ಬೆಂಗಳೂರು: ಮರಗಳಿಂದ ಸ್ವಚ್ಛಂದ ಗಾಳಿ, ಒಳ್ಳೆಯ ವಾತಾವರಣ ದೊರೆಯುತ್ತದೆ. ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿ, ಹೆಚ್ಚು ಹೆಚ್ಚು ಆಮ್ಲಜನಕ ದೊರೆಯುತ್ತದೆ ಅನ್ನೋದು ಎಲ್ಲರ ನಂಬಿಕೆ. ಇದು ವೈಜ್ಞಾನಿಕ ಸತ್ಯ ಕೂಡ. ಆದ್ರೇ ಸಿಲಿಕಾನ್ ಸಿಟಿ ( Silicon City ) ಬೆಂಗಳೂರಿನಲ್ಲಿ ಇದೇ ಮರಗಳಿಂದಾಗಿ ಅಲರ್ಜಿ, ಶ್ವಾಸಕೋಶದ ಸಮಸ್ಯೆ ಉಂಟಾಗುತ್ತಿದೆ. ದಯವಿಟ್ಟು ಕಡಿಯುವಂತೆ ಬಿಬಿಎಂಪಿಗೆ ( BBMP ) ನಿವೃತ್ತ ಐಎಎಸ್ ಅಧಿಕಾರಿ ಬಿಬಿಎಂಪಿಗೆ ಪತ್ರ ಬರೆದು ಕೋರಿದ್ದಾರೆ. ಈ ಮೂಲಕ ಅಚ್ಚರಿಯನ್ನು ಹುಟ್ಟು ಹಾಕಿದ್ದಾರೆ.
ಬೆಂಗಳೂರಿಗೆ ಸಿಲಿಕಾನ್ ಸಿಟಿ ಎನ್ನುವುದರ ಜೊತೆಗೆ, ಹೆಚ್ಚು ಹೆಚ್ಚು ಮರಗಳಿರೋ ಕಾರಣದಿಂದಾಗಿ ಗಾರ್ಡನ್ ಸಿಟಿ ಅಂತಾನೂ ಕರೆಯಲಾಗುತ್ತಿದೆ. ಹೆಚ್ಚು ಹೆಚ್ಚು ಮರಗಳಿರೋ ಕಾರಣದಿಂದಾಗಿ ರಾಜ್ಯದ ರಾಜಧಾನಿ ಯಾವಾಗ್ಲೂ ಕೂಲ್ ಕೂಲ್ ಆಗಿರೋದಕ್ಕೆ ವಿವಿಧ ಜನತೆ ಇಲ್ಲಿಗೆ ವಲಸೆ ಬಂದು ನೆಲೆ ನಿಂತಿದ್ದಾರೆ.
ಈ ನಡುವೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿರುವಂತ ಐಎಎಸ್ ಕಾಲೋನಿಯ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಎಂಬುವರು, ತಮ್ಮ ಮನೆಯ ಪಕ್ಕದಲ್ಲಿರುವಂತ ಗೋಣಿ ಮರಗಳಲ್ಲಿ ಪಕ್ಷಿಗಳು ಹಾಗೂ ಬಾವಲಿಗಳು ವಾಸವಾಗಿವೆ. ಅವುಗಳಿಂದ ಕೊಳಕು ಹೊರಹೊಮ್ಮುತ್ತಿದೆ. ಇದರಿಂದಾಗಿ ಚರ್ಮರೋಗ, ಶ್ವಾಸಕೋಶದ ಸಮಸ್ಯೆ ಉಂಟಾಗಿದೆ. ಬಾರೀ ಅನಾರೋಗ್ಯ ಮನೆಯ ಪಕ್ಕದಲ್ಲಿರುವಂತ ಮರಗಳಿಂದ ಉಂಟಾಗುತ್ತಿದೆ. ಮರಗಳಿಂದ ಅನಾರೋಗ್ಯ ಸಮಸ್ಯೆಯ ಕಾರಣ ಕೂಡಲೇ ಮರಗಳನ್ನು ಕಡಿಯುವಂತೆ ಮನವಿ ಮಾಡಲಾಗಿದೆ.
BIGG NEWS : ಮೀಸಲಾತಿ ವಿಚಾರ : ಬಿಜೆಪಿಯಿಂದ ಬೆಂಗಳೂರಿನಲ್ಲಿ ಅ.8 ರಂದು ಸರ್ವಪಕ್ಷಗಳ ಸಭೆ |ST Reservation
ಇದಕ್ಕೆ ಪ್ರತಿಕ್ರಿಯಿಸಿರುವಂತ ಬಿಬಿಎಂಪಿಯೂ ಆಯಾ ವಲಯದ ಅಧಿಕಾರಿಗಳಿಗೆ ಗೋಣಿಮರವನ್ನು ಕಡಿದ ಬಳಿಕ 60 ದಿನಗಳಲ್ಲಿ ಮರ ಮರುನಾಟಿ ಮಾಡುವಂತೆ ಆದೇಶ ಹೊರಡಿಸಲಾಗಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದಹಾಗೇ ಗೋಣಿ ಮರ ಹಕ್ಕಿ-ಪಕ್ಷಿಗಳಿಗೆ ಇಷ್ಟವಾದಂತ ಮರವಾಗಿವೆ. ಇದಲ್ಲದೇ ಗೋಣಿ ಮರ ಜಾಸ್ತಿ ಆಕ್ಸಿಜನ್ ಬಿಡುಗಡೆ ಮಾಡುವಂತ ಮರಗಳಲ್ಲಿ ಒಂದಾಗಿದೆ. ಅನೇಕರು ಈ ಮರ ಪೂಜಿಸೋದು ಉಂಟು. ಇಂತಹ ಮರವನ್ನು ಕಡಿಯುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.