿಷ ಸೇವಿಸಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ರಕ್ತದ ಮಾದರಿ ಸಂಗ್ರಹಿಸಿ ವೈದ್ಯರು ಅದನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ನನಗೆ ಅವಮಾನ ಮಾಡಿದ್ದಾರೆ. ನಾನು ಜೈಲಿಗೆ ಹೋಗಿದ್ದಾಗಿ ಹೇಳಿದರೆ ಸಮಾಜದಲ್ಲಿ ಅವಮಾನ ಆಗುತ್ತಿದೆ. ಹಾಗಾಗಿ ವಿಷಯ ಸೇವಿಸಿದ್ದೇನೆ ಎಂದು ಅಸ್ವಸ್ಥ ಮಹಿಳೆ ಹೇಳಿದ್ದಾರೆ. ಈ ಹಿಂದೆ ವಕೀಲ ದೇವರಾಜೇಗೌಡ ವಿರುದ್ಧ ಮಹಿಳೆ ದೂರು ನೀಡಿದ್ದರು. ಹನಿಟ್ರ್ಯಪ್ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡ. ತನ್ನ ವಿರುದ್ಧ ದೂರು ನೀಡಿದ ಮಹಿಳೆಯ ವಿರುದ್ಧ ಈ ಒಂದು ಆರೋಪ ಮಾಡಿದ್ದರು. ಸದ್ಯ ದೇವರ ದೇವರಾಜೇಗೌಡ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ಮಹಿಳೆಯ…

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಒಬ್ಬನನ್ನು ನಾಲ್ವರು ಆತನ ಮೇಲೆ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ನಡೆದಿದೆ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಅಪರಾಪ್ತರನ್ನು ಅರೆಸ್ಟ್ ಮಾಡಿದ್ದಾರೆ. ಎಸ್​ಎಸ್​​ಎಲ್​ಸಿ ವಿದ್ಯಾರ್ಥಿ ಸಂಕೇತ್ (16) ಕೊಲೆಯಾಗಿದ್ದಾನೆ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಅಪರಾಪ್ತರನ್ನು ಅರೆಸ್ಟ್ ಮಾಡಿದ್ದಾರೆ ಎಂದು…

Read More

ದಾವಣಗೆರೆ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಚಮನ್ ಸಾಬ್ ಫಾತಿಮಾ ದಂಪತಿ ಪುತ್ರ ಮುಜಾಮಿಲ್ (15) ಎನ್ನುವ ಬಾಲಕ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ರಾಜೀವ್ ಗಾಂಧಿ ವಸತಿ ಶಾಲೆಯಲ್ಲಿ ಮುಜಮಿಲ್ 9ನೇ ತರಗತಿ ಓದುತ್ತಿದ್ದ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಬಾಲಕ ಮುಜಾಮಿಲ್ ಮನೆಗೆ ಬಂದಿದ್ದ. ಇಂದು ಮುಂಜಾನೆ ಬಹಿರ್ದೆಸಿಗೆ ಹೋಗಿದ್ದಾಗ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಮುಜಾಮಿಲ್ ಸಾವನಪ್ಪಿದ್ದಾನೆ. ಮಗನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.

Read More

ಬೆಂಗಳೂರು : ರಾಮನಗರದಲ್ಲಿ ಒಂದುವರೆ ಕೋಟಿ ಮೌಲ್ಯದ 750 ಗ್ರಾಂ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮನಗರದ ಐಜೂರು ಠಾಣೆ ಪೊಲೀಸ್ರು ಈ ಒಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ವಿದೇಶಿ ಪ್ರಜೆ ಸೇರಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 450 ಎಮ್‌ಡಿಎಮ್ಎ ಮಾತ್ರೆಗಳು ಹಾಗೂ 550 ಗ್ರಾಂ ಕ್ರಿಸ್ಟಲ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಗೋರಿಪಾಳ್ಯದ ಸಲ್ಮಾನ್, ಸಾಧಿಕ್ ಮತ್ತು ಉಗಾಂಡಾ ಮೂಲದ ನಾನಾ ಜಾನ್ಸನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

