Subscribe to Updates
Get the latest creative news from FooBar about art, design and business.
Author: KNN IT Team
ಬೆಂಗಳೂರು : ಮಕರ ಸಂಕ್ರಾಂತಿಯ ದಿನದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದನ್ನು ಮಹಾದಾನ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಏನನ್ನಾದರೂ ದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ವಿಶೇಷವಾಗಿ ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವವರಿಗೆ ಸೂರ್ಯದೇವನು ಅಪಾರವಾದ ಅನುಗ್ರಹವನ್ನು ನೀಡುತ್ತಾನೆ ಮತ್ತು ಅಂತಹ ವ್ಯಕ್ತಿಯು ಸಮಾಜದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ದಿನದಂದು ಯಾವೆಲ್ಲ ಪ್ರಮುಖ ವಸ್ತುಗಳನ್ನು ದಾನ ಮಾಡುವ ಮೂಲಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಭಂಡಾರವು ಮನೆಯಲ್ಲಿ ಉಳಿಯುತ್ತದೆ ಎಂದು ತಿಳಿಯೋಣ. ಈ 6 ಪ್ರಮುಖ ವಸ್ತುಗಳನ್ನು ದಾನ ಮಾಡಿ : – ಬೆಲ್ಲ : ಮಕರ ಸಂಕ್ರಾಂತಿಯ ದಿನದಂದು ಬೆಲ್ಲವನ್ನು ದಾನ ಮಾಡುವವರಿಗೆ ಸೂರ್ಯ ದೇವನು ಬೇಗನೆ ಪ್ರಸನ್ನನಾಗುತ್ತಾನೆ. ಜ್ಯೋತಿಷ್ಯದಲ್ಲಿ, ಬೆಲ್ಲವು ನೇರವಾಗಿ ಸೂರ್ಯ ದೇವರಿಗೆ ಸಂಬಂಧಿಸಿದೆ. ಈ ದಿನದಂದು ಬೆಲ್ಲವನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. – ಕಪ್ಪು ಎಳ್ಳು : ಕಪ್ಪು…
ಹೈದರಾಬಾದ್ : ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ನಡೆಯಲಿದೆ. ಜನವರಿ 12ರಂದು ತೆರೆಗೆ ಬರುತ್ತಿರುವ ‘ಹನುಮಾನ್’ ಸಿನಿಮಾದ ಪ್ರತಿ ಟಿಕೆಟ್ ಹಣದಲ್ಲಿ 5 ರೂಪಾಯಿಗಳನ್ನು ರಾಮ ಮಂದಿರಕ್ಕೆ ನೀಡಲು ನಿರ್ಧಾರ ಮಾಡಲಾಗಿದೆ ಮೆಗಾಸ್ಟಾರ್ ಚಿರಂಜೀವಿ ಅವರು ಘೋಷಣೆ ಮಾಡಿದರು. ಇಂದು ಅದ್ಧೂರಿಯಾಗಿ ಆಯೋಜಿಸಿದ್ದ ಹನುಮಾನ್ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಈ ಕುರಿತು ಘೋಷಣೆ ಮಾಡಿದರು. ಈ ಸಮಾರಂಭದಲ್ಲಿ ಮಾತನಾಡಿದ ಚಿರಂಜೀವಿ ಅವರು, ರಾಮ ಮಂದಿರ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನ ನೀಡಿರುವುದು ಸಂಭ್ರಮ ತಂದಿದೆ. ಇಡೀ ಕುಟುಂಬ ಜನವರಿ 22ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ. ಪ್ಯಾನ್ ಇಂಡಿಯಾ ಸಿನಿಮಾ ಹನುಮಾನ್ ಜನವರಿ 12ರಂದು ತೆರೆಗೆ ಬರಲಿದೆ ಎಂದು ಹೇಳಿದರು. ನಾನು ಕೂಡ ಹನುಮಂತನ ಭಕ್ತ. ಆಂಜನೇಯನ ಮೇಲೆ ಸಿನಿಮಾ ಮಾಡಿದರೆ, ನಾನು ಬರುವುದಿಲ್ಲವೇ, ಇನ್ನು ಈ ಸಿನಿಮಾದ ಹೀರೋ ತೇಜ ಸಜ್ಜಾನನ್ನ ನಾನು ಸಣ್ಣ ಮಗುವಿದ್ದಾಗನಿಂದಲೂ ನೋಡಿದ್ದೇನೆ. ಟೀಸರ್…
