Subscribe to Updates
Get the latest creative news from FooBar about art, design and business.
Author: kannadanewsnow05
ಮಡಿಕೇರಿ : ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಈ ಎರಡೂ ಸಂಸ್ಥೆಗಳು ಒಟ್ಟಾಗಿ ನವೆಂಬರ್ 01, 1985 ರಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲ ಸರ್ಕಾರಿ ನೌಕರರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸುತ್ತಿವೆ. ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲ ನಗರಸಭೆ, ಕ.ವಿ.ಪ್ರ.ನಿ.ನಿ., ಕೆ.ಎಸ್.ಆರ್.ಟಿ.ಸಿ., ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೊಂದಾಯಿಸಿಕೊಳ್ಳಬಹುದು. ಕರ್ನಾಟಕ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗಿನ ಅವರ ಕಚೇರಿ ಗೈರು ಹಾಜರಿಯನ್ನು ಅನ್ಯ ಕಾರ್ಯನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆ ಸಿಅಸುಇ 39:ಸೆಸೆವಿ: 87(1), ದಿನಾಂಕ 13ನೇ ಫೆಬ್ರವರಿ 1989 (ಕರ್ನಾಟಕ ರಾಜ್ಯಪತ್ರ ಭಾಗ-4, 2ಸಿ(1).ಮಾರ್ಚಿ 23, 1989,…
ಬೆಂಗಳೂರು : ನಾಳೆಯಿಂದ ಐದು ದಿನಗಳ ಕಾಲ ಸರ್ಕಾರಿ ನೌಕರರ ಉಪವಾಸ ಸತ್ಯಾಗ್ರಹ ವಿಚಾರವಾಗಿ, ವಿವಿಧ ಬೇಡಿಕೆ ಈಡೇರಿಸಿದ ಸರ್ಕಾರದ ವಿರುದ್ಧ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಮೊದಲ ಹಂತದಲ್ಲಿ ಸಾರಿಗೆ ನೌಕರರಿಂದ ಐದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 5ರಂದು ಸಾರಿಗೆ ಬಸ್ ಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು.ಹೈಕೋರ್ಟ್ ತಡಿಯಾಜ್ಞೆ ಹಿನ್ನೆಲೆಯಲ್ಲಿ ಮುಷ್ಕರ ಕೈ ಬಿಟ್ಟಿದ್ದರು. ಆದರೆ ಇಲ್ಲಿಯವರೆಗೆ ನೌಕರರ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಹೋರಾಟಕ್ಕೆ ಪ್ಲಾನ್ ಮಾಡಿಕೊಂಡಿದ್ದು, ರಾಜ್ಯದಲ್ಲಿ ಮತ್ತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಬಂದ್ ಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಐದು ದಿನ ಸಾರಿಗೆ ನೌಕರರಿಗೆ ರಜೆ ರದ್ದುಗೊಳಿಸಲಾಗಿದೆ. ಕೆಎಸ್ಆರ್ಟಿಸಿಯಿಂದ ನೌಕರರಿಗೆ ಖಡಕ್ ಆದೇಶ ನೀಡಿದೆ. ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಅಂತ ಘೋಷಣೆ ಮಾಡಿದ್ದು, ಜನರಿಗೆ ಸಮರ್ಪಕ ಸೇವೆ ಒದಗಿಸುವುದು ನಿಗಮದ ಕರ್ತವ್ಯವಾಗಿದೆ. ನಾಳೆಯಿಂದ ಅಕ್ಟೋಬರ್ 19…
ದಕ್ಷಿಣಕನ್ನಡ : ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೋಲೀಸರ ದಾಳಿ : ನಾಲ್ವರು ಅರೆಸ್ಟ್, ಇಬ್ಬರು ಅಪ್ರಾಪ್ತೆ ಬಾಲಕಿಯರ ರಕ್ಷಣೆ
ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ನಿಡ್ಡೋಡಿಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ದಾಳಿಯ ವೇಳೆ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ. ಮೂಡುಬಿದಿರೆ ನಿಡ್ಡೋಡಿ ನಿವಾಸಿ ಆಟೋ ಚಾಲಕ ಮಹೇಶ್, ಕಟೀಲು ನಿವಾಸಿ ಶ್ರೀಕಾಂತ್, ಯಜ್ನೇಶ್ ಹಾಗು ದಿಲೀಪ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಮಹೇಶ್ ಇಬ್ಬರು ಅಪ್ರಾಪ್ತೆ ಬಾಲಕಿಯರನ್ನ ಪುಸಲಾಯಿಸಿ ಕರೆತಂದಿದ್ದ. ಈ ವೇಳೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ.