Read More

ಉತ್ತರಪ್ರದೇಶ : ಲಕ್ನೋದಲ್ಲಿ 19 ವರ್ಷದ ಬಿಕಾಂ ವಿದ್ಯಾರ್ಥಿnಯೊಬ್ಬ ನೀಟ್ ಪರೀಕ್ಷೆಗೆ ತಯಾರಿ ನಡೆಸುವಂತೆ ಪದೇ ಪದೇ ಒತ್ತಡ ಹೇರಿದ ನಂತರ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ತುಂಡು ಮಾಡಿ, ಭಾಗಗಳನ್ನು ಮನೆಯಲ್ಲಿ ಡ್ರಮ್ ಒಳಗೆ ಬಚ್ಚಿಟ್ಟಿದರುವ ಬೆಚ್ಚಿಬಿಳಿಸುವಂತಹ ಘಟನೆ ವರದಿಯಾಗಿದೆ. ರೋಗಶಾಸ್ತ್ರ ಮತ್ತು ಮದ್ಯದ ಉದ್ಯಮಿ ಮನ್ವೇಂದ್ರ ಸಿಂಗ್ ಅವರ ಮಗ 21 ವರ್ಷದ ಅಕ್ಷತ್ ಸಿಂಗ್ ತನ್ನ ತಂದೆ ಕಾಣೆಯಾಗಿರುವುದಾಗಿ ದೂರು ನೀಡಿದ್ದರು ಎಂದು ಲಕ್ನೋ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಅಕ್ಷತ್ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಫೆಬ್ರವರಿ 20 ರಂದು ಬೆಳಗಿನ ಜಾವ 4:30 ಕ್ಕೆ ತಂದೆ ಮತ್ತು ಮಗನ ನಡುವೆ ಜಗಳವಾಯಿತು ಎಂದು ಅವರು ಪೊಲೀಸರಿಗೆ ತಿಳಿಸಿದರು. ಕೋಪದ ಭರದಲ್ಲಿ, ಅಕ್ಷತ್ ತನ್ನ ತಂದೆ ಮನ್ವೇಂದ್ರ ಅವರನ್ನು ಪರವಾನಗಿ ಪಡೆದ ರೈಫಲ್‌ನಿಂದ ಗುಂಡು ಹಾರಿಸಿ ಕೊಂದನು. ಸಾಕ್ಷ್ಯವನ್ನು ಮರೆಮಾಡಲು, ತಂದೆಯ ದೇಹವನ್ನು ಮೂರನೇ ಮಹಡಿಯಿಂದ ನೆಲ ಮಹಡಿಯಲ್ಲಿರುವ ಖಾಲಿ ಕೋಣೆಗೆ ಸ್ಥಳಾಂತರಿಸಲಾಯಿತು. ಆರೋಪಿ ಮಗ…

Read More

ಉಡುಪಿ : ಉಡುಪಿಯಲ್ಲಿ ಪ್ರಚೋದನೆಯಿಂದ ಬಾಲಕನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಅಪ್ರಾಪ್ತ ಬಾಲಕನೊಬ್ಬ ಇಲ್ಲಿನ ಸಲೂನೊಂದರಲ್ಲಿ ಪಾಕಿಸ್ತಾನ ಪರ ಪ್ರಚೋದನಕಾರಿ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 11ರ ಹರೆಯದ ಬಾಲಕ ಬಿಹಾರದಿಂದ ಬಂದ ವಲಸೆ ಕಾರ್ಮಿಕನ ಮಗನಾಗಿದ್ದು, ಹೇರ್‌ಕಟಿಂಗ್ ಮಾಡಿಸಲೆಂದು ಸಲೂನ್‌ಗೆ ಬಂದಿದ್ದ. ಈ ಸಂದರ್ಭದಲ್ಲಿ ಬಾಲಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು, ಸ್ಥಳೀಯರ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ನಡುವೆ ಕೆಲವರು ಬಾಲಕನನ್ನು ಪ್ರಚೋದಿಸಿ ಘೋಷಣೆ ಕೂಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಬಾಲಕ ಪಾಕ್ ಪರ ಘೋಷಣೆ ಕೂಗಿದ್ದನ್ನು ಆಗ ಸಲೂನ್‌ನಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಜಾಲತಾಣಗಳಲ್ಲಿ ವಿಪರೀತ ಹರಿದಾಡುತ್ತಿದೆ. ಆರೋಪಿ ಬಾಲಕ ಅಪ್ರಾಪ್ತ ವಯಸ್ಕ ನಾಗಿದ್ದು, ವಿಡಿಯೋ ಪ್ರಚೋದನಾಕಾರಿ ಯಾದ್ದರಿಂದ ಅದನ್ನು ಪ್ರಸಾರ ಮಾಡ ಬಾರದು ಅಥವಾ ಶೇರ್ ಮಾಡಬಾರದು. ಅದೀಗ ಸಾಮಾಜಿಕ ಮಾಡಿದರೆ ಅಂತಹವರ…

