ಮೈಸೂರು : RSS ಸಂಘಟನೆ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ ಖರ್ಗೆ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದು, ಇದೀಗ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಕೂಡ RSS ನವರು ಹಿಂದುಗಳೇ ಅಲ್ಲ ಅವರು ಕೇವಲ ಹಿಂದುತ್ವವಾದಿಗಳಷ್ಟೇ ಎಂದು ಹೇಳಿಕೆ ನೀಡಿದ್ದಾರೆ.
ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಅಂದರೆ ಅದೆಲ್ಲ ನಡೆಯಲ್ಲ. ಆರ್ಎಸ್ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ. ಆರ್ ಎಸ್ ಎಸ್ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಎಲ್ಲರಿಗೂ ಒಂದು ಕಾನೂನು ಅವರಿಗೆ ಇನ್ನೊಂದು ಕಾನೂನ? ಅವರು ಎಷ್ಟೇ ಆರ್ಥಿಕ ವ್ಯವಹಾರ ಮಾಡಿಕೊಂಡರು ಕೂಡ ನೋಂದಣಿಯಿಂದ ವಿನಾಯಿತಿ ಕೊಡಬೇಕು ಅಂತ ಹೇಗೆ ಹೇಳಲಾಗುತ್ತದೆ?
RSS ಕೇವಲ ಸಂಸ್ಕೃತಿಕ ಸಂಘಟನೆ ಅಲ್ಲ ಎಲೆಕ್ಷನ್ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದು ಗೊತ್ತಿದೆ. ಪ್ರತಿಯೊಂದು ನಗರಗಳಲ್ಲಿ ಕೂಡ ಕೋಟ್ಯಾಂತರ ಬೆಲೆಬಾಳುವ ಆಸ್ತಿ, ಕಟ್ಟಡಗಳಿವೆ. ಇವೆಲ್ಲ ಹೇಗೆ ಬಂತು ಎಲ್ಲಿಂದ ಬಂತು? ಇದೆಲ್ಲಾ ತಿಳಿದುಕೊಳ್ಳಬೇಕಾದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳಲೇಬೇಕು ಎಂದರು.








