Author: kannadanewsnow05

ಬೆಂಗಳೂರು : ವಿಶ್ವವಿಖ್ಯಾತ ನಾಡಹಬ್ಬ,ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ವೀಕ್ಷಿಸಲು ಹಾಗೂ ವಿಜಯದಶಮಿಯಂದು ಊರಿಗೆ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 2,000 ಹೆಚ್ಚುವರಿ ಯಾಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಹೌದು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಜಿಲ್ಲೆಗಳು ಅಂತ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚಾರ ಮಾಡಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದಿನಿಂದ ಶನಿವಾರದವರಿಗೆ ಹೆಚ್ಚು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ಹೊರಡಲಿವೆ. ಜಿಲ್ಲಾ ಕೇಂದ್ರಗಳು ಅಂತರ್ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬಸ್ ಬರಲಿದ್ದು, ಅಕ್ಟೋಬರ್ 13 ಮತ್ತು 14ರಂದು ವಿಶೇಷ ವಾಹನಗಳ ಕಾರ್ಯಾಚರಣೆ ನಡೆಯಲಿದೆ.

Read More

ಕಲಬುರ್ಗಿ : ಉಚಿತ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಂಚ ಗ್ಯಾರಂಟಿಗಳಲ್ಲಿ ಗೃಹಜೋತಿ ಕೂಡ ಒಂದು ಪ್ರತಿ ಮನೆಗೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿತ್ತು. ಆದರೆ ಇದೀಗ ಈ ಒಂದು ಗ್ರಾಮದಲ್ಲಿ ಕರೆಂಟ್ ಬಿಲ್ ನೋಡಿಯೇ ಗ್ರಾಮಸ್ಥರು ಶಾಕ್ ಗೆ ಒಳಗಾಗಿದ್ದಾರೆ. ಹೌದು ಜೆಸ್ಕಾಂ ಕೊಟ್ಟ ಶಾಕ್‌ನಿಂದ ಕಲಬುರಗಿ ತಾಲೂಕಿನ ಕುಸನೂರು ಗ್ರಾಮಸ್ಥರು ಕಂಗಲಾಗಿದ್ದಾರೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಪಡೆದು ತಿಂಗಳಿಗೆ 100 ರಿಂದ 200 ರೂ. ಬಿಲ್ ಪಡೆಯುತ್ತಿದ್ದ ಕೂಸನೂರು ಗ್ರಾಮಸ್ಥರು, ಈ ತಿಂಗಳು ಬರೊಬ್ಬರಿ 18 ಸಾವಿರ, 20 ಸಾವಿರ, 49 ಸಾವಿರದಂತೆ ಅಡ್ಡಾದಿಡ್ಡಿ ಬಿಲ್ ನೋಡಿ ಕಂಗಾಲಾಗಿದ್ದಾರೆ. ಈ ವೇಳೆ ಗ್ರಾಮಕ್ಕೆ ಜೆಸ್ಕಾಂ ಎಇಇ ಭೇಟಿ ನೀಡಿದಾಗ ಅವರನ್ನು ತರಾಟೆಗೆ ತೆಗೆದುಕೊಂಡು, ಬಾಡಿಗೆ ಮನೆಯಲ್ಲಿದ್ದವರಿಗೂ 28 ಸಾವಿರ ಬಿಲ್ ಬಂದಿದೆ. ಎಲ್ಲಿಂದ ಕಟ್ಟಬೇಕು ಎಂದು ಗಲಾಟೆ ಮಾಡಿದರು. ಇನ್ನು…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು  ಅಕ್ಟೊಬರ್ 14 ರವರೆಗೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿದರು. ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ. ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು.ಇದಕ್ಕೆ ಪ್ರಸನ್ನ ಕುಮಾರ್ ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು ಎಂದರು. ಈ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪವಿತ್ರ ಗೌಡ…

