Author: kannadanewsnow05

ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿದ ವಿಕಲಚೇತನರಿಗೆ 1 ಲಕ್ಷದವರೆಗೆ ವಿಮೆ ಸೌಲಭ್ಯವಿದೆ. 1 ವರ್ಷಕ್ಕೆ 1 ಲಕ್ಷದವರೆಗೂ ವಿಮೆ ಸೌಲಭ್ಯವಿದೆ ಮುಂಬರುವ ದಿನಗಳಲ್ಲಿ 5 ಲಕ್ಷಕ್ಕೆ ವಿಮೆ ಮೊತ್ತ ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಇಂದು ವಿಧಾನಪರಿಷತ್ ನಲ್ಲಿ ಎಲ್ಲ ರೀತಿಯ ಅಂಗವೈಕಲ್ಯ ಒಳಗೊಂಡ ವಿಮೆ ಯೋಜನೆಗಳಿವೆಯೇ? ವಿಶೇಷವೇತನರಿಗೆ ಯಾವ ರೀತಿಯ ಸೌಲಭ್ಯಗಳಿವೆ ಎಂದು ವೈ.ಎಂ ಸತೀಶ ಪ್ರಶ್ನಿಸಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದ್ದು ಅಂಗವಿಕಲತಾ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಹಾಗು ನಿರಾಮಯ ಆರೋಗ್ಯ ವಿಮಾ ಯೋಜನೆ ಇದೆ. ಆದರೆ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ವಿಮೆ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಎಂದು ಇದೆ ವೇಳೆ ವೈ.ಎಂ ಸತೀಶ್ ಕೇಳಿದಾಗ ಬಿಪಿಎಲ್ ಕಾರ್ಡ್ ಹೊಂದಿದ ವಿಕಲಚೇತನರಿಗೆ 1 ಲಕ್ಷದವರೆಗೆ ವಿಮೆ ಸೌಲಭ್ಯವಿದೆ. 1 ವರ್ಷಕ್ಕೆ 1 ಲಕ್ಷದವರೆಗೂ ವಿಮೆ…

Read More

ರಾಯಚೂರು : ರಾಯಚೂರಿನಲ್ಲಿ ಘೋರವಾದಂತಹ ದುರಂತ ಸಂಭವಿಸಿದ್ದು, ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು 5 ಕುರಿಗಳು ಸಾವನ್ನಪ್ಪಿವೆ. ಆದರೆ ಅದೃಷ್ಟವಶಾತ್ ಶೆಡ್ ನಲ್ಲಿ ಇದ್ದಂತಹ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಏಗನೂರು ಗ್ರಾಮದ ನರಸಿಂಹಲು ಎಂಬವರು ವಾಸಿಸುವ ಟಿನ್ ಶೆಡ್‌ನಲ್ಲಿ ಘಟನೆ ಸಂಭವಿಸಿದೆ. ಗುಡಿಸಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕುರಿಗಳು ಜೀವಂತವಾಗಿ ಮೃತಪಟ್ಟಿವೆ. 40 ಸಾವಿರ ರೂ ನಗದು, 5 ಗ್ರಾಂ ಚಿನ್ನದ ಕಿವಿಯೋಲೆ, ಬೆಳ್ಳಿಯ ಕಾಲ್ಗೆಜ್ಜೆ, ದವಸ-ಧಾನ್ಯಗಳು ಸುಟ್ಟು ಕರಕಲಾಗಿವೆ. ಶೆಡ್‌ನಲ್ಲೇ ಇದ್ದ ನರಸಿಂಹಲು‌ ಹಾಗೂ ಪತ್ನಿ ಪಾರಾಗಿದ್ದಾರೆ. ಕೊಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More

