ಬೆಂಗಳೂರು: ಮಹಿಳೆಯೊಬ್ಬರಿಗೆ ದರ್ಪ ತೋರಿಸಿದಲ್ಲದೆ, ಅದನ್ನು ಪ್ರಶ್ನಿಸಿದ ಮಾಧ್ಯಮದವರ ಎದುರು ನಾನೇನು ಅವಳಿಗೆ ರೇಪ್ ಮಾಡಿದೀನಾ? ಎಂದು ಅರವಿಂದ ಲಿಂಬಾವಳಿ ( Arvind Limbavali ) ಉದ್ದಟತನದ ಹೇಳಿಕೆ ಕೊಟ್ಟಿದ್ದಾರೆ. ಲಿಂಬಾವಳಿಯಂತವರು ಸಾರ್ವಜನಿಕ ಕ್ಷೇತ್ರದಲ್ಲಿರಲು ನಾಲಾಯಕ್. ಕನಿಷ್ಠ ಗೌರವವೂ ಇಲ್ಲದೆ ವರ್ತಿಸುವ ಲಿಂಬಾವಳಿಗೆ ಸಂಸ್ಕಾರ ಇದೆಯೇ? ಎಂದು ಹಿಗ್ಗಾಮುಗ್ಗಾ ವಾಗ್ಥಾಳಿಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ( Farmer KPCC President Dinesh Gundu Rao ) ನಡೆಸಿದ್ದಾರೆ.
1
ಮಹಿಳೆಯೊಬ್ಬರಿಗೆ ದರ್ಪ ತೋರಿಸಿದಲ್ಲದೆ, ಅದನ್ನು ಪ್ರಶ್ನಿಸಿದ ಮಾಧ್ಯಮದವರ ಎದುರು ನಾನೇನು ಅವಳಿಗೆ ರೇಪ್ ಮಾಡಿದೀನಾ? ಎಂದು @ArvindLBJP ಉದ್ದಟತನದ ಹೇಳಿಕೆ ಕೊಟ್ಟಿದ್ದಾರೆ.ಲಿಂಬಾವಳಿಯಂತವರು ಸಾರ್ವಜನಿಕ ಕ್ಷೇತ್ರದಲ್ಲಿರಲು ನಾಲಾಯಕ್.
ಕನಿಷ್ಠ ಗೌರವವೂ ಇಲ್ಲದೆ ವರ್ತಿಸುವ ಲಿಂಬಾವಳಿಗೆ ಸಂಸ್ಕಾರ ಇದೆಯೇ?https://t.co/rCcCf9C54m
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2022
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, BJPಯಲ್ಲಿ ಲಿಂಬಾವಳಿಯಂತಹ ಅತ್ಯಾಚಾರಿ ಮನಸ್ಥಿತಿಯ ಅನೇಕರಿದ್ದಾರೆ. ಹಿಂದೊಮ್ಮೆ ಈಶ್ವರಪ್ಪ ಕೂಡ ಮಹಿಳಾ ಪತ್ರಕರ್ತೆಯೆದುರು ಹೀಗೆ ರೇಪ್ ಕುರಿತಾದ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುವುದು BJPಯ ಸಂಸ್ಕೃತಿ. ಲಿಂಬಾವಳಿ ಒಬ್ಬ ಜವಾಬ್ಧಾರಿ ಶಾಸಕರಾಗಿ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಕಲಿಯಲಿ ಎಂದು ಹೇಳಿದ್ದಾರೆ.
2
BJPಯಲ್ಲಿ ಲಿಂಬಾವಳಿಯಂತಹ ಅತ್ಯಾಚಾರಿ ಮನಸ್ಥಿತಿಯ ಅನೇಕರಿದ್ದಾರೆ. ಹಿಂದೊಮ್ಮೆ ಈಶ್ವರಪ್ಪ ಕೂಡ ಮಹಿಳಾ ಪತ್ರಕರ್ತೆಯೆದುರು ಹೀಗೆ ರೇಪ್ ಕುರಿತಾದ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುವುದು BJPಯ ಸಂಸ್ಕೃತಿ. ಲಿಂಬಾವಳಿ ಒಬ್ಬ ಜವಾಬ್ಧಾರಿ ಶಾಸಕರಾಗಿ ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ಕಲಿಯಲಿ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 3, 2022