Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಯುವಜನರೇ ಎಚ್ಚರ : ದಿನಕ್ಕೆ 7 ಗಂಟೆಗೂ ಹೆಚ್ಚು `ಫೋನ್’ ಬಳಸುತ್ತಿದ್ದರೆ ತಪ್ಪಿದ್ದಲ್ಲ ಈ ಮಾರಕ ಕಾಯಿಲೆ.!

04/04/2026 12:15 PM

ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಯುವತಿಗೆ 10 ಬಾರಿ ಗರ್ಭಪಾತ ಮಾತ್ರೆ ನೀಡಿದ್ದ ಸಮೀರ್ ಮುಲ್ಲಾ!

04/04/2026 12:15 PM

ALERT : ಮದುವೆಗೂ ಮುನ್ನ ಯುವತಿಯರಿಗೆ `ಸ್ಲಿಮ್’ ಆಗುವ ಕ್ರೇಜ್ : ಮಾರುಕಟ್ಟೆಯಲ್ಲಿ ಈ ಔಷಧಿಗೆ ದಿಢೀರ್ ಡಿಮ್ಯಾಂಡ್.!

04/04/2026 12:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ಎಲ್ಲಾ ‘ರಕ್ತ ಕೇಂದ್ರ’ಗಳು NABH ಅಥವಾ NQAS ಮಾನ್ಯತೆ ಪಡೆಯುವುದು ಕಡ್ಡಾಯ: ಆರೋಗ್ಯ ಇಲಾಖೆ ಆದೇಶ
KARNATAKA

BREAKING: ರಾಜ್ಯದ ಎಲ್ಲಾ ‘ರಕ್ತ ಕೇಂದ್ರ’ಗಳು NABH ಅಥವಾ NQAS ಮಾನ್ಯತೆ ಪಡೆಯುವುದು ಕಡ್ಡಾಯ: ಆರೋಗ್ಯ ಇಲಾಖೆ ಆದೇಶ

By kannadanewsnow0918/02/2026 8:20 AM

ಬೆಂಗಳೂರು: ರಾಜ್ಯದ ಎಲ್ಲಾ ರಕ್ತ ಕೇಂದ್ರಗಳು NABH ಅಥವಾ NQAS ಮಾನ್ಯತೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಇಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಭಾಕರ.ಟಿ ಅವರು ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿಯ ಏಕ ಕಡತದ ಪ್ರಸ್ತಾವನೆಯಲ್ಲಿ ರಾಜ್ಯದ ಎಲ್ಲಾ ರಕ್ತ ಕೇಂದ್ರಗಳು ರಾಷ್ಟ್ರೀಯ ರಕ್ತ ಚಾಲನಾ ಪರಿಷತ್, ಔಷಧ ನಿಯಂತ್ರಣ ಕಾಯ್ದೆ 1940, ಆರೋಗ್ಯ ಸೇವೆಗಳ ನಿರ್ದೇಶನಾಲಯ, ನವದೆಹಲಿ, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್‌, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಾರ್ಗಸೂಚಿರನ್ವಯ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಮಾಡುವುದು, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ತಿನ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.

ರಕ್ತ ವರ್ಗಾವಣೆಯಿಂದ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ರಕ್ತ ಕೇಂದ್ರಗಳ ಸಮರ್ಪಕ ನಿರ್ವಹಣೆಯನ್ನು ಬಲಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ದಿನಾಂಕ 22- 01-202600 F), National Accreditation Board for Hospitals and Healthcare Providers (NABH)ರವರೊಂದಿಗೆ ಚರ್ಚಿಸಿ ತೆಗೆದುಕೊಂಡ ನಿರ್ಧಾರದಂತೆ, ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇವರು ಮಾಡಿರುವ ಶಿಫಾರಸ್ಸಿನಂತೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ರಕ್ತ ಕೇಂದ್ರಗಳು National Accreditation Board for Hospitals and Healthcare Providers (NABH) National Quality Assurance Standards (NQAS) ಮಾನ್ಯತೆಯನ್ನು ಈ ಕೆಳಕಂಡಂತೆ ಪಡೆಯಲು ಸೂಚಿಸಿರುತ್ತಾರೆ ಎಂದು ಹೇಳಿದ್ದಾರೆ.

1. ಸರ್ಕಾರಿ ರಕ್ತ ಕೇಂದ್ರಗಳು NQAS ಮಾನ್ಯತೆಯನ್ನು ಪಡೆಯುವುದು.

