Subscribe to Updates
Get the latest creative news from FooBar about art, design and business.
Author: kannadanewsnow05
ಮಂಡ್ಯ : ಹೆಣ್ಣು ಭ್ರೂಣ ಪತ್ತೆ & ಹತ್ಯೆ ದಂಧೆಗೆ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆಯಾಗಿದೆ. ಪ್ರತಿ ಸಾವಿರ ಗಂಡಿಗೆ 869 ಇದ್ದ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಕ್ರಮದಿಂದ ಲಿಂಗಾನುಪಾತ ಏರಿಕೆಯಾಗಿದೆ. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 930ಕ್ಕೆ ಏರಿಕೆಯಾಗಿದೆ. ಈ ವರ್ಷ 61 ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ. ಕೆಲ ವರ್ಷಗಳಿಂದ ಮಂಡ್ಯದಲ್ಲಿ ಭ್ರೂಣ ಹತ್ಯೆ ನಡೆಯುತ್ತಿತ್ತು. ಎಗ್ಗಿಲ್ಲದೇ ಸಾವಿರಾರು ಹೆಣ್ಣು ಭ್ರೂಣ ಹತ್ಯೆ ನಡೆಸಲಾಗಿತ್ತು. ಈ ಇಂದು ಪ್ರಕರಣ ಇಡೀ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಮಂಡ್ಯ ಪಾಂಡವಪುರ, ನಾಗಮಂಗಲದಲ್ಲಿ ಭ್ರೂಣ ಹತ್ಯೆ ನಡೆದಿತ್ತು. ಆರೋಪಿಗಳು ಬಂಧಿಸಿದ್ರು ಭ್ರೂಣ ಹತ್ಯೆ ಮುಂದುವರೆದಿತ್ತು.
ನವದೆಹಲಿ : ತಮ್ಮ ಆಸ್ತಿಗಳಿಂದ ವಸೂಲಿ ಮಾಡಲಾದ ಹಣದ ವಿವರಗಳನ್ನು ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ತಡೆಹಿಡಿದಿವೆ ಎಂದು ಆರೋಪಿಸಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಮಂಗಳವಾರ ಟೀಕಿಸಿದ್ದಾರೆ , ವಸೂಲಿ ಮಾಡಿದ ಹಣದ ಅಧಿಕೃತ ದೃಢೀಕರಣದ ಹೊರತಾಗಿಯೂ ಪೂರ್ಣ ಖಾತೆಯನ್ನು ಪ್ರಸ್ತುತಪಡಿಸದಿದ್ದಕ್ಕಾಗಿ ಅವರು ನಾಚಿಕೆಪಡಬೇಕು ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮೂಲಕ ಕಿಡಿ ಕಾರಿರುವ ಅವರು, ನನ್ನಿಂದ ಗ್ಯಾರಂಟರ್ ಆಗಿ ಹಣವನ್ನು ಪಡೆಯುತ್ತಿರುವ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು, ಕೇಂದ್ರ ಹಣಕಾಸು ಸಚಿವರು 14,100 ಕೋಟಿ ರೂ.ಗಳನ್ನು ಅದೇ ಬ್ಯಾಂಕುಗಳಿಗೆ ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರೂ, ವಸೂಲಾತಿಯ ಖಾತೆಯ ನಿಖರವಾದ ಹೇಳಿಕೆಯನ್ನು ಇನ್ನೂ ಸಲ್ಲಿಸದಿದ್ದಕ್ಕೆ ನಾಚಿಕೆಪಡಬೇಕು ಎಂದು ಬರೆದಿದ್ದಾರೆ. https://twitter.com/TheVijayMallya/status/1977875655904874769?t=Xbl5dhv3xi5RaejT19Zb9A&s=19
ಬೆಂಗಳೂರು : ಬೆಂಗಳೂರು ನಗರದಲ್ಲಿ ಈ ಹಿಂದೆ ಸಾಕಷ್ಟು ರೋಡ್ ರೇಜ್ ಪ್ರಕರಣಗಳು ನಡೆದಿದ್ದು, ಎಷ್ಟೇ ನಿಯಂತ್ರಣ ಕ್ರಮ ಕೈಗೊಂಡರು ಸಹ ಈ ರೋಡ್ ರೇಜ್ ಪ್ರಕರಣಗಳು ನಿಲ್ಲುತ್ತಿಲ್ಲ. ಇದೀಗ ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಬುಲೆಟ್ ಬೈಕ್ ನಲ್ಲಿ ಬಂದ ಬೈಕ್ ಸವಾರ ದೌಲತ್ತು ಮೆರೆದಿದ್ದಾನೆ. ಬುಲೆಟ್ ಬೈಕ್ ನಲ್ಲಿ ಬಂದಂತಹ ಬೈಕ್ ಸವಾರ ಸಡನ್ ಆಗಿ ಅಡ್ಡ ಬಂದ ಅಂತ ಪ್ರಶ್ನಿಸಿದಕ್ಕೆ ಅಶ್ಲೀಲವಾಗಿ ಬೈದಿದ್ದಾನೆ. ಬೆಂಗಳೂರಿನ ಕುರುಬ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಸಡನ್ ಆಗಿ ಅಡ್ಡ ಬಂದಿದ್ದಕ್ಕೆ ಶರತ್ ಎನ್ನುವವರು ಪ್ರಶ್ನಿಸಿದ್ದಾರೆ. ಈ ವೇಳೆ ಬುಲೆಟ್ ನಲ್ಲಿ ಬಂದಂತಹ ವ್ಯಕ್ತಿ ಶರತ್ ಅವರಿಗೆ ಅಶ್ಲೀಲವಾಗಿ ನಿಂದನೆ ಮಾಡಿ ಬೈದಿದ್ದಾನೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ಯುವ ಜನತೆ ಹೆಚ್ಚಾಗಿ ಮಾದಕ ವಸ್ತು ಗಳಿಗೆ ದಾಸರಾಗುತ್ತಿದ್ದಾರೆ ಅದರಲ್ಲೂ ಬೆಂಗಳೂರು ಹೈದರಾಬಾದ್ ಮುಂಬೈ, ಕಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಡ್ರಗ್ಸ್ ಗಾಂಜಾ ಸಿರಿದಂತೆ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿರುವ ಈ ಸಿಗರೇಟ್ ಕೂಡ ಯುವ ಜನತೆಯನ್ನು ಹಾಳು ಮಾಡುತ್ತಿದೆ. ಇದೀಗ ಈ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಆತಂಕಕಾರಿ ವಿಚಾರ ಬಹಿರಂಗಗೊಳಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಪ್ರಕಾರ, ವಿಶ್ವಾದ್ಯಂತ 13 ರಿಂದ 15 ವರ್ಷ ವಯಸ್ಸಿನ ಸುಮಾರು 15 ಲಕ್ಷ ಮಕ್ಕಳು ಇ-ಸಿಗರೇಟ್ ಬಳಸುತ್ತಿದ್ದಾರೆ. ಇದು ವಯಸ್ಕರಿಗಿಂತ 9% ಹೆಚ್ಚಾಗಿದೆ. ಒಟ್ಟಾರೆಯಾಗಿ 91 ಲಕ್ಷ ಪುರುಷರು, 56 ಲಕ್ಷ ಹುಡುಗಿಯರು ಇ-ಸಿಗರೇಟ್ ಸೇದುತ್ತಿದ್ದಾರೆ. ಅಮೆರಿಕದಲ್ಲಿ 40% ಜನರು ತಿಂಗಳಿಗೆ 20 ಅಥವಾ ಅದಕ್ಕಿಂತಲೂ ಹೆಚ್ಚಿನ ದಿನಗಳಲ್ಲಿ ಇ-ಸಿಗರೇಟ್ ಬಳಸುತ್ತಿದ್ದಾರೆ. ಇ-ಸಿರೇಟ್ಗಳು ಸಾಧಾರಣ ಸಿಗರೇಟ್ಗಳಿಗಿಂತ ಭಿನ್ನವಾಗಿದೆ. ಇದು ತಂಬಾಕು ಸುಡುವುದರಿಂದ ಹೊರಹೊಮ್ಮುವ ಹಾನಿಕಾರಕ ಹೊಗೆಯಿಂದ ಕೂಡಿರುವುದಿಲ್ಲವಾದರೂ ನಿಕೋಟಿನ್ ಅಂಶವಿರುವುದರಿಂದ ಚಟ, ವ್ಯಸನಗಳಿಗೆ…
ಬೆಂಗಳೂರು : ಸೈಟ್ ಕೊಡಿಸುವುದಾಗಿ ಕಿರುತೆರೆ ನಟ ನಟಿಯರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ, ಬಿಲ್ಡರ್ ಭಗೀರಥ ಸೇರಿದಂತೆ ಐದು ಜನರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರಿಗೆ ಬಿಲ್ಡರ್ ಭಗೀರಥ ಸೇರಿದಂತೆ ಐವರು ಆರೋಪಿಗಳು ಹಣ ಪಡೆದು ಸೈಟ್ ಕೊಡಿಸುವುದಾಗಿ ವಂಚನೆ ಎಸಗಿದ್ದಾರೆ. ಸುಮಾರು 139 ಕಿರುತೆರೆ ನಟ, ನಟಿಯರಿಗೆ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಸೋಸಿಯೇಷನ್ ಸದಸ್ಯ ಭಾವನಾ ಬೆಳಗೆರೆ ದೂರು ನೀಡಿದ್ದರು. ಸುಮಾರು 1.6 ಆರು ಕೋಟಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರು ನೀಡಿದ್ದಾರೆ. ಬಿಲ್ಡರ್ ಭಗೀರಥ, ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ ಹಾಗೂ ಉಮಾಕಾಂತ ಎಂಬುವವರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಕೆ ಟಿ ವಿ ಎ ನಲ್ಲಿ ಸೈಟ್ ಕಮಿಟಿ ಸದಸ್ಯ ಆಗಿದ್ದ ಸಂಜೀವ್ ತಗಡುರು 2015ರಲ್ಲಿ ಸೈಟ್ ಕೊಡಿಸುವುದಾಗಿ ಬಿಲ್ಡರ್ ಜೊತೆಗೆ ವ್ಯವಹಾರ ಮಾಡಿದ್ದರು. ಇದೀಗ…
