Author: KNN IT Team

ಉಡುಪಿ : ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಸಹಕಾರ ತೋರಿಸುತ್ತಿದ್ದು ಕೇಂದ್ರದ ಯೋಜನೆಗಳನ್ನು ಅನುಷ್ಠಾನ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಸಿಎಸ್ ಹೋಗಬಾರದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ವಿಕಸಿತ ಭಾರತದ ಯೋಜನೆ ಅನುಷ್ಠಾನವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದೇನೆ. ಆದ್ರೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಕೇಂದ್ರ ಸರ್ಕಾರದ ಕಾರ್ಯ ಯೋಜನೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದ ಅವರು ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ನಂಬಿಕೂತರೆ ಆಗುವುದಿಲ್ಲ, ಕೇಂದ್ರ ಕಾಲಕಾಲಕ್ಕೆ ಅನುದಾನ ಕೊಡುತ್ತದೆ. ರಾಜ್ಯ ಸರ್ಕಾರ ಮೊದಲು ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಸಿದ್ದರಾಮಯ್ಯನವರೇ 33,000 ಕೋಟಿ ರೂಪಾಯಿ ನಷ್ಟವಾಗಿದ್ದು 42 ಲಕ್ಷ ರೈತರಿಗೆ…

Read More

ಶಿವಮೊಗ್ಗ : ಹೊಸನಗರ ತಾಲ್ಲೂಕಿನ ಅರಮನೆಕೊಪ್ಪದ ಗ್ರಾಮ ವ್ಯಾಪ್ತಿಯ 18 ವರ್ಷದ ಯುವತಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಗೆ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್ ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗಿದೆ. 2019ರಲ್ಲಿ ಮಂಗನ ಕಾಯಿಲೆ ಸ್ಫೋಟಗೊಂಡ ಹಿನ್ನೆಲೆ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಿತ್ತು. ಎರಡು ಅವಧಿಯಿಂದ ಸರಕಾರ ಲಸಿಕೆ ಸಹ ನಿಲ್ಲಿಸಿರುವುದರಿಂದ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ. ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ಚಿಕಿತ್ಸೆ ಪಡೆಯಬಹುದಾದರೂ ಸ್ಕಾö್ಯನಿಂಗ್ ಇತರೆ ಖರ್ಚುಗಳನ್ನು ಸ್ವಂತವಾಗಿ ಭರಿಸಬೇಕಿದೆ. ಕಾಡಂಚಿನ ಬಡ…

Read More

ದೊಡ್ಡವರಾಗಿದ್ರೂ ಕೂಡ ಕೆಲವರು ಚಿಕ್ಕ ಮಕ್ಕಳ ಹಾಗೆ ಆಡುತ್ತಾರೆ. ಅವರ ನಡೆ, ಅವರಾಡುವ ಮಾತು, ಮಾಡೋ ಕೆಲಸ ಎಲ್ಲದೂ ಚಿಕ್ಕಮಕ್ಕಳ ಹಾಗೆಯೇ ಇರುತ್ತದೆ. ಇದನ್ನು ಕಂಡ ನಾವು ಓಹ್ ಕ್ಯೂಟ್… ಕ್ಯೂಟ್ನೆಸ್ ಅನ್ನುತ್ತಾ ಅವರನ್ನು ಮನಸಾರೆ ಮೆಚ್ಚುತ್ತೇವೆ. ಆದರೆ ಇದು ಕ್ಯೂಟ್ನೆಸ್ ಅಲ್ಲ, ಒಂದು ರೋಗವಾಗಿದೆ. ದೊಡ್ಡವರಾಗಿದ್ರೂ ಕೂಡ ಕೆಲವರು ತಾವು ಬಾಲ್ಯದಲ್ಲಿ ನೋಡುತ್ತಿದ್ದ ಕಾರ್ಟೂನ್‌ಗಳು, ಆಡುತ್ತಿದ್ದ ಗೊಂಬೆಗಳನ್ನು ಇಂದಿಗೂ ಎಂಜಾಯ್ ಮಾಡುತ್ತಾ ಮಕ್ಕಳಂತೆ ವರ್ತಿಸುತ್ತಿರಬಹುದು. ಹೀಗೆ ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಎಲ್ಲರೂ ಕ್ಯೂಟ್ನೆಸ್ ಅನ್ನುತ್ತಾರೆ. ಆದರೆ ಇದನ್ನು ಸೈಕಾಲಜಿಯಲ್ಲಿ ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದುವೇ ‘ಪೀಟರ್ ಪ್ಯಾನ್ ಸಿಂಡ್ರೋಮ್’. ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ. ಹೆಚ್ಚಿನ ಬಾರಿ ಅವರಿಗಿನ್ನೂ ಮೆಚುರಿಟಿ ಬಂದಿಲ್ಲ ಎಂದುಕೊಂಡು ಉಳಿದವರು ಸುಮ್ಮನಾಗುತ್ತಾರೆ. ಆದರೆ, ನಿಜವಾಗಿ ಅವರಿಗೆ ತಜ್ಞರಿಂದ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿರುತ್ತದೆ. ಬೆಳವಣಿಗೆಯು ಕುಂಠಿತಗೊಳ್ಳುವ ಅಥವಾ ಬೆಳವಣಿಗೆ ಸರಿಯಾಗಿ ಆಗದೇ…