ಬೆಂಗಳೂರು : ಇಂದು ಎಲ್ಲೆಡೆ ಹೋಳಿ ಹಬ್ಬದ ಅಂಗವಾಗಿ ಪ್ರತಿಯೊಬ್ಬರೂ ಬಣ್ಣದಲ್ಲಿ ಮಿಂದೆದ್ದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಲಾಗಿದ್ದು, ಈ ಕುರಿತು BMRCL ಮೆಟ್ರೋ ಪ್ರಯಾಣಿಕರಿಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿ ಈ ಮೂಲಕ ಸೂಚನೆ ನೀಡಿದೆ. ಹೌದು ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ಹೋಳಿ ಮುಗಿಯುವವರೆಗೂ ಮೆಟ್ರೋದಲ್ಲಿ ಬಣ್ಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಳಿ ಹಬ್ಬದ ಶುಭಾಶಯಗಳು ತಿಳಿಸಿ BMRCL ಈ ಸಂದೇಶ ನೀಡಿದೆ. ಒಗ್ಗಟ್ಟು ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಿ ಎಂದು ಪ್ರಯಾಣಿಕರಿಗೆ ಸುರಕ್ಷಿತ ಹೋಳಿ ಹಬ್ಬದ ಶುಭಾಶಯಗಳು ತಿಳಿಸಿದೆ. ಮೆಟ್ರೋದಲ್ಲಿ ಪ್ರಯಾಣಿಸಿ ಎಂದು ಹೋಳಿ ಹಬ್ಬದ ಪ್ರಯುಕ್ತ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಶುಭಾಶಯಗಳು ಹೇಳಿ ಆದರೆ ಮೆಟ್ರೋದಲ್ಲಿ ಬಣ್ಣ ತರಬೇಡಿ ಎಂದು ಪ್ರಯಾಣಿಕರಿಗೆ ಸೂಚನೆ ನೀಡಿದೆ.ಒಗ್ಗಟ್ಟು, ಸಂತೋಷ ಮತ್ತು ವರ್ಣರಂಜಿತ ನೆನಪುಗಳ ಪ್ರಯಾಣದೊಂದಿಗೆ ಈ ಹೋಳಿ ಹಬ್ಬವನ್ನು ಆಚರಿಸೋಣ.…

Read More

ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯರಾವ್ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು ರನ್ಯಾ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಇದೀಗ ಇಡಿ ತನಿಖೆ ಚುರುಕುಗೊಳಿಸಲು ರನ್ಯಾರಾವ್ಳನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಂದು ಕೋರ್ಟ್ನಲ್ಲಿ ಇಡಿ ಸ್ಟೇಟ್ಮೆಂಟ್ ಮಾಡಲಿದ್ದು, ಅರ್ಜಿ ಸಲ್ಲಿಕೆ ನಂತರ ಕಷ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ನಟಿ ರನ್ಯಾರಾವ್ ಅವರ ಡ್ಯಾಮಿನ ಅರ್ಜಿ ವಿತರಣೆ ಕೂಡ ನಡೆಯಲಿದೆ ಹಾಗಾಗಿ ಈ ಒಂದು ಪ್ರಕರಣ ಇದೀಗ ತೀವ್ರ ಕುತೂಹಲ ಮೂಡಿಸಿದೆ.