ಸುಳ್ಯ : ತನ್ನ ಬೈಕಿಗೆ ಪೆಟ್ರೋಲ್ ಹಾಕಲು ಬಂದ ಸವಾರನೊಬ್ಬ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ ಬರೇ 10 ರೂ. ಗೂಗಲ್ ಪೇ ಮಾಡಿ ಸವಾರ ಪರಾರಿಯಾದ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ. ಜಾಲ್ಸೂರಿನ ಪೆಟ್ರೋಲ್ ಬಂಕ್ ನಲ್ಲಿ ಜನವರಿ 5 ರಂದು ರಾತ್ರಿ ಈ ಘಟನೆ ಸಂಭವಿಸಿದೆ. ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿ ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದ್ದಾನೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ ಆ ವ್ಯಕ್ತಿ ತಾನು ಹಣವನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ ಮೇರೆಗೆ ಪಂಪ್ ಸಿಬ್ಬಂದಿ ಸ್ಕ್ಯಾನರ್ ತೋರಿಸಿದ್ದಾರೆ. ಆ ವ್ಯಕ್ತಿ ಬರೇ 10 ರೂ. ಪೇ.ಮಾಡಿದ್ದು, ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ್ದು ಸಕ್ಸಸ್ ಎಂದು ಬಂದದ್ದನ್ನು ತನ್ನ ಮೊಬೈಲ್ ನಲ್ಲಿ ಪಂಪ್ ಸಿಬ್ಬಂದಿಗೆ ತೋರಿಸಿದ್ದು ಹಣ ಬಂದಿರಬಹುದೆಂದು ಪಂಪ್ ಸಿಬ್ಬಂದಿ ಭಾವಿಸಿದ್ದಾರೆ. ಆದ್ರೆ ಪರಿಶೀಲಿಸಿದಾಗ ಕೇವಲ 10 ರೂ.…
ಇತ್ತೀಚೆಗೆ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಾಗದೆ ಅವರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಹಾಕುತ್ತಿರುವುದು, ಬೀದಿಯಲ್ಲಿ ಬಿಟ್ಟು ಹೋಗುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು ಮಹತ್ಕಾರ್ಯಕ್ಕೆ ಕೈ ಹಾಕಿದ್ದು, ಇನ್ನು ಮುಂದೆ ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕುವ ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಹೊಸ ವರ್ಷದ ಬಳಿಕ ಹೊಸ ಹೆಜ್ಜೆ ಇಟ್ಟ ನಗರ ಪೊಲೀಸರು, ನಗರದ ವೃದ್ಧಾಶ್ರಮಗಳ ಮೇಲೆ ಕಣ್ಣಿಟ್ಟಿದ್ದಾರೆ. ತಂದೆ ತಾಯಿಯನ್ನ ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕೇಸ್ ಬುಕ್ ಮಾಡುವಂತೆ ಪೊಲೀಸ್ ಕಮೀಷನರ್ ಬಿ. ದಯಾನಂದ್ ಸೂಚನೆ ನೀಡಿದ್ದಾರೆ. ಹೆತ್ತು-ಹೊತ್ತು, ಸಾಕಿ ಸಲಹಿದ ಪೋಷಕರನ್ನು ಮನೆಯಿಂದ ಹೊರ ಹಾಕಲಾಗುತ್ತಿದೆ. ಇನ್ನು ಕೆಲವರು ಸಾಕಲು ಶಕ್ತರಾಗಿದ್ದರೂ ಇತ್ತಿಂಷ್ಟು ಹಣ ನೀಡಿ ಪೋಷಕರನ್ನ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಹೀಗೆ ಸುಖಾಸುಮ್ಮನೆ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದರಿಂದ ಅನೇಕರು ಆಶ್ರಮದಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ವೃದ್ಧಾಶ್ರಮಗಳಿಗೆ ಭೇಟಿ ನೀಡಿ…
