Author: kannadanewsnow05

ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಹೃದಯಘಾತದಿಂದ ಸಾವನಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅದರಲ್ಲೂ ಯುವಜನತೆಯಲ್ಲಿ ಈ ಒಂದು ಹೃದಯಘಾತ ಹೆಚ್ಚಾಗಿ ಕಂಡುಬರುತ್ತಿದೆ. ಇದೀಗ ಇಂದು ರಾಜ್ಯದಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರು ಬಲಿಯಾಗಿದ್ದಾರೆ. ಹೌದು ರಾಜ್ಯದಲ್ಲಿ ಇಂದು ಒಂದೇ ದಿನ ಹೃದಯಘಾತಕ್ಕೆ ಮೂವರು ಬಳಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಮಧ್ಯ ವಯಸ್ಕರು ಇಂದು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮಗ್ಗೆ ಗ್ರಾಮದಿಂದ ಆಲೂರಿಗೆ ನೌಕರ ಬಿ ಆರ್ ನಾಗಪ್ಪ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನಲ್ಲಿ ಹೃದಯಾಘಾತದಿಂದ ನಾಗಪ್ಪ (55) ಮೃತಪಟ್ಟಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಮಾಜಿ ನಗರಸಭೆ ಸದಸ್ಯ ನೀಲಕಂಠಪ್ಪ (58) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮನೆಯಲ್ಲಿ ಹೃದಯಘಾತದಿಂದ ನೀಲಕಂಠಪ್ಪ ಸಾವನ್ನಪ್ಪಿದ್ದಾರೆ ಹಾಸನ ನಗರದ ಅರಳೆಪೇಟೆ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಇನ್ನು ಚಿಕ್ಕಬಳ್ಳಾಪುರದಲ್ಲಿ ಜಮೀನು ವಿಚಾರವಾಗಿ ಮಗನ ಮೇಲೆ ವ್ಯಕ್ತಿ ಒಬ್ಬ ಮಚ್ಚಿನಿಂದ ಭೀಕರವಾಗಿ…

Read More

ಗುಜರಾತ್ : ಗುಜರಾತ್ ನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ವಿಮಾನ ಒಂದು ಪತನವಾಗಿದೆ. ಟೇಕಾಫ್ ಆಗುವಾಗ ವಿಮಾನ ತಾಂತ್ರಿಕ ದೋಷದಿಂದ ಪತನವಾಗಿದೆ ಎಂದು ತಿಳಿದುಬಂದಿದೆ. ಹೌದು ಅಹಮದಾಬಾದ್ ನಿಂದ ಏರ್ ಇಂಡಿಯಾ ವಿಮಾನ ಲಂಡನ್ ಗೆ ತೆರಳುತ್ತಿತ್ತು. ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಗಾಯಾಳುಗಳನ್ನು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್ಪೋರ್ಟ್ ಬಳಿ ವಿಮಾನ ಹೊತ್ತಿ ಉರಿಯುತ್ತಿದೆ. ವಿಮಾನದಲ್ಲಿ 135 ಪ್ರಯಾಣಿಕರು ಇರುವ ಮಾಹಿತಿ ಇದೆ. ವಿಮಾನದಲ್ಲಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 135 ಪ್ರಯಾಣಿಕರು ಇರುವ ಮಾಹಿತಿ ಇದೆ. ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ಈ ಒಂದು ದುರಂತ ಸಂಭವಿಸಿದ್ದು, ಸಾವು ನೋವಿನ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಒಂದು ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಯಿತು. ಹೌದು ಜಾತಿಗಣತಿ ಮರು ಸಮೀಕ್ಷೆಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಇದೀಗ ಒಪ್ಪಿಗೆ ನೀಡಿದೆ. ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದಾಗ ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆ ನಡೆಸಿ ಎಂದು ಸೂಚನೆ ನೀಡಿತು ಈ ಹಿನ್ನೆಲೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಯಾಬಿನೆಟ್ ನಲ್ಲಿ ಜಾತಿಗಣತಿ ಸಮೀಕ್ಷೆ ಕುರಿತು…

Read More

ಹಾಸನ : ಇತ್ತೀಚಿಗೆ ಹೃದಯಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೃದಯಾಘಾರದಿಂದ ಸಾವನಪುತ್ತಿದ್ದಾರೆ. ಇದೀಗ ಹಾಸನದಲ್ಲಿ ಒಂದೇ ದಿನ ಇಬ್ಬರು ಮಧ್ಯವಯಸ್ಕಿನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೌದು ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಮಧ್ಯ ವಯಸ್ಕರು ಇಂದು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮಗ್ಗೆ ಗ್ರಾಮದಿಂದ ಆಲೂರಿಗೆ ನೌಕರ ಬಿ ಆರ್ ನಾಗಪ್ಪ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನಲ್ಲಿ ಹೃದಯಾಘಾತದಿಂದ ನಾಗಪ್ಪ (55) ಮೃತಪಟ್ಟಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಮಾಜಿ ನಗರಸಭೆ ಸದಸ್ಯ ನೀಲಕಂಠಪ್ಪ (58) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮನೆಯಲ್ಲಿ ಹೃದಯಘಾತದಿಂದ ನೀಲಕಂಠಪ್ಪ ಸಾವನ್ನಪ್ಪಿದ್ದಾರೆ ಹಾಸನ ನಗರದ ಅರಳೆಪೇಟೆ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.

