Subscribe to Updates
Get the latest creative news from FooBar about art, design and business.
Author: KNN IT Team
ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಕರನ ಪ್ರೀತಿಗೆ ಮರುಳಾಗಿ ಕೈ ಹಿಡಿದ ಗಂಡನನ್ನು ಯುಟ್ಯೂಬ್ ನೋಡಿ ಮರ್ಡರ್ ಮಾಡಿದ ಘೋರ ಘಟನೆ ಬೆಚ್ಚ ಬೀಳಿಸುವಂತೆ ಮಾಡಿದೆಯಾಗಿದೆ. ಹರಿಯಾಣ ರಾಜ್ಯದ ಯಮುನಾನಗರ ಮೂಲದ ಮೀನಾಕ್ಷಿಗೆ ಪತಿ ನೀತು (30) ಜೊತೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಅದೇ ಮೀನಾಕ್ಷಿಗೆ ಇನ್ಸ್ಟಾಗ್ರಾಮ್ನಲ್ಲಿ ಸೋನಿಪತ್ ಮೂಲದ ಸಾಹಿಲ್ ಎಂಬಾತನ ಪರಿಚಯ ಆಗುತ್ತದೆ. ಪರಿಚಯ ಆದ ಬಳಿಕ ಇವರ ಮಧ್ಯೆ ಪ್ರೀತಿ ಬೆಳೆದು ‘ನಿನಗೆ ನಾನು, ನೀನು ನನಗೆ’ ಅಂತಾ ಪ್ರೇಮದ ಅಮಲಿನಲ್ಲಿ ತೇಲಾಡಲು ಶುರುಮಾಡಿದ್ದರು. ಎಂದೆಂದಿಗೂ ಬಿಟ್ಟಿರಲಾಗದ ಪ್ರೀತಿ ನಮ್ಮದು ಅಂದುಕೊಂಡ ಮೀನಾಕ್ಷಿ, ತನ್ನ ಪತಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದಳು. ಪ್ರೀತಿಗೆ ಮರುಳಾದ ಈಕೆ ಆತನ ಪ್ರಿಯಕರನ ಜೊತೆ ಸಂಸಾರ ನಡೆಸಲು ನಿರ್ಧಾರ ಮಾಡಲು ಶುರು ಮಾಡಿದ್ದಾಳೆ. ಮೀನಾಕ್ಷಿಯು ಪ್ರಿಯಕರನ ಪ್ರೀತಿ ಬಯಸಲು ತನ್ನ ಪತಿ ನೀತುವನ್ನು ಮುಗಿಸಿ ಬಿಡಲು ಯೋಚನೆ ಮಾಡುತ್ತಾಳೆ. ಪತಿಯನ್ನು ಸಾಯಿಸಿ ಬಿಟ್ಟರೆ ಮತ್ತೆ ಸಾಹಿಲ್ ಜೊತೆ ಚೆನ್ನಾಗಿ ಜೀವನ ನಡೆಸಬಹುದು ಎಂದು…
ಜನವರಿ 22ರಂದು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜನವರಿ 22ರಂದು ಕರ್ನಾಟಕದ ಶಾಲೆ – ಕಾಲೇಜುಗಳಿಗು ಕೂಡ ಸಾರ್ವತ್ರಿಕ ರಜೆ ಘೋಷಿಸುವಂತೆ ಆಗ್ರಹ ವ್ಯಕ್ತವಾಗಿದೆ. ಈ ಪುಣ್ಯ ದಿನದಂದು ಮಕ್ಕಳು ಲೋಕಾರ್ಪಣೆಗೆ ಸಾಕ್ಷಿಯಾಗಬೇಕು ಎಂಬ ಕಾರಣಕ್ಕೆ ರಜೆ ಘೋಷಣೆ ಮಾಡಲು ಹಲವರು ಆಗ್ರಹ ಮಾಡಿದ್ದಾರೆ. ಈ ಕುರಿತಂತೆ ಶ್ರೀರಾಮ ಸೇನೆ ಮತ್ತು ಹಲವರು ಹಿಂದೂ ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿವೆ. ಕರ್ನಾಟಕ ಹನುಮನ ಬೀಡು, ಹೀಗಾಗಿ ಜನವರಿ 22ರಂದು ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಬೇಕು. ಈ ಅಮೋಘ ಕ್ಷಣವನ್ನು ನಮ್ಮ ಮಕ್ಕಳು ಕಣ್ತುಂಬಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಈ ವೈಭವವನ್ನು ಸಾರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆಯಾಗಿದೆ.
ಹಸಿರು ಬಟಾಣಿಗಳನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದರೆ ಇವು ವರ್ಷವಿಡೀ ಹೆಪ್ಪುಗಟ್ಟಿದ ಮತ್ತು ಒಣಗಿದ ರೂಪದಲ್ಲಿ ಸಿಗುತ್ತದೆ. ಹೀಗಿದ್ದರೂ ಒಣಗಿದ ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಾಗಿದೆ. ಹಾಗಾಗಿ ತಾಜಾ ಹಸಿರು ಬಟಾಣಿಗಳನ್ನು ಮಾತ್ರ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಜಾ ಹಸಿರು ಬಟಾಣಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಸಿರು ಬಟಾಣಿ ಅತ್ಯುತ್ತಮ ಪ್ರೋಟೀನ್ ಹೊಂದಿರುತ್ತದೆ. ನಿಯಮಿತವಾಗಿ ಬಟಾಣಿ ಸೇವಿಸುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇದು ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಮಕ್ಕಳ ದೇಹದ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಹಸಿರು ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹಠಾತ್ ಸಕ್ಕರೆಯ ಏರಿಕೆಯನ್ನು ತಡೆಯುತ್ತದೆ ಮತ್ತು ಫೈಬರ್ ಇರುವಿಕೆಯಿಂದಾಗಿ ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳಿಗೆ ಹಸಿರು ಬಟಾಣಿ ಅತ್ಯುತ್ತಮ ಆಹಾರವಾಗಿದೆ. ಹಸಿರು ಬಟಾಣಿಗಳನ್ನು ಫೈಬರ್ನ ಶ್ರೀಮಂತ ಮೂಲವೆಂದು ಪರಿಗಣಿಸಲಾಗುತ್ತದೆ, ಇದನ್ನು…
ಕಡಬ : ಭಕ್ತರೊಬ್ಬರು ಕಳೆದುಕೊಂಡ ಹಣವನ್ನು ಐದರ ಹರೆಯದ ಬಾಲಕಿಯೊಬ್ಬಳ ಪ್ರಾಮಾಣಿಕತೆಯಿಂದ ವಾರಿಸುದಾರರ ಕೈ ಸೇರಿಸಿದ ಘಟನೆ ದಕ್ಷಿಣ ಕನ್ನಡದ ಪುರಾಣ ಪ್ರಸಿದ್ದ ಕ್ಷೇತ್ರ ಕುಕ್ಕೆ ಸುಬ್ರಮಣಣ್ಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ಶ್ರೀಧರ ಎಂಬವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಕೆ ತೀರಿಸಲು ಬಂದಿದ್ದರು. ಈ ಸಂದರ್ಭ ತಮ್ಮ ಬ್ಯಾಗ್ ನಲ್ಲಿದ್ದ ಸುಮಾರು ಐವತ್ತು ಸಾವಿರ ನೋಟಿನ ಕಂತೆ ಆಕಸ್ಮಿಕವಾಗಿ ಬಿದ್ದು ಹೋಗಿತ್ತು. ದೇಗುಲದ ಜಮಾ ಉಗ್ರಣ ಬಳಿ ಇರುವ ಹಣ್ಣು ಕಾಯಿ ಅಂಗಡಿ ಬಳಿಯಲ್ಲಿ ಬಿದ್ದಿದ್ದ ಈ ನೋಟಿನ ಕಂತೆ ಪಂಜ ಚಿಮುಳ್ಳು ನಿವಾಸಿ ಚದ್ರಾವತಿ ಎಂಬ ಐದು ವರ್ಷದ ಪುಟಾಣಿ ಕೈಗೆ ಸಿಕ್ಕಿದೆ. ತಕ್ಷಣ ವಾರಿಸುದಾರರ ಮಾಹಿತಿ ಪಡೆದ ಬಾಲಕಿಯ ಪೋಷಕರು ಸ್ಥಳೀಯ ಹಣ್ಣುಕಾಯಿ ಅಂಗಡಿ ಮಾಲೀಕರ ಸಮ್ಮುಖದಲ್ಲಿ ಹಣ ಕಳಕೊಂಡ ಭಕ್ತನಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆಯಾಗಿದೆ.
ಉಡುಪಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಬ್ರಹ್ಮಾವರ ತಾಲೂಕಿನ ರಿಕ್ಷಾ ಚಾಲಕ ಕೇಶವ ನಾಯ್ಕ (27) ಶಿಕ್ಷೆಗೆ ಗುರಿಯಾಗಿರುವ ಆರೋಪಿ ಎಂದು ಮಾಹಿತಿ ದೊರಕಿದೆ. 13 ವರ್ಷದ ನೊಂದ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದು, ಇದರಿಂದ ಆತ ಬಾಲಕಿಯ ಮನೆಯವರಿಗೂ ಪರಿಚಯಸ್ಥನಾಗಿದ್ದ ಎನ್ನಲಾಗಿದೆ.ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಆತ, 2023ರ ಫೆಬ್ರವರಿ 17ರಂದು ಆಕೆಯನ್ನು ಪುಸಲಾಯಿಸಿ ತನ್ನ ರಿಕ್ಷಾದಲ್ಲಿ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಯಾರಲ್ಲೂ ಹೇಳಬಾರದೆಂದು ಹೆದರಿಸಿದ್ದನು. ಆಕೆ ಗರ್ಭವತಿಯಾದ ಬಳಿಕ ಹೆತ್ತವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್ ನಿರೀಕ್ಷಕ ಜಯಾನಂದ ಕೆ.…
ಖಾದ್ಯ ತೈಲವನ್ನು ಕಡಿಮೆ ಸುಂಕದಲ್ಲಿ ಆಮದು ಮಾಡಿಕೊಳ್ಳುವ ಕ್ರಮವನ್ನು ಮುಂದುವರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮೂಲಕ ಸರ್ಕಾರ ಗೃಹಿಣಿಯರಿಗೆ ಗುಡ್ ನ್ಯೂಸ್ ನೀಡಿದೆ. ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಕಚ್ಚಾ ಸೋಯಾಯಿಲ್ ಮೇಲಿನ ಕಡಿಮೆ ಆಮದು ಸುಂಕ ಮಾರ್ಚ್ 2024 ರಲ್ಲಿ ಕೊನೆಗೊಳ್ಳಲಿದ್ದು, ಸದ್ಯ ಇದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಲಾಗಿದೆ. ಖಾದ್ಯ ತೈಲದ ಮೇಲಿನ ಕಡಿಮೆ ಆಮದು ಸುಂಕಗಳು ಮುಂದಿನ ವರ್ಷ ಮಾರ್ಚ್‌ವರೆಗೆ ಮುಂದುವರಿಯಲಿದೆ. ಭಾರತ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ತಾಳೆ ಎಣ್ಣೆಯನ್ನು ಸ್ವೀಕರಿಸುತ್ತದೆ. ಸೋಯಾ ಆಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ್, ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸರಕಾರ 2025 ರ ಮಾರ್ಚ್ 31 ರವರೆಗೆ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಆಮದುಗಳ ಮೇಲಿನ ರಿಯಾಯಿತಿ ಸುಂಕ ದರಗಳನ್ನು ಸಚಿವಾಲಯವು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ…
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅನೇಕ ಗುತ್ತಿಗೆ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ. ಗುತ್ತಿಗೆ ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಯಲಿದೆ. ಬಿ.ಟೆಕ್ ,ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವೇತನ ಮಾಸಿಕವಾಗಿ 40,000 ಆಗಿರಲಿದೆ. ಶಿಕ್ಷಕ ಹುದ್ದೆಗೆ 06/01/2024 ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದ್ದು, ಜನವರಿ 22, 2024 ರಂದು ಮಧ್ಯಾಹ್ನ 2.30ಕ್ಕೆ ಸಂದರ್ಶನ ನಡೆಯಲಿದೆ. ಸಂದರ್ಶನ ನಡೆಯುವ ಸ್ಥಳವು, ಶಿಕ್ಷಣ ಅಧಿಕಾರಿಗಳು, ಸಮುದಾಯ ವಿಜ್ಞಾನ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಧಾರವಾಡ – 580005 ಆಗಿರಲಿದೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಟೆಕ್, ಫುಡ್ ಸೈನ್ಸ್ & ಟೆಕ್ನಾಲಜಿ/ ಫುಡ್ ಪ್ರೊಸೆಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕಾಗಿದ್ದು, ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ…
ಮಂಗಳೂರು : ನಾಗುರಿ ಬಳಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತನಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಧನ ವಿತರಿಸಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ 2 ಲಕ್ಷ ರೂಪಾಯಿ ಪರಿಹಾರ ಹಣ ವಿತರಿಸಲಾಯಿತು. ಸಂತ್ರಸ್ತನಿಗೆ ಪರಿಹಾರ ನೀಡುವಂತೆ ಮಾಜಿ ಎಂಎಲ್ ಸಿ ಐವಾನ್ ಡಿಸೋಜಾ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರದ ಚೆಕ್ ನ್ನು ದಕ್ಷಿಣ ಕನ್ನಡ ಡಿ.ಸಿ ಕಚೇರಿಯಲ್ಲಿ ಪುರುಷೋತ್ತಮ್ ಅವರಿಗೆ ವಿತರಿಸಲಾಗಿದೆ.
