Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ (Group A & B) ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸರ್ಕಾರ ಮತ್ತು ಆಯೋಗವು ಆಂತರಿಕ ತನಿಖೆ ಹಾಗೂ ಪರಿಶೀಲನೆಗೆ ಮುಂದಾಗಿದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ: ಅಕ್ರಮ ಆರೋಪದ ಹಿನ್ನೆಲೆ ಇತ್ತೀಚೆಗೆ ಪ್ರಕಟವಾದ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಈ ಕೆಳಗಿನ ಸಂಶಯಾಸ್ಪದ ಅಂಶಗಳು ಕಂಡುಬಂದಿವೆ ಎಂದು ಅಭ್ಯರ್ಥಿಗಳು ಮತ್ತು ವಿರೋಧ ಪಕ್ಷಗಳು ಆರೋಪಿಸಿವೆ: ಸರಣಿ ಸಂಖ್ಯೆಯ ಅಭ್ಯರ್ಥಿಗಳ ಆಯ್ಕೆ: ಒಂದೇ ಪರೀಕ್ಷಾ ಕೇಂದ್ರದ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಸತತ 10 ರಿಂದ 15 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅಕ್ರಮದ ಶಂಕೆ ಮೂಡಿಸಿದೆ. ಕುಟುಂಬ ಸದಸ್ಯರ ಆಯ್ಕೆ: ಕೆಲವು ಪ್ರಕರಣಗಳಲ್ಲಿ ಒಂದೇ ಕುಟುಂಬದ ಸದಸ್ಯರು ಒಟ್ಟಾಗಿ ಆಯ್ಕೆಯಾಗಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಪಾರದರ್ಶಕತೆಯ ಕೊರತೆ: ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲೋಪದೋಷಗಳು ನಡೆದಿವೆ ಮತ್ತು…
ಬೆಂಗಳೂರು : ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಇಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸೋದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಒಳಮೀಸಲಾತಿ ಹಂಚಿಕೆಯಲ್ಲಿ ಗೊಂದಲ ಆಗಿದೆ ಅಂತ ಸಮಸ್ಯೆ ಆಗಿದೆ. ರೋಸ್ಟರ್ ಮಾಡುವಾಗ ಒಂದು ವರ್ಗಕ್ಕೆ ಹೆಚ್ಚು ಮೀಸಲಾತಿ ಸಿಗುತ್ತದೆ ಅನ್ನೋದಿದೆ. ಈಗ ಮತ್ತೆ ಸಂಪುಟದಲ್ಲಿ ವಿಷಯದ ಮೇಲೆ ಚರ್ಚೆ ಆಗುತ್ತದೆ. ಅಂತಿಮವಾಗಿ ಸಂಪುಟದಲ್ಲಿ ಏನು ಚರ್ಚೆ ಆಗುತ್ತೋ ಅದರಂತೆ ಮುಂದುವರಿಯುತ್ತೇವೆ. ಎಸ್‌ಸಿ ಸಮುದಾಯಕ್ಕೆ 17% ಒಳಮೀಸಲಾತಿ ಕೊಡುವ ತೀರ್ಮಾನ ಆಗಿತ್ತು. ಆದರೆ ಅಲೆಮಾರಿಗಳಿಗೆ ಪ್ರತ್ಯೇಕ 1% ಕೊಡಿ ಅಂತ ಬೇಡಿಕೆ ಇದೆ. ಕೋರ್ಟಿನಲ್ಲೂ 56% ಮೀಸಲಾತಿಗೆ ತಡೆ ಕೊಡಲಾಗಿದೆ. ಇದೆಲ್ಲ ದೊಡ್ಡ ಚರ್ಚೆ ನಡೆಸಿ ತೀರ್ಮಾನ ಮಾಡಬೇಕಾದ ವಿಚಾರ. ಭಿನ್ನಾಭಿಪ್ರಾಯಗಳು ಇದ್ದೇ ಇರ್ತವೆ. ಏನೇ ಇದ್ದರೂ ಸಂಪುಟದಲ್ಲಿ ಚರ್ಚೆ ಮಾಡಿ ಎಲ್ಲರ ಹಿತಾಸಕ್ತಿ ನೋಡಿ ತೀರ್ಮಾನ ಆಗುತ್ತೆ ಅಂತ ಭರವಸೆ ವ್ಯಕ್ತಪಡಿಸಿದರು. ಇನ್ನು 56% ಮೀಸಲಾತಿಯಡಿಯೇ ನೇಮಕಾತಿ ಹಾಗೂ ಒಳಮೀಸಲಾತಿ ಕೊಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ವಿಚಾರ ಬಗ್ಗೆ…
