Author: KNN IT Team

ಆಧಾ‌ರ್ ಅನ್ನು ಉಚಿತವಾಗಿ ನವೀಕರಿಸುವ ಗಡುವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ಮತ್ತೊಮ್ಮೆ ವಿಸ್ತರಿಸಿದೆ. ಆಧಾರ್ ಕಾರ್ಡ್ನಲ್ಲಿ ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ ಇಲ್ಲವೇ ನೀವು ಹೆಸರನ್ನು ಸರಿಪಡಿಸಲು ನೀವು ಮನೆಯಲ್ಲಿ ಕುಳಿತು ನಿಮ್ಮ ಸ್ವಂತ ಮೊಬೈಲ್ ಮೂಲಕ ಆಧಾ‌ರ್ ಅನ್ನು ನವೀಕರಿಸಬಹುದಾಗಿದೆ. ಆಧಾರ್ ನವೀಕರಣವನ್ನು ಮೈ ಆಧಾರ್ ಪೋರ್ಟಲ್ ಮುಖಾಂತರ ಮಾರ್ಚ್ 14, 2024 ರವರೆಗೆ ಯಾವುದೇ ಶುಲ್ಕವಿಲ್ಲದೆ ಮಾಡಬಹುದಾಗಿದೆ. ಆಧಾ‌ರ್ ವಿವರಗಳನ್ನು ನವೀಕರಿಸುವ ಉಚಿತ ಸೌಲಭ್ಯವು ಮೈ ಆಧಾ‌ರ್ ಪೋರ್ಟಲ್ನಲ್ಲಿ ಲಭ್ಯವಿದ್ದು, ಬಳಕೆದಾರರು ಆನ್ಸೆನ್ ಬದಲು ಆಫೈನ್ ಮೂಲಕ ಆಧಾರ್ ಅಪ್ಡೇಟ್ ಮಾಡಲು 25 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಧಾರ್ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು ಹೀಗಿವೆ: – ಪಡಿತರ ಚೀಟಿಗಳು, ಮತದಾರರ ಗುರುತಿನ ಚೀಟಿಗಳು – ಸರ್ಕಾರ ನೀಡಿದ ಗುರುತಿನ ಚೀಟಿಗಳು / ವಿಳಾಸದ ಪುರಾವೆಗಳು ಮತ್ತು ಭಾರತೀಯ ಪಾಸ್ಪೋರ್ಟ್ಗಳು ಗುರುತಿನ ಮತ್ತು ವಿಳಾಸ ಕಾರ್ಯನಿರ್ವಹಿಸುತ್ತವೆ. – ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಕೆಂಡರಿ ಅಥವಾ…

Read More

2019ರ ಎಪ್ರಿಲ್ 1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶ ಹೊರಡಿಸಿದೆ. ಇದಾದ ಬಳಿಕ 700 ಕೋಟಿ ರು.ಗ‍ಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಎಚ್‌ಎಸ್‌ಆರ್‌ಪಿ ತಯಾರಕರಿಂದ ಹಳೆಯ ಮತ್ತು ಹೊಸ ವಾಹನಗಳಿಗೆ ಖಾಲಿ ನೋಂದಣಿ ಫಲಕಗಳನ್ನು ಖರೀದಿ ಮಾಡಬೇಕಾಗುತ್ತದೆ. ವಿತರಕರು ಈ ಫಲಕಗಳ ಮೇಲೆ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಬೇಕಾಗುತ್ತದೆ. ಇದಾದ ಬಳಿಕ ಹಳೆಯ ವಾಹನಗಳ ಮಾಲೀಕರಿಗೆ ಎಚ್‌ಎಸ್‌ಆರ್‌ಪಿಗಳನ್ನು ಮಾರಾಟ ಮಾಡಬೇಕು. ಆದರೆ ಈ ಕ್ರಮ ಅನುಸರಿಸದೆ ಅಕ್ರಮ ಎಸಗಲಾಗುತ್ತಿದೆ. ಹಳೆಯ ವಾಹನಗಳಿಗೆ ದುಬಾರಿ ಬೆಲೆ ವಿಧಿಸಲಾಗುತ್ತಿದೆ ಎಂದು ದೂರಲಾಗಿದೆ. ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರವೇ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಪಡೆದಿರುತ್ತಾರೆ. ಸಾರ್ವಜನಿಕ ಅನುಕೂಲಕ್ಕಾಗಿ ಇರಬೇಕಾದ ಅಧಿಕಾರಿಗಳು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಸುಮಾರು ಎರಡು ಕೋಟಿ ಹಳೆಯ…