Read More

ಕಲಬುರಗಿ : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದಂತಹ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸವಾರರು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ನಡೆದಿದೆ. ನಿನ್ನೆ ರಾತ್ರಿ ಈ ಒಂದು ಭೀಕರ ಅಪಘಾತ ಸಂಭವಿಸಿದ್ದು, ಗುರೂಜಿ ತಾಂಡಾ ನಿವಾಸಿಗಳಾದ ಅರ್ಜುನ್ ರಾಠೋಡ್, ರೋಹಿತ್ ಹಾಗೂ ಕೃಷ್ಣ ಎನ್ನುವವರು ಸಾವನ್ನಪ್ಪಿದ್ದಾರೆ.ಲಾಡ್ಲಾಪುರ ಗ್ರಾಮದಿಂದ ತಾಂಡಾಕ್ಕೆ ಹೋಗುತ್ತಿರುವಾಗ ಈ ಒಂದು ಭೀಕರ ಅಪಘಾತ ನಡೆದಿದೆ. ಟ್ರ್ಯಾಕ್ಟರ್‌ಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗಳಿಂದ ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕಲಬುರ್ಗಿ : ಬಾಲಕಿಯರು ಇಬ್ಬರು ಬಟ್ಟೆ ತೊಳೆಯಲು ಎಂದು ಭೀಮಾನದಿಗೆ ತೆರಳಿದ್ದಾರೆ. ಈ ವೇಳೆ ಬಟ್ಟೆ ತೊಳೆದ ಬಳಿಕ ನದಿಯಲ್ಲಿ ಈಜಾಡುತ್ತಿದ್ದಾಗ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಅಫ್ಜಲ್ ಪುರ ತಾಲೂಕಿನಲ್ಲಿ ನಡೆದಿದೆ. ಹೌದು ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ. ಭೂಮಿಕಾ ದೊಡ್ಮನಿ (8) ಶ್ರಾವಣಿ ನಾಟಿಕಾರ್ (11) ನೀರು ಪಾಲಾಗಿರುವ ದುರ್ದೈವಿಗಳು ಎಂದು ತಿಳಿದು ಬಂದಿದೆ. ಭೀಮಾ ನದಿಯಲ್ಲಿ ಈ ಬಾಲಕಿಯರು ಬಟ್ಟೆ ತೊಳೆಯಲು ಎಂದು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಾಲಕಿಯರು ನದಿಯಲು ಈಜಾಡಲು ಮುಂದಾಗಿದ್ದಾರೆ. ನದಿ ನೀರಿನ ರಭಸಕ್ಕೆ ಭೂಮಿಕಾ ದೊಡ್ಮನೆ ಕೊಚ್ಚಿ ಹೋಗುತ್ತಿದ್ದಳು. ಕೂಡಲೇ ಭೂಮಿಕಾಳನ್ನು ರಕ್ಷಿಸಲು ಹೋಗಿದ್ದ ಶ್ರಾವಣಿ ಕೂಡ ನೀರು ಪಾಲಾಗಿದ್ದಾಳೆ. ಭೀಮಾ ನದಿ ನೀರಿನ ರಭಸಕ್ಕೆ ಇಬ್ಬರು ಬಾಲಕಿಯರು ಕೊಚ್ಚಿ ಹೋಗಿದ್ದಾರೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶ್ರಾವಣಿ ನಾಟಿಕರ್ ಶವವನ್ನು ಹೊರ ತೆಗೆದಿದ್ದಾರೆ. ಚಿಂಚೋಳಿ ಗ್ರಾಮದ ಶ್ರಾವಣಿ ನಾಟಿಕಾರ್ ಮೃತ…

Read More

ರಾಯಚೂರು : ದೇವರಿಗೆ ಎಂದು ಮಾಡಿದ ಮಾಂಸದೂಟವನ್ನು ಸೇವಿಸಿ ಸುಮಾರು 20ಕ್ಕೂ ಹೆಚ್ಚು ಜನರು ಅಸ್ವಸ್ಥ ರಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಮಾಂಸದೂಟ ಸೇವಿಸಿ ಸುಮಾರು 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಲಿಂಗಸೂಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಈ ಒಂದು ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದ ಜನರು ದೇವರ ಕಾರ್ಯಕ್ಕಾಗಿ ನಿವಾಸಿಗಳು ಮಾಂಸದ ಊಟ ಮಾಡಿಸಿದ್ದರು. ಎಲ್ಲ ದೇವರ ಕಾರ್ಯ ಮುಗಿದ ಬಳಿಕ ಮಧ್ಯಾಹ್ನ ತಾಂಡದ ನಿವಾಸಿಗಳು ಮಾಂಸದ ಊಟ ಸೇವಿಸಿದ್ದಾರೆ. ಈ ವೇಳೆ ತಾಂಡಾದ ನಿವಾಸಿಗಳಿಗೆ ವಾಂತಿಭೇದಿ ಶುರುವಾಗಿದೆ. ತಕ್ಷಣ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಅಸ್ವಸ್ಥಗೊಂಡ 10 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಗ್ರಾಮಕ್ಕೆ ಲಿಂಗಸುಗೂರು ತಾಲೂಕು ಆರೋಗ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮಂಡ್ಯ : ಯಾವುದೇ ವಸ್ತು ಆಗಿರಲಿ ಅಥವಾ ವ್ಯಕ್ತಿನೇ ಆಗಿರಲಿ ಸಿಗಬೇಕೆಂದರೆ ಅದೃಷ್ಟ ಇರಬೇಕು ಎಂದು ಹೇಳುತ್ತಾರೆ. ಇದೀಗ ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಬೈಕ್ ಮೆಕಾನಿಕ್ ಒಬ್ಬರು ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಪಡೆದಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ಅಲ್ತಾಫ್ ಪಾಷಾ ಎನ್ನುವವರು ಕೇವಲ 500 ರೂಪಾಯಿ ಕೊಟ್ಟು ಕೇರಳದ ಓಣಂ ಬಂಪರ್ ಲಾಟರಿ ಯನ್ನು ಖರೀದಿಸಿದ್ದರು. ಇದೀಗ ಕೇರಳದ ಓಣಂ ಬಂಪರ್ ಲಾಟರಿ ಘೋಷಣೆ ಮಾಡಿದ್ದು, ಅಲ್ತಾಫ್ ಪಾಷಾ ಅವರಿಗೆ 25 ಕೋಟಿ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದೆ. ಅಲ್ತಾಫ್ ಪಾಷಾ ಅವರು ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಅವರಿಗೆ ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಹೊಡೆದಿದೆ.ಕೇರಳ ಲಾಟರಿಯಲ್ಲಿ 25 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಅಲ್ತಾಫ್ ಬಂಪರ್ ಲಾಟರಿ ಹೊಡೆದಿದ್ದಾರೆ. ಇತ್ತೀಚಿಗೆ ಅಷ್ಟೇ ಅವರು ಕೇರಳಕ್ಕೆ ಹೋಗಿ ಲಾಟರಿ…

