ಕಲಬುರ್ಗಿ : ಕಲ್ಬುರ್ಗಿಯಲ್ಲಿ ಹಲ್ಲಿ ಬಿದ್ದ ನೀರು ಕುಡಿದು 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿಸಿಎಂ ಸ್ನಾತಕೋತ್ತರ ವಸತಿ ನಿಲಯದಲ್ಲಿ ನಡೆದಿದೆ.
ಬೆಳಿಗ್ಗೆ ನೀರಿನ ಟ್ಯಾಂಕ್ ನಲ್ಲಿ ಹಲ್ಲಿ ಬಿದ್ದಿದ ನೀರನ್ನು ವಿದ್ಯಾರ್ಥಿಗಳು ಕುಡಿದಿದ್ದಾರೆ. ಆದರೆ ಹಲ್ಲಿ ಬಿದ್ದಿರುವ ನೀರನ್ನೆ ಬಳಸಿಕೊಂಡು ಸಿಬ್ಬಂದಿಗಳು ಇದೀಗ ಅಡುಗೆ ಮಾಡುತ್ತಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಕಲ್ಬುರ್ಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








