Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ಇದ್ದುಕೊಂಡೆ ಇದೀಗ ಮೊದಲ ಬಾರಿಗೆ ವಿಡಿಯೋ ಮೂಲಕ ಹೇಳಿಕೆಯನ್ನು ನೀಡಿದ್ದು, ರಾಹುಲ್ ಗಾಂಧಿ ನನ್ನ ವಿಷಯ ಬಹಿರಂಗ ವೇದಿಕೆಯಲ್ಲಿ ಪ್ರಚಾರ ಮಾಡಿದಾಗ ನಾನು ‘ಡಿಪ್ರೆಶನ್’ ಗೆ ಹೋಗಿದ್ದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ನ್ಯೂಸ್ ಚಾನೆಲ್ ನಲ್ಲಿ ನನ್ನ ಕುರಿತು ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದೆ. ಹಾಗಾಗಿ ನಮ್ಮ ವಕೀಲರ ಮೂಲಕ 7 ದಿನ ಸಮಯಾವಕಾಶ ಕೇಳಿದ್ದೆ. ಮಾರನೆಯ ದಿನ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ನಾಯಕರು ಬಹಿರಂಗ ವೇದಿಕೆಗಳಲ್ಲಿ ಈ ಒಂದು ವಿಚಾರ ಪ್ರಚಾರ ಮಾಡೋದಕ್ಕೆ ಶುರು ಮಾಡಿದರು. ಆಗ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಅದಾದ ನಂತರ ಹಾಸನದಲ್ಲಿ ಕೆಲವು ಶಕ್ತಿಗಳು ರಾಜಕೀಯ ಪಿತೂರಿ ಮಾಡಿದ್ದಾರೆ. ರಾಜಕೀಯವಾಗಿ ನಾನು ಹೇಗೆ ಬೆಳೆಯುತ್ತಿದ್ದೇನೆ ಎಂದು ನನ್ನನ್ನು ಉಗಿಸಲು ಎಲ್ಲಾ ರೀತಿಯಿಂದ ಅವರು ಪ್ರಯತ್ನ ಮಾಡಿದ್ದಾರೆ. ಈ ಒಂದು…

Read More

ಚಿಕ್ಕಮಗಳೂರು : ಕಳೆದ ಹಲವು ದಿನಗಳಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಜು ದುರಂತಗಳು ಸಂಭವಿಸಿದ್ದು, ಪರಿಣಾಮ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರು ಪಾಲಾಗಿರುವ ಘಟನೆ ನಗರದ ಹೊರವಲಯದ ಕೋಟೆ ಕೆರೆಯಲ್ಲಿ ನಡೆದಿದೆ. ಹೌದು ಮೃತ ಬಾಲಕನನ್ನು ಶಶಾಂಕ್ (13) ಎಂದು ಹೇಳಲಾಗುತ್ತಿದ್ದು, ಶಾಲೆಗೆ ರಜೆ ಇದ್ದ ಕಾರಣ ತನ್ನ ಮೂವರು ಸ್ನೇಹಿತರ ಜೊತೆ ಕೋಟೆ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದರು. ಕೆರೆಯಲ್ಲಿ ಊಳು ತುಂಬಿದ್ದ ಕಾರಣ ಬಾಲಕ ಶಶಾಂಕ್ ನ ಕಾಲು ಊಳಿನಲ್ಲಿ ಸಿಕ್ಕಿಕೊಂಡು ಬಾಲಕ ಮೇಲೆ ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ. ಮೃತ ಶಾಶಂಕ್ ತಾಯಿ ಸ್ಕೂಲ್ ಟೀಚರ್ ಆಗಿದ್ದಾರೆ.ಆದರೆ ಬಾಲಕ ಶಶಾಂಕ್ ಜೊತೆ ಹೋಗಿದ್ದ ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನ ಮೃತ ದೇಹವನ್ನು ಕೆರೆಯಿಂದ ಮೇಲೆ ತೆಗೆದಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಸ್ತೆ ಅಪಘಾತಗಳಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಬೈಕ್ ಗೆ ಲಾರಿ ಡಿಕ್ಕಿ : ಪ್ರಿಯಕರ ಸಾವು, ಯುವತಿಗೆ ಗಾಯ ಅದರಂತೆ ಇಂದು ಬೈಕ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಯುವತಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಟಿ.ಬೇಗೂರು ಬಳಿ ಅಪಘಾತ ಸಂಭವಿಸಿದೆ. ಯುವಕ ಮತ್ತು ಯುವತಿ ಟ್ರಿಪ್ ಮುಗಿಸಿ ವಾಪಸ್ ಬರುತ್ತಿದ್ದರು.ತುಮಕೂರಿನ ಮಂದಾರ ಗಿರಿಯಿಂದ ವಾಪಸ್ ಬರುವ ವೇಳೆ ಅಪಘಾತ ಸಂಭವಿಸಿದೆ. ಕೊಪ್ಪಳದ ಜೇಮ್ಸ್ (23) ಮೃತ ಯುವಕ ಎಂದು ಹೇಳಲಾಗುತ್ತಿದ್ದು, ಚೈತ್ರ (23)ಗೆ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಅಪಘಾತ ಬಳಿಕ…