Read More

ಬೆಂಗಳೂರು : ರಾಜ್ಯದ ಇತಿಹಾಸದಲ್ಲಿ ಮತ್ತೊಂದು ಬಹುದೊಡ್ಡ ಹಗರಣ ಬಯಲಿಗೆ ಬಂದಿದ್ದು, ಸಾಕ್ಷಿ ಸಮೇತ ಇಬ್ಬರು ಐಪಿಎಸ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಇದು ಬೇಲಿಯೇ ಇದು ಕಥೆಯಾಗಿದೆ. ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕರ್ತವ್ಯವನ್ನು ದಂಧೆ ಮಾಡಿಕೊಂಡಿದ್ದರು. ಸರ್ಕಾರಿ ಅಧಿಕಾರಿಗಳಿಗೆ ದಾಳಿ ಮಾಡುವ ಬೆದರಿಕೆ ವಡ್ಡಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಹೌದು ಲೋಕಾಯುಕ್ತ ದಾಳಿ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಏಜೆಂಟ್ಗಳ ಮೂಲಕ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಏಜೆಂಟ್ ಗಳನ್ನು ಬಿಟ್ಟು ಸರ್ಕಾರಿ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಾನ್ಸ್ಟೇಬಲ್ ಗಳನ್ನು ಬಿಟ್ಟು ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮತ್ತೊಂದು ಅತಿ ದೊಡ್ಡ ಹಗರಣ ಇದಾಗಿದೆ. ಇನ್ನು ವಸೂಲಿ ಮಾಡಿದ್ದ ಹಣವನ್ನು ಕೋಟಿ ಕೋಟಿ ಹಣವನ್ನು ಬಿಟ್ ಕಾಯಿನ್ ಹೂಡಿಕೆ ಮಾಡಿದ್ದಾರೆ.…

Read More

ನವದೆಹಲಿ : 2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 33% ಮೀಸಲು ನೀಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಮುಂದಿನ 2029 ಎಂಪಿ ಚುನಾವಣೆಯಲ್ಲಿ 33% ರಷ್ಟು ಮಹಿಳೆಯರಿಗೆ ಮೀಸಲಾತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೌದು 2029 ರ ಸಾರ್ವತ್ರಿಕ ಚುನಾವಣೆಯಿಂದ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ಜಾರಿಗೆ ತರಲು ಕೇಂದ್ರವು ಸಿದ್ಧತೆ ನಡೆಸುತ್ತಿದೆ. ರಾಷ್ಟ್ರೀಯ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆಯಾದ ನಾರಿ ಶಕ್ತಿ ವಂದನ ಕಾಯ್ದೆಯ ಅಂಗೀಕಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ನಾರಿ ಶಕ್ತಿ ವಂದನ ಅಧಿನಿಯಮವನ್ನು ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 2023 ರಲ್ಲಿ ಅಂಗೀಕರಿಸಲಾದ ನಾರಿ ಶಕ್ತಿ ವಂದನ ಅಧಿನಿಯಂ ಎಂಬ ಸಂವಿಧಾನ…

Read More

ಬೆಳಗಾವಿ : ಕಳೆದ ಏಪ್ರಿಲ್ 28ರಂದು ಕೇಂದ್ರ ಸರ್ಕಾರ ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜನೆ ಮಾಡಿತ್ತು. ಈ ಒಂದು ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಾಗ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಈ ವೇಳೆ ಎಸ್ ಪಿ ನಾರಾಯಣ ಭರಮನಿಯವರನ್ನು ವೇದಿಕೆಗೆ ಕರೆದು ಸಿಎಂ ಸಿದ್ದರಾಮಯ್ಯ ಕೈ ಎತ್ತಿ ಹೊಡೆಯಲು ಮುಂದಾಗಿದ್ದರು. ಈ ಒಂದು ಘಟನೆಯನ್ನು ಖಂಡಿಸಿ ಇದೀಗ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಹೌದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಏ.28ರಂದು ನಗರದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆದಿತ್ತು. ಭದ್ರತೆಗೆ ಧಾರವಾಡದ ಎಎಸ್ಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವಾಗ, ಬಿಜೆಪಿ ಕಾರ್ಯಕರ್ತೆಯರು ನುಗ್ಗಿ ಪ್ರತಿಭಟಿಸಿದರು. ಗದ್ದಲ ಎಬ್ಬಿಸಿದರು. ಇದರಿಂದ ಕೋಪಗೊಂಡ ಸಿ.ಎಂ ಸ್ಥಳದಲ್ಲಿದ್ದ ನಾರಾಯಣ…

