ಹಾವೇರಿ : ನಗರದಲ್ಲಿ ಸೆಪ್ಟೆಂಬರ್ 1 ರಿಂದ 20ರವರೆಗೆ ನಡೆಯುವ ಅಗ್ನಿಪಥ್ ನೇಮಕಾತಿ ಮೇಳಕ್ಕೆ ( Agnipath Recruitment Mela ) ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭಗೊಂಡಿದೆ. ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಸತಿ ಸೌಕರ್ಯ, ಮಾಹಿತಿ ನೀಡಲು ಹೆಲ್ಪ್ಡೆಸ್ಕ್ ಹಾಗೂ ಸಾರಿಗೆ ಸೌಕರ್ಯಕ್ಕಾಗಿ ಸಂಪರ್ಕಿಸಲು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.
BIG BREAKING NEWS: ಮಠದ ಸಭೆಯಲ್ಲಿನ ಮುರುಘಾ ಶ್ರೀಗಳ ಭಾಷಣದ ಆಡಿಯೋ ವೈರಲ್: ಏನ್ ಮಾತನಾಡಿದ್ದಾರೆ ಗೊತ್ತಾ.?
ವಸತಿ ಸೌಕರ್ಯಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು(9741746273), ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು(9945257844), ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು (9538706363), ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ (9900873399), ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿ (9632465161), ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(8867412236), ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(9902745227), ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು(9606721298), ನಗರಸಭೆ ಪರಿಸರ ಅಭಿಯಂತರರು(9035451219), ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (9535927093), ತಹಶೀಲ್ದಾರ(9731569555) ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ(8310616578)ರನ್ನು ನೇಮಕ ಮಾಡಲಾಗಿದೆ.
ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು ಗೊತ್ತಾ.?
ಹೆಲ್ಪ್ಡೆಸ್ಕ್: ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹೆಲ್ಪ್ಡೆಸ್ಕ್ ಸ್ಥಾಪಿಸಿ ಮೂರು ಪಾಳೆಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಘಟಕದ ಸಹಾಯಕ ನಿರ್ದೇಶಕ ಆರ್.ಎಸ್.ಮಾಸೂರ(7019790682) ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ, ಎಂ.ಸಿ.ಸ್ವಾದಿ(9743052044) ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ಮಹದೇವಪ್ಪ ಚುಳಕಿ(ಮೊ.6362209657) ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
BIG NEWS: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ – ಸಿಎಂ ಬೊಮ್ಮಾಯಿ ಘೋಷಣೆ
ಹೆಚ್ಚುವರಿ ಬಸ್ ಸೇವೆ: ಜಿಲ್ಲೆಯ ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು, ಹಾನಗಲ್, ಬ್ಯಾಡಗಿ ಹಾಗೂ ಸವಣೂರ ಘಟಕಗಳಿಂದ ಹೆಚ್ಚುವರಿ ಬಸ್ ಕಾರ್ಯಾಚರಣೆಗೊಳಿಸಲಾಗುವುದು. ಹಾವೇರಿ ವಿಭಾಗದಲ್ಲಿ ಜನರ ಓಡಾಟ ಹೆಚ್ಚಾಗುವುದರಿಂದ ಆಯಾ ಘಟಕಗಳಿಂದ ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಹೊಸಪೇಟೆ ಮುಂತಾದ ಸ್ಥಳಗಳ ಕಡೆಗೆ ಬಸ್ ನಿಲ್ದಾಣದಲ್ಲಿನ ಜನಸಂದಣಿಗೆ ಅನುಗುಣವಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆಗೊಳಿಸುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
‘ಬೆಂಗಳೂರು-ಮೈಸೂರು ವಾಹನ ಸವಾರ’ರ ಗಮನಕ್ಕೆ: ಇಂದಿನಿಂದ 3 ದಿನ ಈ ‘ಪರ್ಯಾಯ ಮಾರ್ಗ’ದಲ್ಲಿ ಸಂಚರಿ