Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸದೇ ಹೋದಲ್ಲಿ ವಯನಾಡಿನಲ್ಲಾದ ಭೂ-ಕುಸಿತದಂತಹ ದುರ್ಘಟನೆ ನಂದಿ ಬೆಟ್ಟದಲ್ಲೂ ನಡೆಯುವ ಸಂಭವವಿದೆ ಎಂದು ಪರಿಸರವಾದಿಗಳು ಮತ್ತು ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದು, ಈ ಕುರಿತಂತೆ ಅವರು ರಾಜ್ಯ ಸರ್ಕಾರವನ್ನು ಕೂಡ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ನಂದಿ ಬೆಟ್ಟದಲ್ಲಿ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.ಇದೀಗ ರೋಪ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ನೈಸರ್ಗಿ ಕತೆಗೆ ಧಕ್ಕೆಯಾಗುತ್ತಿದೆ. ಇದುತೀವ್ರ ಆಪತ್ತು ತಂದೊಡ್ಡುವ ಸಾಧ್ಯತೆಗಳಿದ್ದು, ವಯನಾ ಡಿನಲ್ಲಾದಂತೆ ಭೂಕುಸಿತ ದಂತಹ ದುರಂತ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ಹಿರಿಯ ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಮಾತನಾಡಿ, ನಂದಿ ಬೆಟ್ಟವನ್ನು ಈಗಿರುವ ರೀತಿಯಲ್ಲೇ ಸಂರಕ್ಷಿಸಬೇಕು. ಪರಿಸರಕ್ಕೆ ಮಾರಕವಾಗುವಂತಹ ಕಾಮ ಗಾರಿ ನಿಲ್ಲಿಸಬೇಕು. ಪಂಚ ನದಿಗಳಾದ ಅರ್ಕಾ ವತಿ, ಪಾಲಾರ್, ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಚಿತ್ರಾವತಿ ನದಿಗಳ ಉಗಮ…
ದಾವಣಗೆರೆ: ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಸಂಬಳ ಬಂದಿಲ್ಲವೆಂದು ಮನನೊಂದು ಅಂಗನವಾಡಿ ಸಹಾಯಕಿಯೊಬ್ಬಳು ಸಾಲ ತೀರಿಸಲು ಹಣ ಇಲ್ಲದ್ದರಿಂದ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೆಟಿಜೆ ನಗರದ ಡಾಂಗೇ ಪಾರ್ಕ್ ಆವರಣದ ಅಂಗನವಾಡಿ ಕೇಂದ್ರ ಸಹಾಯಕಿ ಭಾರತಿ ಆ್ಯಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ ಎಂದು ತಿಳಿದುಬಂದಿದೆ. ಪತಿ ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದು, ಅಂಗನವಾಡಿ ನೌಕರಿ ಮಾಡಿ ಬರುವ ವೇತನದಲ್ಲಿ ಭಾರತಿ ಪುಟ್ಟ ಕುಟುಂಬ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಕಳೆದ 3 ತಿಂಗಳಿನಿಂದ ಅಂಗನವಾಡಿ ವೇತನ ಬಾರದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದ ದಿಕ್ಕೇ ತೋಚದಂತಾಗಿ ಆ್ಯಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ, ಮಕ್ಕಳು, ನೆರೆಹೊರೆಯವರು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಕಳೆದ ಆರು ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದ ಗ್ರಾಮ ಪಂಚಾಯತಿಗಳ ನೌಕರರ ಪ್ರತಿನಿಧಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಪರಿಣಾಮ ತಕ್ಷಣ ಮುಷ್ಕರ ಹಿಂಪಡೆದು ಕಚೇರಿ ಕಾರ್ಯಗಳಲ್ಲಿ ತೊಡಗುವುದಾಗಿ ನೌಕರರ ಸಂಘದ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯ್ತಿಗಳ ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಸುಮಾರು 300ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಭಾಗವಹಿಸಿ ವಿವಿಧ ಬೇಡಿಕೆಗಳನ್ನು ಸಚಿವರ ಮುಂದೆ ಪ್ರಸ್ತಾಪಿಸಿದರು. ಮೂರು ಗಂಟೆ ನಡೆದ ಸಭೆಯಲ್ಲಿ 75ಕ್ಕೂ ಹೆಚ್ಚು ಬೇಡಿಕೆಗಳನ್ನು ಪ್ರಿಯಾಂಕ್ ಖರ್ಗೆ ಆಲಿಸಿದರು. ಬಳಿಕ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುತ್ತೇವೆ. ಜತೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬಡ್ತಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ…
ಹುಬ್ಬಳ್ಳಿ : ನನಗೆ ಡೈವೋರ್ಸ್ ಆಗಿದೆ ಬಾಳು ಕೊಡುತ್ತೇನೆಂದು ವಂಚಿಸಿದ, ನಿವೃತ್ತ ರೈಲ್ವೆ ನೌಕರನಿಗೆ ಬಿತ್ತು ಧರ್ಮದೇಟು!