ಬೆಂಗಳೂರು : ಕೆಲವೇ ದಿನಗಳಲ್ಲಿ ಪುತ್ತಿಗೆ ಮಠದ ಸುಗಣೇಂದ್ರ ತೀರ್ಥರು ಪರ್ಯಾಯ ಪೀಠವನ್ನು ಅಲಂಕರಿಸಲಿದ್ದು, ಈ ನಡುವೆ ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಪುತ್ತಿಗೆ ಶ್ರೀಗಳು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ರಿದ್ದ ಪೀಠ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದೆ. 2008ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟ ಮಠಗಳ ಪೈಕಿ ಆರು ಮಠಗಳ ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಶೀರೂರು ಶ್ರೀಗಳು ಮಾತ್ರ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಬೆಂಬಲ ಸೂಚಿಸಿದ್ದರಾಗಿದೆ.
ಗುವಹಾಟಿ : ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ನಿಮಿತ್ತ ಜನರು ದೇಶಾದ್ಯಂತ ಪ್ರಯಾಣಿಸುತ್ತಾರೆ. ಹೀಗಾಗಿ ಈ ತಿಂಗಳ 20 ರಿಂದ 25ರ ವರೆಗೆ ದೇಶದಲ್ಲಿ ಇರುವ ಮುಸ್ಲಿಮರು ಮನೆಯಿಂದ ಹೊರಗೆ ಬರುವುದು ಬೇಡ ಎಂದು ಸಂಸದ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಸ್ಸಾಂನ ಬಾರ್ಪೆಟಾದಲ್ಲಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಂದರ್ಭದ ಬಳಿಕ ಉಂಟಾಗಿದ್ದ ಪರಿಸ್ಥಿತಿಯೇ ಮತ್ತೆ ಮರುಕಳಿಸಬಹುದು. ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು. ಇದರಿಂದಾಗಿ ಸಮುದಾಯದವರನ್ನು ರಕ್ಷಿಸುವ ಕೆಲಸ ಆಗಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜನವರಿ 20 ರಿಂದ 25 ರ ಅವಧಿಯಲ್ಲಿ ಜನರು ಬಸ್‌ನಲ್ಲಿ, ವಿಮಾನದಲ್ಲಿ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಯಾರೂ ಮನೆಯಿಂದ ಹೊರಗೆ ಬರುವುದು ಬೇಡ ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, “ಆ ಪಕ್ಷ ನಮ್ಮ ಸಮುದಾಯದ ವೈರಿ’ ಎಂದು ದೂರಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನಾಂಕ ಹತ್ತಿರ ವಾಗುತ್ತಿದ್ದಂತೆ, ದೇವಾಲಯದ ಕುರಿತ ಹಲವು