ನವದೆಹಲಿ: ಕೇಂದ್ರ ಸರ್ಕಾರದಿಂದ ( Union Government ) ಅಂಡಮಾನ್-ನಿಕೋಬಾರ್ ನಲ್ಲಿರುವಂತ ( andaman nicobar island ) 21 ಜನವಸತಿ ರಹಿತ ದ್ವೀಗಳಿಗೆ ಹೊಸದಾಗಿ ಮರು ನಾಮಕರಣ ಮಾಡಲಾಗಿದೆ. ಕನ್ನಡಿಗ ಮೇಜರ್ ರಾಮಾ ರಾಘೋಬಾ ರಾಣೆ ಸೇರಿದಂತೆ 21 ವೀರ ಯೋಧರ ಹೆಸರುಗಳನ್ನು ಇಟ್ಟಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಅಂಡಮಾನ್-ನಿಕೋಬರ್ ನ 21 ಜನವಸತಿರಹಿತ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರನ್ನು ಇಡಲಾಗಿದೆ. ದೇಶಕ್ಕಾಗಿ ಬಲಿದಾನ ನೀಡಿದ ಯೋಧರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಅಂದಹಾಗೇ ಕೇಂದ್ರ ಸರ್ಕಾರದ 21 ದ್ವೀಪಗಳಿಗೆ ಇಟ್ಟಿರುವಂತ ಹೆಸರಿನಲ್ಲಿ ಒಂದು ದ್ವೀಪಕ್ಕೆ ಕರ್ನಾಟಕದ ಮೇಜರ್ ರಾಮಾ ರಾಘೋಬಾ ರಾಣೆ ಹೆಸರನ್ನು ಕೂಡ ಇಡಲಾಗಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಚೆಂಡಿಯಾ ಗ್ರಾಮದವರಾಗಿದ್ದು, 1947ರ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಲ್ಲದೇ ಭಾರತದ ಅತ್ಯುನ್ನತ ಸೇವಾ ಪುರಸ್ಕಾರವಾದ ಪರಮವೀರ ಚಕ್ರವನ್ನು ಜೀವಂತವಾಗಿ ಸ್ವೀಕರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