ಬಾಗಲಕೋಟೆ : ರಾಜ್ಯದಲ್ಲಿ ನವೆಂಬರ್ ನಲ್ಲಿ ಕ್ರಾಂತಿ ಆಗುವ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು ಇದರ ಮಧ್ಯೆ ಸಿಎಂ ಬದಲಾವಣೆ ಕುರಿತು ಕೂಡ ಹಲವು ಚರ್ಚೆಗಳು ನಡೆಯುತ್ತಿವೆ. ಇನ್ನು ಸಿಎಂ ಬದ್ಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಶಾಸಕರ ಬೆಂಬಲ ಮತ್ತು ಕಾಂಗ್ರೆಸ್ ಹೈಕಮಾಂಡ್ ನ ಆಶೀರ್ವಾದವಿಲ್ಲದೇ ಯಾರೂ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಿರ್ಧಾರದ ಆಧಾರದ ಮೇಲೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬಹುದು. ಇದಕ್ಕೆ ಶಾಸಕರ ಬೆಂಬಲದ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, “ನಾನು ಅಂತಹ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಹೈಕಮಾಂಡ್ ಎಂದರೆ ಹೈಕಮಾಂಡ್. ಶಾಸಕರು ಮತ್ತು ಹೈಕಮಾಂಡ್ ಎರಡೂ ಬಹಳ ಮುಖ್ಯ. ಶಾಸಕರ ಅಭಿಪ್ರಾಯವಿಲ್ಲದೆ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಶಾಸಕರ ಬಹುಮತ ಇದ್ದರೆ ಮಾತ್ರ ಒಬ್ಬರು ಸಿಎಂ ಆಗಬಹುದು ಎಂದರು.
ಬೆಳಗಾವಿ : ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಭರ್ಜರಿ ಗೆಲುವು ಸಾಧಿಸಿದ್ದು, ಬೆಳಗಾವಿಯಲ್ಲಿ ಮತ್ತೆ ಪಾರುಪತ್ಯ ಮೆರೆದಿದ್ದಾರೆ. ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಜಾರಕಿಹೊಳಿ ಬಣದ ಒಂಬತ್ತು ಜನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ನಿರ್ದೇಶಕ ಸ್ಥಾನಗಳ ಪೈಕಿ 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. 2 ನಾಮಪತ್ರ ವಾಪಸ್ ಪಡಿಸುವಲ್ಲಿ ಬಾಲಚಂದ್ರ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಕಾಗವಾಡದಿಂದ ರಾಜುಕಾಗೆ, ಚಿಕ್ಕೋಡಿ ಇಂದ ಗಣೇಶ ಹುಕ್ಕೇರಿ, ಯರಗಟ್ಟಿ ತಾಲೂಕಿನಿಂದ ವಿಶ್ವಾಸ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಗೋಕಾಕ್ ನಿಂದ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ, ಬೆಳಗಾವಿ ತಾಲೂಕಿನಿಂದ ಸಚಿವ ಸತೀಶ್ ಪುತ್ರ ರಾಹುಲ್ ಜಾರಕಿಹೊಳಿ ಆಯ್ಕೆಯಾಗಿದ್ದು, ಮೂಡಲಗಿಯಿಂದ ನೀಲಕಂಠ, ಸವದತ್ತಿಯಿಂದ ವಿರುಪಾಕ್ಷ ಮಾಮನಿ, ಖಾನಾಪುರ ತಾಲೂಕಿನಿಂದ ಅರವಿಂದ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ವಿರೋಧವಾಗಿ ಆಯ್ಕೆಯಾಗಿದ್ದಾರೆ ಜಾರಕಿಹೊಳಿ ಬಣದ ವಿರುದ್ಧ…
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಗಡಿಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಶಿವರಾಜ್ ಗೋವಿಂದರಾಜ ಅವರಿದ್ದ ಪೀಠ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಮಹೇಶ ತಿಮರೋಡಿ ಗಡಿಪಾರು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಇಂದು ಹೈಕೋರ್ಟ್ ಅಲ್ಲಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಪೀಠ ಆದೇಶವನ್ನು ಕಾಯ್ದಿರಿಸಿದ್ದು, ಹೈಕೋರ್ಟ್ ಆದೇಶದ ವರೆಗೆ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ. ಮುಂದಿನ ಆದೇಶದ ವರೆಗೆ ಗಡಿಪಾರು ಜಾರಿಗೊಳಿಸಿದಂತೆ ಸೂಚನೆ ನೀಡಿದರು. ಈ ಮೂಲಕ ಮಹೇಶ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಶಾಸಕರ ಅಭಿಪ್ರಾಯ ಇಲ್ಲದೆ ‘ಸಿಎಂ’ ಆಗಲು ಸಾಧ್ಯವಿಲ್ಲ : ಪರೋಕ್ಷವಾಗಿ ಡಿಕೆ ಶಿವಕುಮಾರ್ ‘CM’ ಆಗಲ್ಲ ಎಂದ ಸಿದ್ದರಾಮಯ್ಯ!
