Author: KNN IT Team

ಬೆಂಗಳೂರು-ಮೈಸೂರು ನಡುವೆ ಎಕ್ಸ್‌ಪ್ರೆಸ್‌ವೇನಲ್ಲಿ ಜಿಪಿಎಸ್‌ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ತಿಳಿದುಬಂದಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದರೆ, ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಅಳವಡಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಿಪಿಎಸ್‌ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುವ ಜಿಪಿಎಸ್ ಸಾಧನದ ಮೂಲಕ ಟೋಲ್‌ ಸಂಗ್ರಹವಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ವಾಹನಗಳು ಎಕ್ಸ್‌ಪ್ರೆಸ್‌ವೇ ಪ್ರವೇಶಿಸುವ ಮತ್ತು ನಿರ್ಗಮಿಸುವ ಸ್ಥಳಗಳ ಮಾಹಿತಿ ಜಿಪಿಎಸ್‌ ಸಾಧನದಿಂದ ದಾಖಲಾಗುತ್ತದೆ. ವಾಹನಗಳ ಸಂಚಾರದ ಅಂತರದ ಅನುಗುಣವಾಗಿ ಟೋಲ್‌ ಕಡಿತವಾಗುತ್ತದೆ. ಇದರಿಂದ ಎಕ್ಸ್‌ಪ್ರೆಸ್‌ವೇನಲ್ಲಿ ಕಡಿಮೆ ದೂರ ಕ್ರಮಿಸುವ ವಾಹನಗಳಿಗೆ ಹೆಚ್ಚು ಟೋಲ್ ನೀಡುವುದು ತಪ್ಪುತ್ತದೆ ಎಂದು ಮಾಹಿತಿ ದೊರಕಿದೆ.

Read More

ಜನವರಿ 10ರ ವರೆಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಆರಂಭದಲ್ಲಿಯೇ ಮಳೆ ಆರಂಭವಾಗಿ ಶುಭ ಸೂಚನೆ ನೀಡಿತ್ತು. ಆದರೆ, ಬೆಳೆ ಕಟಾವಿಗೆ ಬಂದಾಗ ಸುರಿದ ಅಕಾಲಿಕ ಮಳೆಯಿಂದ ಕೆಲವೆಡೆ ಸಮಸ್ಯೆಯೂ ಉಂಟಾಗಿತ್ತು. ಇನ್ನು ಕಳೆದ ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ಹಲವೆಡೆಗಳಲ್ಲಿ ಮಳೆ ಸುರಿಯುತ್ತಿದೆ. ಇನ್ನು ಎರಡು ದಿನ ಅಂದರೆ ಜನವರಿ 10ವರೆಗೂ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಗಳು ಕರ್ನಾಟಕದಲ್ಲಿ ಅಕಾಲಿಕ ಮಳೆ ಸುರಿಯುವಿಕೆಗೆ ಕಾರಣವಾಗಿದೆ. ಚಳಿಯ ಜೊತೆ ಮಳೆಯು ಸೇರಿ ವಾತಾವರಣವು ಭಿನ್ನವಾಗಿದ್ದು, ಇದು ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಪ್ರಮುಖವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ಉತ್ತರ…