2. ಸರ್ಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ರಕ್ತ ಕೇಂದ್ರಗಳು NQAS ಅಥವಾ NABH ಮಾನ್ಯತೆಯನ್ನು ಪಡೆಯುವುದು.

3. ಎಲ್ಲಾ ಖಾಸಗಿ ರಕ್ತ ಕೇಂದ್ರಗಳು NABH ಮಾನ್ಯತೆಯನ್ನು ಪಡೆಯುವುದು.

ಮೇಲೆ ತಿಳಿಸಿರುವಂತೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಕ್ತ ಕೇಂದ್ರಗಳು ಒಂದು ವರ್ಷದೊಳಗೆ ಮತ್ತು ಹೊಸದಾಗಿ ಪರವಾನಗಿ ಪಡೆಯುವ ರಕ್ತ ಕೇಂದ್ರಗಳು, ಪರವಾನಗಿ ಪಡೆದ ಎರಡು ವರ್ಷದೊಳಗಾಗಿ NABH ಅಥವಾ NQAS ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ನಿರ್ದೇಶಕರು, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದ ಎಲ್ಲಾ ರಕ್ತ on National Accreditation Board for Hospitals and Healthcare
Providers (NABH) 3 National Quality Assurance Standards (NQAS) 3 ಕೆಳಕಂಡಂತೆ ಪಡೆಯಲು ಆದೇಶಿಸಲಾಗಿದೆ.

1. ಸರ್ಕಾರಿ ರಕ್ತ ಕೇಂದ್ರಗಳು NQAS ಮಾನ್ಯತೆಯನ್ನು ಪಡೆಯತಕ್ಕದ್ದು.

2. ಸರ್ಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ರಕ್ತ ಕೇಂದ್ರಗಳು NQAS ಅಥವಾ NABH ಮಾನ್ಯತೆಯನ್ನು ಪಡೆಯತಕ್ಕದ್ದು,

3. ಎಲ್ಲಾ ಖಾಸಗಿ ರಕ್ತ ಕೇಂದ್ರಗಳು NABH ಮಾನ್ಯತೆಯನ್ನು ಪಡೆಯತಕ್ಕದ್ದು,

ಮೇಲಿನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಕ್ತ ಕೇಂದ್ರಗಳು, ಒಂದು ವರ್ಷದೊಳಗೆ ಮತ್ತು ಹೊಸದಾಗಿ ಪರವಾನಗಿ ಪಡೆಯುವ ರಕ್ತ ಕೇಂದ್ರಗಳು, ಪರವಾನಗಿ ಪಡೆದ ಎರಡು ವರ್ಷದೊಳಗಾಗಿ NABH ಅಥವಾ NQAS ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಮುಂದುವರೆದು, ಸದರಿ ಮಾನ್ಯತೆಗೆ ತಗಲುವ ವೆಚ್ಚವನ್ನು ರಕ್ತ ಕೇಂದ್ರಗಳೇ ಭರಿಸತಕ್ಕದ್ದು ಹಾಗೂ NABH ವತಿಯಿಂದ ರಕ್ತ ಕೇಂದ್ರಗಳನ್ನು ಪರಿಶೀಲಿಸಲು ಭೇಟಿ ನೀಡುವ ಸಂದರ್ಭದಲ್ಲಿ ನಿಯಮಗಳನ್ವಯ ನಿರ್ವಹಿಸಬೇಕಾದ ಎಲ್ಲಾ ಮಾನದಂಡಗಳನ್ನು ಹಾಗೂ Standard Operating Procedureಗಳನ್ನು ಪಾಲಿಸುವುದು ಸಂಬಂಧಿಸಿದ ರಕ್ತ ಕೇಂದ್ರಗಳ ಜವಾಬ್ದಾರಿಯಾಗಿರುತ್ತದೆ.

ಈ ಆದೇಶದನ್ವಯ NABH ಅಥವಾ NQAS ಮಾನ್ಯತೆಯನ್ನು ಪಡೆಯದಿದ್ದಲ್ಲಿ, ರಕ್ತ ಕೆಂದ್ರದ ಪರವಾನಗಿಯನ್ನು ತಡೆಹಿಡಿಯಲಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.