ಚಾಮರಾಜನಗರ : ಚಾಮರಾಜನಗರದಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ ಇಬ್ಬರೂ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊತ್ತಲವಾಡಿಯ ಬಳಿ ಮೆಲ್ಲೂರಿನಲ್ಲಿ ಈ ಒಂದು ಘಟನೆ ಸಂಭವಿಸಿದೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಬಳಿಯ ಮೇಲ್ಲೂರು ಗ್ರಾಮದ ಸ್ವಾಮಿ (52) ಕೃಷ್ಣ ಶೆಟ್ಟಿ (50) ಮೃತ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಈ ಅವಘಡ ಸಂಭವಿಸಿದೆ. ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಹಿರಿಯ IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆಯ ಆದೇಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಆದೇಶ ರದ್ದುಗೊಳಿಸಿ CAT ಆದೇಶ ಹೊರಡಿಸಿದೆ. ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (CAT) ಈ ಆದೇಶ ಹೊರಡಿಸಿದೆ. ಸರ್ಕಾರ ಇಲಾಖೆ ಆದೇಶ ಪ್ರಶ್ನೆಸಿ ಅಲೋಕ್ ಕುಮಾರ್ ಸಿ ಎ ಟಿ ಮೊರೆ ಹೋಗಿದ್ದರು. ಇಬ್ಬರು ನ್ಯಾಯಮೂರ್ತಿಗಳ ನಡುವೆ ವಿಭಿನ್ನ ತೀರ್ಪು ಹಿನ್ನೆಲೆಯಲ್ಲಿ ಸಿಎಟಿ ಮುಖ್ಯಸ್ಥ ನ್ಯಾಯಮೂರ್ತಿ ಈ ಒಂದು ಪ್ರಕರಣ ಹೋಗಿತ್ತು. ಎರಡು ಕಡೆಯ ವಾದ ಮತ್ತು ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಿದ್ದು ಸರ್ಕಾರದ ಇಲಾಖೆ ಆದೇಶ ರದ್ದುಗೊಳಿಸಿದೆ. ಅಲೋಕ್ ಕುಮಾರ್ ಅವರಿಗೆ ಸಲಬೇಕಾದ ಅಭ್ಯರ್ಥಿ ಮ
ಯಾದಗಿರಿ : ರೌಡಿಶೀಟರ್ ಜೊತೆ ಪಿಎಸ್ಐ ಕೇಕ್ ಕಟ್ ಮಾಡಿದ ವಿಚಾರವಾಗಿ ನಾರಾಯಣಪುರ ಠಾಣೆ ಪಿಎಸ್ಐ ರಾಜಶೇಖರ ಸಸ್ಪೆಂಡ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆ ಪಿಎಸ್ಐ ರಾಜಶೇಖರ್ ನನ್ನ ಅಮಾನತುಗೊಳಿಸಲಾಗಿದೆ. ಅಮಾನತು ಮಾಡಿ ಯಾದಗಿರಿ ಎಸ್ ಪಿ ಪೃಥ್ವಿಕ್ ಶಂಕರ್ ಆದೇಶ ಹೊರಡಿಸಿದ್ದಾರೆ.ಸಭೆ ಇನ್ಸ್ಪೆಕ್ಟರ್ ಆಗಿ 10 ವರ್ಷ ಪೂರ್ಣಗೊಳಿಸಿದ್ದಕ್ಕೆ ಕೇಕ್ ಕಟ್ ಮಾಡಿದ್ದಾರೆ. ನಾರಾಯಣಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್ ನಾಗರಾಜ್ ಜೊತೆಗೆ ಪಿಎಸ್ಐ ರಾಜಶೇಖರ್ ಕೇಕ್ ಕಟ್ ಮಾಡಿರುವ ಹಿನ್ನೆಲೆಯಲ್ಲಿ ಇದೀಗ ಎಸ್ ಪಿ ಪೃಥ್ವಿ ಶಂಕರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಜಯಪುರ : ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತ ಘಟನೆ ವಿಜಯಪುರದಲ್ಲಿ ನಡೆದಿದ್ದು, ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನ ಬರ್ಬರ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಅಕ್ಷಯ್ ಜುಲಜುಲೆ ಬಂಧಿತ ಆರೋಪಿಯಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ತನಿಖೆಗಿಳಿದ ಪೊಲೀಸರು 5 ಜನ ಆರೋಪಿಗಳನ್ನ ಸೆರೆಹಿಡಿಯಲು ಕನ್ನೂರು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಅರೆಸ್ಟ್ ಮಾಡಿದ್ದಾರೆ. ಭಾನುವಾರ (ಅ.12) ರಾತ್ರಿ ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖುರೇಷಿ (24) ಎಂಬ ಇಬ್ಬರ ಹತ್ಯೆ ನಡೆದಿತ್ತು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಸದ್ಯ ಆರೋಪಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಸಹ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಔತಣಕೂಟ ಸಹ ಏರ್ಪಡಿಸಿದ್ದರು. ಹೀಗಾಗಿ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಡಿಸೇಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂದು ಸುಳಿವು ನೀಡಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಕುರಿತು ಸಚಿವ ರಾಮಲಿಂಗ ರೆಡ್ಡಿ ಇದೀಗ ಮಹಾತ್ವದ ಸುಳಿವು ಕೊಟ್ಟಿದ್ದಾರೆ ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಲಿದೆ. ನಮ್ಮಲ್ಲಿ 7 ರಿಂದ 8 ಹಿರಿಯ ಶಾಸಕರಿದ್ದಾರೆ ಅವರಿಗೂ ಕೂಡ ಅವಕಾಶ ಕೊಡಬೇಕಲ್ವಾ ಎಂದು ಬೆಂಗಳೂರಿನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು.
ಬೆಂಗಳೂರು : ಆರ್ ಎಸ್ ಎಸ್ ನಿಷೇಧದ ಕುರಿತಂತೆ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಬೆನ್ನೆಲ್ಲೆ ಪ್ರಿಯಾಂಕ ಖರ್ಗೆಗೆ ಬೆದರಿಕೆ ಕರೆ ಬರುತ್ತಿವೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಹೌದ ನನಗೆ ಗೊತ್ತಿಲ್ಲ ಈ ಗುರುತು ಪ್ರಿಯಾಂಕ ಖರ್ಗೆ ಕರೆದು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿ RSS ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ನನಗೆ ಅನೇಕ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿದ್ದು, ಇದಕ್ಕೆ ನಾನು ಯಾವುದಕ್ಕೂ ವಿಚಲಿತಲಾಗಲ್ಲ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಸನ : ಆರ್ ಎಸ್ ಎಸ್ ನಿಷೇಧದ ಕುರಿತು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಆರ್ ಎಸ್ ಎಸ್ ಇದು ಒಂದು ತಾಲಿಬಾನ್ ಸಂಘಟನೆ ಆಗಿದೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಸಿದ್ದರಾಮಯ್ಯ ಬಿಕೆ ಹರಿಪ್ರಸಾದ್ ತಾಲಿಬಾನ್ ಚೀಲಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಧಮ್, ತಾಕತ್ ಇದ್ದರೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಸೀದಿಗಳನ್ನು ತೆರವುಗೊಳಿಸಲಿ. ಆರ್ ಎಸ್ ಎಸ್ ನಿಷೇಧಿಸಲು ಕಾಂಗ್ರೆಸ್ ನವರಿಗೆ ಅಧಿಕಾರ ಇಲ್ಲ. ಆರ್ ಎಸ್ ಎಸ್ ಟಾರ್ಗೆಟ್ ಮಾಡಿ ಇವರು ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ಶಾಖೆಯಲ್ಲಿ ದೇಶ ಪ್ರೇಮದ ಬಗ್ಗೆ ಚರ್ಚೆ ಆಗುತ್ತೆ. ಪ್ರಿಯಾಂಕ ಖರ್ಗೆ ತಾಲಿಬಾನಿಗಳ ಬಚ್ಚಾ, ಸಿಎಂ ಸಿದ್ದರಾಮಯ್ಯ ಹರಿಪ್ರಸಾದ್ ತಾಲಿಬಾನ್ ಪರ ಮಾತನಾಡುವ ಚೇಲಾಗಳು. ಪ್ರಿಯಾಂಕ ಖರ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂಬಾಲಕರಲ್ಲ. ಸೋನಿಯಾ ಗಾಂಧಿ, ನೆಹರು ಹಿಂಬಾಲಕರು…