Read More

ಮೆಟ್ರಿಕ್‌ ನಂತರದ ವಿದ್ಯಾಭ್ಯಾಸಕ್ಕೆ ಸರಕಾರ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ. ಅರ್ಹ ವಿದ್ಯಾರ್ಥಿ ಈ ಕೂಡಲೇ ಅರ್ಜಿ ಸಲ್ಲಿಸಿ ವಾರ್ಷಿಕವಾಗಿ ಸಿಗುವ ಸಹಾಯಧನವನ್ನು ಸರಕಾರದಿಂದ ಪಡೆದುಕೊಳ್ಳಬಹುದು. ಸಮಾಜ ಕಲ್ಯಾಣ ಇಲಾಖೆ 2023-24 ನೇ ಸಾಲಿನ ಮೆಟ್ರಿಕ್‌ ನಂತರದ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಅನೂಲವಾಗಲಿ ಎಂದು ಬೆಂಗಳೂರಿನ ದಕ್ಷಿನ ತಾಲೂಕು ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತಿರುವ ಶಾಲಾ ಕಾಲೇಜುಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಿದೆ. ವಿದ್ಯಾರ್ಥಿಗಳು https://ssp.postmatric.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್‌ ಮೂಲಕ ಅಥವಾ ಆಫ್‌ಲೈನ್‌ ಈ ಕೆಳಕಂಡ ವಿಳಾಸಕ್ಕೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ವಿಳಾಸ: ಸಹಾಯಕ ನಿರ್ದೇಶಕರ ಕಚೇರ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲೂಕು, ಎಸ್‌ ಕರಿಯಪ್ಪ ಮುಖ್ಯ ರಸ್ತೆ, ಬನಶಂಕರಿ, ಬೆಂಗಳೂರು-560070. ದೂರವಾಣಿ ಸಂಖ್ಯೆ;080-26711096

Read More

13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆರೋಪ ಹೊತ್ತಿದ್ದ 26 ವರ್ಷದ ವ್ಯಕ್ತಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿರುವ ಘಟನೆಯೊಂದು ನಡೆದಿದೆ. ಆರೋಪಿ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದರ ಕುರಿತು ಪ್ರಕರಣ ದಾಖಲಾಗಿತ್ತು. ಅಮರಾವತಿ ನಿವಾಸಿಯಾಗಿರುವ ಈತನನ್ನು ಅನಂತರ ಜೈಲಿಗೆ ಹಾಕಲಾಯಿತು. ಲೈಂಗಿಕ ಕಿರುಕುಳ ಇಲ್ಲದೇ ಆ ಬಾಲಕಿ ಆ ವ್ಯಕ್ತಿಯೊಂದಿಗೆ ಹಲವಾರ ಸ್ಥಳಗಳಲ್ಲಿ ವಾಸಿಸಿದ ಕುರಿತು ನ್ಯಾಯಾಲಯ ಗಮನಿಸಿದೆ. ಬಾಲಕಿ ಕೂಡಾ ತನ್ನ ಹೇಳಿಕೆಯನ್ನು ಅಧಿಕಾರಿಗೆ ನೀಡಿದ್ದು, ಇದರಲ್ಲಿ ಬಾಲಕಿ ಪುಸ್ತಕ ಖರೀಸುವ ನೆಪ ಮಾಡಿ ಆಗೋಸ್ಟ್ 23, 2020 ರಂದು ಮನೆಯಿಂದ ಹೊರಟು ಸ್ವಯಂಪ್ರೇರಿತವಾಗಿ ಆರೋಪಿಯೊಂದಿಗೆ ವಾಸ ಮಾಡಿದ್ದಾಳೆ ಎಂದು ಹೇಳಿದ್ದು, ಇದನ್ನು ನ್ಯಾಯಮೂರ್ತಿ ಅವರು ಗಮನಿಸಿದ್ದಾರೆ. ಅನಂತರ ಆರೋಪಿ ಮತ್ತು ಬಾಲಕಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ, ಲೈಂಗಿಕ ಸಂಬಂಧದ ಘಟನೆಯು ಇಬ್ಬರ ನಡುವಿನ ಆಕರ್ಷಣೆಯಿಂದಾಗಿ ಎಂದು ತೋರುತ್ತದೆ. ಅರ್ಜಿದಾರರು ಕಾಮದಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ…