Read More

ಮಂಡ್ಯ : ಪ್ರೀತಿಸಿ ನಾಟಕವಾಡಿ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಯುವಕನೊಬ್ಬ ಯುವತಿಗೆ ವಂಚನೆ ಎಸಗಿದ್ದ. ಇದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಬಳಿಕ ಪುತ್ರಿಯ ಸಾವಿನಿಂದ ನೊಂದ ತಾಯೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಂಡ್ಯದಲ್ಲಿ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಿಯಕರ ಹರಿಕೃಷ್ಣ ಸೇರಿದಂತೆ 19 ಜನರ ವಿರುದ್ಧ ‘FIR’ ದಾಖಲಾಗಿದೆ. ಹೌದು ಹರಿಕೃಷ್ಣ ಸೇರಿ 19 ಆರೋಪಿಗಳ ವಿರುದ್ಧ FIR ದಾಖಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 191,194, 64, 108, 54 118ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯನ್ನು ಪ್ರೀತಿಸಿ ಪಕ್ಕದ ಊರಿನ ಹರಿಕೃಷ್ಣ ಯುವತಿಗೆ ಮೋಸ ಮಾಡಿದ್ದ.ಮಂಡ್ಯ ತಾಲೂಕಿನ ಹೆಬ್ಬಕವಾಡಿಯಲ್ಲಿ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುತ್ರಿ ವಿಜಯಲಕ್ಷ್ಮಿ (21) ಹಾಗೂ ತಾಯಿ ಲಕ್ಷ್ಮಿ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆ? ಮಂಡ್ಯದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಪ್ರಿಯಕರ ಕೈ ಕೊಟ್ಟಿದ್ದರಿಂದ ಮಗಳು ರೈಲಿಗೆ ತಲೆ…

Read More

ಕಲಬುರ್ಗಿ : ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂಡ ರೈತ ಪರ ಹೋರಾಟಗಾರ ಒಬ್ಬ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪುರಸಭೆ ಕಚೇರಿಗೆ ನುಗ್ಗಿ ಎಳೆದಾಡಿ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲಿ ನಡೆಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ನಡೆದಿದೆ. ಆರೋಗ್ಯ ನಿರೀಕ್ಷಕನ ಮೇಲೆ, ರೈತಪರ ಹೋರಾಟಗಾರ ಮಹೇಶ್ ರಾಠೋಡ್ ಇಂದ ಈ ಒಂದು ಕೃತ್ಯ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪುರಸಭೆಯಲ್ಲಿ ನಡೆದಿದ್ದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಜಶೇಖರಯ್ಯ ಮೇಲೆ ಅಲ್ಲೇ ನಡೆಸಿದ್ದಾರೆ. ಕಚೇರಿಗೆ ನುಗ್ಗಿ ಎಳೆದಾಡಿ ಹೊರಗೆ ಎಳೆದುಕೊಂಡು ಹೋಗಿ ಮಹೇಶ್ ಹಲ್ಲೆ ಮಾಡಿದ್ದಾರೆ. ಕೆಲ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದ್ದನ್ನು ಖಂಡಿಸಿ, ಧರಣಿ ನಡೆಸುತ್ತಿದ್ದರು. ಹೋರಾಟಗಾರ ಮಹೇಶ್ ರಾಠೋಡ್ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದರು. ಕಳೆದ 8 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಕೂಡ ಅಧಿಕಾರಿ ಸ್ಪಂದಿಸುತ್ತಿಲ್ಲವೆಂದು ಕುಪಿತಗೊಂಡು ಹಲ್ಲೆ ಮಾಡಿದ್ದಾರೆ. ಮಹೇಶ್ ರಾಠೋಡ್ ವಿರುದ್ಧ ಕ್ರಮಕ್ಕೆ ಪುರಸಭೆ ಸಿಬ್ಬಂದಿ ಇದೀಗ…

Read More

ರಾಜಸ್ತಾನ್ : ಇಂದು ಎಲ್ಲೆಡೆ ಹೊಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಆದರೆ ಜೈಪುರ್ ನಲ್ಲಿ ಬಣ್ಣದ ಹಬ್ಬದ ದಿನದಂದೆ ಘೋರ ಘಟನೆ ನಡೆದಿದೆ. ಹೌದು ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ವ್ಯಕ್ತಿಗಳು ಸೇರಿ ಥಳಿಸಿ ಬಳಿಕ ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರ್ ನಲ್ಲಿ ನಡೆದಿದೆ. ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಹಂಸರಾಜ್‌ ಎಂದು ಗುರುತಿಸಲಾಗಿದೆ. ಹಂಸರಾಜ್ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಇಲ್ಲಿಗೆ ಬಂದ ಅಶೋಕ್, ಬಬ್ಲು ಮತ್ತು ಕಲುರಾಮ್ ಬಣ್ಣ ಬಳಿಯಲು ಯತ್ನಿಸಿದ್ದರು. ಈ ವೇಳೆ ಯುವಕ ನಿರಾಕರಿಸಿದ್ದಕ್ಕೆ, ಮೂವರು ಆತನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರು. ಬಳಿಕ ಅದರಲ್ಲಿ ಒಬ್ಬ ಕತ್ತು ಹಿಸುಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ. ಹತ್ಯೆಯನ್ನು ಖಂಡಿಸಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಶವವನ್ನು ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ…