Read More

ಬೆಂಗಳೂರು : ರಾಜ್ಯ ಸರ್ಕಾರದಿಂದ ಜಾತಿಗಣತಿ ಮರು ಸಮೀಕ್ಷೆ ವಿಚಾರವಾಗಿ ಬೆಂಗಳೂರಿನಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದು, ಹೈಕಮಾಂಡ್ ಮರುಪರಿಶೀಲನೆ ಮಾಡಬೇಕು ಎಂದು ಸೂಚಿಸಿದೆ. ಕೆಲ ಸಮುದಾಯಗಳು ನಮ್ಮ ಜನಸಂಖ್ಯೆ ದೊಡ್ಡದಿದೆ ಅಂದಿದ್ದಾರೆ ಅವರು ಜಾತಿಗ ನೀತಿ ಸರ್ವೆಗೆ ಆತಂಕ ವ್ಯಕ್ತಪಡಿಸಿಲ್ಲ. ಜಾತಿಗಣತಿ ಮರು ಸರ್ವೆ ಮಾಡಿ ವರದಿ ಜಾರಿಗೊಳಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಮರು ಸರ್ವೆ ಮಾಡಿ ವರದಿ ಜಾರಿಗೊಳಿಸುತ್ತೇವೆ. ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ಏನು ತಪ್ಪಿದೆ? ಇನ್ನು ಕಾಲ್ತುಳಿತ ಕೇಸ್ ಡೈವರ್ಟ್ ಗೊಳಿಸಲು ಜಾತಿ ಗಣತಿ ಚರ್ಚೆ ಆರೋಪದ ಕುರಿತಾಗಿ ಮಾತನಾಡಿದ ಅವರು ಪಹಲ್ಗಾಂ ದಾಳಿ ಆದಾಗ ಜಾದಿಗಣತಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ದೇಶದಲ್ಲಿ ಜಾತಿಗಣತಿ ಮಾಡುತ್ತೇವೆ ಅಂತ ಪ್ರಧಾನಿ ಮೋದಿ ಹೇಳಿದ್ದರು. ನಮ್ಮ ಪ್ರಣಾಳಿಕೆಯಲ್ಲಿಯೇ ಇದೆ ನಾವು ಮಾಡಿಯೇ ಮಾಡುತ್ತೇವೆ ಎಂದು ಸಚಿವ ಸಂತೋಷ್…

Read More

ರಾಯಚೂರು : ರಾಯಚೂರಿನಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬ ಟ್ರಾಕ್ಟರ್ ಓಡಿಸಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡಿದ್ದು ಟ್ಯಾಕ್ಟರ್ ನಲ್ಲಿದ್ದ 15 ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ. ಹೌದು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಟ್ರ್ಯಾಕ್ಟರ್ ಸಿಲುಕಿದ್ದು ಅದೃಷ್ಟವಶಾತ್ 15 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದೆ. ತುಂಬಿ ಹರಿಯುತ್ತಿದ್ದ ಹಳ್ಳ ದಟ್ಟವಾಗ ಈ ಒಂದು ಘಟನೆ ನಡೆದಿದೆ. ಪ್ರಾಣಭೀತಿಯಲ್ಲಿ ಟ್ರ್ಯಾಕ್ಟರ್ ನಲ್ಲಿದ್ದ ಮಹಿಳೆಯರು ಕಿರುಚಾಡಿದ್ದಾರೆ. ತಕ್ಷಣ ಅಲ್ಲಿಯೆ ಇದಂತಹ ಸ್ಥಳೀಯರು ಕಾಪಾಡಿದ್ದಾರೆ.

Read More

ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಛತ್ರಪತಿ ಸಂಭಾಜಿ ನಗರದಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ಗಾರ್ಡನ್ ಬಳಿಯ ಪ್ರವೇಶ ದ್ವಾರ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಮತ್ತಿಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಗೇಟ್ ಬಳಿ ನಿಂತಿದ್ದಾಗ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಕೆಳಗೆ ಸಿಲುಕಿಕೊಂಡಿದ್ದರಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಇನ್ನೂ ಗಾಯಗೊಂಡ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತರ ಕುಟುಂಬಕ್ಕೆ ಪುರಸಭೆಯಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.

Read More