Read More

ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿ ಇರುವ ರಾಮ ಲಲ್ಲಾ ವಿಗ್ರಹವನ್ನು ಜನವರಿ 19ರಂದು ಹೊಸ ರಾಮ ಮಂದಿರಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳಿವೆ. ಹೀಗಾಗಿ, ಜನವರಿ 20ರಿಂದ ಮೂರು ದಿನಗಳ ಕಾಲ ಅದರ ದರ್ಶನ ಮಾಡಲು ಸಾಧ್ಯವಾಗಲಾರದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 22 ರಂದು ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನೆರವೇರಲಿದೆ. ಭದ್ರತಾ ಕಾರಣಗಳಿಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ಜ.20ರಿಂದ ಮೂರು ದಿನಗಳ ಕಾಲ ರಾಮಲಲ್ಲಾ ವಿರಾಜಮಾನ್‌ ವಿಗ್ರಹದ ದರ್ಶನ ಭಕ್ತರಿಗೆ ಲಭ್ಯವಾಗುವ ಸಾಧ್ಯತೆ ಇಲ್ಲವೆಂದು ಟ್ರಸ್ಟ್‌ ಪದಾಧಿಕಾರಿ ಹೇಳಿದ್ದಾರೆ. ಇದೇ ವೇಳೆ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಮಾತನಾಡಿ “ತಾತ್ಕಾಲಿಕ ಮಂದಿರದಲ್ಲಿ ಇರುವ ರಾಮಲಲ್ಲಾ ವಿರಾಜಮಾನ್‌ ವಿಗ್ರಹವನ್ನು ಜ.19ರಂದು ಸ್ಥಳಾಂತರ ಮಾಡುವ ಬಗ್ಗೆ ನನಗೂ ಮಾಹಿತಿಗಳು ಲಭ್ಯವಾಗಿದೆ’ ಎಂದು ಹೇಳಿದ್ದಾರೆ. ಹಾಲಿ ಇರುವ ರಾಮಲಲ್ಲ ಮೂರ್ತಿಯನ್ನು…

Read More

ಭುವನೇಶ್ವರ : ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹಕಾರ ಒಡಿಶಾದ ಸುದರ್ಶನ ಸಾಹೂ ಎಂಬವರು ಶ್ರೀರಾಮನಿಗಾಗಿ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ. ಶ್ರೀರಾಮ ಹೊಂದಿದ್ದ ಕೋದಂಡ ಎಂಬ ಬಿಲ್ಲಿನ ಮಾದರಿಯಲ್ಲಿ ತಾಮ್ರದಿಂದ ಸಿದ್ಧಗೊಳಿಸಿದ ವಿಶೇಷ ಬಿಲ್ಲು ಮತ್ತು ಬಾಣವನ್ನು ಅವರು ಸಂಗ್ರಹಿಸಿದ್ದಾರೆ. ಅದು 2 ಅಡಿ ಉದ್ದ 1.5 ಅಡಿ ಅಗಲ ಹೊಂದಿದೆ. ಜತೆಗೆ 2 ಕೆ.ಜಿ. ತೂಕ ಹೊಂದಿದೆ. ಈ ವಿಶೇಷ ಬಿಲ್ಲು ಮತ್ತು ಬಾಣಕ್ಕೆ ಮಯೂರ್‌ಕಾಂತಿಯ ಎಂಬ ಹೆಸರು ಇರಿಸಿರುವುದಾಗಿ ಹೇಳಿಕೊಂಡಿದ್ದಾರೆಯಾಗಿದೆ.