ಐಪಿಎಲ್ 2024 ನ ಟ್ರೇಡ್ ನಲ್ಲಿ ಹೆಚ್ಚು ಗಮನ ಸೆಳೆದದ್ದು ಹಾಗೂ ಅಚ್ಚರಿಯಾಗಿಸಿದ್ದು ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ತೊರೆದು, ಮತ್ತೆ ಮುಂಬಯಿ ತಂಡಕ್ಕೆ ಮರಳಿದ್ದು. ಮುಂಬೈಗೆ ಮರಳಿದ ಬಳಿಕ ತಂಡದ ನಾಯಕನಾಗಿ ಹಾರ್ದಿಕ್ ಮುಂದುವರೆಯಲಿದ್ದಾರೆ. ಇತ್ತ ಗುಜರಾತ್ ಟೈಟಾನ್ಸ್ ಶುಭ್ಮನ್ ಗಿಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಕಳೆದ ಎರಡು ಋತುವಿನಲ್ಲಿ ಗುಜರಾತ್ ತಂಡವನ್ನು ಫೈನಲ್ ಗೇರಿಸಿ ಒಂದು ಬಾರಿ ಚಾಂಪಿಯನ್ ಹಾಗೂ ಮತ್ತೊಂದು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದ ಹಾರ್ದಿಕ್ ಪಾಂಡ್ಯ ಮುಂಬಯಿ ತಂಡಕ್ಕೆ ಟ್ರೇಡ್ ಆಗಿರುವ ಬಗ್ಗೆ ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಮಾತನಾಡಿದ್ದಾರೆಯಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿದ್ದರ ಬಗ್ಗೆ ಪ್ರಶ್ನೆ ಕೇಳಲಾಗಿದೆ. “ಯಾರೋ ಹೋಗಿದ್ದರಿಂದ ಯಾರಿಗೂ ಯಾವ ಪರಿಣಾಮನೂ ಬೀರಲ್ಲ. ನೀವು ತಂಡ ಬ್ಯಾಲೆನ್ಸ್ ಆಗಿ ಇದೆಯೇ ಎನ್ನುವುದನ್ನು ನೋಡಬೇಕು. ಹಾರ್ದಿಕ್ ಇದ್ದಾಗ, ಉತ್ತಮವಾಗಿ ನಾಯಕತ್ವ ವಹಿಸಿದ್ದರು. ಅವರು ಎರಡೂ ಆವೃತ್ತಿಗಳಲ್ಲಿ ನಮ್ಮನ್ನು ಫೈನಲ್‌ಗೆ ಕರೆದೊಯ್ದರು ಮತ್ತು ನಾವು…
ಬೆಳ್ತಂಗಡಿ : ಟೆಲಿಗ್ರಾಮ್ ಆ್ಯಪ್ ಮೂಲಕ ಬಂದ ಮೆಸೇಜ್ ನ್ನು ನಂಬಿ ವ್ಯಕ್ತಿಯೊಬ್ಬರು 3.46 ಲಕ್ಷ ರೂ. ಕಳೆದುಕೊಂಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ಎಂಬವರಿಗೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿ ಕಮಿಷನ್ ಪಡೆಯುವಂತೆ ಲಿಂಕ್ ಮತ್ತು ಮೆಸೇಜ್ ಬಂದಿದೆ. ಇದನ್ನು ನಂಬಿದ ಅವರು ಜನವರಿ 4 ರಿಂದ 15 ರವರೆಗೆ ಅಪರಿಚಿತ ಖಾತೆಗೆ ಕಮಿಷನ್ ಪಡೆಯುವ ಉದ್ದೇಶದಿಂದ ಒಟ್ಟು 3,46,799 ರೂ. ಗಳನ್ನು ಸಂದಾಯ ಮಾಡಿದ್ದಾರೆ. ಹಣ ಪಡೆದ ಬಳಿಕ ಯಾವುದೇ ಕಮಿಷನ್ ನೀಡದೆ ಕೊಟ್ಟ ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ. ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಯಾಗಿದೆ.