ಬೆಂಗಳೂರು: ಬೆಳಗಾವಿಯ್ಲಲಿ ಕಳೆದ ರಾತ್ರಿಯಂದು ಕನ್ನಡ ಧ್ವಜ ( Kannada Flag ) ಹಿಡಿದು ಕುಣಿದಂತ ಯುವಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದು ಕನ್ನಡಗಿರನ್ನು ಕೆರಳಿಸುವಂತೆ ಮಾಡಿತ್ತು. ಈ ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
‘ಭೂಗಳ್ಳ’ರಿಗೆ ‘ನಗರಾಭಿವೃದ್ಧಿ ಇಲಾಖೆ’ ಅಧಿಕಾರಿಗಳೇ ಸಪೋರ್ಟ್: ‘ಕ್ರಿಮಿನಲ್ ಕೇಸ್’ ದಾಖಲಿಸಲು ‘ರಮೇಶ್ ಬಾಬು’ ಒತ್ತಾಯ
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ನಿನ್ನೆ ಸಂಜೆ ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿದ ಬಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಐಜಿಪಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
Appropriate action is being taken against the boys who assaulted the boy dancing holding Kannada flag, last evening in Belagavi
IGP Belagavi is conducting an enquiry regarding this incident https://t.co/0Jc0Q5Y1YC
— alok kumar (@alokkumar6994) December 1, 2022