Read More

ಬೆಂಗಳೂರು : ವಿದೇಶದಿಂದ ಆಹಾರ ಪೊಟ್ಟಣ ಹಾಗೂ ಲಗೇಜ್ ಬ್ಯಾಗ್‌ಗಳಲ್ಲಿ ಡ್ರಗ್ಸ್‌ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದ ಮೂವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕವಾಗಿ ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಕಸ್ಟಮ್ಸ್ ಅಧಿಕಾರಿಗಳು ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳಿಂದ ಪ್ರತ್ಯೇಕವಾಗಿ ಒಟ್ಟು 3.8 ಕೋಟಿ ಮೌಲ್ಯದ 11 ಕೆಜಿ ಹೈಡೋ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ಹೇಳಿದೆ. ಬ್ಯಾಂಕಾಕ್‌ನಿಂದ ಕೆಐಎಗೆ ಸೋಮವಾರ ಬಂದಳಿದ ಪೆಡ್ಲ‌ರ್ ಅನ್ನು ಬಂಧಿಸಲಾಯಿತು. ಆತನ ಬಳಿ ಆಹಾರ ಪೊಟ್ಟಣಗಳಲ್ಲಿ ತುಂಬಿದ್ದ 63 ಲಕ್ಷ ಮೌಲ್ಯದ 1.8 ಕೆಜಿ ಹೈಡೋ ಗಾಂಜಾ ಜಪ್ತಿಯಾಗಿದೆ. ಅದೇ ರೀತಿ ಭಾನುವಾರ ಮತ್ತೊಬ್ಬನ ಲಗೇಜ್ ಬ್ಯಾಗ್‌ನಲ್ಲಿ 31.65 ಲಕ್ಷ ಬೆಲೆಯ ಹೈಡೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬ್ಯಾಕಾಂಕ್‌ನಿಂದ ಕೆಐಎಗೆ ಭಾನುವಾರ ಬಂದಿಳಿದ ಪ್ರಯಾಣಿಕನನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಲಾಯಿತು. ಆಗ ಆತನ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ 2.8 ಕೋಟಿ ಬೆಲೆಯ 8 ಕೆಜಿ…

Read More

ಮೈಸೂರು : ಮೈಸೂರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಜಿಯಾಉಲ್ಲಾ, ಜಾವಿದ್ ಅಹಮದ್, ಸೋಹೈಲ್ ಹಾಗೂ ನುಯೇಜ್ ಬಂಧಿತ ಆರೋಪಿಗಳು. 10.30 ಲಕ್ಷ ರೂಪಾಯಿ ಮೌಲ್ಯದ 103 ಗ್ರಾಂ ಎಂ ಡಿ ಎಂ ಎ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ಇನ್ನೊವ ಕಾರು ಮತ್ತು 5 ಮೊಬೈಲ್ ಗಳನ್ನು ಸಹ ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ‘ಕಾಂತಾರಾ’ ಪಾತ್ರವನ್ನು ಅವಹೇಳನ ಮಾಡಿದ್ದ ಆರೋಪದ ಮೇಲೆ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ಈ ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ, ಬಾಲಿವುಡ್ ನಟ ಆದರೆ ಈಗಲೇ ಕೇಸ್ ವಿಚಾರಣೆ ಮಾಡಬೇಕಾ ಎಂದು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಇದೀಗ ರಣವೀರ್ ಸಿಂಗ್ ಅರ್ಜಿಯ ಭವಿಷ್ಯ ಇಂದು ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ರಣವೀರ್ ಸಿಂಗ್ ಪರ ವಕೀಲರು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. “ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದಾರೆ, ಆದ್ದರಿಂದ ಇಂದೇ ವಿಚಾರಣೆ ನಡೆಸಿ” ಎಂದು ಕೋರಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಬಾಲಿವುಡ್ ನಟನಾದರೆ ಮಧ್ಯಾಹ್ನವೇ ವಿಚಾರಣೆ ನಡೆಸಬೇಕೇ? ಒಂದು ವೇಳೆ ಹಾಲಿವುಡ್ ನಟನಾದರೆ ಈಗಲೇ ವಿಚಾರಣೆ ನಡೆಸಬೇಕೆ?” ಎಂದು ಪ್ರಶ್ನಿಸುವ ಮೂಲಕ ವಿಶೇಷ ಆದ್ಯತೆ ನೀಡಲು ನಿರಾಕರಿಸಿದರು. ಅಂತಿಮವಾಗಿ ವಿಚಾರಣೆಯನ್ನು ನಾಳೆಗೆ…

Read More