ಬೆಂಗಳೂರು: ಕಾಂತಾರ ಚಿತ್ರದ ( Kantara Movie ) ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ ಎಂಬುದಾಗಿ ಟೀಕೆ ಮಾಡಿದ್ದಂತ ನಟ ಚೇತನ್ ( Actor Chetan ) ವಿರುದ್ಧ ಈಗಾಗಲೇ ರಾಜ್ಯದ ವಿವಿಧೆಡೆ ಹಲವು ಎಫ್ಐಆರ್ ದಾಖಲಾಗಿದ್ದಾವೆ. ಈ ನಡುವೆ, ಇಂದು ಬೆಂಗಳೂರಿನಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ನಟ ಚೇತನ್ ಹಿಂದೂ ಸಂಸ್ಕೃತಿಯ ಬಗ್ಗೆ ನೀಡಿರುವಂತ ಹೇಳಿಕೆಯು ಕೋಮು ಕೋಮುಗಳ ನಡುವೆ ದ್ವೇಷ ಉಂಟು ಮಾಡುತ್ತಿದೆ ಎಂಬುದಾಗಿ ಶಿವಕುಮಾರ್ ಎಂಬುವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
‘ಚಾಮರಾಜನಗರ’ದಲ್ಲಿ ಅದ್ದೂರಿಯಾಗಿ ನಡೆದ ‘ವಿದ್ಯಾಗಣಪತಿ ವಿಸರ್ಜನೆ ಶೋಭಾಯಾತ್ರೆ’
ಈ ದೂರಿನ ಹಿನ್ನಲೆಯಲ್ಲಿ ನಟ ಚೇತನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಳಿಕ ಉತ್ತರ ನೀಡುವಂತೆ ನಟ ಚೇತನ್ ಗೆ ಪೊಲೀಸರು ನೋಟಿಸ್ ನೀಡಲಿ್ದದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಾದು ನೋಡಬೇಕಿದೆ.
BIG NEWS: ‘ರಾಜ್ಯ ಸರ್ಕಾರ’ದಿಂದ 2000-1 ರಿಂದ 2020-21ರವರೆಗೆ ‘ಶಿಕ್ಷಕರ ಎಲ್ಲಾ ನೇಮಕಾತಿ’ ತನಿಖೆ.?