Author: KNN IT Team

ಲೀಥಿಯಂ ಸೇರಿದಂತೆ ಕೈಗಾರಿಕಾ ಮಹತ್ವದ ಹಲವು ಅಪರೂಪದ ಲೋಹಗಳ ಅಗತ್ಯಕ್ಕೆ ಬಹುತೇಕ ಚೀನಾವನ್ನೇ ಅವಲಂಬಿಸಿರುವ ಭಾರತ ಸರ್ಕಾರ, ಇದೀಗ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಸಂಬಂಧ ಅರ್ಜೆಂಟೀನಾದ ದೇಶದ ಜೊತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. 200 ಕೋಟಿ ರೂಪಾಯಿ ಮೊತ್ತದ ಈ ಒಪ್ಪಂದಕ್ಕೆ ಭಾರತದ ಸರ್ಕಾರಿ ಸ್ವಾಮ್ಯದ ಖನಿಜ್‌ ಬಿದೇಶ್‌ ಇಂಡಿಯಾ ಲಿ (ಕಾಬಿಲ್‌) ಮತ್ತು ಅರ್ಜೇಂಟೀನಾ ಕೇಮನ್‌ ಸಂಸ್ಥೆಗಳು ಇತ್ತೀಚಿಗೆ ಸಹಿಹಾಕಿವೆ. ಈ ಒಪ್ಪಂದದ ಅನ್ವಯ ಅರ್ಜೆಂಟೀನಾದ 5 ಪ್ರದೇಶಗಳಲ್ಲಿ ಲೀಥಿಯಂ ಖನಿಜ ಪತ್ತೆ ಮತ್ತು ಗಣಿಗಾರಿಕೆ ನಡೆಸುವ ಅವಕಾಶವನ್ನು ‘ಕಾಬಿಲ್’ ಪಡೆದುಕೊಳ್ಳಲಿದೆ. ಒಂದು ವೇಳೆ ಖನಿಜ ಪತ್ತೆಯಾದರೆ ಅದರ ಬಳಕೆ ಮೇಲೂ ಭಾರತ ಹಕ್ಕು ಹೊಂದಿರಲಿದೆ. ಇದು ಭಾರತದ ಸರ್ಕಾರಿ ಸಂಸ್ಥೆಯೊಂದರ ಮೊತ್ತಮೊದಲ ಲೀಥಿಯಂ ನಿಕ್ಷೇಪ ಪತ್ತೆ ಮತ್ತು ಗಣಿಗಾರಿಕೆ ಒಪ್ಪಂದವಾಗಿದೆ. ಹೀಗಾಗಿ ಈ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ಎಲೆಕ್ಟ್ರಿಕ್‌ ವಾಹನಗಳು, ಡಿಜಿಟಲ್‌ ಕ್ಯಾಮೆರಾ, ಲ್ಯಾಪ್‌ಟಾಪ್‌, ಮೊಬೈಲ್‌ ಬ್ಯಾಟರಿ ಮೊದಲಾದ ಉಪಕರಣಗಳಿಗೆ ಲೀಥಿಯಂ ಅತ್ಯಂತ…

Read More

ಮಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿ ವಿರುದ್ದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆಯಾಗಿದೆ. ಆರೋಪಿ ಅನಿಲ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಎನ್‌ಎಸ್‌ಯುಐ ನ ದ.ಕ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ಮಂಗಳೂರು ನಗರ ಪೊಲೀಸ್ ಉಪಾಯುಕ್ತರಿಗೆ ಆರೋಪಿ ವಿರುದ್ದ ಕ್ರಮ ಕೈಗೊಳ್ಳಲು ದೂರನ್ನು ಸಲ್ಲಿಸಲಾಗಿತ್ತು. ದೂರಿಗೆ ಸ್ಪಂದಿಸಿದ ಪೊಲೀಸ್ ಉಪಾಯುಕ್ತರು, ಪ್ರಕರಣವನ್ನು ಸುರತ್ಕಲ್ ಠಾಣೆಗೆ ವರ್ಗಾಯಿಸಿದ್ದರು. ಮೂಲತಃ ಉತ್ತರ ಕನ್ನಡದ ಶಿರಸಿಯವನಾದ ಅನಿಲ್ ಕಳೆದ 12 ವರ್ಷಗಳಿಂದ ಸುರತ್ಕಲ್ ನಲ್ಲಿ ವಾಸಿಸುತ್ತಿದ್ದು ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ಆರೋಪಿ ಸರ್ಕಾರದ ಯೋಜನೆಗಳನ್ನು ಪಡೆಯಲು ಕಳೆದ ಮೂರು ತಿಂಗಳಿನಿಂದ ರೇಶನ್ ಕಾರ್ಡಿನಲ್ಲಿ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದ, ಆದರೆ ಸರ್ವರ್ ಸಮಸ್ಯೆಯಿಂದ ವಿಫಲವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಆತನ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ ಎಂದು ಪೊಲೀಸರು…

