ವಿಜಯನಗರ: ಸರ್ಕಾರಿ ಕಾರ್ಯಕ್ರಮವೆಂದ್ರೇ.. ಅಲ್ಲಿನ ಎಲ್ಲಾ ಖರ್ಚು ಸರ್ಕಾರದಿಂದಲೇ ಭರಿಸಲಾಗುತ್ತದೆ ಎಂಬುದಾಗಿ ಎಲ್ಲಿರಿಗೂ ಗೊತ್ತಿರುವಂತ ವಿಷಯ. ಆದ್ರೇ.. ಸರ್ಕಾರದಿಂದ ಆಯೋಜಿಸಿದ್ದಂತ ಕಾರ್ಯಕ್ರಮದ ಪ್ರಶಸ್ತಿ ಪತ್ರದಲ್ಲಿ ಮಾತ್ರ ಸಚಿವರ ಪುತ್ರನ ಹೆಸರು, ಪೋಟೋ ಹಾಕಲಾಗಿದೆ. ಇದೇ ಈಗ ಟೀಕೆಗೆ ಗುರಿಯಾಗಿದೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ದಿನಾಂಕ 05-08-2022ರಿಂದ ದಿನಾಂಕ 06-08-2022ರವರೆಗೆ ವಿಜಯನಗರ ಜಿಲ್ಲಾ ಪಂಚಾಯ್ತಿ ಹಾಗೂ ಹೊಸಪೇಟೆ ತಾಲೂಕು ಪಂಚಾಯ್ತಿಯಿಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಹೀಗೆ ಆಯೋಜಿಸಲಾಗಿದ್ದಂತ ಕ್ರೀಡಾಕೂಟದಲ್ಲಿ ಭಾಗವಹಿಸಿ, ಗೆಲುವು ಸಾಧಿಸಿದಂತ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗಿದೆ.
ವಿವಿಧ ಸ್ಪರ್ಧೆಗಳ ಸ್ಪರ್ಧಾಳುಗಳಿಗೆ ವಿತರಿಸಿರುವಂತ ಪ್ರಶಸ್ತಿ ಪತ್ರದಲ್ಲಿ ಹೊಸಪೇಟೆಯ ವಲಯ ಕ್ರೀಡಾಕಾರ್ಯದರ್ಶಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿಯನ್ನು ಒಳಗೊಂಡಿದೆ.
ಇದಲ್ಲದೇ ಇವರ ಸಹಿಗಳ ನಂತ್ರ, ಇದೇ ಪ್ರಶಸ್ತಿ ಪತ್ರದಲ್ಲಿ ಕೊಡುಗೆ ಎಂಬುದಾಗಿ ಸಚಿವ ಆನಂದ್ ಸಿಂಗ್ ( Minister Anand Singh ) ಅವರ ಪುತ್ರ ಸಿದ್ಧಾರ್ಥ್ ಸಿಂಗ, ಯುವ ಮುಖಂಡರು, ಸಮಾಜ ಸೇವಕರು ಎಂಬುದಾಗಿ ಪೋಟೋ ಸಹಿತ ಹಾಕಲಾಗಿದೆ. ಹಾಗಾದ್ರೇ ಸರ್ಕಾರಿ ಕಾರ್ಯಕ್ರಮದಿಂದ ವಿತರಿಸಿದಂತ ಪ್ರಶಸ್ತಿ ಪತ್ರದಲ್ಲಿ ಸಚಿವ ಆನಂದ್ ಸಿಂಗ್ ಪುತ್ರನ ಹೆಸರು, ಪೋಟೋ ಹಾಕಿದ್ದು ಯಾಕೆ ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಲ್ಲದೇ ಸರ್ಕಾರಕ್ಕೆ ಪ್ರಶಸ್ತಿ ಪತ್ರ ವಿತರಿಸೋದಕ್ಕೂ ಬೊಕ್ಕಸದಲ್ಲಿ ಹಣವಿಲ್ಲವೇ.? ಕೊಡುಗೆಯಾಗಿ ಸ್ವೀಕರಿಸಬೇಕಾದ ದರ್ದು ಬಂದಿದ್ಯಾ ಎಂಬುದಾಗಿಯೂ ಕಿಡಿಕಾರಿದ್ದಾರೆ.