ನವದೆಹಲಿ: ಇಸ್ಲಾಮಿಕ್ ಸಭೆಯೊಂದರಲ್ಲಿ ಧರ್ಮಗುರುವೊಬ್ಬರು ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದ ಹಿಂದೂ ಜನಸಂಖ್ಯೆಯಲ್ಲಿ ಸಾಮಾನ್ಯವಾಗಿ ಸೇರಿಸಲಾಗುವ ಹಲವಾರು ಸಮುದಾಯಗಳನ್ನು ಹಿಂದೂಗಳೆಂದು ಪರಿಗಣಿಸಬಾರದು ಎಂದು ಅವರು ಪ್ರತಿಪಾದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹೇಳಿಕೆಯು ದೇಶದ ಗುರುತು, ಜನಸಂಖ್ಯೆ ಮತ್ತು ಧರ್ಮದ ಕುರಿತಾದ ಹಳೆಯ ವಿವಾದಗಳನ್ನು ಮತ್ತೆ ಮುಂಚೂಣಿಗೆ ತಂದಿದೆ.
ಮೌಲಾನಾ ಹೇಳಿದ್ದೇನು?
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಮೌಲಾನಾ ಖಲೀಲುರ್ ರೆಹಮಾನ್ ಸಜ್ಜಾದ್ ನೊಮಾನಿ, “ವಿವಿಧ ಸಮುದಾಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಿದರೆ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿ ಉಳಿಯುವುದಿಲ್ಲ” ಎಂದು ಪ್ರತಿಪಾದಿಸಿದ್ದಾರೆ. ಸಿಖ್ಖರು, ಬೌದ್ಧರು, ಪರಿಶಿಷ್ಟ ಜಾತಿಗಳು (SC), ಆದಿವಾಸಿಗಳು, ಲಿಂಗಾಯತರು ಮತ್ತು ತಮಿಳುನಾಡಿನ ಜನರನ್ನು ಹಿಂದೂಗಳಾಗಿ ವರ್ಗೀಕರಿಸಬಾರದು ಎಂದು ಅವರು ತಮ್ಮ ಭಾಷಣದಲ್ಲಿ ವಾದಿಸಿದ್ದಾರೆ.
ನಾನು ಸುಮಾರು ಮೂರು ದಶಕಗಳ ಕಾಲ ಭಾರತದಾದ್ಯಂತ ಸಂಚರಿಸಿ, ದೇಶದ ಜನಸಂಖ್ಯಾ ಮತ್ತು ಸಾಮಾಜಿಕ ವಾಸ್ತವಗಳನ್ನು ಅಧ್ಯಯನ ಮಾಡಿದ್ದೇನೆ. ನನ್ನ ಈ ತೀರ್ಮಾನಗಳು ವ್ಯಾಪಕವಾದ ತಳಮಟ್ಟದ ಸಂಶೋಧನೆಯನ್ನು ಆಧರಿಸಿವೆ. ಆದಿವಾಸಿ ಸಮುದಾಯಗಳು ಈ ದೇಶದ ಮೂಲ ನಿವಾಸಿಗಳಾಗಿದ್ದು, ಅವರನ್ನು ಹಿಂದೂ ಧರ್ಮದ ಅಡಿಯಲ್ಲಿ ಗುಂಪು ಮಾಡಬಾರದು.ಪರಿಶಿಷ್ಟ ಜಾತಿಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಲಿಂಗಾಯತರು ಮತ್ತು ತಮಿಳು ಸಮುದಾಯಗಳು ಹಿಂದೂ ಧರ್ಮದಿಂದ ಭಿನ್ನವಾದ ಮತ್ತು ವಿಶಿಷ್ಟವಾದ ಗುರುತನ್ನು ಹೊಂದಿವೆ ಎಂದಿದ್ದಾರೆ.
ಜಾತ್ಯತೀತ ಹಿಂದೂಗಳು’ ಮತ್ತು ‘ಕೋಮು ರಾಜಕೀಯದ ಹಿಂದೂಗಳು’ ಎಂಬ ದೀರ್ಘಕಾಲದ ವ್ಯತ್ಯಾಸವು ಮುಸ್ಲಿಂ ಸಮುದಾಯದ ಒಂದು ವರ್ಗವನ್ನು ದಾರಿ ತಪ್ಪಿಸಿದೆ. ಈ ರಾಜಕೀಯ ತಂತ್ರವು ಅಂತಿಮವಾಗಿ ಕಠಿಣ ನಿಲುವಿನ ಹಿಂದೂ ಸಂಘಟನೆಗಳಿಗೇ ಲಾಭ ತಂದಿಕೊಟ್ಟಿದೆ ಎಂದು ಅವರು ಟೀಕಿಸಿದ್ದಾರೆ.
ನೆಟ್ಟಿಗರ ಆಕ್ರೋಶ
ಮೌಲಾನಾ ಅವರ ಈ ಹೇಳಿಕೆಗಳು ಧಾರ್ಮಿಕ ಮತ್ತು ಸಾಮಾಜಿಕ ಆಧಾರದ ಮೇಲೆ ಸಮುದಾಯಗಳನ್ನು ವಿಭಜಿಸುವ ಪ್ರಯತ್ನ ಎಂದು ಹಲವರು ಆರೋಪಿಸಿದ್ದಾರೆ. ವಿಮರ್ಶಕರು ಈ ಹೇಳಿಕೆಗಳನ್ನು ‘ಅಪಾಯಕಾರಿ ಮತ್ತು ಪ್ರಚೋದನಾಕಾರಿ’ ಎಂದು ಕರೆದಿದ್ದು, ಇದು ಸಮಾಜದಲ್ಲಿನ ಬಿರುಕುಗಳನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಜನರು ಅಧಿಕೃತ ದಾಖಲೆಗಳಲ್ಲಿ ತಮ್ಮನ್ನು ಸಿಖ್ಖರು ಎಂದು ಗುರುತಿಸಿಕೊಳ್ಳುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಮೌಲಾನಾ ಹೇಳಿಕೊಂಡಿದ್ದಾರಾದರೂ, ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
📍अगरअब भी नहीं समझे तो कभी भी नहीं समझोगे
एक इस्लामिक समिट में मौलाना बोल रहा है
भारत में हिंदू अब बहूमत में नहीं है।
हिंदू बंटा हुआ है SC,आदिवासी,तमिल, लिंगायत + गैर-हिंदू हैं
⚠️हमने हिंदूओं को सेक्युलर और फासीवादी में बंटा लेकिन दोनो ने हमारे मकसद को नूकसान पहुंचाया। pic.twitter.com/fFa8EvkiDm
— Pradeep Maikhuri (@PradeepMaikhur3) June 18, 2026