ಹುಬ್ಬಳ್ಳಿ : ಇತ್ತೀಚಿಗೆ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ವಂಚನೆ, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದೀಗ ಹುಬ್ಬಳ್ಳಿಯಲ್ಲಿ ನಿವೃತ್ತ ರೈಲ್ವೆ ನೌಕರ ನೊಬ್ಬ ಮಹಿಳೆಗೆ ನನಗೆ ವಿಚ್ಛೇದನವಾಗಿದೆ ನಿನಗೆ ಬಾಳು ಎಂದು ಹೇಳಿ ಮಹಿಳೆಯ ಹತ್ತಿರ ಹಣ ಪೀಕಿ ವಂಚನೆ ಎಸಗಿದ್ದಾನೆ. ಇದೀಗ ಮಹಿಳೆ ಆತನಿಗೆ ಧರ್ಮದೇಟು ನೀಡಿರುವ ಘಟನೆ ನಡೆದಿದೆ. ವಿಚ್ಛೇದನವಾಗಿದೆ ಎಂದು ನಂಬಿಸಿ ಮೋಸ ಮಾಡಿದ್ದವನಿಗೆ ಮಹಿಳೆ ಧರ್ಮದೇಟು ನೀಡಿದ್ದಾಳೆ. ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ನಿವೃತ್ತ ರೈಲ್ವೆ ನೌಕರ ರಾಮಯ್ಯ (71) ಗೆ ರಾಧಿಕಾ ಎನ್ನುವ ಮಹಿಳೆ ಗೂಸಾ ಕೊಟ್ಟಿರುವ ಘಟನೆ ನಡೆದಿದೆ. ನನಗೆ ವಿಚ್ಛೇದನವಾಗಿದೆ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ವಂಚನೆ ಎಸಗಿದ್ದಾನೆ. ನಾಗಪುರ ಮೂಲದ ರಾಧಿಕಾಳನ್ನು ರಾಮಯ್ಯ ನಂಬಿಸಿ ಹಣ ಪಡೆದಿದ್ದ. ಇಂದು ಹುಬ್ಬಳ್ಳಿಗೆ ಬಂದಿದ್ದ ರಾಧಿಕಾ ಹಾಗೆ ಮತ್ತೆ ಹಣ ನೀಡುವಂತೆ ಕಿರುಕುಳ ನೀಡಿದ್ದಾನೆ. ಹಾಗಾಗಿ ವಂಚಕ ರಾಮಯ್ಯನಿಗೆ ನಡು ರಸ್ತೆಯಲ್ಲೇ ರಾಧಿಕ ರಾಮಯ್ಯಗೆ ಧರ್ಮದೇಟು ನೀಡಿದ್ದಾಳೆ. ಬಳಿಕ ರಾಮಯ್ಯನನ್ನು ರಾಧಿಕಾ…
ಯಾದಗಿರಿ : ಯಾದಗಿರಿಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ಸುರಪುರದ ಬಳಿ ನಡೆದಿದೆ. ಹೌದು ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೇ ಕೆಂಭಾವಿ ಸಮೀಪ ಸುರಪುರ ಹುನಗುಂದ ಹೆದ್ದಾರಿಯಲ್ಲಿ ಈ ಒಂದು ಅಪಘಾತ ನಡೆದಿದೆ. ವೀರಪ್ಪ ಮೊದನೂರು (30) ಶರಣಪ್ಪ ಪರಸನಹಳ್ಳಿ (28) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಕೆಂಭಾವಿ ಪಟ್ಟಣದ PSI ಅಶೋಕ್ ಕಾಂಬಳೆ ಭೇಟಿ ನೀಡಿ ಪರಿಶೀಲನೇ ನಡೆಸುತ್ತಿದ್ದಾರೆ. ಘಟನೆ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ನಾಳೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ಅಂದರೆ ಅಕ್ಟೋಬರ್ 13 ರವರೆಗೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜಂಬೂಸವಾರಿ, ವಿಜಯದಶಮಿ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ನಾಳೆ ಅಂದರೆ ಅಕ್ಟೋಬರ್ 11ರಂದು ಬೆಳಿಗ್ಗೆ 10:25 ಕ್ಕೆ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಲಿದ್ದಾರೆ. ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅಕ್ಟೋಬರ್ 12 ರಂದು ಮಧ್ಯಾಹ್ನ 1:41 ರಿಂದ 2:10ರವರೆಗೆ ನಂದಿ ದ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಅರಮನೆಯ ಬಲರಾಮದ್ವಾರದ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಅದೇ ರೀತಿ ಅಕ್ಟೊಬರ್ 12 ರಂದು ಸಂಜೆ 4 ರಿಂದ 4:30ವರೆಗೆ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯಲ್ಲಿ ಅಸೀನರಾಗುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಿದ್ದು, ವಿಜಯದಶಮಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ…
ರಾಮನಗರ : ಚನ್ನಪಟ್ಟಣದ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ದೇವಾಲಯ ಒಂದರಲ್ಲಿ ಜೆಡಿಎಸ್ ಸಭೆ ಬಳಿಕ ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ದಿನಾಂಕ ಘೋಷಣೆ ಆಗುತ್ತೆ ಎಂದು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಕಳೆದ ಎರಡು ಚುನಾವಣೆಯನ್ನ ನಿರಂತರವಾಗಿ ಈ ಕ್ಷೇತ್ರದಿಂದ ಗೆದ್ದಿದ್ದೇವೆ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡಲ್ಲ. 2013ರಲ್ಲೂ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. 2018, 23ರಲ್ಲಿ ನಿರಂತರವಾಗಿ ಗೆದ್ದಿದ್ದೇವೆ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ ಎಂದಿದ್ದಾರೆ. ಇನ್ನು ಕೋವಿಡ್ ಹಗರಣದ ಕುರಿತು ಎಸ್ ಐ ಟಿ ರಚನೆ ವಿಚಾರವಾಗಿ,ಈ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರುಗಳು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು. ಪಿಎಸಿಎಲ್ ಚೇರ್ಮನ್ ಅವರ ಪಕ್ಷದವರೇ ಇದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಈಗ ಏಕೆ ಕೊಟ್ಟಿದ್ದೀರಿ…
ಮಂಗಳೂರು : ದ್ವೇಷ ಭಾಷಣ ಮಾಡಿದ ಆರೋಪದ ಅಡಿ ಪ್ರಾಧ್ಯಪಕ ಅರುಣ್ ಉಳ್ಳಾಲ್ ವಿರುದ್ಧ FIR ದಾಖಲಾಗಿದ್ದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಇದೆ ಅಕ್ಟೋಬರ್ 15ರಂದು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದೆ. ಹೌದು ಇದೆ ಅಕ್ಟೋಬರ್ 15ಕ್ಕೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ್ ಮೆಂಡನ್ ಈ ಕುರಿತು ಹೇಳಿಕೆ ನೀಡಿದ್ದಾರೆ.ಹಿಂದೂಗಳನ್ನು ಗುರಿಯಾಗಿಸಿಕೊಂಡು ಅರುಣ್ ಉಳ್ಳಾಲ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಆದರೆ ಅರುಣ್ ಉಳ್ಳಾಲ್ ಪರವಾಗಿ ವಿ ಹೆಚ್ ಪಿ ನಿಲ್ಲುತ್ತದೆ ಎಂದು ತಿಳಿಸಿದರು. ಪ್ರಕರಣ ಹಿನ್ನೆಲೆ? ಮಂಗಳೂರಿನ ಉಳ್ಳಾಲ ತಾಲೂಕಿನ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಡಾ.ಅರುಣ್ ಉಳ್ಳಾಲ್, ಕ್ರೈಸ್ತ, ಮುಸ್ಲಿಮರು ಸಹಿತ ಭಿನ್ನ ಧರ್ಮದವರ ಮದುವೆ ಹಾಲ್‌ಗಳಲ್ಲಿ ಹಿಂದೂಗಳು ಮದುವೆಗಳನ್ನು ನಡೆಸಬಾರದು, ಅವರ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಹಿಂದೂಗಳು ಮಕ್ಕಳನ್ನು ಸೇರಿಸಬಾರದು, ಹಿಂದೂಗಳ ಒಡೆತನದ ಮದುವೆ ಹಾಲ್‌ಗಳು, ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಬಳಸಬೇಕು. ಒಂದು ಅಂಶ…
ಕಲಬುರ್ಗಿ : ಆಸ್ಪತ್ರೆಯ ಮೇಲ್ಚಾವಣಿಯಲ್ಲಿ ನೀರು ತುಂಬಲು ತೆರಳಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಆಸ್ಪತ್ರೆಯ ಡಿ ಗ್ರೂಪ್ ನೌಕರರ ಒಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಕರಜಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಸಿಬ್ಬಂದಿಯನ್ನು ಶಿವಪುತ್ರ (30) ಎಂದು ಹೇಳಲಾಗುತ್ತಿದೆ. ಶಿವಪುತ್ರ ಅಫ್ಜಲ್ ಪುರ ತಾಲೂಕಿನ ಮಾಶಾಳ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಎಂದಿನಂತೆ ಇಂದು ಕೂಡ ಆಸ್ಪತ್ರೆಯ ಮೇಲ್ಚಾವಣಿಯಲ್ಲಿ ನೀರು ತುಂಬಲು ಹೋದಾಗ ನೀರಿನ ಪೈಪ್ ವಿದ್ಯುತ್ ತಂತಿಗೆ ತಗುಲಿದೆ. ಹಾಗಾಗಿ ಶಿವಪುತ್ರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು ಘಟನೆ ಕುರಿತಂತೆ ಅಫ್ಜಲ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರ್ಗಿ : ಕಲಬುರ್ಗಿಯಲ್ಲಿ ಕಿಡಿಗೇಡಿಗಳು ರಸ್ತೆಯ ಬದಿಯಲ್ಲಿ ಇದ್ದಂತಹ ದರ್ಗಾವನ್ನು ಧ್ವಂಸಗೊಳಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಎಂಬ ಗ್ರಾಮದಲ್ಲಿ ಈ ಒಂದು ದುಷ್ಕೃತ್ಯ ನಡೆದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಇರುವಂತಹ ಹಜರತ್ ಸೈಯದ್ ಪೀರ್ ದರ್ಗಾದಲ್ಲಿನ ಸಮಾಧಿ ಕಿತ್ತು ಹಾಕಿದ ಕಿಡಿಗೇಡಿಗಳು ಮಜಾರ್, ಸುತ್ತಲೂ ಕಟ್ಟಿದ ತಡೆಗೋಡೆಯ ಕಲ್ಲುಗಳನ್ನು ನೆಲಕ್ಕುರುಳಿಸಿದ್ದಾರೆ. ದರ್ಗಾ ಧ್ವಂಸ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೈಯದ್ ಅಲಿ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.ಪ್ರಕರಣದ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಬದಿಯಲ್ಲಿದ್ದ ಹಜರತ್ ಸೈಯದ್ ಪೀರ್ ದರ್ಗಾ ಕಟ್ಟಡಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು ದರ್ಗಾ ಮುಂಭಾಗದಲ್ಲಿನ ಹೊಲದಲ್ಲಿ ಇದ್ದ ಮತ್ತೊಂದು ಸಣ್ಣದಾದ ಸಮಾಧಿ ಕಿತ್ತು…