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ಇರುವ ಪ್ರಜ್ವಲ್ ರೇವಣ್ಣ ಬರೋಬ್ಬರಿ ಒಂದು ತಿಂಗಳ ನಂತರ ಪ್ರತ್ಯಕ್ಷವಾಗಿದ್ದಾರೆ ವಿದೇಶದಲ್ಲಿ ಇದ್ದುಕೊಂಡು ವಿಡಿಯೋ ಮುಖಾಂತರ ಹೇಳಿಕೆ ನೀಡಿದ್ದು ಮೇಲ್ 31 ರಂದು 10 ಗಂಟೆಗೆ ಎಸ್ಐಟಿ ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ. ಇದೀಗ ಈ ಒಂದು ವಿಡಿಯೋ ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಚಿವರುಗಳು ಎಲ್ಲಾ ಪಕ್ಷದ ನಾಯಕರಗಳು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದು ತಿಳಿಸಿದ್ದಾರೆ. ತನ್ನ ವಿಡಿಯೋದಲ್ಲಿ ಪಜ್ವಲ್, ನನ್ನ ವಿರುದ್ಧ ಪಿತೂರಿ ನಡೆದಿದೆ, ಷಡ್ಯಂತ್ರವೊಂದಕ್ಕೆ ತಾನು ಬಲಿಯಾಗಿದ್ದೇನೆ ಅಂತ ಹೇಳಿರುವುದಕ್ಕೆ ಪ್ರತಿಕ್ರಯಿಸಿದ ಶಿವಕುಮಾರ್, ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಮಾತಾಡುವವರ ಬಾಯಿಗೆ ಬೀಗ ಹಾಕಲಾಗುತ್ತಾ ಅಂತ ಹೇಳಿದರು. ರಾಹುಲ್ ಗಾಂಧಿಯ ಹೆಸರು ಸಹ ಪ್ರಜ್ವಲ್ ಪ್ರಸ್ತಾಪ ಮಾಡಿದ್ದಾರೆ ಎಂದಾಗ ಶಿವಕುಮಾರ್ ಎಲ್ಲಾದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.

Read More

ಚಿಕ್ಕಬಳ್ಳಾಪುರ : ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ? ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ರೂ ಶಿಕ್ಷೆಯಾಗಲಿ. ಪೆನ್​ಡ್ರೈವ್ ಹಂಚಿದವರ ತಪ್ಪು ಇಲ್ಲ ಅಂತಾ ಸಿಎಂ ಹೇಳಿದ್ದಾರೆ. ಪೆನ್​ಡ್ರೈವ್ ಹಂಚಿದವರ ರಕ್ಷಣೆಗೆ ಇದ್ದೇವೆಂದು ಹೇಳಿದಂತಾಗಿದೆ. ನೊಂದವರಿಗೆ ಸರ್ಕಾರ ಏನು ಸಾಂತ್ವನ ಹೇಳ್ತಿದೆ ವಾಗ್ದಾಳಿ ಮಾಡಿದ್ದಾರೆ. ಒಂದು ಚುನಾವಣೆ ಗೆಲ್ಲಲು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಸಚಿವರು, ಅಧಿಕಾರಿಗಳೇ ನಿಮಗೂ ಅಕ್ಕ, ತಂಗಿ, ತಾಯಿ ಇಲ್ವಾ? ಪ್ರಜ್ವಲ್​ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಸರ್ಕಾರ ಸಿಕ್ಕಿ ಹಾಕಿಕೊಳ್ಳುತ್ತದೆ. ಪೆನ್​ಡ್ರೈವ್ ಹಂಚಿದವರು ಸಿಕ್ಕಿ ಬೀಳ್ತಾರೆ, ಅದಕ್ಕೆ ಸಿಬಿಐಗೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.

Read More

ತುಮಕೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ತಾನೇ ಶರಣಾದರು SIT ಅರೆಸ್ಟ್ ಮಾಡಿದರು ಬಂಧನ ಆಗೋದಂತೂ ಖಚಿತ ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತುಮಕೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಜ್ವಲ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಬ್ಲೂ ಕಾರ್ನರ್ ನೋಟಿಸ್, ವಾರಂಟ್ ಜಾರಿ ಹಿನ್ನೆಲೆ ಅರೆಸ್ಟ್ ಮಾಡಬೇಕು. ಎಸ್​ಐಟಿಯವರು ಯಾವ ರೀತಿ ಕ್ರಮ ತೆಗೆದುಕೊಳ್ಳತ್ತಾರೆಂದು ನೋಡಬೇಕು ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಇದೇ ತಿಂಗಳ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐಟಿ ಗೆ ಬರ್ತಿನಿ ಎಂದಿದ್ದಾರೆ. ಅವರಿಗೆ ಸಹಕಾರ ಮಾಡ್ತಿನಿ ಅಂತ ಹೇಳ್ತಿರೋದನ್ನ ನಾನು ಸ್ವಾಗತ ಮಾಡುತ್ತೇನೆ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೆ ಮಾತನಾಡುವ ಸಂದರ್ಭದಲ್ಲಿ ಅವರನ್ನ ಕರೆತರುವ ಪ್ರಯತ್ನವನ್ನ ಎಲ್ಲ ರೀತಿ ನಡೆಯುತ್ತಿತ್ತು. ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದಿದ್ದರು. ಸಿಬಿಐಗೆ ರಿಕ್ವೆಸ್ಟ್ ಮಾಡಿಕೊಂಡಿದ್ದೆವು. ಇಂಟರ್ ಪೋಲ್ ಗೆ…

Read More

ತುಮಕೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿದೇಶದಲ್ಲಿರುವ ಸಂಸದ ಪ್ರಜ್ವಲ ರೇವಣ್ಣ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಜಿ ಪರಮೇಶ್ವರ್ ಅವರು, ಪ್ರಜ್ವಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಲಿಲ್ಲ ಎಂದರು. ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸಿದ ಗೃಹ ಸಚಿವ ಪರಮೇಶ್ವರ್, ಪ್ರಜ್ವಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಲಿಲ್ಲ ಎಂದು ತುಮಕೂರಿನಲ್ಲಿ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು. ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುತ್ತೇವೆ ಎಂದು ಹೇಳಿದ್ದರೂ ಅಷ್ಟೇ ವಿದೇಶಾಂಗ ಇಲಾಖೆ ಸಚಿವರು ಪಾಸ್ ಪೋರ್ಟ್ ರದ್ದು ಮಾಡಿರಲಿಲ್ಲ ನಾವು ಬರೆದ ಪತ್ರಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತುಮಕೂರಿನಲ್ಲಿ ಗ್ರಹ ಇಲಾಖೆ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಇವತ್ತು ತಿಳಿಸಿದ್ದಾರೆ 31ರಂದು ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕಾರ ನೀಡುತ್ತೇನೆ ಎಂದು…