Read More

ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ನೀಡಲು ಸಹಾಯ ಮಾಡುವ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಇಲಾಖೆಗೆ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 206 ಮಂದಿ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದು, ಇವರು ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ತಿಳಿಸಿದ್ದಾರೆಯಾಗಿದೆ.‌ ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂರಕ್ಷಿಸಿ, ಸಂಗ್ರಹಿಸಿ, ವೈಜ್ಞಾನಿಕವಾಗಿ ಪ್ಯಾಕ್ ಮಾಡಲು ತನಿಖಾಧಿಕಾರಿಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಸಹಾಯ ಮಾಡಲಿದ್ದಾರೆ. ಸೀನ್ ಆಫ್ ಕ್ರೈಂ ಅಧಿಕಾರಿಗಳಿಗೆ ಈಗಾಗಲೇ ಅವರಿಗೆ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ಎನ್ಎಫ್ಎಸ್‌ಯು ಗುಜರಾತ್, ಕೆಪಿಎ ಬಾಂಬ್ ಪತ್ತೆ ದಳ, ಶ್ವಾನದಳ, ಸಿಐಡಿ, ಫೋರೆನ್ಸಿಕ್ ಮೆಡಿಸಿನ್ ಮುಂತಾದ ಕಡೆಗಳಲ್ಲಿ ತರಬೇತಿ ನೀಡಲಾಗಿದೆ. ಸೀನ್ ಆಫ್ ಕ್ರೈಂ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿದ್ದು ಜಿಲ್ಲೆಯ ಡಿಪಿಒ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೃತ್ಯ ನಡೆದ ಸ್ಥಳಕ್ಕೆ ತ್ವರಿತವಾಗಿ…

Read More

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್, ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಕನ್ಸಲ್ಟೆಂಟ್​- COO​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಜನವರಿ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕಾಗಿದೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪಬ್ಲಿಕ್ ಪಾಲಿಸಿ & ಮ್ಯಾನೇಜ್​ಮೆಂಟ್​/ ಎಕನಾಮಿಕ್ಸ್​/ ಅಡ್ಮಿನಿಸ್ಟ್ರೇಶನ್​​ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಗರಿಷ್ಠ 55 ವರ್ಷ ಮೀರಿರಬಾರದು. ವಾರ್ಷಿಕ ಪ್ಯಾಕೇಜ್ 25 ಲಕ್ಷ ವೇತನವಿರುತ್ತದೆ. ಉದ್ಯೋಗದ ಸ್ಥಳ ಬೆಂಗಳೂರು ಆಗಿದೆ. ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಾ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ…