Read More

ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬುದು ಜಗತ್ತಿನ ಕಟುಸತ್ಯ. ಅಧಿಸಾಮಾನ್ಯವಾದಿಗಳು ಸಾವಿನ ಕುರಿತು ದೀರ್ಘಕಾಲ ತನಿಖೆ ಮಾಡಿದ್ದು, ಇದರ ಪ್ರಕಾರ ಸಾವನ್ನು ಮುನ್ಸೂಚಿಸಬಲ್ಲ ಅನೇಕ ಪ್ರಾಣಿಗಳಿವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪ್ರಾಣಿಗಳು ಮನುಷ್ಯನ ಸಾವಿನ ಸುದ್ದಿಯನ್ನು ಮೊದಲೇ ತಿಳಿಸುತ್ತವೆಯಾಗಿದೆ. ನಾಯಿಗಳು ಸಾವನ್ನು ಮೊದಲೇ ಗ್ರಹಿಸಬಲ್ಲವು ಎನ್ನಲಾಗಿದೆ. ಯಾರದ್ದಾದರು ಸಾವು ಹತ್ತಿರವಾಗಿದೆ ಎಂದು ತಿಳಿದಾಗ ನಾಯಿಗಳು ಅಳುವ ರೀತಿಯಲ್ಲಿ ಕೂಗಲು ಆರಂಭ ಮಾಡುತ್ತವೆ. ಹಾಗಾಗಿ ಮನೆಯಲ್ಲಿನ ಹಿರಿಯರು ನಾಯಿ ಅಳುವ ರೀತಿಯಲ್ಲಿ ಕೂಗಿದರೆ ಒಳ್ಳೆಯದಲ್ಲ ಎನ್ನುತ್ತಾರೆ. ಬಾವಲಿಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಹಲವರು ಬಲವಾಗಿ ನಂಬುತ್ತಾರೆ. ಕಾಗೆ ಹಾರುವಾಗ ತಲೆಗೆ ತಾಗಿದರೆ ಮಾತ್ರ ಅದನ್ನು ಅಪಶಕುನ ಎನ್ನಲಾಗುತ್ತದೆ.ಆರ್ಥಿಕ ಸಂಕಷ್ಟದಿಂದ ಜೀವನದಲ್ಲಿ ತಾಪತ್ರಯಗಳು ಹೆಚ್ಚಾಗುತ್ತವೆ. ಅದೇ ರೀತಿ, ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಇದು ಒಂದು ಕೆಟ್ಟ ಘಟನೆ ನಡೆಯುವ ಮುನ್ಸೂಚನೆ ಎನ್ನಲಾಗುತ್ತದೆ. ಹಗಲಿನಲ್ಲಿ ನರಿ ಮನೆಗೆ ಬಂದರೆ ಆ ಮನೆಯಲ್ಲಿ ಯಾರಾದರೂ ಸಾಯುತ್ತಾರೆ ಎನ್ನಲಾಗುತ್ತದೆ. ನರಿಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಂಡುಬರುವುದಿಲ್ಲ.…

Read More

ಶಾಲಾ ಮಕ್ಕಳ ಶಾಲಾ ಬ್ಯಾಗ್ ಹೊರೆ ಇಳಿಸಲು ‘ಶಿಕ್ಷಣ ಇಲಾಖೆ’ ಮಹತ್ವದ ತೀರ್ಮಾನ ಕೈಗೊಂಡಿದೆ. ಶಾಲಾ ಮಕ್ಕಳ ಶಾಲಾ ಬ್ಯಾಗ್ ಹೊರೆ ಇಳಿಸಲು ‘ಶಿಕ್ಷಣ ಇಲಾಖೆ’ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪಠ್ಯ ಪುಸ್ತಕವನ್ನು ಭಾಗ-1, ಭಾಗ-2 ವಿಭಾಗಗಳಾಗಿ ವಿಂಗಡಿಸಲು ಚಿಂತನೆ ನಡೆಸಿದೆ. ಹೀಗಾಗಿ, ಎಸ್ಎ-1 ಹಾಗೂ ಎಸ್‌ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ. ಸರ್ಕಾರ ಅರ್ಧವಾರ್ಷಿಕ ಪರೀಕ್ಷೆ ವರೆಗೆ ಭಾಗ-1 ಮತ್ತು ದಸರಾ ರಜೆ ಮುಗಿದ ನಂತರ ಭಾಗ-2 ಪಠ್ಯಪುಸ್ತಕಗಳನ್ನು ಶಾಲೆಗೆ ತರಿಸುವ ಯೋಜನೆ ಹಾಕಿಕೊಂಡಿದೆ. ಇದರ ಜೊತೆಗೆ ಹೆಚ್ಚುವರಿ ಮಕ್ಕಳ ನೋಟ್ ಪುಸ್ತಕಗಳು ಶಾಲೆಯಲ್ಲೇ ಇರಿಸಲು ಕೂಡ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆಯಾಗಿದೆ.

Read More

ಈಗಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೃದಯಾಘಾತಕ್ಕೆ ಜೀವನಶೈಲಿ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಅನಾರೋಗ್ಯಕರ ಆಹಾರ ಕ್ರಮ, ಕೆಲಸದ ಒತ್ತಡದಿಂದ ಕೆಲವರು ಧೂಮಪಾನ ಅಥವಾ ಮದ್ಯಪಾನ ಮಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯಾಘಾತದ ಎಚ್ಚರಿಕೆಯ ಸಂಕೇತಗಳೆಂದರೆ, – ಆಹಾರ ಸೇವಿಸಿದ ನಂತರ ಹೊಟ್ಟೆಯಲ್ಲಿ ಅಸಿಡಿಟಿ ಕಾಣಿಸಿಕೊಳ್ಳುವುದು. – ಹೆಚ್ಚು ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. – ಸುಲಭದ ಕೆಲಸಗಳನ್ನೂ ಮಾಡಲು ತೊಂದರೆ ಉಂಟಾಗುವುದು. – ದವಡೆಯಿಂದ ಸೊಂಟದವರೆಗೆ ಭಾರವಾದ ಭಾವನೆ ಉಂಟಾಗಬಹುದು. – ಹಠಾತ್ ಹೆದರಿಕೆಯ ಭಾವನೆ ಉಂಟಾಗಬಹುದು. ಆಹಾರದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸಿಕೊಂಡು ಕಾರ್ಬೋಹೈಡೇಟ್ಗಳನ್ನು ಕಡಿಮೆ ಮಾಡಿಕೊಳ್ಳಿ. ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಉಪ್ಪು, ಸಕ್ಕರೆ, ಅಕ್ಕಿ ಮತ್ತು ಮೈದಾವನ್ನು…

Read More

ಬೆಂಗಳೂರು : ಮಕರ ಸಂಕ್ರಾಂತಿಯ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದನ್ನು ಮಹಾದಾನ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಏನನ್ನಾದರೂ ದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವವರಿಗೆ ಸೂರ್ಯದೇವನು ಅಪಾರವಾದ ಅನುಗ್ರಹವನ್ನು ನೀಡುತ್ತಾನೆ ಮತ್ತು ಅಂತಹ ವ್ಯಕ್ತಿಯು ಸಮಾಜದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ದಿನದಂದು ಯಾವೆಲ್ಲ ಪ್ರಮುಖ ವಸ್ತುಗಳನ್ನು ದಾನ ಮಾಡುವ ಮೂಲಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಭಂಡಾರವು ಮನೆಯಲ್ಲಿ ಉಳಿಯುತ್ತದೆ ಎಂದು ತಿಳಿಯೋಣ. ಈ 6 ಪ್ರಮುಖ ವಸ್ತುಗಳನ್ನು ದಾನ ಮಾಡಿ : – ಬೆಲ್ಲ : ಮಕರ ಸಂಕ್ರಾಂತಿಯ ದಿನದಂದು ಬೆಲ್ಲವನ್ನು ದಾನ ಮಾಡುವವರಿಗೆ ಸೂರ್ಯ ದೇವನು ಬೇಗನೆ ಪ್ರಸನ್ನನಾಗುತ್ತಾನೆ. ಜ್ಯೋತಿಷ್ಯದಲ್ಲಿ, ಬೆಲ್ಲವು ನೇರವಾಗಿ ಸೂರ್ಯ ದೇವರಿಗೆ ಸಂಬಂಧಿಸಿದೆ. ಈ ದಿನದಂದು ಬೆಲ್ಲವನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. – ಕಪ್ಪು ಎಳ್ಳು : ಕಪ್ಪು…

