Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಮನೆ ಇಲ್ಲದವರಿಗೆ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಹಂಚಲಾಗುತ್ತದೆ. ಆದರೆ ಈ ಒಂದು ಮನೆಗಾಗಿ ಮಹಿಳೆಯೊಬ್ಬರು ಗ್ರಾಮ ಪಂಚಾಯತ್ ಸದಸ್ಯನ ಬಳಿಗೆ ಮನೆ ನೀಡಿ ಎಂದು ಮನವಿ ಮಾಡಿದಾಗ, ಮೊದಲು ಆತ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಹಣದ ಬದಲು ನೀನು ಬಾ ಇಲ್ಲ ನಿನ್ನ ಮಗಳನ್ನು ಕಳಿಸು ಎಂದು ಮಂಚಕ್ಕೆ ಕರೆದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಮನೆ ಕೇಳಲು ಬಂದ ಮಹಿಳೆಗೆ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಂಚಕ್ಕೆ ಕರೆದಿದ್ದಾನೆ. ಪಂಚಾಯತಿ ಮನೆ ಮಾಡಿಸಿಕೊಡುತ್ತೇನೆ ನನ್ನ ಜೊತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ. ಈ ಸಂಬಂಧ ಮಹಿಳೆ, ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಗೆ ಮನವಿ…
ಬೆಂಗಳೂರು : ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಸಮಾವೇಶ ಮಾಡುತ್ತೇವೆ. ವೀರಶೈವ ಲಿಂಗಾಯತ ಸಮುದಾಯ ಯಾರ ಸ್ವತ್ತು ಅಲ್ಲ ಹಾಗಾಗಿ ಈ ಒಂದು ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರಬಹುದು ಎಂದು ಬಿಜೆಪಿಯ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸಲು ಸಮಾವೇಶ ಆಯೋಜನೆ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಬರಬಹುದು ಎಂದರು. ವೀರಶೈವ ಲಿಂಗಾಯತ ಸಮುದಾಯ ಯಾರ ಸ್ವತ್ತು ಅಲ್ಲ. ಈ ಒಂದು ಸಮಾವೇಶದಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ನಾನು ಈ ಹಿಂದೆ ಬೇರೆಯವರ ಮಾತು ಕೇಳಿ ಹಿನ್ನಡೆ ಅನುಭವಿಸಿದ್ದೇನೆ. ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿ ಮಾಡೋಕೆ ಹೋಗಬಾರದು. ವೀರಶೈವ ಲಿಂಗಾಯತ ಸಮಾವೇಶಕ್ಕೆ ಶಾಸಕ ಯತ್ನಾಳ್ ಬರಬೇಕು…
ಮೈಸೂರು : ಕಳೆದ ಮಾರ್ಚ್ 5 ರಂದು ಮೈಸೂರಲ್ಲಿ ವೃದ್ದೆಯೊಬ್ಬರ ಸಾವಾಗಿತ್ತು. ಆದರೆ ವೃದ್ದೆಯ ಮಗ ತಾಯಿಯ ಸಾವಿನ ಕುರಿತು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಶಾಕ್ ಆಗಿದೆ. ಏಕೆಂದರೆ ವೃದ್ದೆಯ ಸ್ನೇಹಿತೆನೆ ಆಕೆಯ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು ಮೈಸೂರು ವೃದ್ದೆಯ ಮರ್ಡರ್ ಬೆಚ್ಚಿ ಬೀಳಿಸುತ್ತೆ. ಕೊಟ್ಟ ಸಾಲ ಕೇಳಿದಕ್ಕೆ ಎದೆ ಮೇಲೆ ಕುಳಿತು ವೃದ್ದೆಯ ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿದೆ. ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತೆ ಸಿಮಾ ಲಾಟ್ಕರ್ ಸ್ಪೋಟಕವಾದ ಮಾಹಿತಿ ನೀಡಿದ್ದಾರೆ. ಕೊಲೆ ಮಾಡಿದ್ದಾಗಿ ಆರೋಪಿ ಶಕುಂತಲಾ ತಪ್ಪು ಒಪ್ಪಿಕೊಂಡಿದ್ದಾಳೆ.ಸದ್ಯ ಆಕೆಯನ್ನು ಜೈಲಿಗೆ ಅಟ್ಟಲಾಗಿದೆ. ಶಕುಂತಲಾ ಗೆ 2.5 ಲಕ್ಷ ಸಾಲ ಕೊಟ್ಟಿದ್ದ ಮೃತ ಸುಲೋಚನಾ ಮಾರ್ಚ್ 5 ರಂದು ಸಾಲ ಕೇಳಲು ಶಕುಂತಲಾ ಮನೆಗೆ ತೆರಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯ ಗಲಾಟೆ ಆಗಿದೆ. ಗಲಾಟಿ ನಂತರ ಶಕುಂತಲಾ ಉಸಿರು ಕಟ್ಟಿಸಿ ಸುಲೋಚನಾಳನ್ನು…
ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟಿ ರನ್ಯಾ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ರನ್ಯಾ ರಾವ್ ಮನೆಯ ಮೇಲೆ ಇಡಿ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಆದರೆ ನಟಿ ರನ್ಯಾ ರಾವ್ ಪತಿಗು ಡಿ ಆರ್ ಐ ಶಾಕ್ ನೀಡಿದೆ. ಹೌದು ರನ್ಯಾ ಪತಿ ಜತಿನ್ ನಿವಾಸ ಸೇರಿದಂತೆ ಒಟ್ಟು 9 ಕಡೆ DRI ದಾಳಿ ನಡೆಸಿದೆ. ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿನ ಫ್ಲ್ಯಾಟ್ ಸೇರಿದಂತೆ 9 ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಲ್ಲದೇ ರನ್ಯಾ ರಾವ್ ವಿದೇಶಿ ಪ್ರಯಾಣಕ್ಕೆ ಫ್ಲೈಟ್ ಟಿಕೆಟ್ ಬುಕ್ ಮಾಡಲು ಜತಿನ್ ಕ್ರೆಡಿಟ್ ಕಾರ್ಡ್ ಬಳಸಿದ್ದ ಹಿನ್ನೆಲೆಯಲ್ಲಿ DRI ದಾಳಿ ನಡೆಸಿದೆ.
ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾರಾವ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ಅವರ ಬಾಯ್ ಫ್ರೆಂಡ್ ಆಗಿರುವ ತರುಣ್ ರಾಜು ಮೇಲು ಇದೀಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೌದು ಇಂದು ಇಡಿ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲಿ ಮೆನ್ಷನ್ ಅಪಾರ್ಟ್ಮೆಂಟಲ್ಲಿ ಇಡೀಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದೀಗ ಆಕೆ ಬಾಯ್ ಫ್ರೆಂಡ್ ಆಗಿದ್ದ ತರುಣ ರಾಜು ನಿವಾಸದ ಮೇಲು ಇಡಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ತರುಣ್ ರಾಜು ಯಾರು? ನಟಿ ರನ್ಯಾ ರಾವ್ ಅವರು ಟಾಲಿವುಡ್ ನಟ ತರುಣ್ ಎಂಬುವರು ಬಾಯ್ ಫ್ರೆಂಡ್ ಎಂಬುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ಸಿನಿಮಾಗಾಗಿ ತನ್ನ ಹೆಸರನ್ನು ತರುಣ್ ಎಂಬುದಾಗಿ ಬದಲಿಸಿಕೊಂಡಿದ್ದನಂತೆ. ತರುಣ್ ಮೂಲ ಹೆಸರು ವಿರಾಟ್ ಕೊಂಡೂರು ರಾಜ್ ಎಂಬುದಾಗಿದೆ. 2018ರಲ್ಲಿ ತೆರೆ ಕಂಡಂತ ಪರಿಚಯಂ…
ಮೈಸೂರು : ಪತಿ ಹಾಗೂ ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಿಂಡೇನಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರೇಷ್ಮಾ (25) ಎಂದು ತಿಳಿದುಬಂದಿದ್ದು, ಬರೀ ಶ್ರೀನಿವಾಸ್ ಹಿರೇ ವಿಚಾರವಾಗಿ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ಆರು ವರ್ಷಗಳ ಹಿಂದೆ ಶ್ರೀನಿವಾಸ ಹಾಗೂ ರೇಷ್ಮಾ ಅವರ ಮದುವೆ ಆಗಿತ್ತು. ಈರಯ್ಯನ ಕೊಪ್ಪಲು ನಿವಾಸಿ ಚಂದ್ರೇಗೌಡ, ಶಾಂತಮ್ಮ ದಂಪತಿಯ ಪುತ್ರಿ ರೇಷ್ಮಾ ಸಾವಿಗೆ ಪತಿ ಶ್ರೀನಿವಾಸ್ ಮತ್ತು ಆತನ ಸಹೋದರ ಶ್ರೀಧರ್, ಮಾವ ಮಾದೇಗೌಡ, ಅತ್ತೆ ಸರಸಮ್ಮ ಕಾರಣ ಎಂದು ಆರೋಪ ಕೇಳಿಬಂದಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
BREAKING : ಇಂದು ಸಂಜೆ ನಡೆಯಬೇಕಿದ್ದ ‘ರಾಜ್ಯ ಸಚಿವ ಸಂಪುಟ ಸಭೆ’ ನಾಳೆಗೆ ಮುಂದೂಡಿಕೆ | Karnataka Cabinet Meeting