ಮಾಹಿತಿಗಳನ್ನು ಟ್ರಸ್ಟ್ ಹಂಚಿಕೊಂಡಿದೆ. ಇತ್ತೀಚಿಗೆ ಟ್ವೀಟ್ ಮೂಲಕ ಹಲವು ಮಾಹಿತಿಗಳನ್ನು ನೀಡಿದೆಯಾಗಿದೆ. ಅಯೋಧ್ಯೆ ರಾಮ ಮಂದಿರದ ಪ್ರಮುಖ ವೈಶಿಷ್ಟ್ಯಗಳು : – ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ – 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. – ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. – ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪ (ಬಾಲರಾಮ) ವಿಗ್ರಹ, ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ. – ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ ಎಂಬ ಐದು ಮಂಟಪಗಳು (ಹಾಲ್) ಇವೆ. – ದೇವತೆಗಳು, ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಕಂಬ ಮತ್ತು ಗೋಡೆಗಳ ಮೇಲೆ ಕೆತ್ತಲಾಗಿದೆ.…
ಇತ್ತೀಚಿನ ದಿನಗಳಲ್ಲಿ ಅನೇಕ ಜನರ ಆರೋಗ್ಯ ಪದ್ಧತಿ ಸಂಪೂರ್ಣವಾಗಿ ಬದಲಾಗಿದೆ. ಆಹಾರ ಸೇವಿಸುವ ಸಮಯವೂ ಸಂಪೂರ್ಣ ಅಸಹಜವಾಗಿದೆ. ಸಾಫ್ಟ್‌ವೇರ್ ಉದ್ಯೋಗಗಳಿಂದಾಗಿ ಅನೇಕರು ಮಧ್ಯಾಹ್ನದ ಊಟದ ಸಮಯದಲ್ಲಿ ರಾತ್ರಿಯ ಊಟ, ಮಲಗುವ ಮುನ್ನ ತಿಂಡಿ ಮುಂತಾದ ಜಂಕ್ ಫುಡ್‌ಗಳನ್ನು ತಿನ್ನುತ್ತಾರೆ. ಅದೇ ರೀತಿ ಜಂಕ್ ಫುಡ್ ಗಳನ್ನು ಅತಿಯಾಗಿ ಸೇವಿಸುವುದು ಮತ್ತು ಸಿಕ್ಕಿದ್ದನ್ನು ತಿನ್ನುವುದರಿಂದ ಕೊಬ್ಬು ವಿಪರೀತವಾಗಿ ಶೇಖರಣೆಗೊಂಡು ದಪ್ಪಗಾಗಲು ಕಾರಣವಾಗುತ್ತದೆ. ಅದೇನೇ ಇರಲಿ ಸರಿಯಾದ ಡಯಟ್ ಪಾಲಿಸಿದರೆ ಸ್ಲಿಮ್ ಆಗಿ ಎಂದೆಂದಿಗೂ ಸ್ಲಿಮ್ ಆಗಿ ಉಳಿಯಬಹುದು ಈ ಕೆಳಗಿನ ಕೆಲವು ಟಿಪ್ಸ್ ಪಾಲಿಸಿದರೆ ಸ್ಲಿಮ್ ಆಗಿರಬಹುದು. ಆಹಾರಕ್ರಮದಲ್ಲಿರುವಾಗ, ತೂಕ ಹೆಚ್ಚಾಗುವುದನ್ನು ತಪ್ಪಿಸಲು ಅವರು 7 ಗಂಟೆಗೆ ಮೊದಲು ತಿನ್ನಬೇಕು. ಲಘು ಆಹಾರ ಸೇವಿಸಬೇಕು ಎಂಬ ಆಲೋಚನೆ ಅವರ ಮನಸ್ಸಿನಲ್ಲಿ ಆಗಾಗ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ಯಾವಾಗಲೂ ಏನು ತಿನ್ನಬೇಕೆಂದು ಯೋಚಿಸುತ್ತಾರೆ. ಇಂದು ನಾವು ನಿಮಗೆ ಅಂತಹ ಐದು ಖಾದ್ಯಗಳ ಬಗ್ಗೆ ಹೇಳಲಿದ್ದೇವೆ, ಅದು ನಿಮ್ಮ ತೂಕವನ್ನು ಹೆಚ್ಚಿಸುವುದಿಲ್ಲ. ಹಾಗೆಯೇ ನಿಮಗೆ…
