Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡ್ಡಾಯ: ಏನೆಲ್ಲಾ ದಾಖಲೆ ಬೇಕು? ಮಾಹಿತಿ ಇಲ್ಲಿದೆ

ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡ್ಡಾಯ: ಏನೆಲ್ಲಾ ದಾಖಲೆ ಬೇಕು? ಮಾಹಿತಿ ಇಲ್ಲಿದೆ
KARNATAKA

ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡ್ಡಾಯ: ಏನೆಲ್ಲಾ ದಾಖಲೆ ಬೇಕು? ಮಾಹಿತಿ ಇಲ್ಲಿದೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳಿಗೆ ಈಗ ದೊಡ್ಡ ಮಟ್ಟದ ಮೇಜರ್ ಸರ್ಜರಿ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆಗಳಲ್ಲಿ ನುಸುಳಿರುವ ಲಕ್ಷಾಂತರ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಯೋಜನೆಗೆ ಲಗಾಮು ಹಾಕಲು ಸರ್ಕಾರ ನಿರ್ಧರಿಸಿದ್ದು, ಹಾಲಿ ಫಲಾನುಭವಿಗಳು ಸೇರಿದಂತೆ ಸೌಲಭ್ಯ ಪಡೆಯಲು ಬಯಸುವವರೆಲ್ಲರೂ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

​ಅರ್ಜಿ ಸಲ್ಲಿಸಿದವರಿಗೆ ಮಾತ್ರ ಮುಂದಿನ ದಿನಗಳಲ್ಲಿ ಸೌಲಭ್ಯ ಸಿಗಲಿದ್ದು, ಹೊಸದಾಗಿ ‘ಗ್ಯಾರಂಟಿ ಕಾರ್ಡ್’ ನೀಡಲು ಸಿಎಂ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.

​ಹೊಸ ಅರ್ಜಿ ಸಲ್ಲಿಕೆ ಕಡ್ಡಾಯಕ್ಕೆ ಕಾರಣಗಳೇನು?

​ಸರ್ಕಾರದ ಇತ್ತೀಚಿನ ಪರಿಶೀಲನೆಯಲ್ಲಿ ಈ ಎರಡೂ ಯೋಜನೆಗಳಲ್ಲಿ ಭಾರಿ ಪ್ರಮಾಣದ ದುರುಪಯೋಗ ಮತ್ತು ನಕಲಿ ಫಲಾನುಭವಿಗಳು ಇರುವುದು ಪತ್ತೆಯಾಗಿದೆ.

​1. ಗೃಹಲಕ್ಷ್ಮಿ ಯೋಜನೆಯಲ್ಲಿನ ಅಕ್ರಮಗಳು:

  • ​ಪ್ರಸ್ತುತ ಈ ಯೋಜನೆಯಲ್ಲಿ 1.28 ಕೋಟಿ ಫಲಾನುಭವಿಗಳಿದ್ದಾರೆ.
  • ​ಆದರೆ, ಇವರಲ್ಲಿ ಸುಮಾರು 4.30 ಲಕ್ಷ ಫಲಾನುಭವಿಗಳು ಐಟಿ (ಆದಾಯ ತೆರಿಗೆ) ಪಾವತಿದಾರರಾಗಿದ್ದಾರೆ ಎಂದು ತಿಳಿದುಬಂದಿದೆ.
  • ​ಅತ್ಯಂತ ಆಘಾತಕಾರಿ ವಿಷಯವೆಂದರೆ, ಮೃತಪಟ್ಟ ಮಹಿಳೆಯರ ಖಾತೆಗಳಿಗೂ ಇನ್ನೂ ಹಣ ಸಂದಾಯವಾಗುತ್ತಿದ್ದು, ಸತ್ತವರ ಖಾತೆಗೆ ಸುಮಾರು 100 ಕೋಟಿ ರೂ. ಹಣ ಜಮೆಯಾಗಿದೆ ಎಂದು ಹೇಳಲಾಗುತ್ತಿದೆ.
  • ​ಕೆಲವರು ಬೇರೆ ಬೇರೆ ಮೊಬೈಲ್ ನಂಬರ್‌ಗಳನ್ನು ಲಿಂಕ್ ಮಾಡಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ.

​2. ಗೃಹಜ್ಯೋತಿ ಯೋಜನೆಯಲ್ಲಿನ ಅಕ್ರಮಗಳು:

  • ​ಗೃಹಜ್ಯೋತಿ ಯೋಜನೆಯಡಿ ಸದ್ಯ 1.68 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ.
  • ​ಇಲ್ಲಿ ಒಬ್ಬೊಬ್ಬರೇ ಐದಾರು ಮೀಟರ್‌ಗಳ ಹೆಸರಿನಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
  • ​”ಅನೇಕರು ಒಂದೇ ಕಟ್ಟಡದಲ್ಲಿ ಮನೆ ಮತ್ತು ಅಂಗಡಿ ಎರಡನ್ನೂ ಹೊಂದಿರುತ್ತಾರೆ. ಅಂಗಡಿ ಅಥವಾ ವ್ಯಾಪಾರಕ್ಕೆ ಗೃಹಜ್ಯೋತಿ ಅನ್ವಯಿಸುವುದಿಲ್ಲ, ಕೇವಲ ವಾಸದ ಮನೆಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ. ವ್ಯಾಪಾರಸ್ಥರು ಪ್ರತ್ಯೇಕ ಮೀಟರ್ ಅಳವಡಿಸಿಕೊಳ್ಳಬೇಕು,” ಎಂದು ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕರ್ನಾಟಕದವರಲ್ಲದ ಬೇರೆ ರಾಜ್ಯದವರು ಇಲ್ಲಿ ವಾಸವಿದ್ದೂ ಯೋಜನೆ ಪಡೆಯುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

​ಹೊಸ ಅರ್ಜಿ ಪ್ರಕ್ರಿಯೆ ಹೇಗಿರಲಿದೆ?

​ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಗೃಹಲಕ್ಷ್ಮಿ ಯೋಜನೆಗಾಗಿ ಈಗಾಗಲೇ ಹೊಸ ಅರ್ಜಿ ಪ್ರತಿಯನ್ನು ಸಿದ್ಧಪಡಿಸಿದ್ದು, ಅದನ್ನು ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಗಳ ಅನುಮೋದನೆಗೆ ಸಲ್ಲಿಸಿದೆ. ಹೊಸ ಅರ್ಜಿಯಲ್ಲಿ ಬಯೋಮೆಟ್ರಿಕ್ (ಹೆಬ್ಬೆರಳ ಗುರುತು) ಜೊತೆಗೆ ಪ್ರಮುಖವಾಗಿ 8 ರಿಂದ 10 ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಇವುಗಳಿಗೆ ಫಲಾನುಭವಿಗಳು ಉತ್ತರಿಸುವುದು ಕಡ್ಡಾಯವಾಗಿದೆ.

​ಅರ್ಜಿಯಲ್ಲಿ ಏನೆಲ್ಲಾ ಪ್ರಶ್ನೆಗಳಿರುತ್ತವೆ? ಯಾವ ದಾಖಲೆ ಬೇಕು?

  • ​ಮನೆಯ ಯಜಮಾನಿ ಯಾರು ಮತ್ತು ಅವರ ಆಧಾರ್ ಸಂಖ್ಯೆ?
  • ​ಮನೆಯ ಯಜಮಾನಿಯ ಬ್ಯಾಂಕ್ ಖಾತೆಯ ನಿಖರ ವಿವರಗಳು.
  • ​ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರ ಖಾತೆಗೆ ಗೃಹಲಕ್ಷ್ಮಿ ಹಣ ಬರುತ್ತಿತ್ತು?
  • ​ಫಲಾನುಭವಿಯ ಜಾತಿ ಯಾವುದು?
  • ​ಮನೆಯ ಪತಿಯ ಹೆಸರು ಮತ್ತು ಅವರ ಆಧಾರ್ ಸಂಖ್ಯೆ.
  • ​ಆಧಾರ್ ಕಾರ್ಡ್ ದಾಖಲಾತಿಯ ನಕಲು ಪ್ರತಿ.
  • ​ನೀವು ಆದಾಯ ತೆರಿಗೆ (IT) ಅಥವಾ ಜಿಎಸ್‌ಟಿ (GST) ಪಾವತಿದಾರರೇ?
  • ​ನಿಮ್ಮ ಬಳಿ ಬಿಪಿಎಲ್ (BPL) ಕಾರ್ಡ್ ಇದೆಯೋ ಅಥವಾ ಎಪಿಎಲ್ (APL) ಕಾರ್ಡ್ ಇದೆಯೋ?

​ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?

​ಸರ್ಕಾರವು ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ, ಅರ್ಜಿ ಸಲ್ಲಿಕೆಗೆ ಅಧಿಕೃತ ಚಾಲನೆ ನೀಡಲಿದೆ.

    • ​ಅರ್ಜಿ ಸಲ್ಲಿಸುವ ಕೇಂದ್ರಗಳು: ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಹಾಗೂ ಆಫ್‌ಲೈನ್ (ಖುದ್ದಾಗಿ) ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
    • ​ವಿಶೇಷ ಜವಾಬ್ದಾರಿ: ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಈ ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

​ಅರ್ಹ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಯೋಜನೆ ತಲುಪಬೇಕು ಹಾಗೂ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಪ್ಪಿಸಬೇಕು ಎಂಬ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಮತ್ತು ದಿನಾಂಕ ಪ್ರಕಟವಾಗುವುದನ್ನು ಫಲಾನುಭವಿಗಳು ಸದ್ಯಕ್ಕೆ ಕಾಯಬೇಕಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

2 Mins Read

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

2 Mins Read

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

2 Mins Read
Recent News

BREAKING : ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡ್ಡಾಯ: ಏನೆಲ್ಲಾ ದಾಖಲೆ ಬೇಕು? ಮಾಹಿತಿ ಇಲ್ಲಿದೆ

ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

State News
KARNATAKA

BREAKING : ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಯೋಜನೆಗಳು ದುರ್ಬಳಕೆಯಾಗುತ್ತಿರುವುದನ್ನು ತಡೆಯಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅರ್ಹ…

ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕಡ್ಡಾಯ: ಏನೆಲ್ಲಾ ದಾಖಲೆ ಬೇಕು? ಮಾಹಿತಿ ಇಲ್ಲಿದೆ

ಗೃಹಲಕ್ಷ್ಮಿ ಮರು ಅರ್ಜಿ ಸಲ್ಲಿಕೆ ಆದೇಶ : ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಫಲಾನುಭವಿಗಳ ತೀವ್ರ ಆಕ್ರೋಶ

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.