Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Kidney Disease: ನಿಮ್ಮ ಕಿಡ್ನಿ ಸುರಕ್ಷಿತವಾಗಿದೆಯೇ? ಈ ₹300 ಟೆಸ್ಟ್ ಮೂಲಕ ಇಂದೇ ತಿಳಿದುಕೊಳ್ಳಿ!

BIG NEWS : ಬೆಂಗಳೂರಲ್ಲಿ ಸೀಕ್ರೆಟ್ ಮದ್ವೆಯಾದ್ರು ಮತ್ತೊಂದು ಮದುವೆಗೆ ಸಿದ್ಧತೆ : ಪತ್ನಿಗೆ ವಿಷ ಕುಡಿಸಿ ಕೊಂದ ಪಾಪಿ ಪತಿ!

45 ದಿನಗಳ ಕಾಲ ಪ್ರತಿದಿನ ಒಂದೊಂದು ಬಾಳೆಹಣ್ಣು ತಿಂದರೆ ಏನಾಗುತ್ತದೆ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಂಗಳೂರಲ್ಲಿ ಸೀಕ್ರೆಟ್ ಮದ್ವೆಯಾದ್ರು ಮತ್ತೊಂದು ಮದುವೆಗೆ ಸಿದ್ಧತೆ : ಪತ್ನಿಗೆ ವಿಷ ಕುಡಿಸಿ ಕೊಂದ ಪಾಪಿ ಪತಿ!
KARNATAKA

BIG NEWS : ಬೆಂಗಳೂರಲ್ಲಿ ಸೀಕ್ರೆಟ್ ಮದ್ವೆಯಾದ್ರು ಮತ್ತೊಂದು ಮದುವೆಗೆ ಸಿದ್ಧತೆ : ಪತ್ನಿಗೆ ವಿಷ ಕುಡಿಸಿ ಕೊಂದ ಪಾಪಿ ಪತಿ!

By ಸುರೇಶ್‌

ಬೆಂಗಳೂರು : ಈಗಾಗಲೇ ರಹಸ್ಯವಾಗಿ ಮದುವೆಯಾಗಿದ್ದರೂ ಪಾಲಕರ ಒತ್ತಾಯದ ಮೇರೆಗೆ ಮತ್ತೊಂದು ವಿವಾಹಕ್ಕೆ ಮುಂದಾಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಭವಾನಿ (22) ಹತ್ಯೆಗೀಡಾದವಳು. ನಗರದ ತಿಗಳರಪಾಳ್ಯದಲ್ಲಿ ಘಟನೆ ನಡೆದಿದೆ. ಭವಾನಿ ತಂದೆ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದ್ರಶೇಖರ್ ಅಲಿಯಾಸ್ ಚಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಭವಾನಿ ಎರಡು ವರ್ಷದಿಂದ ಮನೆ ಸಮೀಪದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಚಂದನ್ ಆಟೋದಲ್ಲಿ ಭವಾನಿ, ಮನೆಯಿಂದ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಇಬ್ಬರ ಪರಿಚಯವಾಗಿ, ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗೌಪ್ಯ ವಿವಾಹ : ಕೆಲ ತಿಂಗಳ ಹಿಂದೆಯಷ್ಟೇ ದೇವಸ್ಥಾನ ದಲ್ಲಿ ಚಂದನ್ ಮತ್ತು ಭವಾನಿ ಮದುವೆಯಾಗಿದ್ದರು. ಆದರೆ, ಪ್ರತ್ಯೇಕವಾಗಿ ವಾಸವಾಗಿದ್ದುಕೊಂಡು ಪಾಲಕರಿಗೆ ವಿಷಯ ತಿಳಿಸದೆ ಎಂದಿನಂತೆ ಜೀವನ ನಡೆಸುತ್ತಿದ್ದರು. ಭವಾನಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ ತಿಳಿದು ಆಕೆಯ ಮನೆಯವರು, ಬೇರೆ ಮದುವೆಗೆ ಸಿದ್ಧತೆ ನಡೆಸಿದ್ದರು. ಪಾಲಕರ ಮನವಿಗೆ ಭವಾನಿ ಕೂಡ ಒಪ್ಪಿ ಮದುವೆಯಾಗಲು ಮುಂದಾಗಿದ್ದಳು ಎನ್ನಲಾಗಿದೆ.

ಈ ವಿಚಾರ ತಿಳಿದ ಚಂದನ್ ಆಕ್ರೋಶಗೊಂಡು ಭವಾನಿ ಜತೆ ಜಗಳ ಮಾಡಿದ್ದ. ಮದುವೆ ಮಾಡಿಕೊಳ್ಳದಂತೆ ಮತ್ತೆ ಮತೆ ಒತಡ ಹಾಕುತಿದ. ಆಕೆ ನಿರಾಕರಿಸಿದಾಗ ವಿಷದ ಬಾಟಲಿ ತಂದು ಇಬ್ಬರು ಕುಡಿದು ಸಾಯೋಣ ಎಂದಿದ್ದ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಕೋರಿದ್ದಳು. ಆದರೆ, ಆರೋಪಿ, ಆಕೆಗೆ ಹೆಚ್ಚಿನ ವಿಷ ಕುಡಿಸಿ, ಬಳಿಕ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ತಾನು ಸ್ವಲ್ಪ ವಿಷ ಸೇವಿಸಿ, ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಯ ನಾಟಕವಾಡಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದು ಮನೆಗೆ ಬಂದ ಪೊಲೀಸರ ಪರಿಶೀಲನೆ ವೇಳೆ ಅಸ್ವಸ್ಥಗೊಂಡಿದ್ದ ಚಂದನ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಆರೋಪಿ ಚಂದನ್ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸಿದಾಗ ಹತ್ಯೆಗೈದಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್‌ಸ್ಟಾಗ್ರಾಂನಿಂದ ಮದುವೆ ರಹಸ್ಯ ಬಯಲು