Read More

ಬೆಂಗಳೂರು : ಕೇರಳದಲ್ಲಿ ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2000 ನಕಲಿ ನೋಟು ಮುದ್ರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಿದ್ದ, ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ. ಹೌದು ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2000 ನೋಟುಗಳನ್ನು ತಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವಾಗ ನಕಲಿ ನೋಟು ಮುದ್ರಿಸಿ ತಂದಿರುವುದು ಪತ್ತೆಯಾಗಿದೆ.ನಕಲಿ ನೋಟು ಮುದ್ರಿಸಿ ಎಕ್ಸ್ ಚೇಂಜ್ ಯತ್ನ ಮಾಡಲು ಮುಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ಅಫ್ಜಲ್, ಅನ್ವರ್, ಪ್ರಸಿದ್ಧ್ ಸೇರಿ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಚ್ಚಿಬಿದ್ದ ಪೊಲೀಸರು! ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರೆ ಬೆಚ್ಚಿ ಬಿದ್ದಿದ್ದಾರೆ. ಪ್ರಮುಖ ಆರೋಪಿ ಅಫ್ಜಲ್, ಕೇರಳದಿಂದ ಬೆಂಗಳೂರು ನಗರಕ್ಕೆ 25 ಲಕ್ಷ ರೂ. ಹಣ ತಂದಿದ್ದನು. ಎಲ್ಲ ನೋಟುಗಳು 2,000 ರೂ. ಮೌಲ್ಯದ ನೋಟುಗಳಾಗಿದ್ದು, ಅವುಗಳನ್ನು ಬೆಂಗಳೂರಿನಲ್ಲಿರುವ ಆರ್‌ಬಿಐ ಶಾಖಾ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿದರು. ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ. ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು. ಇದಕ್ಕೆ ಎಸ್ ಪಿ ಪಿ ಪ್ರಸನ್ನಕುಮಾರ್ ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು ಎಂದರು. ಬಳಿಕ ಜಡ್ಜ್ ಜೈ ಶಂಕರ್ ಅವರು ವಿಚಾರಣೆಯನ್ನು 2.45ಕ್ಕೆ ಮುಂದೂಡಿದರು.

Read More

ಬೆಂಗಳೂರು : ರೈತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೀಗ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಹೌದು ಅತ್ಯಾಚಾರ ಆರೋಪದ ಅಡಿ ವಿನಯ್ ಕುಲಕರ್ಣಿ ವಿರುದ್ಧ FIR ದಾಖಲಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಇದೀಗ ಇಂದು ಮತ್ತೆ ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕ ವಿನಯ್ ಕುಲಕರ್ಣಿ ಭೇಟಿಯಾಗಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಸಂತ್ರಸ್ತೇ ಮಹಿಳೆ ನನಗೆ ವಿನಯ್ ಕುಲಕರ್ಣಿ ಅವರು 2022 ರಿಂದ ಪರಿಚಯವಾಗಿದ್ದು, ಹಲವಾರು ಬಾರಿ ನನಗೆ ಅವರು ಹೆದರಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ನಡೆದುಕೊಳ್ಳುವಂತೆ ಹೇಳುತ್ತಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

Read More