ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಪಾರ್ಕಿಂಗ್ ಪಾಲಿಸಿ-2.0ಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ರಸ್ತೆಗಳಲ್ಲಿ ನಿಲ್ಲಿಸೋ ಎಲ್ಲಾ ವಾಹನಗಳಿಗೆ ಹಣಪಾವತಿ ಮಾಡಬೇಕಾಗಿದೆ. ಈ ಮೂಲಕ ರಾಜಧಾನಿ ಬೆಂಗಳೂರಿನ ಜನತಿಗೆ ಮತ್ತೊಂದು ಶಾಕ್ ಅನ್ನು ಬಿಬಿಎಂಪಿ ನೀಡಿದೆ.
BIG NEWS: ಇಂದು ಸುಪ್ರೀಂ ಕೋರ್ಟ್ನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ | Hijab Row Suprem court
ಡಲ್ಫ್ ಸಂಸ್ಥೆಯು ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯ ಪ್ರಮಾಣ ಹೆಚ್ಚಳ ಹಾಗೂ ಖಾಸಗಿ ವಾಹನಗಳ ನಿಯಂತ್ರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ, ಸರ್ಕಾರಕ್ಕೆ ತನ್ನ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಿತ್ತು. ಈ ಪಾರ್ಕಿಂಗ್ ಪಾಲಿಸಿ-2.0ಕ್ಕೆ ಈಗ ಸರ್ಕಾರ ಅನುಮೋದಿಸಿದೆ. ಹೀಗಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದ ಆರ್ಥಿಕ ಚಟುವಟಿಕೆ ವಲಯಗಳಿಗೆ ಅನುಗುಣವಾಗಿ ಹೊಸ ಪಾರ್ಕಿಂಗ್ ನೀತಿ ಅನುಷ್ಠಾನಗೊಳ್ಳಲಿದ್ದೂ, ಅದರಂತೆ ಪಾರ್ಕಿಂಗ್ ದರವನ್ನು ನಿಗದಿಪಡಿಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ನಗರಾಭಿವೃದ್ಧಿ ಇಲಾಖೆಯ ಅಪ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮುಂದಿನ ವಾರದಿಂದ ಎಲ್ಲಾ ನಿಯಮಗಳನ್ನು ಏರಿಯಾವಾರು ಜಾರಿಗೆ ತರಲಾಗುತ್ತದೆ. ಎಲ್ಲಾ ವಾಹನಗಳ ನಿಲುಗಡೆಗೂ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.
ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ‘ಗೌರಿ-ಗಣೇಶ ಹಬ್ಬ’ಕ್ಕೆ ಭರ್ಜರಿ ಗಿಫ್ಟ್: ‘ಸಖಿ ಭಾಗ್ಯ’ ಯೋಜನೆ ಜಾರಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಕುರಿತು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಗೆ ಜಾರಿಗೊಳಿಸಲು ಮುಂದಾಗಿದ್ದಂತ ಪಾರ್ಕಿಂಗ್ ಪಾಲಿಸಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಾರುಕಟ್ಟೆ ಪ್ರದೇಶ, ರಸ್ತೆಯ ಮಾದರಿ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ವಿಭಿನ್ನ ದರವಿದ್ದು, ಶೀಘ್ರವೇ ಟೆಂಡರ್ ಕರೆದು, ಅನುಮತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಬಿಬಿಎಂಪಿಯಲ್ಲಿ ಜಾರಿಗೊಳ್ಳುತ್ತಿರುವಂತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ರಸ್ತೆಗಳಲ್ಲಿ ನಿಲ್ಲಿಸುವಂತ ಸಣ್ಣ ಕಾರುಗಳಿಗೆ 1 ಸಾವಿರ ರೂ, ಮಧ್ಯಮ ಗಾತ್ರದ ಕಾರುಗಳಿಗೆ 3 ಸಾವಿರದಿಂದ 4 ಸಾವಿರ ರೂ, ದೊಡ್ಡ ಗ್ರಾತರದ ಕ್ರೇಟಾ, ಫಾರ್ಚೂನರ್, ಸ್ಕಾರ್ಫಿಯೋದಂತ ಕಾರುಗಳಿಗೆ 5 ಸಾವಿರ ರೂ ಸೇರಿದಂತೆ ಸ್ಥಳಕ್ಕೆ ತಕ್ಕಂತೆ ನಿಲುಗಡೆ ದರವನ್ನು ವಿಧಿಸಲಾಗುತ್ತದೆ.