Read More

ಬೆಂಗಳೂರು : ಕೆಲವೇ ದಿನಗಳಲ್ಲಿ ಪುತ್ತಿಗೆ ಮಠದ ಸುಗಣೇಂದ್ರ ತೀರ್ಥರು ಪರ್ಯಾಯ ಪೀಠವನ್ನು ಅಲಂಕರಿಸಲಿದ್ದು, ಈ ನಡುವೆ ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ರಿದ್ದ ಪೀಠ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದೆ. 2008ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟ ಮಠಗಳ ಪೈಕಿ ಆರು ಮಠಗಳ ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಶೀರೂರು ಶ್ರೀಗಳು ಮಾತ್ರ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಬೆಂಬಲ ಸೂಚಿಸಿದ್ದರಾಗಿದೆ.

Read More

ಇತ್ತೀಚಿನ ದಿನಗಳಲ್ಲಿ ಅನೇಕ ಜನರ ಆರೋಗ್ಯ ಪದ್ಧತಿ ಸಂಪೂರ್ಣವಾಗಿ ಬದಲಾಗಿದೆ. ಆಹಾರ ಸೇವಿಸುವ ಸಮಯವೂ ಸಂಪೂರ್ಣ ಅಸಹಜವಾಗಿದೆ. ಸಾಫ್ಟ್‌ವೇರ್ ಉದ್ಯೋಗಗಳಿಂದಾಗಿ ಅನೇಕರು ಮಧ್ಯಾಹ್ನದ ಊಟದ ಸಮಯದಲ್ಲಿ ರಾತ್ರಿಯ ಊಟ, ಮಲಗುವ ಮುನ್ನ ತಿಂಡಿ ಮುಂತಾದ ಜಂಕ್ ಫುಡ್‌ಗಳನ್ನು ತಿನ್ನುತ್ತಾರೆ. ಅದೇ ರೀತಿ ಜಂಕ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದು ಮತ್ತು ಸಿಕ್ಕಿದ್ದನ್ನು ತಿನ್ನುವುದರಿಂದ ಕೊಬ್ಬು ವಿಪರೀತವಾಗಿ ಶೇಖರಣೆಗೊಂಡು ದಪ್ಪಗಾಗಲು ಕಾರಣವಾಗುತ್ತದೆ. ಅದೇನೇ ಇರಲಿ ಸರಿಯಾದ ಡಯಟ್ ಪಾಲಿಸಿದರೆ ಸ್ಲಿಮ್ ಆಗಿ ಎಂದೆಂದಿಗೂ ಸ್ಲಿಮ್ ಆಗಿ ಉಳಿಯಬಹುದು ಈ ಕೆಳಗಿನ ಕೆಲವು ಟಿಪ್ಸ್ ಪಾಲಿಸಿದರೆ ಸ್ಲಿಮ್ ಆಗಿರಬಹುದು. ಆಹಾರಕ್ರಮದಲ್ಲಿರುವಾಗ, ತೂಕ ಹೆಚ್ಚಾಗುವುದನ್ನು ತಪ್ಪಿಸಲು ಅವರು 7 ಗಂಟೆಗೆ ಮೊದಲು ತಿನ್ನಬೇಕು. ಲಘು ಆಹಾರ ಸೇವಿಸಬೇಕು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಆಗಾಗ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಯಾವಾಗಲೂ ಏನು ತಿನ್ನಬೇಕೆಂದು ಯೋಚಿಸುತ್ತಾರೆ. ಇಂದು ನಾವು ನಿಮಗೆ ಅಂತಹ ಐದು ಖಾದ್ಯಗಳ ಬಗ್ಗೆ ಹೇಳಲಿದ್ದೇವೆ, ಅದು ನಿಮ್ಮ ತೂಕವನ್ನು ಹೆಚ್ಚಿಸುವುದಿಲ್ಲ. ಹಾಗೆಯೇ ನಿಮಗೆ…