ಬಾಗಲಕೋಟೆ : ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಶಾಸಕರ ಅಭಿಪ್ರಾಯ ಇಲ್ಲದೆ ಮುಖ್ಯಮಂತ್ರಿ ಆಗಲು ಆಗಲ್ಲ. ಬಹುಮತ ಇದಾರೆ ಮಾತ್ರ ಸಿಎಂ ಆಗೋಕೆ ಸಾಧ್ಯ. ಮತ್ತು ಹೈಕಮಾಂಡ್ ಆಶೀರ್ವಾದವು ಇರಬೇಕು ಶಾಸಕರ ಅಭಿಪ್ರಾಯ ಮತ್ತು ಹೈಕಮಾಂಡ್ ಎರಡೂ ಮುಖ್ಯವಾಗಿವೆ ಎಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಮ್ಮ ಶಾಸಕರು ಹಾಗೂ ಹೈಕಮಾಂಡ್ ಇಬ್ಬರು ಮುಖ್ಯವಾಗಿದ್ದಾರೆ. ಶಾಸಕರ ಅಭಿಪ್ರಾಯವಿಲ್ಲದೆ ಯಾರು ಮುಖ್ಯಮಂತ್ರಿ ಆಗಕ್ಕೆ ಆಗಲ್ಲ. ಬಹುಮತ ಇದ್ದರೆ ಮಾತ್ರ ಸಿಎಂ ಆಗೋಕೆ ಸಾಧ್ಯ. ಅಲ್ಲದೆ ಹೈಕಮಾಂಡ್ ಆಶೀರ್ವಾದ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಆ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಿದೆ.
ಬಾಗಲಕೋಟೆ : ನಮ್ಮ ದೇಶದಲ್ಲಿ ಅನೇಕ ಧರ್ಮ ಜಾತಿಗಳಿವೆ.ನಾವು ಜಾತಿ ಧರ್ಮ ಮಾಡಿದ್ದಲ್ಲ. ಮೊದಲಿಂದಲೂ ಬೆಳೆದು ಬಂದಿದೆ ನಾವು ಬೇರೆ ಜಾತಿಯವರನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು ಇದನ್ನು ಮೂಲಭೂತವಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದ ಸರ್ವಧರ್ಮ ಮಹಾಸಂಗಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಹಿಂದೂ ಧರ್ಮದವರ ರಕ್ತ ಇಸ್ಲಾಂ ಧರ್ಮದವರ ರಕ್ತ ಬೇರೆ ಇರುತ್ತಾ? ಅನಾರೋಗ್ಯ ಇದ್ದಾಗ ಯಾವುದಾದರೂ ರಕ್ತ ಕೊಡ್ರಪ್ಪ ಅಂತ ಹೇಳುತ್ತೇವೆ. ಕಾಯಿಲೆ ವಾಸಿಯಾದಾಗ ನಿನ್ನದು ಯಾವ ಜಾತಿ ಅಂತ ಕೇಳುತ್ತೇವೆ. ಇದು ನ್ಯಾಯಾನ? ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಹೇಳಿದರು ಇದನ್ನು ತಿಳಿದುಕೊಂಡರೆ ಸಾಕು ಅಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ನಾವು ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ನಾನು ಕುರುಬರ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದ್ನಾ? ಇಲ್ಲ ನಮ್ಮ ಅಪ್ಪ ಅವ್ವ ಕುರುಬರಾಗಿದ್ದರು. ಅದಕ್ಕೆ ನಾನು ಕುರುಬನಾಗಿದ್ದೇನೆ ಪ್ರಾಣಿಗಳನ್ನು…














