Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ದೇಶದಲ್ಲಿ ಜುಲೈ 1ರಿಂದ ‘ವಿಕಸಿತ್ ಭಾರತ್-G RAM G’ ಜಾರಿ : ಕೇಂದ್ರ ಸರ್ಕಾರ ಘೋಷಣೆ

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

Watch Video: ದೇಶದ ಹಿತಕ್ಕಾಗಿ ಜನತೆಗೆ ಪ್ರಧಾನಿ ಮೋದಿಯವರ ‘ಪಂಚ ಸಂಕಲ್ಪ’ದ ಕರೆ: ಈ ಮಹತ್ವದ ಮನವಿ | PM Modi Second Appeal

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್
KARNATAKA

ಬೆಳಗಾವಿಯಲ್ಲಿ 100 ಕೋಟಿ ವೆಚ್ಚದಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ಟಿಟಿಡಿ ಸದಸ್ಯ ನರೇಶ್ ಕುಮಾರ್

By ವಸಂತ ಬಿ ಈಶ್ವರಗೆರೆ

ಬೆಳಗಾವಿ‌ : ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ (𝗞𝗼𝗹𝗶𝗸𝗼𝗽𝗽𝗮) ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ. (𝗥𝘀. 𝟭𝟬𝟬 𝗖𝗿𝗼𝗿𝗲) ವೆಚ್ಚದಲ್ಲಿ ಭವ್ಯವಾದ ‘ತಿರುಪತಿ ವೆಂಕಟೇಶ್ವರ ದೇವಸ್ಥಾನ’ ತಲೆ ಎತ್ತಲಿದೆ. ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ತಿರುಮಲ ತಿರುಪತಿ ದೇವಸ್ಥಾನ (𝗧𝗶𝗿𝘂𝗺𝗮𝗹𝗮 𝗧𝗶𝗿𝘂𝗽𝗮𝘁𝗶 𝗗𝗲𝘃𝗮𝘀𝘁𝗵𝗮𝗻𝗮𝗺𝘀 – 𝗧𝗧𝗗) ಆಡಳಿತ ಮಂಡಳಿಗೆ 𝟳 ಎಕರೆ (𝟳 𝗔𝗰𝗿𝗲𝘀) ಭೂಮಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷರಾದ ಲಕ್ಷ್ಮಣ ರೆಡ್ಡಿ (𝗟𝗮𝗸𝘀𝗵𝗺𝗮𝗻𝗮 𝗥𝗲𝗱𝗱𝘆) ಹಾಗೂ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ (𝗥𝗮𝗺𝗮𝗻𝗻𝗮 𝗠𝘂𝗹𝗹𝘂𝗿𝗮) ಅವರು 𝗧𝗧𝗗 ಆಡಳಿತ ಮಂಡಳಿ ಸದಸ್ಯರಾದ ಎಸ್. ನರೇಶ್ ಕುಮಾರ್ (𝗦. 𝗡𝗮𝗿𝗲𝘀𝗵 𝗞𝘂𝗺𝗮𝗿) ಅವರಿಗೆ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಿದರು.

ಮುಂದಿನ 𝟮 ವರ್ಷಗಳಲ್ಲಿ ತಿರುಮಲ ತಿರುಪತಿ ಮಾದರಿಯಲ್ಲೇ ಈ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ದೇವಸ್ಥಾನದ ಜೊತೆಗೆ ತಿರುಪತಿಯಂತೆಯೇ ಭಕ್ತರಿಗೆ ವಸತಿ ಸೌಲಭ್ಯ ಹಾಗೂ ನಿರಂತರ ಅನ್ನಪ್ರಸಾದ ವಿತರಣೆಯ (𝗔𝗻𝗻𝗮 𝗣𝗿𝗮𝘀𝗮𝗱𝗮) ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದರು.

ಯೋಜನೆಯ ವೆಚ್ಚ ಮತ್ತು ಅನುದಾನದ ವಿವರ:

ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನಕ್ಕಾಗಿ ಟಿಟಿಡಿ ಯು ಹಣ ಮೀಸಲಿಟ್ಟಿದೆ. ಬೆಳಗಾವಿಯ ಈ ನೂತನ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯಿಂದ ಶೇ. 𝟴𝟬 ರಷ್ಟು ಅನುದಾನ ಒದಗಿಸಲಾಗುತ್ತದೆ. ಉಳಿದಂತೆ ಬೆಳಗಾವಿ ರೆಡ್ಡಿ ಸಂಘದಿಂದ ಶೇ. 𝟭𝟬 ಮತ್ತು ದಾನಿಗಳಿಂದ ಶೇ. 𝟭𝟬 (𝟭𝟬%) ರಷ್ಟು ದೇಣಿಗೆ ಸಂಗ್ರಹಿಸಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದರು

ದೇಶಾದ್ಯಂತ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 𝗧𝗧𝗗 ಬದ್ಧವಾಗಿದೆ. ಬೆಳಗಾವಿಯಲ್ಲಿ ನಿರ್ಮಾಣವಾಗಲಿರುವ ಈ ದೇವಸ್ಥಾನವು ಈ ಭಾಗದ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದ್ದು, ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.- ಎಸ್. ನರೇಶ್ ಕುಮಾರ್ 𝗧𝗧𝗗 ಆಡಳಿತ ಮಂಡಳಿ ಸದಸ್ಯ.

ನಮ್ಮ ಬೆಳಗಾವಿ ಭಾಗದ ಭಕ್ತರಿಗೆ ವೆಂಕಟೇಶ್ವರನ ದರ್ಶನ ಭಾಗ್ಯವನ್ನು ಸ್ಥಳೀಯವಾಗಿಯೇ ಕಲ್ಪಿಸುವ ಉದ್ದೇಶದಿಂದ 𝟳 ಎಕರೆ ಭೂಮಿಯನ್ನು 𝗧𝗧𝗗 ಗೆ ನೀಡಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ.- ಲಕ್ಷ್ಮಣ ರೆಡ್ಡಿ , ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ.

ಒಂದು ಹನಿ ನೀರಿಗೂ ಹಾಹಾಕಾರ, ಪತ್ರಕರ್ತರಿಗೂ ಇಲ್ಲ ರಕ್ಷಣೆ: ಗಾಜಾದಲ್ಲಿ ಅಮಾನವೀಯತೆಯ ಪರಾಕಾಷ್ಠೆ

WATCH VIDEO: ಕೇರಳದಲ್ಲಿ ಭೀಕರ ಪಟಾಕಿ ದುರಂತ: ಮೃತರ ಸಂಖ್ಯೆ 13ಕ್ಕೆ ಏರಿಕೆ, 40ಕ್ಕೂ ಹೆಚ್ಚು ಜನರಿಗೆ ಗಾಯ

Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

1 Min Read

BIG NEWS: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

2 Mins Read

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

1 Min Read
Recent News

BIG NEWS: ದೇಶದಲ್ಲಿ ಜುಲೈ 1ರಿಂದ ‘ವಿಕಸಿತ್ ಭಾರತ್-G RAM G’ ಜಾರಿ : ಕೇಂದ್ರ ಸರ್ಕಾರ ಘೋಷಣೆ

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

Watch Video: ದೇಶದ ಹಿತಕ್ಕಾಗಿ ಜನತೆಗೆ ಪ್ರಧಾನಿ ಮೋದಿಯವರ ‘ಪಂಚ ಸಂಕಲ್ಪ’ದ ಕರೆ: ಈ ಮಹತ್ವದ ಮನವಿ | PM Modi Second Appeal

Health Tips: ಬೆಳಗಿನ ಉಪಹಾರಕ್ಕೆ ಬಾಳೆಹಣ್ಣು ಸೇವಿಸಿದರೆ ರಕ್ತದ ಸಕ್ಕರೆಯ ಮಟ್ಟ ಏನಾಗುತ್ತದೆ?

State News
KARNATAKA

GOOD NEWS : ರಾಜ್ಯ ಸರ್ಕಾರಿ ನೌಕರರಿಗೆ `ತುಟ್ಟಿಭತ್ಯೆ (DA) ಶೇ. 1.5 ರಷ್ಟು ಹೆಚ್ಚಳ : ಸರ್ಕಾರ ಅಧಿಕೃತ ಆದೇಶ | DA Hike

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕರ್ನಾಟಕ ಸರ್ಕಾರವು ಮೇ 11, 2026ರಂದು ಮಹತ್ವದ ಕೊಡುಗೆ ನೀಡಿದೆ. 2024ರ…

BIG NEWS: ರಾಜ್ಯ ಸರ್ಕಾರದಿಂದ ಜನತೆಗೆ ಮತ್ತೊಂದು ಶಾಕ್: ‘ಭೂದಾಖಲೆ’ಗಳ ನಕಲು ಶುಲ್ಕ ಹೆಚ್ಚಳ

ಸಂಭ್ರಮಿಸಬೇಕಾದ ಹುಟ್ಟುಹಬ್ಬವೇ ಸಾವಿನ ದಿನವಾಯ್ತು; ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ

Scam Alert: ವಾಟ್ಸ್ ಆಪ್ ನಲ್ಲಿ ಬರೋ ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡೋ ಮುನ್ನಾ ಈ ಸುದ್ದಿ ಓದಿ! | Wedding Invitation APK Scam

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.