Read More

ಒಣ ಹಣ್ಣುಗಳು ದೇಹಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಬಾದಾಮಿಯು ತುಂಬಾ ಆರೋಗ್ಯಕರ ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದರೆ ಬಾದಾಮಿ ತಿಂದರೆ ಸಾಲದು, ಆದರೆ ಇದು ಅಸಲಿಯೋ ನಕಲಿಯೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅನೇಕ ಜನರು ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬೀಜಗಳನ್ನು ತಿನ್ನುತ್ತಾರೆ. ಆದರೆ ನೀವು ಪ್ರತಿದಿನ ತಿನ್ನುವ ಬೀಜಗಳ ಶುದ್ಧತೆ ಮತ್ತು ಗುಣಮಟ್ಟದ ಬಗ್ಗೆ ನಿಮಗೆ ಖಚಿತವಾಗಿದೆಯೇ, ಬಾದಾಮಿ ಅಸಲಿಯೇ ಅಥವಾ ಕಲಬೆರಕೆ ಎಂಬುದನ್ನು ಮನೆಯಲ್ಲಿ ಕುಳಿತು ತಿಳಿದುಕೊಳ್ಳಬಹುದು. ಬೀಜಗಳ ಶುದ್ಧತೆ ಮತ್ತು ಗುಣಮಟ್ಟವನ್ನು ಪರಿಶೀಲಿಸುವ ಮೊದಲ ವಿಷಯವೆಂದರೆ ಅವುಗಳ ಬಣ್ಣ ಮತ್ತು ವಿನ್ಯಾಸ. ಉತ್ತಮ ಗುಣಮಟ್ಟದ ಬೀಜಗಳು ಉತ್ತಮವಾದ ಕಂದು ಬಣ್ಣ ಮತ್ತು ದೋಷರಹಿತ ವಿನ್ಯಾಸವನ್ನು ಹೊಂದಿರುತ್ತವೆ. ಗಾಢ ಬಣ್ಣದ ಬೀಜಗಳು ಗುಣಮಟ್ಟದ ಸಮಸ್ಯೆಗಳನ್ನು ಸೂಚಿಸುತ್ತವೆ. ಬೀಜಗಳು ಸಾಮಾನ್ಯವಾಗಿ ರುಚಿಯಲ್ಲಿ ಸಿಹಿಯಾಗಿರುತ್ತವೆ. ರುಚಿ ಕಹಿಯಾಗಿದ್ದರೆ ಕಾಯಿ ತಿನ್ನದಿರುವುದು ಉತ್ತಮ, ಏಕೆಂದರೆ ಇದು ಫೈಟಿಕ್ ಆಮ್ಲದಂತಹ ಕೆಲವು ರಾಸಾಯನಿಕಗಳ ಉಪಸ್ಥಿತಿಯನ್ನು ಸೂಚಿಸುತ್ತದೆ. ಬಾದಾಮಿಯನ್ನು ನೀರಿನ ಬಟ್ಟಲಿನಲ್ಲಿ ಇರಿಸಿ.…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ನ್ಯಾಯ ದೊರಕಿಸಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಅವರು ಇಂದು ನೇತ್ರಾವತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 170 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಸಾಂತ್ವನ ಕೇಂದ್ರಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಬೇಕು. ನ್ಯಾಯಾಲಯಗಳಲ್ಲಿ ದಾಖಲಿಸಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಕಾನೂನು ನೆರವು ನೀಡಲು ಇಲಾಖೆ ಒತ್ತು ನೀಡಬೇಕು. ಪ್ರಕರಣದ ವಿಚಾರಣಾ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ನಿರ್ದೇಶಿಸಿದರು. ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯಿದೆಯಡಿ 36 ಪ್ರಕರಣ ದಾಖಲಾಗಿದ್ದು, ಈ ಪೈಕಿ 30 ಪ್ರಕರಣ ತನಿಖಾ ಹಂತದಲ್ಲಿದೆ. ದಾಖಲಾದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸುವಂತೆ…