Read More

ಸುಮಾರು ಎರಡು ತಿಂಗಳ ಹಿಂದೆ, ಭಾರತದಲ್ಲಿ ತಯಾರಿಸಿದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ 2023ರ ವರ್ಷದ ವಿಸ್ಕಿ ಪ್ರಶಸ್ತಿಯನ್ನು ನೀಡಿದಾಗ ಸಿಂಗಲ್ ಮಾಲ್ಟ್ ಎಂಬ ಪದವು ಮತ್ತೊಮ್ಮೆ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಜನರು ಸಿಂಗಲ್ ಮಾಲ್ಟ್‌ನ ಪ್ರಯೋಜನವೇನು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಸಾಮಾನ್ಯವಾಗಿ ವಿಸ್ಕಿ ಎಂಬ ಪದ ಕೇಳಿದರೇನೇ ಜನರ ಕಣ್ಣುಗಳು ಹೊಳೆಯುತ್ತವೆ. ಎಲ್ಲರಿಗೂ ತಿಳಿದಿರುವಂತೆ ವಿಸ್ಕಿಯಲ್ಲಿ ಬ್ಲೆಂಡೆಡ್, ಸಿಂಗಲ್ ಮಾಲ್ಟ್ ಮತ್ತು ಬೌರ್ಬನ್ ವಿಸ್ಕಿ ಎಂದು ಹಲವು ವಿಧಗಳಿವೆ. ಆದರೆ ಸಿಂಗಲ್ ಮಾಲ್ಟ್ ವಿಸ್ಕಿ ಮಾತ್ರ ಅದರ ವಿಶಿಷ್ಟ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದ್ದು, ವಿಶೇಷ ರೀತಿಯ ವಿಸ್ಕಿಯಾಗಿ ಫೇಮಸ್​​​ ಆಗಿದೆ. ಇದೀಗ ಗ್ಲೆನ್‌ಲಿವೆಟ್, ಮಕಲನ್, ಲಗಾವುಲಿನ್ ಮತ್ತು ತಾಲಿಸ್ಕರ್​​​​ನಂತಹ ವಿಸ್ಕಿಯನ್ನೇ ಹಿಂದಿಕ್ಕಿ ಸ್ವದೇಶಿ ಸಿಂಗಲ್ ಮಾಲ್ಟ್ ಜನಪ್ರಿಯತೆ ಪಡೆಯುತ್ತಿದೆ. ಹೌದು, ಇದು ಸಿಂಗಲ್ ಮಾಲ್ಟ್ ವಿಸ್ಕಿಯ ಸಮಯ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಮಾರಾಟವು ಮೊದಲ ಬಾರಿಗೆ ಜಾಗತಿಕ ದೈತ್ಯರು ಉತ್ಪಾದಿಸಿದ ವಿಸ್ಕಿಯ ಮಾರಾಟವನ್ನೇ ಹಿಂದಿಕ್ಕಿದೆ.…

Read More

ರಾಜಧಾನಿ ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿಯಲ್ಲಿ ದೇಶದ ಅತಿ ದೊಡ್ಡ ವೀಕ್ಷಣಾ ಗೋಪುರ (ಸ್ಕೈಡಾಕ್) ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಬಿಬಿಎಂಪಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ವೀಕ್ಷಣಾ ಗೋಪುರ ನಿರ್ಮಾಣ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿತ್ತು. ಚುನಾವಣೆ ಹಿನ್ನೆಲೆ, ಕೆಲದಿನಗಳ ಕಾಲ ಈ ಯೋಜನೆ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವೀಕ್ಷಣಾ ಗೋಪುರ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಕೆಲವು ಖಾಸಗಿ ಕಂಪನಿಗಳ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಎನ್‌ಜಿಎಫ್‌ ಬಳಿ ವಿಕ್ಷಣಾ ಗೋಪುರ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವಿದೆ. ಈ ಹಿನ್ನೆಲೆ, ಯಾವ ಸ್ಥಳದಲ್ಲಿ ಗೋಪುರ ನಿರ್ಮಾಣ ಮಾಡಿದರೇ ಸೂಕ್ತ ಎಂಬ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತೆಗೆದುಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಗೋಪುರ ಬರೋಬ್ಬರಿ 821…

Read More