ಚಾಮರಾಜನಗರ : ಇಂದು ಬೆಳಿಗ್ಗೆ ತಾನೇ ಹಾವೇರಿಯಲ್ಲಿ ಉಳುಮೆ ಮಾಡುವಾಗ ರೂಟರ್ ಯಂತ್ರಕ್ಕೆ ಸಿಲುಕಿ ರೈತ ಸಮಾನಪಿದ್ದ ಘಟನೆ ನಡೆದಿತ್ತು. ಇದೀಗ ರಾಗಿ ಯಂತ್ರಕ್ಕೆ ಸಿಲುಕಿ ವೃದ್ಧೆಯೊಬ್ಬರ ಎಡಗೈ ಸಂಪೂರ್ಣವಾಗಿ ತುಂಡಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸಮೀಪ ಜರುಗಿದೆ. ಮುಡಿಗುಂಡ ಗ್ರಾಮದ ನಾಗಮ್ಮ ಕೈ ಕಳೆದುಕೊಂಡ ವೃದ್ಧೆ.
ಕೆಲಸ ನಿರ್ವಹಿಸುತ್ತಿದ್ದಾಗ ರಾಗಿ ಯಂತ್ರಕ್ಕೆ ಕೈ ಸಿಲುಕಿ ಈ ಅವಘಡ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತುಂಡಾದ ಕೈ ಸಮೇತ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ವೃದ್ಧೆಯನ್ನು ತಕ್ಷಣ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ಗೆ ದಾಖಲಿಸಲಾಗಿದೆ. ಘಟನೆ ಬೆಚ್ಚಿ ಬೀಳಿಸುವಂತಿದ್ದು, ತುಂಡಾದ ಕೈ ಮರುಜೋಡಣೆ ಮಾಡಲು ಕಷ್ಟ ಸಾಧ್ಯ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.








