Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: 2026-27ನೇ ಸಾಲಿನ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ

ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಸಬಲತೆ ಸಾಧ್ಯ: ಸಾಗರ ಕರವೇ ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ

BREAKING : ಕಡಗಂಚಿ ಕೇಂದ್ರ ವಿವಿಯ ಬಿಸಿಎಂ ಲೇಡಿಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಯನಾಡಿನ ಚಂದಾ ವಸೂಲಿಗಾರರೋ? : ಸಿಎಂ ವಿರುದ್ಧ ಅಶೋಕ್ ವಾಗ್ದಾಳಿ
KARNATAKA

ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಯನಾಡಿನ ಚಂದಾ ವಸೂಲಿಗಾರರೋ? : ಸಿಎಂ ವಿರುದ್ಧ ಅಶೋಕ್ ವಾಗ್ದಾಳಿ

By ಸುರೇಶ್‌

ಬೆಂಗಳೂರು : ಕೇರಳದ ಶಾಸಕನಂತೆ ವೈನಾಡಿನ ಚಂದ ವಸೂಲಿ ಗಾರ್ನಂತೆ ವರ್ತಿಸುವ ಸಿಎಂ ಸಿದ್ದರಾಮಯ್ಯ ರನ್ನು ಕರ್ನಾಟಕದ ಜನತೆ ಇನ್ನೆಷ್ಟು ದಿನ ಸಹಿಸಬೇಕು ಎಂದು ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

✔️ ಎರಡು ತಿಂಗಳ ಹಿಂದಷ್ಟೇ ಕನ್ನಡಿಗರ ತೆರಿಗೆ ಹಣದಿಂದ ₹10 ಕೋಟಿ ರೂಪಾಯಿಯನ್ನ ವಯನಾಡಿಗೆ ಬಿಡುಗಡೆ ಮಾಡಿದಿರಿ.

✔️ ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹15 ಲಕ್ಷ ಪರಿಹಾರ ಕೊಟ್ಟಿರಿ.

✔️ ಭೂಕುಸಿತದ ನಂತರ ವಯನಾಡಿನಲ್ಲಿ
100 ಮನೆಗಳನ್ನು ನಿರ್ಮಿಸುವ ಘೋಷಣೆ ಮಾಡಿದಿರಿ.

✔️ ಈಗ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ (KSTDC) ವಯನಾಡಿನ ಪ್ರವಾಸೋದ್ಯಮಕ್ಕೆ ಜಾಹೀರಾತು ಕೊಟ್ಟಿದ್ದೀರಿ.

ಅಸಲಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಶಾಸಕರೋ? ಅಥವಾ ವಯನಾಡಿನ ಚಂದಾ ವಸೂಲಿಗಾರರೋ?

❌ ನೆರೆಯಿಂದ ಉತ್ತರ ಕರ್ನಾಟಕ ಮುಳುಗಿದೆ
❌ ರೈತರು ಕಂಗಾಲಾಗಿದ್ದಾರೆ
❌ ಮನೆಗಳು ಕೊಚ್ಚಿ ಹೋಗಿವೆ
❌ 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ
❌ ಆದರೆ ಪರಿಹಾರ ಮಾತ್ರ ವೈಮಾನಿಕ ಸಮೀಕ್ಷೆಗಳಿಗೆ, ಸುಳ್ಳು ಭರವಸೆಗಳಿಗೆ, ಜಾಹೀರಾತುಗಳಿಗೆ, ಫೋಟೋಶೂಟ್‌ ಗಳಿಗೆ ಸೀಮಿತವಾಗಿದೆ.

ವಯನಾಡಿನ ಸಂಕಷ್ಟಕ್ಕೆ ಮಿಡಿಯುವ ನಿಮ್ಮ ಹೃದಯ ನೆರೆಭಾದಿತ ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಳಗಾವಿಗಾಗಿ ಯಾಕೆ ಮಿಡಿಯುತ್ತಿಲ್ಲ? ಯಾಕೆ ಸ್ವಾಮಿ ಕನ್ನಡಿಗರ ಮೇಲೆ ಈ ಮಲತಾಯಿ ಧೋರಣೆ?

ನಮ್ಮ ರೈತರಿಗೆ ನೀಡಬೇಕಾದ ಪರಿಹಾರಕ್ಕಿಂತ, ವಯನಾಡಿಗೆ ನೀಡುವ ಪರಿಹಾರವೇ ನಿಮಗೆ ಮುಖ್ಯ. ಇದು ಉಪಕಾರವೂ ಅಲ್ಲ, ಮಾನವೀಯತೆಯೂ ಅಲ್ಲ. ಇದು ಹೈಕಮಾಂಡ್ ನಾಯಕರನ್ನು ತೃಪ್ತಿಪಡಿಸಿ ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ. ಕರ್ನಾಟಕದ ತೆರಿಗೆ ಹಣವನ್ನು ಹೈಕಮಾಂಡ್ ಎಟಿಎಂ ಹಾಗೆ ಬಳಸುವ, ನಕಲಿ ಗಾಂಧಿಗಳ ಗುಲಾಮರಂತೆ ವರ್ತಿಸುವ, ಮತ ಹಾಕಿ ಅಧಿಕಾರ ಕೊಟ್ಟ ತಾಯ್ನಾಡಿನ ರೈತರನ್ನೇ ಮರೆತುಬಿಡುವ ನಾಡದ್ರೋಹಿ ಮುಖ್ಯಮಂತ್ರಿಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ.

ಕರ್ನಾಟಕಕ್ಕೆ ಬೇಕಿರುವುದು ಕನ್ನಡಿಗರ ಹಿತಾಸಕ್ತಿ ಕಾಪಾಡುವ ಬದ್ಧತೆ ಇರುವ ಮುಖ್ಯಮಂತ್ರಿಯೇ ಹೊರತು ಕೇರಳದ ವಯನಾಡಿನ ಬ್ರ್ಯಾಂಡ್ ಅಂಬಾಸಡರ್ ಅಲ್ಲ, ಡೆಲ್ಲಿ ದೊರೆಗಳ ಗುಲಾಮರಲ್ಲ. ನೆರೆಬಾಧಿತ ರೈತರಿಗೆ ಈ ಕೂಡಲೇ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಿ. ಕರ್ನಾಟಕ ಹಣವನ್ನು ನಿಮ್ಮ ಸ್ವಾರ್ಥಕ್ಕಾಗಿ ವಯನಾಡಿಗೆ ಸಾಗಿಸುವುದನ್ನ ನಿಲ್ಲಿಸಿ ಎಂದು ಆಕ್ರೋಶ ಹೊರಹಕಿದ್ದಾರೆ.

ಸಿಎಂ @siddaramaiah ಅವರೇ,

ಕೇರಳದ ಶಾಸಕನಂತೆ, ವಯನಾಡಿನ ಚಂದಾ ವಸೂಲಿಗಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆ ಇನ್ನೆಷ್ಟು ದಿನ ಸಹಿಸಬೇಕು?

✔️ ಎರಡು ತಿಂಗಳ ಹಿಂದಷ್ಟೇ ಕನ್ನಡಿಗರ ತೆರಿಗೆ ಹಣದಿಂದ ₹10 ಕೋಟಿ ರೂಪಾಯಿಯನ್ನ ವಯನಾಡಿಗೆ ಬಿಡುಗಡೆ ಮಾಡಿದಿರಿ.

✔️ ಕೇರಳದಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ… https://t.co/kZGo7WYw05

— R. Ashoka (@RAshokaBJP) October 30, 2025

Share. Facebook Twitter LinkedIn WhatsApp Email

Related Posts

BIG NEWS: 2026-27ನೇ ಸಾಲಿನ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ

2 Mins Read

ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಸಬಲತೆ ಸಾಧ್ಯ: ಸಾಗರ ಕರವೇ ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ

2 Mins Read

BREAKING : ಕಡಗಂಚಿ ಕೇಂದ್ರ ವಿವಿಯ ಬಿಸಿಎಂ ಲೇಡಿಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

2 Mins Read
Recent News

BIG NEWS: 2026-27ನೇ ಸಾಲಿನ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ

ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಸಬಲತೆ ಸಾಧ್ಯ: ಸಾಗರ ಕರವೇ ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ

BREAKING : ಕಡಗಂಚಿ ಕೇಂದ್ರ ವಿವಿಯ ಬಿಸಿಎಂ ಲೇಡಿಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

ಕರವೇ ಜನಪರ ಕಾರ್ಯಕ್ರಮಗಳ ಮೂಲಕ ಟಿಎ ನಾರಾಯಣಗೌಡರ ಜನ್ಮದಿನ ಆಚರಿಸುತ್ತಿರುವುದು ಮಾದರಿ: ವಕೀಲ ಹೆಚ್.ಬಿ.ರಾಘವೇಂದ್ರ ಶ್ಲಾಘನೆ

State News
KARNATAKA

BIG NEWS: 2026-27ನೇ ಸಾಲಿನ 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ​ಕರ್ನಾಟಕ ಸರ್ಕಾರವು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ (Class 1) ಮಕ್ಕಳನ್ನು ದಾಖಲಿಸಲು ನಿಗದಿಪಡಿಸಲಾಗಿದ್ದ ಕನಿಷ್ಠ ವಯೋಮಿತಿಯಲ್ಲಿ…

ಶಿಕ್ಷಣದಿಂದ ಮಾತ್ರ ಸಾಮಾಜಿಕ, ಆರ್ಥಿಕ ಸಬಲತೆ ಸಾಧ್ಯ: ಸಾಗರ ಕರವೇ ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ

BREAKING : ಕಡಗಂಚಿ ಕೇಂದ್ರ ವಿವಿಯ ಬಿಸಿಎಂ ಲೇಡಿಸ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರು ಭರ್ಜರಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!

ಕರವೇ ಜನಪರ ಕಾರ್ಯಕ್ರಮಗಳ ಮೂಲಕ ಟಿಎ ನಾರಾಯಣಗೌಡರ ಜನ್ಮದಿನ ಆಚರಿಸುತ್ತಿರುವುದು ಮಾದರಿ: ವಕೀಲ ಹೆಚ್.ಬಿ.ರಾಘವೇಂದ್ರ ಶ್ಲಾಘನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.