Read More

ಮಂಗಳೂರು : ನಗರವನ್ನು ಡ್ರಗ್ಸ್ ಮುಕ್ತ ಮಾಡಲು ಮಂಗಳೂರು ನಗರ ಪೊಲೀಸರು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ಮಂಗಳೂರು ನಗರದಲ್ಲಿ ಆಯೋಜಿಸಲಾಗಿತ್ತು. ನಗರದ ಪುರಭವನದಲ್ಲಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ವಾಕ್ ರನ್ ಸೈಕ್ಲೋಥಾನ್ ಗೆ ಚಾಲನೆ ನೀಡಿದರು. ಡಿಸಿಪಿ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿ ಮತ್ತು ಶಿಕ್ಷಕ ವರ್ಗ ಸಾಥ್ ನೀಡಿದರು. ಎಂ ಜಿ ರಸ್ತೆಯ ಟಿಎಂಎ ಪೈ ರೆಗೂ ವಾಕಥಾನ್ ನಡೆದರೆ, ಸೈಕ್ಲೋಥಾನ್ ಟೌನ್‌ಹಾಲ್‌ನಿಂದ ಹೊರಟು-ಕ್ಲಾಕ್‌ಟವರ್-ಹಂಪನಕಟ್ಟೆ-ಎಲ್‌ಹೆಚ್‌ಹೆಚ್-ಮಿಲಾಗ್ರೀಸ್-ಫಳ್ನೀರ್-ಕಂಕನಾಡಿ-ಬೆಂದೂರ್‌ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಷನ್ ಹಾಲ್ ವರೆಗೆ 5 ಕಿ.ಮೀ ವರೆಗೆ ಸಾಗಿತು. ಈ ಕಾರ್ಯಕ್ರಮದಲ್ಲಿ ನಗರದ 24 ಕಾಲೇಜ್‌ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ 2 ಸಾವಿರಕ್ಕೂ ಅಧಿಕ ಜನ ಈ ಮಾದಕ ವ್ಯಸನ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿದ್ದರು.

Read More

ಪ್ರತಿಯೊಬ್ಬರೂ ಬಾಯಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ಇದರ ಹೊರತಾಗಿಯೂ, ಕೆಲವರಿಗೆ ಸಾರ್ವಕಾಲಿಕ ಬಾಯಿ ದುರ್ವಾಸನೆ ಇರುತ್ತದೆ. ಇದರಿಂದ ಅನೇಕ ಬಾರಿ ಜನರ ಮುಂದೆ ಮುಜುಗರ ಅನುಭವಿಸಬೇಕಾಗುತ್ತದೆ. ಈ ಕೆಟ್ಟ ವಾಸನೆಯನ್ನು ತೊಡೆದುಹಾಕುವ ಬಗ್ಗೆ ತಿಳಿಯೋಣ. ಹಲ್ಲು ಅಥವಾ ಒಸಡುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿರಿ. ನೀವು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದರೆ, ನೀವು ಮನೆಯಲ್ಲಿಯೇ ಕೆಲವು ಪರಿಹಾರಗಳನ್ನು ಪ್ರಯತ್ನಿಸಬಹುದು. ನೀವು ದಿನಕ್ಕೆ ಎರಡು ಬಾರಿಯಾದರೂ ಬ್ರಷ್ ಮಾಡುವುದು ಮುಖ್ಯ. ನೀವು ಬಳಕೆ ಮಾಡುವ ಬ್ರಷ್ ಮೃದುವಾಗಿರಬೇಕು, ಗಟ್ಟಿಯಾದ ಬ್ರಷ್ ನಿಮ್ಮ ಹಲ್ಲು ಮತ್ತು ಒಸಡುಗಳ ಮೇಲಿನ ಪದರವನ್ನು ಮಾತ್ರ ಹಾನಿಗೊಳಿಸುತ್ತದೆ. ಹಲ್ಲುಜ್ಜುವುದರ ಜೊತೆಗೆ ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಆಲ್ಕೋಹಾಲ್ ಮುಕ್ತ ಮೌತ್ ವಾಶ್ ಬಳಸಿ. ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ನೀವು ಬಾಯಿಯ ದುರ್ವಾಸನೆ ಅನುಭವಿಸಿದರೆ, ಕ್ಯಾರೆಟ್ ಮತ್ತು ಸೇಬುಗಳನ್ನು ತಿನ್ನಿರಿ. ಸಿಗರೇಟ್, ಆಲ್ಕೋಹಾಲ್, ತಂಬಾಕು ಮತ್ತು ಕೆಫೀನ್ ಹೊಂದಿರುವ ಪಾನೀಯಗಳಿಂದ ನೀವು ಹೆಚ್ಚು…

Read More

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಹೀಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಮಕ್ಕಳಿಗೆ ‘ರೆಡಿ ಟು ಮಿಕ್ಸ್’ ಆಹಾರ ನೀಡಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಅಂಗನವಾಡಿಗಳಲ್ಲಿ ಸಿರಿಧಾನ್ಯಗಳ ಲಡ್ಡು, ಕಿಚಡಿ, ಸಾಂಬಾರ್ ಮೊದಲಾದವುಗಳನ್ನು ಫಟಾ ಫಟ್ ಎಂದು ಶೀಘ್ರವಾಗಿ ಮಕ್ಕಳಿಗೆ ನೀಡಬಹುದಾಗಿದೆ. ಸಾಂಬಾರ್ ತಯಾರಿಸಲು ಬೇಕಾದ ವಿವಿಧ ಪದಾರ್ಥಗಳ ಬದಲಿಗೆ ಒಗ್ಗರಣೆ ಮಿಶ್ರಣದ ಪುಡಿ ನೀಡಲಾಗುತ್ತದೆ. ತೊಗರಿಬೇಳೆ ಬೇಯಿಸಿ ಈ ಪುಡಿಯನ್ನು ಹಾಕಿದರೆ ಸಾಂಬಾರು ಸಿದ್ಧವಾಗುತ್ತದೆ. ಇಲ್ಲಿಯವರೆಗೆ ಅಂಗನವಾಡಿಗಳಲ್ಲಿ 3 – 6 ವರ್ಷದೊಳಗಿನ ಮಕ್ಕಳಿಗೆ ಮೊದಲು ಬೆಳಗಿನ ಉಪಾಹಾರಕ್ಕೆ ಬೆಲ್ಲ ಮತ್ತು ಶೇಂಗಾ ಬೀಜ ಮಿಶ್ರಿತ ಚಿಕ್ಕಿ ನೀಡಲಾಗುತ್ತಿತ್ತು. ಇನ್ನೂ ಮುಂದೆ ಬೆಳಗಿನ ಉಪಾಹಾರಕ್ಕೆ ಮಕ್ಕಳಿಗೆ ಒಂದು ದಿನ ಬೆಲ್ಲಮಿಶ್ರಿತ ಪುಡಿಯನ್ನು ನೀಡಿದರೆ ಮತ್ತೊಂದು ದಿನ ಸಿರಿಧಾನ್ಯಗಳ ಲಡ್ಡುವನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಕ್ಕಿ ಮತ್ತು ತೊಗರಿಬೇಳೆ ಖರೀದಿಗಷ್ಟೇ ಹಣ ನೀಡಲಾಗುತ್ತದೆಯಾಗಿದೆ.

Read More

ಆಲೂಗಡ್ಡೆ ಬಹಳ ಜನರಿಗೆ ಇಷ್ಟವಾದುದು. ಇವುಗಳನ್ನು ಅನೇಕ ವಿಧಗಳಲ್ಲಿ ಬಳಸಬಹುದು. ಆಲೂಗಡ್ಡೆ ಬೋಂಡಾ, ಪಲ್ಯ, ಸಾಗು ಹೀಗೆ ಹಲವು ವಿಧಗಳಲ್ಲಿ ಬಳಸಬಹುದು. ಹಾಗೂ ಇದು ಬೇಗನೇ ಬೇಯುವುದರಿಂದ ಹೆಚ್ಚಿನ ಶ್ರಮ ಕೂಡಾ ಇರುವುದಿಲ್ಲ. ಆದರೆ ನೀವು ಗಮನಿಸಿರುವುದು ಈ ಆಲೂಗಡ್ಡೆಯನ್ನು ಕತ್ತರಿಸಿದಾಗ ಅದರ ಬಣ್ಣ ಹಸಿರಾಗಿರುವುದು. ಇಲ್ಲಿ ಕೆಲವರಿಗೆ ಒಂದು ಪ್ರಶ್ನೆ ಕಾಡುತ್ತೆ, ಇದನ್ನು ತಿನ್ನಬಹುದೇ ಎಂದು. ಇದು ಆರೋಗ್ಯಕ್ಕೆ ಉತ್ತಮವೇ ಎಂದು. ಆಲೂಗಡ್ಡೆ ಮೇಲೆ ಹಸಿರು ಬಣ್ಣ ಕಂಡರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಸೆಯಲಾಗುತ್ತದೆ. ಏಕೆಂದರೆ ಇದು ಕೊಳೆತು ಹೋಗಿದೆ ಎಂದು ಜನರು ಭಾವಿಸುತ್ತಾರೆ. ಆಲೂಗಡ್ಡೆ ಮೇಲೆ ಹಸಿರು ಬಣ್ಣ ಹೊಂದಿದ್ದರೆ ಅದನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ ಎಂದು ಆಹಾರ ತಜ್ಞರ ಮಾತು. ಸೋಲನೈನ್‌ ಎಂಬ ಗ್ಲೈಕೋಆಲ್ಕಲಾಯ್ಡ್‌ ಸಂಯುಕ್ತವು ಅಧಿಕವಾಗಿರುವಾಗ ಆಲೂಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗುತ್ತದೆ. ಇಂತಹ ಆಲೂಗಡ್ಡೆ ತಿಂದರೆ ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ವಿಷಕಾರಿ ಎಂದು ಹೇಳಲಾಗಿದೆ. ಹೆಚ್ಚು ಹಸಿರು ಬಣ್ಣ ಹೊಂದಿರುವ ಆಲೂಗಡ್ಡೆ…

Read More

ತುಂಬಾಜನರು ಆಗಾಗ್ಗೆ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ನಮ್ಮಲ್ಲಿ ಹಲವರು ಸಾಮಾನ್ಯವಾಗಿ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಈ ವಾತ ತಲೆನೋವನ್ನು ನಮ್ಮ ಮನೆಯಲ್ಲಿ ಇರುವ ವಸ್ತುಗಳಿಂದ ಸರಳವಾಗಿ ಗುಣಪಡಿಸಬಹುದು. ನಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತಲೆನೋವು ಉಂಟಾಗುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ. ನಮ್ಮ ಜಠರಗರುಳಿನ ಆರೋಗ್ಯವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ನಿಕಟ ಸಂಬಂಧ ಹೊಂದಿದೆ. ಉರಿಯೂತದ ಕರುಳಿನಿಂದ ಕೆಲವು ರಾಸಾಯನಿಕಗಳು ರಕ್ತಪ್ರವಾಹಕ್ಕೆ ಸಾಗುತ್ತವೆ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ತಲೆನೋವು ಉಂಟಾಗುತ್ತದೆ. ಕೆಲವರಿಗೆ ವಾಕರಿಕೆ ಮತ್ತು ವಾಂತಿ ಕೂಡ ಉಂಟಾಗಬಹುದು. ಸರಿಯಾದ ಆಹಾರದ ಕೊರತೆಯು ಅಜೀರ್ಣ ಮತ್ತು ವಾಯು ಉಂಟಾಗುತ್ತದೆ. ಮಲಬದ್ಧತೆ ಗ್ಯಾಸ್ ತಲೆನೋವಿಗೆ ಕಾರಣವಾಗಬಹುದು. ಹೊಟ್ಟೆಯ ಸಮಸ್ಯೆಗಳು ನಮಗೆ ಅನಿಲ ಮತ್ತು ಅನಾನುಕೂಲತೆಯನ್ನು ಉಂಟುಮಾಡಬಹುದು. ಗ್ಯಾಸ್ ತಲೆನೋವನ್ನು ನೈಸರ್ಗಿಕವಾಗಿ ಮನೆಮದ್ದುಗಳಿಂದ ಗುಣಪಡಿಸಬಹುದು. ನಿಂಬೆ ರಸವು ಗ್ಯಾಸ್ ತಲೆನೋವನ್ನು…

Read More

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಹೆಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 37 (J) ಅಡಿ ರಾಜ್ಯದ ಸರಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ.8 ರಷ್ಟು ಮೀಸಲಾತಿಯ ಅನುಸಾರ 8,278 ಹುದ್ದೆಗಳಿಗೆ ಮುಂಬಡ್ತಿ ನೀಡಿ ಸರಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Read More

ದೇಹದಲ್ಲಿ ಕಾಣಿಸುವ ಪ್ರಮುಖ ಖಾಯಿಲೆಗಳ ಪೈಕಿ ಕಿಡ್ನಿ ಫೇಲ್ಯೂರ್ ಕೂಡ ಒಂದಾಗಿದೆ. ಇಂದು ವಯಸ್ಸಾದವರಲ್ಲಿ ಮಾತ್ರವಲ್ಲ ಯುವಜನರಲ್ಲೂ ಈ ಸಮಸ್ಯೆ ಕಾಡುತ್ತಿದೆ. ಇದೀಗ ಹೊಸ ಸಂಶೋದನೆಯೊಂದು ಅಚ್ಚರಿ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದು, ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಕಿಡ್ನಿ ಫೇಲ್ಯೂರ್ ಆಗೋದು ಪಕ್ಕಾ ಎನ್ನಲಾಗಿದೆ. ದೇಹದ ಪ್ರಮುಖ ಅಂಗವಾದ ಮೂತ್ರಪಿಂಡವು ತನ್ನ ಕೆಲಸ ಮಾಡಲು ವಿಫಲವಾದರೆ ಜೀವಕ್ಕೆ ಅಪಾಯ. ಇಂದು ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಆ ಲಕ್ಷಣಗಳು ಯಾವುವುಯೆಂದರೆ, ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ. ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ. ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. ಕಿಡ್ನಿ…

Read More