ಛತ್ತೀಸ್ಗಢ: ಪತ್ನಿಯ ಚಾರಿತ್ರ್ಯದ ಮೇಲೆ ಶಂಕೆ ವ್ಯಕ್ತಪಡಿಸಿ ಆಕೆಗೆ ಕ್ರೂರವಾಗಿ ಥಳಿಸಿ, ತಲೆಬೋಳಿಸಿದ ಅಮಾನವೀಯ ಘಟನೆ ಛತ್ತೀಸ್ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಿತೇಂದ್ರ ಘಾಸಿಯಾ ಎಂದು ಗುರುತಿಸಲಾಗಿದೆ. ಜಿಲ್ಲೆಯ ಪಾಂಡೋಪಾರಾ ಗ್ರಾಮದಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
ನಡೆದಿದ್ದೇನು?
ಬಾಧಿತ ಮಹಿಳೆ ನೀಡಿರುವ ದೂರಿನ ಪ್ರಕಾರ, ಆರೋಪಿ ಜಿತೇಂದ್ರ ಘಾಸಿಯಾ ಘಟನೆಯ ದಿನ ಮದ್ಯಪಾನ ಮಾಡಿ ಬಂದು ಜಗಳ ತೆಗೆದಿದ್ದಾನೆ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ, ಕತ್ತರಿ ಹಾಗೂ ಬ್ಲೇಡ್ನಿಂದ ಬಲವಂತವಾಗಿ ತಲೆಬೋಳಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಆತ, ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ವೀಡಿಯೋ ವೈರಲ್ ಆದ ಬೆನ್ನಲ್ಲೇ ಹೆಚ್ಚಿದ ತನಿಖೆ
ಆರಂಭದಲ್ಲಿ ಪೊಲೀಸರು ಗೃಹಹಿಂಸೆ ಹಾಗೂ ಜೀವಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಘಟನೆಯ ಭೀಕರತೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
“ಮಹಿಳೆಯು ಸೋಮವಾರ ನೀಡಿದ್ದ ಪ್ರಾಥಮಿಕ ದೂರಿನಲ್ಲಿ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ ವೀಡಿಯೋ ಸಾಕ್ಷ್ಯ ಸಿಕ್ಕ ತಕ್ಷಣ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 123 (ಹಾನಿ ಮಾಡುವ ಉದ್ದೇಶದಿಂದ ವಿಷಕಾರಿ ಅಥವಾ ಅಮಲು ಪದಾರ್ಥ ನೀಡುವುದು) ಅಡಿಯಲ್ಲಿ ಹೆಚ್ಚುವರಿ ಪ್ರಕರಣ ದಾಖಲಿಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶಾ ಚೌಬೆ ತಿಳಿಸಿದ್ದಾರೆ.
15 ವರ್ಷಗಳ ಸಂಸಾರ
ಪೊಲೀಸ್ ಮೂಲಗಳ ಪ್ರಕಾರ, ದಂಪತಿಗಳು 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಹಾಗೂ ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ, ಕಳೆದ ಒಂದು ವರ್ಷದಿಂದ ಪತಿ ಜಿತೇಂದ್ರ ಆಕೆಯನ್ನು ತೊರೆದಿದ್ದರಿಂದ, ಮಹಿಳೆ ಪರಿಚಯಸ್ಥರೊಬ್ಬರ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪ್ರಸ್ತುತ ಆರೋಪಿ ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.
In a shocking incident, a woman in Pandopara village of #Chhattisgarh’s Korea district, about 350 km north of #Raipur, was brutally assaulted, humiliated, and had her hair forcefully chopped off by her estranged husband.
The perpetrator even recorded a video of the horrific… pic.twitter.com/xU9Kza44lM
— The New Indian Express (@NewIndianXpress) June 19, 2026