ಗದಗ : ಗದಗದಲ್ಲಿ ಭೀಕರವಾದ ಅಪಘಾತ ಸಭವಿಸಿದ್ದು, ಗೂಡ್ಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಎಂಟು ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗದಗ ತಾಲೂಕಿನ ಹರ್ತಿ ಬಳಿ ನಡೆದ ಘಟನೆ ನಡೆದಿದೆ. ಮುತ್ತಪ್ಪ ಸುಟಗೇರಿ (35), ನಿಂಗಪ್ಪ ಯಳವತ್ತಿ (36) ಮೃತ ದುರ್ದೈವಿಗಳು. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಹಾಗೂ ಗಾಯಾಳುಗಳು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮಸ್ಥರು. ಒಟ್ಟು ಹತ್ತು ಮಂದಿ ಗೋಜನೂರು ಕಾಮಣ್ಣ ಮೆರವಣಿಗೆ ನೋಡಲು ಹೋಗಿದ್ದರು. ಗೋಜನೂರಿನಿಂದ ಹಿರೇಕೊಪ್ಪಕ್ಕೆ ಬರುವ ವೇಳೆ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ : ಈ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ನಡೆದಿದ್ದವು. ಅದರ ಬೆಲೆ ಇದೀಗ ವಿಜಯನಗರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕನೊಬ್ಬ ಬಾಳೆಹಣ್ಣಿನ ಆಸೆ ತೋರಿಸಿ ಶೌಚಾಲಯ ಸ್ವಚ್ಛಗೊಳಿಸಿರುವ ಘಟನೆ ವರದಿಯಾಗಿದೆ. ಹೌದು ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿರುವ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ವಿರುದ್ಧ ಗ್ರಾಮಸ್ಥರು ಈಗ ರೊಚ್ಚಿಗೆದ್ದಿದ್ದಾರೆ. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಅವರು ಇಬ್ಬರು ಪುಟ್ಟ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣಿನ ಆಸೆ ತೋರಿಸಿ, ಅವರಿಂದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯ ಯುವಕರು ಮತ್ತು ಸಾರ್ವಜನಿಕರು ತಕ್ಷಣವೇ ಶಿಕ್ಷಕನನ್ನು ಪ್ರಶ್ನಿಸಿದ್ದಾರೆ. ಯುವಕರು ತಪ್ಪು ಒಪ್ಪಿಕೊಳ್ಳುವಂತೆ ಶಿಕ್ಷಕನಿಗೆ ಒತ್ತಾಯಿಸಿದಾಗ, ಶಿಕ್ಷಕ ಉಮೇಶ್ ಉದ್ಧಟತನ ಮೆರೆದಿದ್ದಾರೆ. ನನ್ನನ್ನು ಪ್ರಶ್ನಿಸಲು ನೀವ್ಯಾರು? ನಿಮ್ಮ ಮೇಲೆ…
ಹಾವೇರಿ : ಕರ್ತವ್ಯ ಲೋಪ ಹಿನ್ನಲೆ ಹಾವೇರಿ ಜಿಲ್ಲೆಯ ಗುತ್ತಲ ಠಾಣೆ ಪಿಎಸ್ಐ ಬಸನಗೌಡ ಬಿರಾದರ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ. ರವಿಕಾಂತ್ ಗೌಡ ಆದೇಶ ಹೊರಡಿಸಿದ್ದಾರೆ. ಗುತ್ತಲ ಪಟ್ಟಣದಲ್ಲಿ ಮಟ್ಕಾ ರಾಜಾರೋಷವಾಗಿ ನಡೆಯುತ್ತಿತ್ತು. ಮೂರು ದಿನಗಳ ಹಿಂದೆ ಗುತ್ತಲ ಪಟ್ಟಣಕ್ಕೆ ರುದ್ರಪ್ಪ ಲವಾಣಿ ಭೇಟಿ ನೀಡಿದ್ದರು. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ರುದ್ರಪ್ಪ ಲಮಾಣಿ ಆಗಮಿಸಿದ್ದರು. ಆರೋಪಿಯನ್ನು ಹಿಡಿದು ಪೊಲೀಸರಿಗೆ ರುದ್ರಪ ಲಮಾಣಿ ಒಪ್ಪಿಸಿದ್ದಾರೆ. ಮಟ್ಕಾ ದಂದೇ ಕೋರರನ್ನು ಹಿಡಿಯಲು ಶಾಸಕರೇ ಬರಬೇಕಾಯಿತು ಎಂದು ಪೊಲೀಸರ ವಿರುದ್ಧ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಅಪ್ರಾಪ್ತ ವಯಸ್ಸಿನ ದಿವ್ಯಾಂಗ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ತ್ವರಿತ ಪೋಕ್ಸೋ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಮ್. ಪುಷ್ಪಲತಾ ಅವರು ಒಟ್ಟು 8 ಸಾಕ್ಷಿಗಳ ವಿಚಾರಣೆ ಮಾಡಿ, 58 ದಾಖಲೆಗಳು, 7 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಧರೇಪ್ಪ ಖನಸೆ ಮೇಲಿನ ಆಪಾದನೆ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು. ಜೊತೆಗೆ ಆರೋಪಿತನಿಗೆ ಕಲಂ: 6 ಪೋಕ್ಸೋ ಕಾಯ್ದೆ-2012 ರಡಿ 30 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, ಹಾಗೂ ಕಲಂ 3(1) (w) (i) (ii), 3(2)(v) ಎಸ್ಸಿ/ಎಸ್ಟಿ ಸೆಕ್ಷನ್ ಅಡಿಯಲ್ಲಿ 10 ವರ್ಷ ಕಾರಾಗೃಹ ಶಿಕ್ಷೆ, 50…
ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ ಬೇಡ ಅನಿಸುತ್ತಿತ್ತು. ಒಂದು ದಿನ ಆ ಊರಿಗೆ ಒಬ್ಬ ಗುರುಗಳು ಬಂದಿದ್ದಾರೆ ಎನ್ನುವ ಸುದ್ದಿ ಅವನಿಗೆ ಗೊತ್ತಾಯಿತು. ತನ್ನ ಸಮಸ್ಯೆಗೆ ಅವರ ಬಳಿ ಏನಾದರೂ ಪರಿಹಾರ ಇರಬಹುದಾ ಎಂದು ಯೋಚಿಸಿದ. ಯುವಕ ಗುರುಗಳ ಬಳಿಗೆ ಹೋಗಿ, ʻʻಜೀವನದಲ್ಲಿ ನನಗೆ ಹಲವಾರು ಸಮಸ್ಯೆಗಳಿವೆ. ಹಾಗಾಗಿ ಸದಾ ಬೇಸರದಲ್ಲಿ ಕಾಲ ಕಳೆಯುತ್ತಿದ್ದೇನೆ. ನಾನು ಎಲ್ಲರ ಹಾಗೆ ಸಂತೋಷವಾಗಿರೋದು ಹೇಗೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿʼʼ ಎಂದು ಕೇಳಿದ. ಗುರುಗಳು ಯುವಕ ಹೇಳಿದ್ದೆಲ್ಲವನ್ನೂ ಗಮನವಿಟ್ಟು ಕೇಳಿದರು. ಆದರೆ, ಏನೂ ಉತ್ತರ ನೀಡದೆ ಎದ್ದು ಒಳಗೆ ನಡೆದರು. ಯುವಕನಿಗೆ ಗೊಂದಲವಾಯಿತು. ʻʻನಾನೇನೋ ಇವರಾದರೂ ಪರಿಹಾರ ಹೇಳುತ್ತಾರೆ ಎಂದು ಇಲ್ಲಿಗೆ ಬಂದರೆ ಏನೂ ಹೇಳದೆ ಒಳಗೆ ಹೋಗಿಬಿಟ್ಟರಲ್ಲʼʼ ಅಂತ ಮನಸ್ಸಿನೊಳಗೇ ಹೇಳಿಕೊಂಡ. ಅಷ್ಟು ಹೊತ್ತಿಗೆ ಗುರುಗಳು ಹೊರಗೆ ಬಂದರು. ಅವರ ಒಂದು ಕೈಯಲ್ಲಿ ಒಂದು ಲೋಟ…
ಮಂಡ್ಯ : ಮಂಡ್ಯದ PWD ಕಚೇರಿಯ AEE ಸತೀಶ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಸತೀಶ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ದೂರು ಬಂದ ಹಿನ್ನೆಲೆ ಮಂಡ್ಯದ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸತೀಶ್‌ಗೆ ಸೇರಿದ ಮನೆ, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಾ ಕಾಲದಲ್ಲಿ ದಾಳಿ. ದಾಖಲೆಗಳನ್ನ ಪರಿಶೀಲಿಸುತ್ತಿರುವ ಪೊಲೀಸರು. ಸತೀಶ್ ಮಂಡ್ಯದ PWD ಕಚೇರಿಯ AEE ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತೀಶ್‌ಗೆ ಸೇರಿದ ಮನೆಗಳು, ಕಚೇರಿ, ಪತ್ನಿಯ ತವರು ಮನೆಗಳ ಮೇಲೆ ಏಕಾ ಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳನ್ನ ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರು. ಬಂದೀಗೌಡ ಬಡಾವಣೆಯಲ್ಲಿರುವ ಬಾಡಿಗೆ ಮನೆ, ಮರೀಗೌಡ ಬಡಾವಣೆಯಲ್ಲಿರುವ ತಂದೆ ಮನೆ, ಕಚೇರಿ, ಪತ್ನಿಯ ತವರು ಮನೆ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರು : ರಾಜ್ಯದಲ್ಲಿ ಇದೀಗ ಮತ್ತೊಂದು ದರೋಡೆ ನಡೆದಿದ್ದು, ನಾಲ್ಕು ಬೈಕ್ ನಲ್ಲಿ ಬಂದ ಗ್ಯಾಂಗ್ ಒಂದು ಸೀನಿಮಿಯ ರೀತಿಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ 20 ಲಕ್ಷ ದರೋಡೆ ಮಾಡಿದ್ದಾರೆ. ಬೆಂಗಳೂರಿನ ಯಲಹಂಕದಿಂದ ದೇವನಹಳ್ಳಿಗೆ ತೆರಳುವಾಗ ಈ ಒಂದು ಕೃತ್ಯ ನಡೆದಿದೆ. ನಾಲ್ಕು ಬೈಕ್ಗಳಲ್ಲಿ ಬಂದಿದ್ದ ಗ್ಯಾಂಗ್ನಿಂದ ದೊಣ್ಣೆಗಳಿಂದ ಹಲ್ಲೆ ನಡೆದಿದೆ. ಆಂಧ್ರಪ್ರದೇಶದ ವಿಶ್ವ ಪ್ರಸಾದ್ ಆತನ ಜೊತೆಗಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. 20 ಲಕ್ಷ ಹಣ ದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ದೇವನಹಳ್ಳಿಯ ವಿಜಯಪುರ ಪೊಲೀಸ್ರಿಂದ ಕಳ್ಳರ ಹುಡುಕಾಟ ನಡೆಯುತ್ತಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿ ವೆಂಕಟಗಿರಿ ಕೋಟೆಯ ರಾಷ್ಟ್ರೀಯ ಹೆದ್ದಾರಿ 47ರ ಬಳಿ ಇರುವ ಖಾಸಗಿ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು : ಪಾನಿಯಗಳಲ್ಲಿ ಹಾನಿಕಾರಕ ಅಂಶ ಪತ್ತೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಜ್ಯೂಸ್ ಮಾದರಿಯ ‘Buzz Ballz’ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ. ಈ ಒಂದು ತಂಪು ಪಾನೀಯದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ತಂಪು ಪಾನೀಯದಲ್ಲಿ ಅಧಿಕ ಸಕ್ಕರೆ ಮಟ್ಟ ಇದ್ದು, ಶೇಕಡ 15ರಷ್ಟು ಆಲ್ಕೋಹಾಲ್ ಅಂಶ ಇದೆ ಎಂದು ಆರೋಪ ಕೇಳಿ ಬಂದಿದೆ. ಟಿನ್ ರೂಪದಲ್ಲಿ ಈ ಒಂದು ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಶಾಲಾ ಕಾಲೇಜಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ವರದಿಯನ್ನು ಆಧರಿಸಿಕೊಂಡು ದೂರು ದಾಖಲಿಸಿಕೊಂಡಿದ್ದು, ಔಷದ ನಿಯಂತ್ರಣ ಇಲಾಖೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದ್ದು, ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಿದಂತೆ ಪತ್ರ ಬರೆದಿದೆ. Gemini said ‘ಬಜ್ ಬಾಲ್ಸ್’ (BuzzBallz) ಎಂಬ ರೆಡಿ-ಟು-ಡ್ರಿಂಕ್ ಕಾಕ್‌ಟೈಲ್ ಪಾನೀಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ…