Read More

ಮಂಗಳೂರು : ವಿಚ್ಛೇದನೆ ನೀಡಬೇಕೆಂದು ಒತ್ತಾಯಿಸಿದ್ದಲ್ಲದೆ, ವಿಚ್ಛೇದನೆ ನೀಡಲು ನಿರಾಕರಿಸಿದ್ದ ಪತಿಗೆ ಹಲ್ಲೆ ಗೈದ ಘಟನೆ ಕುಲಶೇಖರ ಬಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ 13ರಂದು ರಾತ್ರಿ ತಾನು ಸಿರ್ಲಾಪಡ್ಪು ರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪತ್ನಿ ರೇಣುಕಾ ಆಂಟೋನಿ ಡಿಸೋಜ ಹಾಗೂ ರಾಜೇಶ್ ಎಂಬವರು ಸ್ಕೂಟರ್‌ನಲ್ಲಿ ಬಂದಿದ್ದರು. ಪತ್ನಿಯು ನನ್ನಲ್ಲಿ ‘ನನಗೆ ಡೈವರ್ಸ್’ ಕೊಡು ಎಂದು ಕೇಳಿದಾಗ, ತಾನು ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದೆ. ಆವಾಗ ಪತ್ನಿ ತನ್ನ ಬಲ ಕೆನ್ನೆಗೆ ಕೈಯಿಂದ ಹಲ್ಲೆಗೈದರೆ, ಆಕೆಯ ಜತೆಗಿದ್ದ ರಾಜೇಶ್ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪತ್ನಿ ಕಲ್ಲಿನಿಂದ ಹಲ್ಲೆ ನಡೆಸಿ ‘ನೀನು ಡೈವರ್ಸ್ ಕೊಡದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಕುಲಶೇಖರ ನಿವಾಸಿ ಆಂಟೋನಿ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯಾಗಿದೆ.

Read More

5G ಇಂಟರ್ನೆಟ್ ಬಳಕೆ ಮಾಡುವ ಕೋಟ್ಯಂತರ ಭಾರತೀಯ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ದೇಶದ ಎರಡೂ ಪ್ರಮುಖ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5G ಸೇವೆಯ ವ್ಯಾಪ್ತಿಯನ್ನು ಒದಗಿಸಲು ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ ಸುಮಾರು 12.5 ಕೋಟಿ 5ಜಿ ಬಳಕೆದಾರರಿದ್ದಾರೆ. ಈ ನಡುವೆ, ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಅನಿಯಮಿತ 5G ಡೇಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ನೀವು 5G ಅನ್ನು ಉಚಿತವಾಗಿ ಬಳಸುತ್ತಿದ್ದರೆ ಈ ಆಫರ್ ಸದ್ಯದಲ್ಲೇ ಕೊನೆಗೊಳ್ಳಲಿದೆಯಾಗಿದೆ. 2024 ರ ಅಂತ್ಯದ ವೇಳೆಗೆ ಭಾರತದಲ್ಲಿ 5G ಬಳಕೆದಾರರ ಸಂಖ್ಯೆ 20 ಕೋಟಿ ದಾಟುವ ನಿರೀಕ್ಷೆಯಿದ್ದು,ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 5-10 ಪ್ರತಿಶತದಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ, ಎರಡೂ ಕಂಪನಿಗಳು 30-40 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡಬಹುದು ಎಂದು ಹೇಳಲಾಗಿದೆ. ಹೊಸ 5ಜಿ ರೀಚಾರ್ಜ್ ಯೋಜನೆಗಳು ಪ್ರಸ್ತುತ 4G ರೀಚಾರ್ಜ್ ದರಗಳಿಗಿಂತ…

Read More

ಕೇಂದ್ರ ಸರ್ಕಾರ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಬಡ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ LPG ಸಂಪರ್ಕಗಳನ್ನು ಒದಗಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಲಾಭ ಪಡೆಯಲು ಆನ್‌ಲೈನ್‌ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ, ಫಲಾನುಭವಿಗಳಿಗೆ ಉಚಿತ ಎಲ್ ಪಿಜಿ ಮತ್ತು ಗ್ಯಾಸ್ ಸ್ಟವ್ ನೀಡಲಾಗುತ್ತದೆ. ನೀವು PMUYಗಾಗಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನಿಮ್ಮ ಪ್ರದೇಶದ ಹತ್ತಿರದ ಎಲ್‌ಪಿಜಿ ವಿತರಕರನ್ನು ಸಂಪರ್ಕಿಸಬೇಕಾಗುತ್ತದೆ. PMUY ಗಾಗಿ ಅರ್ಹತಾ ಮಾನದಂಡಗಳು ಹೀಗಿವೆಯಾಗಿದೆ : ಅರ್ಜಿದಾರರು ಮಹಿಳೆಯಾಗಿರಬೇಕು. ಅರ್ಜಿದಾರರ ವಯೋಮಿತಿ 18 ವರ್ಷಕ್ಕಿಂತ ಹೆಚ್ಚಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶದಲ್ಲಿ 2 ಲಕ್ಷಕ್ಕಿಂತ ಕಡಿಮೆಯಿರಬೇಕು. ಅರ್ಜಿದಾರರ ಕುಟುಂಬವು ಈಗಾಗಲೇ ಯಾವುದೇ LPG ಸಂಪರ್ಕವನ್ನು ಹೊಂದಿರಬಾರದು.…