Read More

ಕೊಡಗು : ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಈ ಒಂದು ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂರ್ವಿಕಾ ಎಂದು ತಿಳಿದುಬಂದಿದ್ದಿ, ಪೂರ್ವಿಕ ನಿನ್ನೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ಪೂರ್ವಿಕ ಸಾವು ಅನುಮಾನ ಮೂಡಿಸಿದೆ. ಕುಸಿದು ಬಿದ್ದ ಪೂರ್ವಿಕಾಳನ್ನು ಶಿಕ್ಷಕರು ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶವವನ್ನು ಸದ್ಯ ಶವಾಗಾರದಲ್ಲಿಡಲಾಗಿದೆ. ಘಟನೆ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಅಮಾನುಷವಾದ ಘಟನೆ ನಡೆದಿದ್ದು, ವೃದ್ಧ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೊರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದ ಅತ್ತೆ ಮತ್ತು ಮಾವನಿಗೆ ಪ್ರಿಯದರ್ಶಿನಿ ಕಿರುಕುಳ ನೀಡುತ್ತಿದ್ದಾಳೆ. ಕಿರುಕುಳ ತಾಳದೆ ದಂಪತಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೂ ಕೂಡ ಮಾರ್ಚ್ 10 ರಂದು ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ ಸೊಸೆ ಪ್ರಿಯದರ್ಶಿನಿ. ಅಲ್ಲದೇ ಮೊಮ್ಮಕ್ಕಳು ಸಹ ತಾತ ಅಜ್ಜಿ ಎನ್ನದೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ವಿಡಿಯೋವನ್ನು ‘ಎಕ್ಸ್’ ಆ್ಯಪ್ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಖಾತೆ ಯಲ್ಲಿ ಪೋಸ್ಟ್ ಮಾಡಿದ್ದು, ಮಾಡಿದ್ದು, ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದವರು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ಹಾಗೂ ಆಕೆ ಇಬ್ಬರು ಮಕ್ಕಳು ಎನ್ನಲಾಗಿದೆ. ಇವರ ವಿರುದ್ದ ಕಠಿಣ ಕ್ರಮ…

Read More

ಚಿತ್ರದುರ್ಗ : ಅಕ್ರಮವಾಗಿ ಟಾಸಿಕ್ಸ್ ಸಿರಪ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಚಿತ್ರದುರ್ಗದ ಸೆನ್ ಠಾಣೆಯ ಪೊಲೀಸರಿಂದ ಐವರು ಆರೋಪಿಗಳ ಬಂಧನ ಆಗಿದೆ. ಚಿತ್ರದುರ್ಗದ ಸೈಯದ್ ಸಾದತ್, ಇಮ್ರಾನ್ ಭಾಷಾ, ಸಾಧಿಕ್ ಉಲ್ಲಾ, ಆಂಧ್ರ ಮೂಲದ ಹನುಮರೆಡ್ಡಿ ಮತ್ತು ಬಳ್ಳಾರಿಯ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತರಿಂದ ಟಾಸಿಕ್ಸ್ ಸಿರಪ್, 1 ಆಟೋ, 3 ಮೊಬೈಲ್ ಹಾಗು 2500 ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದ ಸೆನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More