ಸುಮಾರು ಎರಡು ತಿಂಗಳ ಹಿಂದೆ, ಭಾರತದಲ್ಲಿ ತಯಾರಿಸಿದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ 2023ರ ವರ್ಷದ ವಿಸ್ಕಿ ಪ್ರಶಸ್ತಿಯನ್ನು ನೀಡಿದಾಗ ಸಿಂಗಲ್ ಮಾಲ್ಟ್ ಎಂಬ ಪದವು ಮತ್ತೊಮ್ಮೆ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಜನರು ಸಿಂಗಲ್ ಮಾಲ್ಟ್‌ನ ಪ್ರಯೋಜನವೇನು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಸಾಮಾನ್ಯವಾಗಿ ವಿಸ್ಕಿ ಎಂಬ ಪದ ಕೇಳಿದರೇನೇ ಜನರ ಕಣ್ಣುಗಳು ಹೊಳೆಯುತ್ತವೆ. ಎಲ್ಲರಿಗೂ ತಿಳಿದಿರುವಂತೆ ವಿಸ್ಕಿಯಲ್ಲಿ ಬ್ಲೆಂಡೆಡ್, ಸಿಂಗಲ್ ಮಾಲ್ಟ್ ಮತ್ತು ಬೌರ್ಬನ್ ವಿಸ್ಕಿ ಎಂದು ಹಲವು ವಿಧಗಳಿವೆ. ಆದರೆ ಸಿಂಗಲ್ ಮಾಲ್ಟ್ ವಿಸ್ಕಿ ಮಾತ್ರ ಅದರ ವಿಶಿಷ್ಟ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದ್ದು, ವಿಶೇಷ ರೀತಿಯ ವಿಸ್ಕಿಯಾಗಿ ಫೇಮಸ್ ಆಗಿದೆ. ಇದೀಗ ಗ್ಲೆನ್‌ಲಿವೆಟ್, ಮಕಲನ್, ಲಗಾವುಲಿನ್ ಮತ್ತು ತಾಲಿಸ್ಕರ್ನಂತಹ ವಿಸ್ಕಿಯನ್ನೇ ಹಿಂದಿಕ್ಕಿ ಸ್ವದೇಶಿ ಸಿಂಗಲ್ ಮಾಲ್ಟ್ ಜನಪ್ರಿಯತೆ ಪಡೆಯುತ್ತಿದೆ. ಹೌದು, ಇದು ಸಿಂಗಲ್ ಮಾಲ್ಟ್ ವಿಸ್ಕಿಯ ಸಮಯ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಮಾರಾಟವು ಮೊದಲ ಬಾರಿಗೆ ಜಾಗತಿಕ ದೈತ್ಯರು ಉತ್ಪಾದಿಸಿದ ವಿಸ್ಕಿಯ ಮಾರಾಟವನ್ನೇ ಹಿಂದಿಕ್ಕಿದೆ.…
ರಾಜಧಾನಿ ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿಯಲ್ಲಿ ದೇಶದ ಅತಿ ದೊಡ್ಡ ವೀಕ್ಷಣಾ ಗೋಪುರ (ಸ್ಕೈಡಾಕ್) ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಬಿಬಿಎಂಪಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ವೀಕ್ಷಣಾ ಗೋಪುರ ನಿರ್ಮಾಣ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿತ್ತು. ಚುನಾವಣೆ ಹಿನ್ನೆಲೆ, ಕೆಲದಿನಗಳ ಕಾಲ ಈ ಯೋಜನೆ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ವೀಕ್ಷಣಾ ಗೋಪುರ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆಗೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಕೆಲವು ಖಾಸಗಿ ಕಂಪನಿಗಳ ಮುಖ್ಯಸ್ಥರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಎನ್‌ಜಿಎಫ್ ಬಳಿ ವಿಕ್ಷಣಾ ಗೋಪುರ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವಿದೆ. ಈ ಹಿನ್ನೆಲೆ, ಯಾವ ಸ್ಥಳದಲ್ಲಿ ಗೋಪುರ ನಿರ್ಮಾಣ ಮಾಡಿದರೇ ಸೂಕ್ತ ಎಂಬ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸಿಕೊಂಡು ತೆಗೆದುಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಗೋಪುರ ಬರೋಬ್ಬರಿ 821…