Read More

ಬೆಂಗಳೂರು : ಮೈಸೂರಿನ ಕೆ ಆರ್ ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣಗೂ ಕೂಡ ಬಂಧನದ ಭೀತಿ ಎದುರಾಗಿದ್ದರಿಂದ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಮೈಸೂರಿನ ಕೆ ಆರ್ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನದ ಭೀತಿಯಿಂದ ನಿರೀಕ್ಷಣ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿಸಲಾಯಿತು. ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ನೋಟಿಸ್ ನೀಡಲಾಗಿದೆ.ಯಾವ ನಿಯಮದರಿ ನೋಟಿಸ್ ನೀಡಿದ್ದಾರೆ ಎಂದು ಎಸ್ಐಟಿ ತಿಳಿಸಿಲ್ಲ. ಹೀಗಾಗಿ ಭವಾನಿ ರೇವಣ್ಣಗೂ ಬಂಧನದ ಭೀತಿ ಇರುವುದರಿಂದ ಭವಾನಿ ರೇವಣ್ಣ ಪರ ವಕೀಲರು ಮದನ್ ತರ ನಿರೀಕ್ಷಣ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆದೆ. ಆದ್ದರಿಂದ ಆಕ್ಷೇಪಣೆ ಸಲ್ಲಿಸುವಂತೆ ಎಸ್ಐಟಿ ಪೊಲೀಸರಿಗೆ ಇದೀಗ ಕೋರ್ಟ್ ನೋಟಿಸ್ ನೀಡಿದೆ. ಭವಾನಿ ನಿರೀಕ್ಷಣ ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಿದೆ.

Read More

ಬೆಂಗಳೂರು : ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಇದೀಗ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದೀಗ ಈ ಒಂದು ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಅವರು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅಲ್ಲಿ ಭವಾನಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ.

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ಇದ್ದು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಇದೀಗ ಪ್ರಜ್ವಲ್ ವಿಡಿಯೋ ಬಿಡುಗಡೆ ಮಾಡಿದ ಕ್ಷಣ ಎಸ್ ಐ ಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ವಿಡಿಯೋ ಬಿಟ್ಟಿದ್ದು ಎಲ್ಲಿಂದ ಯಾವ ದೇಶದಿಂದ ಈ ಕುರಿತು ಎಸ್ಐಟಿಯಿಂದ ಪರಿಶೀಲನೆ ಶುರು ಮಾಡಿದೆ.ಪ್ರಜ್ವಲ್ ರೇವಣ್ಣ ವಿಡಿಯೋ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್ ಗೆ ಮುಂದಾದ ಎಸ್ಐಟಿ, ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹಾಸನ ಸಂಸದ ಪ್ರಜ್ವಲ್ ವಿರುದ್ಧ ಹರೆಸ್ಟ್ ವಾರಂಟ್ ಕೂಡ ಇದೆ ಒಂದು ತಿಂಗಳಿನಿಂದ ಏರ್ಪೋರ್ಟ್ ನಲ್ಲಿ ಎಸ್ಐಟಿ ಠಿಕಾಣಿ ಹೂಡಿದ್ದಾರೆ. ಯಾವ ವಿಮಾನದಲ್ಲಿ ಬರುತ್ತಾನೆ ಎಂದು ಮಾಹಿತಿ ಪಡೆಯುವ ಎಸ್ ಐ ಟಿ ಅದಕ್ಕೂ ಮುಂಚೆ ಪ್ರಜ್ವಲ್ ನನ್ನು ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ವಶಕ್ಕೆ ಪಡೆದು ಇಮಿಗ್ರೇಶನ್ ಅಧಿಕಾರಿಗಳು ಎಸ್ಐಟಿಗೆ ಒಪ್ಪಿಸಲಿದ್ದಾರೆ.ಅದಾದ ಬಳಿಕ ಎಸ್ಐಟಿಯಿಂದ ಪ್ರಜ್ವಲ್…

Read More