Subscribe to Updates
Get the latest creative news from FooBar about art, design and business.
Author: KNN IT Team
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯದ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರಸ್ತುತ ವಿವಿಧ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಂಗನವಾಡಿ ಹುದ್ದೆಗಳ ನೇಮಕಾತಿ ನಡೆಯಲಿರುವ 6 ಜಿಲ್ಲೆಗಳೆಂದರೆ, ಬೆಂಗಳೂರು ಗ್ರಾಮೀಣ ಜಿಲ್ಲೆ, ಬೆಂಗಳೂರು ನಗರ ಜಿಲ್ಲೆ, ಬೆಳಗಾವಿ, ಬೀದರ್, ಹಾವೇರಿ ಹಾಗೂ ತುಮಕೂರು ಆಗಿದೆ. ಈ ಮೇಲಿನ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಕ್ಕೂ ಅಧಿಕ ಹುದ್ದೆಗಳು ಇದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 15.02.24 ಕೊನೆಯ ದಿನವಾಗಿದೆ. ಈ ವೆಬ್‌ಸೈಟ್ https://anganwadirecruit.kar.nic.in/ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ವೇತನವು 6000 to 10000 ರೂಪಾಯಿ ಆಗಿರಲಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಯಾವುದಾದರೊಂದು ತೇರ್ಗಡೆ ಹೊಂದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆ ಹೊಂದಿರಬೇಕು. ಯಾವುದೇ ಹುದ್ದೆಗೆ…
ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-2 ಇದೇ 2024ರ ಜನವರಿ 24 ರಿಂದ 28ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ. ಜನವರಿ 24ರ ಸಂಜೆ 7 ಗಂಟೆಗೆ ಸೀಸನ್-2ಗೆ ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ವರ್ಷದ ಮಂಗಳೂರಿನ “ಸ್ಟ್ರೀಟ್ ಫುಡ್ ಫಿಯೆಸ್ಟ” ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾಗಿತ್ತು. ಆ ಯಶಸ್ಸೇ ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್ -2 ಗೆ ಪ್ರೇರಣೆಯಾಗಿದ್ದು ಈಗಾಗಲೇ ಸಾರ್ವಜನಿಕ ವಲಯದಿಂದ ಅತ್ಯುತ್ತಮ ಸ್ಪಂದನೆ ಹಾಗೂ ನಿರೀಕ್ಷೆ ಲಭಿಸಿದೆ. “ಕರಾವಳಿ ವಸ್ತು ಪ್ರದರ್ಶನ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ” ದವರೆಗೆ ಪ್ರತಿ ನಿತ್ಯ ಸಂಜೆ 4 ರಿಂದ ರಾತ್ರಿ 10.30 ರವರೆಗೆ, ಹಾಗೆಯೇ ಕೊನೆಯ ಮೂರು ದಿನ ಅಂದರೆ ಶುಕ್ರವಾರ…
