ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು 5 ಹಿರಿಯ ಐಎಎಸ್ (IAS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ ಹಾಗೂ ಕೆಲವರಿಗೆ ಪ್ರಮುಖ ಇಲಾಖೆಗಳ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಿ ಬುಧವಾರ (ಜೂನ್ 10) ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳು
ಅಂಜುಮ್ ಪರ್ವೇಜ್
ರಾಜೇಂದರ್ ಕುಮಾರ್ ಕಟಾರಿಯಾ
ಮೋಹನ್ ರಾಜ್ ಕೆ.ಪಿ.
ಡಾ. ಸೆಲ್ವಮಣಿ ಆರ್.
ಡಾ. ಮಹೇಶ್ ಎಂ.
ಈ ಆದೇಶವನ್ನು ರಾಜ್ಯಪಾಲರ ಆಜ್ಞಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ಹೊರಡಿಸಿದ್ದಾರೆ.