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಂಜೆ 7:00 ಗೆ ನಡೆಯಬೇಕಿದ್ದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಾಳೆಗೆ ಮುಂದೂಡಿಕೆಯಾಗಿದೆ. ಹೌದು ಇಂದು ಸಂಜೆ ಬೆಂಗಳೂರಿನ ವಿಧಾನಸೌಧದಲ್ಲಿ 7 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಬೇಕಿತ್ತು. ಆದರೆ ನಾಳೆ ಈ ಒಂದು ಸಚಿವ ಸಂಪುಟ ಸಭೆ ಮುಂದೂಡಲಾಗಿದ್ದು, ನಾಳೆ ಸಂಜೆ 6 ಗಂಟೆಗೆ ವಿಧಾನಸೌಧದಲ್ಲಿ ಸಂಪುಟ ಸಭೆ ನಿಗದಿಯಾಗಿದೆ. ನಾಳೆ ಸಂಜೆ 7 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 6ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ನಿಗದಿ ಪಡಿಸಲಾಗಿದೆ. ಈ ಒಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಲಿದ್ದಾರೆ. ಅಂದು ಸಿಎಂ ಸಿದ್ಧರಾಮಯ್ಯ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯೂ ಅಸ್ತು ಎನ್ನಲಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಮನೆ ಮೇಲೆ ಇಂದು ‘ED’ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಈ ಒಂದು ಪ್ರಕರಣಕ್ಕೆ ಸಿಬಿಐ ಎಂಟ್ರಿ ಆಗಿದ್ದು, ಇದೀಗ ನಟಿ ರನ್ಯಾ ರಾವ್ ವಿರುದ್ಧ FIR ದಾಖಲಿಸಿಕೊಂಡಿದೆ. ಹೌದು ನಟಿ ರನ್ಯಾ ರಾವ್ ಗೋಲ್ಡ್ ಮಾಗಲಿ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಕೊಟ್ಟಿದ್ದು, ಸಿಬಿಐ ಪ್ರಧಾನ ಕಚೇರಿಯಲ್ಲಿ ಸಿಬಿಐ FIR ದಾಖಲಿಸಿದೆ. DRI ಅಧಿಕಾರಿಗಳ ದೂರು ಆಧರಿಸಿ ಸಿಬಿಐ FIR ದಾಖಲಿಸಿಕೊಂಡಿದೆ. ದೇಶಕ್ಕೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಹಿನ್ನೆಲೆಯಲ್ಲಿ FIR ದಾಖಲಾಗಿದೆ. ಬೆಂಗಳೂರು ಮತ್ತು ಮುಂಬೈಗೆ ಅಕ್ರಮವಾಗಿ ಚಿನ್ನ ಸಾಗಾಟ ಹಿನ್ನೆಲೆಯಲ್ಲಿ FIR ದಾಖಲಾಗಿದೆ.
ಬೆಂಗಳೂರು : ವೇಗವಾಗಿ ಚಲಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರಿನ ರಾಜಕುಮಾರ್ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಡಿವೈಡರ್ಗೆ ಕಾರು ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ನಾಲ್ವರಿಗೆ ಗಾಯಗಳಾಗಿವೆ. ದಿಕ್ಕಿಯ ರಭಸಕ್ಕೆ 20 ಮೀಟರ್ ನಷ್ಟು ಕಾರು ಬಿದ್ದಿದೆ. ಕೂಡಲೇ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ಅವರನ್ನು ದಾಖಲಿಸಿ ನೀಡಲಾಗುತ್ತಿದೆ ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದರಿಂದ ಈ ಒಂದು ಅಪಘಾತ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ : ವಿಜಯನಗರದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೊದಲಗಟ್ಟೆ ಗ್ರಾಮದ ಬಳಿ ನಡೆದಿದೆ. ನೀರು ಪಾಲಾಗಿರುವ ಯುವಕನನ್ನು ವಿನೋದ ಸ್ವಾಮಿ ಚನ್ನವೀರಯ್ಯ ಹಿರೇಮಠ (25) ಎಂದು ತಿಳಿದುಬಂದಿದೆ. ಈತ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದವ ಎಂದು ತಿಳಿದುಬಂದಿದೆ.ವಿನೋದ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಮೊದಲಗಟ್ಟಿ ಬಳಿ ಇರುವ ನದಿಗೆ ಈಜಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಪತ್ತೆ ಕಾರ್ಯಚರಣೆ ಪ್ರಾರಂಭಿಸಿದ್ದಾರೆ. ಇದೇ ಸ್ಥಳದಲ್ಲಿ ಕಳೆದ 4-5 ದಿನಗಳ ಹಿಂದೆ ಮೂವರು ಯುವಕರು ನೀರು ಪಾಲಾಗಿದ್ದರು. ಇದೀಗ ಇಂದು ಮತ್ತೊಂದು ದುರ್ಘಟನೆ ನಡೆದಿದೆ. ಘಟನೆ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.