ಹಲಸಿನ ಹಣ್ಣು ಮತ್ತದರ ಉತ್ಪನ್ನಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವುಗಳನ್ನು ಬಿಡಿಸುವ ಜಂಜಾಟಕ್ಕೆ ತುಸು ಕಿರಿಕಿರಿ ಎನಿಸಿ ಹಣ್ಣಿನಿಂದ ದೂರವುಳಿಯುತ್ತಾರೆ. ಈ ಸಮಸ್ಯೆಗೆ ಮುಕ್ತಿ ನೀಡಲು ನಗರದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೇಯಿಸಲು ಸಿದ್ಧವಾದ ಹಸಿ ಹಲಸಿನ ತೊಳೆಗಳ ಶೇಖರಣಾ ತಂತ್ರ ಜ್ಞಾನ’ವನ್ನು ಇತ್ತೀಚೆಗೆ ಸಂಶೋಧನೆ ನಡೆಸಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಹಲಸಿನ ಕಾಯಿ ಮತ್ತು ಹಣ್ಣಿನ ಋತುವಿನಲ್ಲಿ ಚಿಪ್ಸ್, ಹಪ್ಪಳ, ಹೋಳಿಗೆ, ಕಡುಬು, ಐಸ್‌ಕ್ರೀಂ, ದೋಸೆ ಹೀಗೆ ಹಲವು ವಿಧದ ತಿನಿಸುಗಳನ್ನು ತಯಾರಿಸುತ್ತಾರೆ. ಅಲ್ಲದೇ, ಹಲಸನ್ನು ತರಕಾರಿಯಾಗಿಯೂ ಬಳಸುತ್ತಿದ್ದು, ದೀರ್ಘಾವಧಿ ಬಳಕೆಗಾಗಿ ಉಪ್ಪು ಹಾಕಿ ಇಡುತ್ತಾರೆ. ಆದರೆ, ಇದರ ಕಾಲಾವಧಿ 3 ರಿಂದ 4 ತಿಂಗಳು ಮಾತ್ರ. ಅಷ್ಟರಲ್ಲೇ ಆ ಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ನಂತರ ಬಳಕೆಗೆ ಸಾಧ್ಯವಾಗುವುದಿಲ್ಲವಾಗಿದೆ. ಕರ್ನಾಟಕದಲ್ಲಲ್ಲದೇ, ಹಸಿ ಹಲಸಿನ ಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸದ ಬದಲಿಯಾಗಿ (ಸಸ್ಯ ಮಾಂಸ) ಬಳಸುತ್ತಾರೆ. ಪ್ರಸ್ತುತ, 1.98 ಮಿಲಿಯನ್ ಟನ್ ನಷ್ಟು ದೇಶದಲ್ಲಿ ಉತ್ಪಾದಿಸಿದರೆ,…
ಈಗಿನ ಬಿಡುವಿಲ್ಲದ, ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚಿನ ಒತ್ತಡದಿಂದಾಗಿ ಸಾಮಾನ್ಯವಾಗಿ ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆ ಹೆಚ್ಚುತ್ತಿದೆ. ಪ್ರತಿ ಮೂರನೇ ವ್ಯಕ್ತಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲನ್ನು ಸುಂದರವಾಗಿ ಮತ್ತು ದಪ್ಪವಾಗಿಸಲು ಜನರು ಸಾಮಾನ್ಯವಾಗಿ ಯೂಟ್ಯೂಬ್ ಅಥವಾ ನೆಟ್‌ನಲ್ಲಿ ಪರಿಹಾರಗಳನ್ನು ಹುಡುಕುತ್ತಾರೆ, ಆದರೆ ಅಂತಹ ಪರಿಹಾರಗಳು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲವಾಗಿದೆ. ಕೂದಲು ಉದುರುವಿಕೆ ಮತ್ತು ಬೋಳು ಪರಿಹಾರವಲ್ಲ. ಇಂದು ನಾವು ನಿಮ್ಮ ಕೂದಲನ್ನು ಬಲಪಡಿಸುವ ಪರಿಹಾರದ ಬಗ್ಗೆ ಹೇಳುತ್ತೇವೆ. ಈ ಪರಿಹಾರದಿಂದ ನೀವು ಮಧ್ಯವಯಸ್ಸಿನಲ್ಲೂ 20 ವರ್ಷ ವಯಸ್ಸಿನ ಹುಡುಗಿಯಂತೆ ದಪ್ಪ ಕೂದಲು ಸಾಧಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ರಾಂಚಿಯ ವೈದ್ಯರೊಬ್ಬರು ನೀಡಿದ್ದಾರೆ. ದಿನನಿತ್ಯದ ಎಣ್ಣೆಯು ಕೂದಲನ್ನು ಬಲಪಡಿಸಲು ಮತ್ತು ಉದ್ದವಾಗಿಸಲು ಅಗತ್ಯವಾದ ಎಣ್ಣೆ ಎಂದು ವೈದ್ಯರು ಹೇಳುತ್ತಾರೆ. ಇದು ಉತ್ತಮ ಪ್ರಮಾಣದ ಕೆರಾಟಿನ್ ಅನ್ನು ಹೊಂದಿರುತ್ತದೆ. ಕೂದಲು ಬೆಳವಣಿಗೆಗೆ ಕೆರಾಟಿನ್ ಅತ್ಯಗತ್ಯ. ಇದಲ್ಲದೆ, ಇದು ಉತ್ತಮ ಪ್ರಮಾಣದ ವಿಟಮಿನ್ ಬಿ 12, ಒಮೆಗಾ 3 ಮತ್ತು…
ಪುತ್ತೂರು : ಜಿಲ್ಲಾಡಳಿತ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣ ಮುಂದಿಟ್ಟುಕೊಂಡು ಈಗಾಗಲೇ ಜಿಲ್ಲೆಯಲ್ಲಿ ಹಲವು ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳನ್ನು ಗಡಿಪಾರು ಮಾಡಲಾಗಿದೆ. ಕ್ರಿಮಿನಲ್ ಹಿನ್ನೆಲೆ ಇದ್ದ ಹಿಂದೂ ಸಂಘಟನೆಯ ಹಲವು ಯುವಕರನ್ನು ಈಗಾಗಲೇ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. ಇದೀಗ ಪುತ್ತೂರು ತಾಲೂಕಿನ ಮತ್ತೋರ್ವ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಪುತ್ತೂರು ಸಹಾಯಕ ಆಯುಕ್ತರು ನಾಳೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರಷರಕಟ್ಟೆ ನಿವಾಸಿಯಾಗಿರೋ ಅವಿನಾಶ್‌ಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸರ ಮೂಲಕ ಅವಿನಾಶ್‌ಗೆ ನೋಟಿಸೂ ನೀಡಲಾಗಿದ್ದು, ಗಡಿಪಾರಿನ ಉಲ್ಲೇಖ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಅವಿನಾಶ್ ನನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕೇಳಲಾಗಿದ್ದು ಅದಕ್ಕೆ ಉತ್ತರಿಸಲು ನಾಳೆಯ ವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ಅವಿನಾಶ್ ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಅವರನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡುವ ಏಕ ಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುವುದು…
ಮಂಗಳೂರು : ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸಲುವಾಗಿ ಮಹಾವೀರ ಶಾಖೆ, ಬಜಿಲಕೇರಿ ವತಿಯಿಂದ ನಗರದ ಟಿ. ಟಿ ರಸ್ತೆಯಲ್ಲಿರುವ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ (ಗೋಧೆ) “ಶ್ರೀ ರಾಮೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಸಂಜೆ 6:30 ಗಂಟೆಗೆ ರಾಮ ದೇವರ ಭಾವಚಿತ್ರಕ್ಕೆ ಪುಷ್ಪವೃಶ್ಟಿ ಮೂಲಕ ಮೆರವಣಿಗೆ ಆಗಮಿಸಿತು. ಪುಟಾಣಿ ಮಕ್ಕಳು ಶ್ರೀ ರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಹನುಮಂತನ ವೇಷ ಧರಿಸಿದ್ದು ಎಲ್ಲರ ಆಕರ್ಷಣೆಗೆ ಸಾಕ್ಷಿಯಾಯಿತು. ನಂತರ ದೀಪಾಲಂಕಾರ, ಭಜನೆ, ಹನುಮಾನ್ ಚಾಲಿಸ ಪಠಣ, ರಾಮ ತಾರಕ ಜಪ ಎಲ್ಲರನ್ನು ಭಕ್ತಿ ಅಲೆಯಲ್ಲಿ ತೇಲಿಸಿತು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸರಯೂ ಬಾಲ ಯಕ್ಷ ವೃಂದ (ರಿ.) ಮಕ್ಕಳ ಮೇಳ, ಕೋಡಿಕಲ್ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು. ಕೊನೆಯಲ್ಲಿ ಅಯೋಧ್ಯೆಯ ಸಂಘರ್ಷದ ಕುರಿತಾದ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ಮಹಾಪೂಜೆ ಬಳಿಕ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಿಶೇಷವಾದ…
ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ದಿನ ಫಿರೋಜಾಬಾದ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಿದ್ದಾರೆ ಎನ್ನಬಹುದು. ರಾಮಮಂದಿರ ಉದ್ಘಾಟನೆಯ ದಿನವೇ ಮಗು ಜನಿಸಿದ ಕಾರಣ ಮಗುವಿನ ಅಜ್ಜಿ ಹುಸ್ನಾ ಬಾನು ಅವರು ಮಗುವಿಗೆ ʼರಾಮ್ ರಹೀಮ್ʼ ಎಂದು ಹೆಸರಿಟ್ಟಿದ್ದಾರೆ. ಮಗುವಿಗೆ ರಾಮ್ ರಹೀಮ್ ಹೆಸರಿಟ್ಟು ಹಿಂದೂ ಮುಸ್ಲಿಂ ಏಕತೆಯ ಸಂದೇಶ ನೀಡಿದ್ದೇವೆ ಎಂದು ಮಗುವಿನ ಅಜ್ಜಿ ಹೇಳಿದ್ದಾರೆ. ಸೋಮವಾರ ಮಹಿಳಾ ಆಸ್ಪತ್ರೆಯಲ್ಲಿ ಫಿರೋಜಾಬಾದ್ ಫರ್ಜಾನಾ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿರುವುದು ಕೋಟ್ಯಾಂತರ ಹಿಂದೂಗಳ ಕನಸು ನೆರವೇರಿಸದಂತಾಗಿದೆ. ಒಟ್ಟಿನಲ್ಲಿ ಎಲ್ಲೆಡೆ ಸಂಭ್ರಮ,ಸಡಗರ. ನಾಡಿನ ಜನ ಇಷ್ಟೆಲ್ಲಾ ಸಂಭ್ರಮಿಸುವಾಗ ಕಾಂಗ್ರೆಸ್ ಈ ಮಹಾ ಸಮಾರಂಭವನ್ನೇ ಬಹಿಷ್ಕಿರಿಸಿತ್ತು. ಆದರೆ ಅಚ್ಚರಿ ಏನಂದ್ರೆ ಕಾಂಗ್ರೆಸ್ ಇದನ್ನು ಭಹಿಷ್ಕರಿಸಿದರೂ ಕಾಂಗ್ರೆಸ್ ಸಚಿವರೊಬ್ಬರು ಅಯೋಧ್ಯಾ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ರಾಮನು ನಮ್ಮೆಲ್ಲರ ಆರಾಧ್ಯ ದೈವ, ನಮ್ಮ ಸಂಸ್ಕೃತಿಯ ನಾಯಕ ಎಂಬುದನ್ನು ಹಿಮಾಚಲ ಪ್ರದೇಶದ ಕಾಂಗ್ರೆಸ್ ಮಾಜಿ ಸಿಎಂ ಪುತ್ರ, ಹಾಲಿ ಕಾಂಗ್ರೆಸ್ ಸರ್ಕಾರದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ನಿಜ ಮಾಡಿದ್ದಾರೆ. ಏಕೆಂದರೆ ರಾಜಕೀಯ ಪ್ರೇರಿತ ಕಾರ್ಯಕ್ರಮ ಎಂದು ಹೇಳಿ ಮಂದಿರ ಉದ್ಘಾಟನೆಯಿಂದ ಕಾಂಗ್ರೆಸ್ ದೂರ ಉಳಿದರೂ ಕೂಡ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್ ರ lವರು ಆಯೋಧ್ಯೆಯ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಹಾಜರಾಗಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಿದೆ. ಇದಲ್ಲದೆ ವಿಕ್ರಮಾದಿತ್ಯ ಸಿಂಗ್ ಜೊತೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕ ಸುಧೀರ್ ಶರ್ಮಾ ಕೂಡ ಪಾಲ್ಗೊಂಡಿದ್ದಾರೆ. ರಾಮ ಮಂದಿರ ಬಿಜೆಪಿ…
ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಆದೇಶ ಹೊರಡಿಸಿದೆ. ಸರ್ಕಾರದ ನೀತಿಯಂತೆ ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಯನ್ನು ರಾಜ್ಯ / ಜಿಲ್ಲಾ / ತಾಲ್ಲೂಕು ಮಟ್ಟದಲ್ಲಿ ಸಂಭ್ರಮದಿಂದ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ 50 ಲಕ್ಷ ರೂ. ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ 1 ಲಕ್ಷ ರೂ. ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿಗೆ 20 ಸಾವಿರದಂತೆ ಅನುದಾನವನ್ನು ಬಿಡುಗಡೆ ಆದೇಶ ಹೊರಡಿಸಿದೆ. ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭವನ್ನು ಬೆಂಗಳೂರು ನಗರದಲ್ಲಿ ಏರ್ಪಡಿಸುವ ನಿಮಿತ್ತ ಬೆಂಗಳೂರು ನಗರ ಜಿಲ್ಲೆಗೆ 50 ಲಕ್ಷ ರೂ.ಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರಿಗೆ ಬಿಡುಗಡೆ ಮಾಡಲಾಗಿದೆ. 30 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ತಲಾ 1 ಲಕ್ಷ ರೂ.ಗಳಂತೆ ಒಟ್ಟು 30 ಲಕ್ಷ ರೂ. ಮೊತ್ತವನ್ನು ಹಾಗೂ 31 ಜಿಲ್ಲೆಗಳಲ್ಲಿನ 232…
ಪ್ರಧಾನಿ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಉದ್ಘಾಟನೆ ನೆರವೇರಿಸಿದ ಕೆಲವು ಗಂಟೆಗಳ ನಂತರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ದೇಶದ ಕಾರ್ಯಕ್ರಮವನ್ನಾಗಿ ಆಚರಿಸಿರುವುದಕ್ಕಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಸಂವಿಧಾನದಲ್ಲಿ ಉನ್ನತ ಸ್ಥಾನ ಹೊಂದಿರುವವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ದೂರವುಳಿದು ನಮ್ಮ ಜಾತ್ಯತೀತ ರಾಷ್ಟ್ರ ಮೌಲ್ಯಗಳಿಗೆ ಬದ್ಧರಾಗಿರಬೇಕು. ಜಾತ್ಯತೀತತೆ ನಮ್ಮ ದೇಶದ ಆತ್ಮವಾಗಿದೆ. ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಕೂಡ ಭಾರತದ ಜಾತ್ಯತೀತತೆ ಎಂದರೆ ಧರ್ಮ ಹಾಗೂ ಆಡಳಿತದಿಂದ ಅಂತರ ಕಾಯ್ದುಕೊಂಡಿರಬೇಕು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧರ್ಮ ಹಾಗೂ ಆಡಳಿತದ ನಡುವಿನ ಅಂತರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಧಾರ್ಮಿಕ ಸಮಾರಂಭವನ್ನು ರಾಷ್ಟ್ರದ ಅಧಿಕೃತ ಕಾರ್ಯಕ್ರಮವಾಗಿ ಆಚರಿಸುವ ಹಂತಕ್ಕೆ ನಾವು ತಲುಪಿದ್ದೇವೆ. ಆ ಸಮಾರಂಭದಲ್ಲಿ ಭಾಗವಹಿಸುವ ಆಹ್ವಾನವನ್ನು ನಿರಾಕರಿಸುವ ಮೂಲಕ, ಭಾರತದ ಜಾತ್ಯತೀತ ಸ್ವರೂಪಕ್ಕೆ ನಮ್ಮ ಬದ್ಧತೆಯನ್ನು ಗಟ್ಟಿಗೊಳಿಸಿದ್ದೇವೆ ಎಂದು ಪಿಣರಾಯಿ ವಿಜಯನ್ ಹೇಳಿದರು. ಈ ಸಂದರ್ಭದಲ್ಲಿ ನಾವು…