Read More

ಜನವರಿ 22 ರಂದು ಶ್ರೀರಾಮಮಂದಿರ ಉದ್ಘಾಟನೆಯಾಗಲಿದೆ ಎಂಬ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ. ಆದರೆ ವಸ್ತುಸ್ಥಿತಿಯಲ್ಲಿ ಆ ದಿನ ಬಾಲರಾಮನ ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನ ವಿಧಿಗಳು ಮುಕ್ತಾಯಗೊಳ್ಳಲಿವೆ. ಇಂದಿನಿಂದ ಈ ವಿಧಿಗಳು ಶುರುವಾಗಿದೆ. ಅರ್ಥಾತ್‌ ಸತತ 7 ದಿನಗಳು ಪ್ರಾಣಪ್ರತಿಷ್ಠಾಪನ ವಿಧಿಗಳನ್ನು ವಿವಿಧ ಹಂತಗಳಲ್ಲಿ ನೆರವೇರಿಸಲಾಗುತ್ತದೆ. ಯಾವುದೇ ದೇಗುಲದ ಆರಂಭವೆಂದರೆ, ಪ್ರಾಣ ಪ್ರತಿಷ್ಠಾಪನೆಯನ್ನೇ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಗುರುಗಳು, ತಂತ್ರಿಗಳು, ಸಿದ್ಧಪುರುಷರು, ತಮ್ಮ ದಿವ್ಯದೃಷ್ಟಿಯಿಂದ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ವಿಗ್ರಹದ ರೂಪ ಹೇಗಿರಬೇಕು, ಎಷ್ಟು ಅಳತೆ ಹೊಂದಿರಬೇಕು ಎನ್ನುವುದನ್ನು ಸೂಚಿಸುತ್ತಾರೆ. ಅದನ್ನು ಆಧಾರವಾಗಿಟ್ಟುಕೊಂಡು ಶಿಲ್ಪಿಯೊಬ್ಬರು ವಿಗ್ರಹವನ್ನು ಕೆತ್ತುತ್ತಾರೆ. ಸಿದ್ಧವಾದ ವಿಗ್ರಹಕ್ಕೆ ಶಿಲ್ಪಿ ತಾನು ಮೊದಲು ಪೂಜೆ ಮಾಡಿ (ಇದೊಂದು ವಿಧಿ) ಸಂಬಂಧಿಸಿದವರಿಗೆ ಹಸ್ತಾಂತರಿಸುತ್ತಾನೆ. ಆ ವಿಗ್ರಹದಲ್ಲಿ ನಿರ್ದಿಷ್ಟ ದೇವತೆಯ ಶಕ್ತಿಯನ್ನು ತುಂಬಿ, ಆ ಶಕ್ತಿಯನ್ನು ಪ್ರಕಟವಾಗುವಂತೆ ಮಾಡುವುದೇ ಪ್ರಾಣ ಪ್ರತಿಷ್ಠಾಪನೆ. ಇನ್ನೂ ಸರಳವಾಗಿ ಹೇಳುವುದಾದರೆ ವಿಗ್ರಹದಲ್ಲಿ ಪ್ರಾಣವನ್ನು ಪ್ರತಿಷ್ಠಾಪಿಸುವುದೇ ಪ್ರಾಣ ಪ್ರತಿಷ್ಠಾಪನೆ. ಯಜುರ್ವೇದ, ಅಥರ್ವಣ ವೇದ, ಆಗಮಶಾಸ್ತ್ರಗಳು, ವಿವಿಧ ಪುರಾಣಗಳಲ್ಲಿ,…

Read More