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ದೇವಸ್ಥಾನದಲ್ಲಿ ಆಕೆ ಜತೆ ಮದುವೆಯಾದ ಫೋಟೋಗಳನ್ನು ಚಂದನ್ ಅಪ್‌ಲೋಡ್ ಮಾಡಿದ್ದ. ಅದನ್ನು ಗಮನಿಸಿದ ಕೆಲವರು, ಕೂಡಲೇ ಭವಾನಿ ತಂದೆ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿ, ವಿಡಿಯೋ ಲಿಂಕ್ ಕೂಡ ಕಳುಹಿಸಿದ್ದರು. ಗಾಬರಿಗೊಂಡ ಶ್ರೀನಿವಾಸ್, ಮಗಳಿಗೆ ಕರೆ ಮಾಡಿದ್ದಾರೆ. ಆದರೆ, ಆಕೆ ಕರೆ ಸ್ವೀಕರಿಸಿಲ್ಲ.

ಅನುಮಾನಗೊಂಡ ಶ್ರೀನಿವಾಸ್, ತಕ್ಷಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆ ಮಾಲೀಕರು ಭವಾನಿ ವಾಸವಿದ್ದ ಮನೆಗೆ ಹೋಗಿ ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ. ಕೂಡಲೇ ಶ್ರೀನಿವಾಸ್‌ ಬೆಂಗಳೂರಿಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Share. Facebook Twitter LinkedIn WhatsApp Email

Related Posts

ಪರಿಷತ್ ಚುನಾವಣೆ ಹಿನ್ನೆಲೆ : 14 ಕಾಂಗ್ರೆಸ್ ಶಾಸಕರಿಗೆ ಎಚ್‌ಡಿ ಕುಮಾರಸ್ವಾಮಿ ಕರೆ : ಶಾಸಕ ಬಾಲಕೃಷ್ಣ ಆರೋಪ!

1 Min Read

BREAKING : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ!

2 Mins Read

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

1 Min Read
Recent News

Kidney Disease: ನಿಮ್ಮ ಕಿಡ್ನಿ ಸುರಕ್ಷಿತವಾಗಿದೆಯೇ? ಈ ₹300 ಟೆಸ್ಟ್ ಮೂಲಕ ಇಂದೇ ತಿಳಿದುಕೊಳ್ಳಿ!

BIG NEWS : ಬೆಂಗಳೂರಲ್ಲಿ ಸೀಕ್ರೆಟ್ ಮದ್ವೆಯಾದ್ರು ಮತ್ತೊಂದು ಮದುವೆಗೆ ಸಿದ್ಧತೆ : ಪತ್ನಿಗೆ ವಿಷ ಕುಡಿಸಿ ಕೊಂದ ಪಾಪಿ ಪತಿ!

45 ದಿನಗಳ ಕಾಲ ಪ್ರತಿದಿನ ಒಂದೊಂದು ಬಾಳೆಹಣ್ಣು ತಿಂದರೆ ಏನಾಗುತ್ತದೆ?

ಪರಿಷತ್ ಚುನಾವಣೆ ಹಿನ್ನೆಲೆ : 14 ಕಾಂಗ್ರೆಸ್ ಶಾಸಕರಿಗೆ ಎಚ್‌ಡಿ ಕುಮಾರಸ್ವಾಮಿ ಕರೆ : ಶಾಸಕ ಬಾಲಕೃಷ್ಣ ಆರೋಪ!

State News
KARNATAKA

BIG NEWS : ಬೆಂಗಳೂರಲ್ಲಿ ಸೀಕ್ರೆಟ್ ಮದ್ವೆಯಾದ್ರು ಮತ್ತೊಂದು ಮದುವೆಗೆ ಸಿದ್ಧತೆ : ಪತ್ನಿಗೆ ವಿಷ ಕುಡಿಸಿ ಕೊಂದ ಪಾಪಿ ಪತಿ!

By ಸುರೇಶ್‌ KARNATAKA 2 Mins Read

ಬೆಂಗಳೂರು : ಈಗಾಗಲೇ ರಹಸ್ಯವಾಗಿ ಮದುವೆಯಾಗಿದ್ದರೂ ಪಾಲಕರ ಒತ್ತಾಯದ ಮೇರೆಗೆ ಮತ್ತೊಂದು ವಿವಾಹಕ್ಕೆ ಮುಂದಾಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆ…

ಪರಿಷತ್ ಚುನಾವಣೆ ಹಿನ್ನೆಲೆ : 14 ಕಾಂಗ್ರೆಸ್ ಶಾಸಕರಿಗೆ ಎಚ್‌ಡಿ ಕುಮಾರಸ್ವಾಮಿ ಕರೆ : ಶಾಸಕ ಬಾಲಕೃಷ್ಣ ಆರೋಪ!

BREAKING : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ : ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಐವರ ಅರೆಸ್ಟ್, 8 ಕೋಟಿ ಮೌಲ್ಯದ ಗಾಂಜಾ ವಶ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.