ವರದಿ:: ವಸಂತ ಬಿ ಈಶ್ವರಗೆರೆ, ಸಂಪಾದಕರು

ಶಿಕ್ಷಣ ಕ್ಷೇತ್ರಕ್ಕೆ ಸಿಎಸ್ಆರ್ ನಿಧಿ ಸ್ವಾಗತಾರ್ಹ: ಮದ್ದೂರು ಶಾಸಕ ಕೆ.ಎಂ.ಉದಯ್

ಸಾಗರದಲ್ಲೊಂದು 50 ವರ್ಷವೇ ಕಳೆದರು ‘ಟಾರ್’ ಕಾಣದ ರಸ್ತೆ: ‘ಡಾಂಬಾರೀಕರಣ’ಕ್ಕೆ ನಿವಾಸಿಗಳ ಒತ್ತಾಯ

Share. Facebook Twitter LinkedIn WhatsApp Email

Related Posts

ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಯುವತಿಗೆ 10 ಬಾರಿ ಗರ್ಭಪಾತ ಮಾತ್ರೆ ನೀಡಿದ್ದ ಸಮೀರ್ ಮುಲ್ಲಾ!

04/04/2026 12:15 PM1 Min Read

Akshaya Tritiya-2026 : ಅಕ್ಷಯ ತೃತೀಯ ಯಾವಾಗ? `ಚಿನ್ನ’ ಖರೀದಿಗೆ ಶುಭ ಮುಹೂರ್ತ ಯಾವುದು ತಿಳಿಯಿರಿ

04/04/2026 11:50 AM1 Min Read

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳ ಎತ್ತರ ಹೆಚ್ಚಿಸಲು ಇಲ್ಲಿವೆ 7 ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗಗಳು!

04/04/2026 11:38 AM2 Mins Read
Recent News

ALERT : ಯುವಜನರೇ ಎಚ್ಚರ : ದಿನಕ್ಕೆ 7 ಗಂಟೆಗೂ ಹೆಚ್ಚು `ಫೋನ್’ ಬಳಸುತ್ತಿದ್ದರೆ ತಪ್ಪಿದ್ದಲ್ಲ ಈ ಮಾರಕ ಕಾಯಿಲೆ.!

04/04/2026 12:15 PM

ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಯುವತಿಗೆ 10 ಬಾರಿ ಗರ್ಭಪಾತ ಮಾತ್ರೆ ನೀಡಿದ್ದ ಸಮೀರ್ ಮುಲ್ಲಾ!

04/04/2026 12:15 PM

ALERT : ಮದುವೆಗೂ ಮುನ್ನ ಯುವತಿಯರಿಗೆ `ಸ್ಲಿಮ್’ ಆಗುವ ಕ್ರೇಜ್ : ಮಾರುಕಟ್ಟೆಯಲ್ಲಿ ಈ ಔಷಧಿಗೆ ದಿಢೀರ್ ಡಿಮ್ಯಾಂಡ್.!

04/04/2026 12:02 PM

ಪಾಕಿಸ್ತಾನದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲೆ ದಾಳಿ: ಕರಾಚಿಯಲ್ಲಿ ದೇವತಾ ಮೂರ್ತಿಗಳ ಧ್ವಂಸ.!

04/04/2026 11:53 AM
State News
KARNATAKA

ಹುಬ್ಬಳ್ಳಿ ಲವ್ ಜಿಹಾದ್ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಯುವತಿಗೆ 10 ಬಾರಿ ಗರ್ಭಪಾತ ಮಾತ್ರೆ ನೀಡಿದ್ದ ಸಮೀರ್ ಮುಲ್ಲಾ!

By kannadanewsnow0504/04/2026 12:15 PM KARNATAKA 1 Min Read

ಹುಬ್ಬಳ್ಳಿ : ಲವ್ ಜಿಹಾದ್ ಪ್ರಕರಣದಲ್ಲಿ ಜಿಮ್ ಟ್ರೈನರ್ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಸಂತ್ರಸ್ತೆಗೆ ಸಮೀರ್ 8 ರಿಂದ…

Akshaya Tritiya-2026 : ಅಕ್ಷಯ ತೃತೀಯ ಯಾವಾಗ? `ಚಿನ್ನ’ ಖರೀದಿಗೆ ಶುಭ ಮುಹೂರ್ತ ಯಾವುದು ತಿಳಿಯಿರಿ

04/04/2026 11:50 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳ ಎತ್ತರ ಹೆಚ್ಚಿಸಲು ಇಲ್ಲಿವೆ 7 ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗಗಳು!

04/04/2026 11:38 AM

ವೇದಾಂತ ಪಿಯು ಕಾಲೇಜು ಪ್ರವೇಶ ಆರಂಭ: NEET, JEE, CET ಕೋಚಿಂಗ್ ಜೊತೆಗೆ ವಿಶೇಷ ಅವಕಾಶ

04/04/2026 11:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.