Read More

ಜನವರಿ 22ರಂದು ಭವ್ಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರರಾಗಿದ್ದಾರೆ. ಏತನ್ಮಧ್ಯೆ ಈ ಕಾತುರ ವಿದೇಶಿಯರಲ್ಲೂ ಹೆಚ್ಚಾಗಿದ್ದು, ದಕ್ಷಿಣ ಕೊರಿಯಾಕ್ಕೂ, ಉತ್ತರಪ್ರದೇಶದ ಅಯೋಧ್ಯೆಗೂ ವಿಶೇಷವಾದ ಸಂಬಂಧವಿದೆ. ಪ್ರತಿವರ್ಷ ಸಾವಿರಾರು ದಕ್ಷಿಣ ಕೊರಿಯನ್ನರು ಅಯೋಧ್ಯೆಗೆ ಆಗಮಿಸಿ ರಾಣಿ ಹೂ ಹ್ವಾಂಗ್‌ ಓಕ್‌ (ಸುರೀರತ್ನ) ಗೆ ಗೌರವ ಸಲ್ಲಿಸಿ ತೆರಳುತ್ತಾರೆ. ಇದಕ್ಕೆ ಕಾರಣ ಅಯೋಧ್ಯೆ ತಮ್ಮ ಪೂರ್ವಜರ ಮೂಲ ಎಂಬ ನಂಬಿಕೆ ದಕ್ಷಿಣ ಕೊರಿಯಾ ಜನರದ್ದಾಗಿದೆ. ರಾಣಿ ಹೂ ಹ್ವಾಂಗ್‌ ಓಕ್‌ ಅಲಿಯಾಸ್‌ ರಾಜಕುಮಾರಿ ಸುರೀರತ್ನ ಅಯೋಧ್ಯೆಯ ರಾಣಿಯಾಗಿದ್ದಳು. ಅಯುತಾಯನ ರಾಜಕುಮಾರಿ ಸುರೀರತ್ನ ಅತೀ ಸೌಂದರ್ಯವತಿಯಾಗಿದ್ದಳು. ಅವಳು ರಾಜ ಸೂರ್ಯವರ್ಮನ್‌ ಮತ್ತು ರಾಣಿ ಮಯೂರ್ಚತನ ಮಗಳು. ಒಂದು ದಿನ ರಾಜಕುಮಾರಿ ಸುರೀರತ್ನಗೆ ಕನಸು ಬಿದ್ದಿದ್ದು, ಅದರಲ್ಲಿ ಆಕೆ ದೂರದ ದೇಶದಿಂದ ಬೆಳಕು ಬಂದಿದ್ದನ್ನು ಕಂಡಿದ್ದಳು. ಕೊನೆಗೆ ರಾಜಕುಮಾರಿ ಸುರೀರತ್ನ ಬೆಳಕಿನ ಮೂಲವನ್ನು…

Read More

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ಅಧಿಕಾರಿಗಳು ಚಿನ್ನದ ಬೇಟೆಯ ಸರಣಿಯನ್ನು ಮುಂದುವರೆಸಿದ್ದು 50.93 ಲಕ್ಷ ರೂಪಾಯಿಯ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಾದ IX816 ಮತ್ತು IX814ದಲ್ಲಿ ಅಭುದಾಬಿ ಮತ್ತು ದುಬೈಯಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಲ್ಲಿ ಈ ಅಕ್ರಮ ಚಿನ್ನ ಪತ್ತೆಯಾಗಿದೆ. ಇಬ್ಬರಿಂದ ಒಟ್ಟು 815 ಗ್ರಾಂ ಶುದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದು ಇದರ ಮೌಲ್ಯ ಸುಮಾರು ರೂ. 50,93,750 ಎಂದು ಅಂದಾಜಿಸಲಾಗಿದೆ. ಒರ್ವ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕ್ಯಾಪ್ಸೂಲ್ ಮಾಡಿ ಗುದನಾಳದಲ್ಲಿ ಅಡಗಿಸಿಟ್ಟಿದ್ದರೆ, ಮತ್ತೋರ್ವ ಪೇಸ್ಟ್ ರೂಪ ಮಾಡಿ ಬ್ಯಾಗ್‌ನಲ್ಲಿ ಚಾಕಲೇಟ್ ಬಾಕ್ಸ್ ನಲ್ಲಿ ಮರೆಮಾಚಲಾಗಿತ್ತು ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆಯಾಗಿದೆ.

Read More

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಳಿ ಅಂಕ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ – ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ಸಲುವಾಗಿ ಕೋಳಿ ಅಂಕ ನಡೆಯುತ್ತದೆ. ಕೋಳಿ ಅಂಕಗಳಿಗೆ ಪೊಲೀಸರು ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿದ್ದು, ಹೀಗಾಗಿ ಜಿಲ್ಲೆಯಲ್ಲಿ ದೈವಸ್ಥಾನ ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ನಂತರ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಶಾಸಕ ಹರೀಶ್ ಪೂಂಜಾ ಮನವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿನಲ್ಲಿ ಕೋಳಿ ಅಂಕಕ್ಕೆ ಅನುಮತಿಯಿಲ್ಲದೆ ಹೋದರು ಕೂಡ ಹಿಂದಿನಿಂದಲೂ ಬಂದಿರುವ ಸಂಪ್ರದಾಯದ ಹಿನ್ನೆಲೆಯಲ್ಲಿ ಕೋಳಿ ಅಂಕ ನಡೆಸಲು ಅವಕಾಶವಿದೆ. ಪರಂಪರೆಯ ಕೋಳಿ ಅಂಕಕ್ಕೆ ಅನುಮತಿ ಬೇಕಾಗಿಲ್ಲ. ಆದರೆ…

Read More

ಉಡುಪಿ : ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯ ಪೀಠಾರೋಹಣ ಸಮಾರಂಭದಲ್ಲಿ ವಿಶ್ವದ ಆಧ್ಯಾತ್ಮಪ್ರಿಯರ ಗಮನವನ್ನು ಸೆಳೆಯುತ್ತಿದೆ. ಪುತ್ತಿಗೆ ಶ್ರೀಗಳು ತಮ್ಮ ಪರ್ಯಟನೆ ಸಂದರ್ಭ ಹಲವು ಗಣ್ಯರು ಅವರ ಪ್ರಭಾವಕ್ಕೊಳಗಾಗಿದ್ದು, ಅವರಲ್ಲಿ ಕೆಲವರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಲ್ಯೂಕ್ ಡನೆಲನ್ ಅವರು ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಾಜಿ ಸಚಿವರಾಗಿದ್ದಾರೆ. ವಿಕ್ಟೋರಿಯದಲ್ಲಿರುವ ದಕ್ಷಿಣ ಭಾರತದ ಹಿಂದೂ ಸಮುದಾಯಕ್ಕೆ ಅಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸ್ಥಾಪಿಸಿರುವ ಕೃಷ್ಣ ದೇವಾಲಯ ಹಿಂದುಗಳ ಹಬ್ಬಗಳ ಆಚರಣೆಯಲ್ಲಿ ವಹಿಸುತ್ತಿರುವ ಮಹತ್ವಪೂರ್ಣ ಸೇವೆಯನ್ನು ಅವರು ಶ್ಲಾಘಿಸಿದ್ದು, ಜನವರಿ 18ರಂದು ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಶ್ರೀಗಳಿಗೆ ಪತ್ರ ಬರೆದಿದ್ದಾರೆ. ಅಮೆರಿಕಾದ ವರ್ಲ್ಡ್ ರಿಲಿಜಿಯಸ್ ಮತ್ತು ಸ್ಪಿರಿಚುವಾಲಿಟಿ ಉಪಾಧ್ಯಕ್ಷ ಡಾ.ವಿಲಿಯಂ ಎಫ್. ವೆಂಡ್ಲಿಯವರು ಆಧುನಿಕ ವಿಜ್ಞಾನ ಮತ್ತು ಇತಿಹಾಸ, ಧರ್ಮಗಳ ನಡುವೆ ಸಮನ್ವಯ ಸಾಧಿಸುವ ಶೇರ್ಡ್ ಸೇಕ್ರೆಡ್ ಸ್ಟೋರಿ ಎಂಬ ಯೋಜನೆಯ ಮುಖ್ಯಸ್ಥರು. ಡಾ. ವೆಂಡ್ಲಿ ಫೆಟ್ಲರ್ ಎಂಬ ಸಂಸ್ಥೆ ಸೇರುವ ಮೊದಲು…

Read More